ರೆಡ್ಡಿ ಇಲ್ಲದೆ ರಾಮುಲು, ಯಡ್ಡಿಗೆ ಪಕ್ಷ ಕಟ್ಟೋದು ಅಸಾಧ್ಯ!

ಜ.24ರ ನಂತರ ಯಡಿಯೂರಪ್ಪ ಬೆಂಬಲಿಗರು ತಮ್ಮ ಆಟ ಆರಂಭಿಸುವ ಸಾಧ್ಯತೆಯಿದೆ. 1994ರಲ್ಲಿ ಬಂಗಾರಪ್ಪ ಕಾಂಗ್ರೆಸ್ ಬಿಟ್ಟಾಗ ಆದ ಸ್ಥಿತಿ ಈಗ ಬಿಜೆಪಿಗೆ ಆಗುವಂತೆ ಮಾಡುತ್ತೇನೆ ಎನ್ನುತ್ತಿರುವ ಯಡಿಯೂರಪ್ಪ ತಮ್ಮ ಮನದ ಇಂಗಿತವನ್ನು ಇನ್ನೂ ಯಾರಿಗೂ ತಿಳಿಸಿಲ್ಲ.
ನಿರಂತರವಾಗಿ ರಾಜ್ಯ ಪ್ರವಾಸ ಮಾಡಿ ಜನರ ನಾಡಿ ಮಿಡಿತವನ್ನು ಅರಿಯಲಿರುವ ಯಡಿಯೂರಪ್ಪ ರಾಜ್ಯದಲ್ಲಿ ಇನ್ನೂ ಎರಡು ದಶಕಗಳ ಕಾಲ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಆದರೆ, ಹೊಸ ಪಕ್ಷಕ್ಕೆ ಬೇಕಾದ ಆರ್ಥಿಕ ನೆರವಿಗಾಗಿ ಗಾಲಿ ರೆಡ್ಡಿ ಬಳಿಗೆ ರೇಣುಕಾಚಾರ್ಯ ಕಳಿಸುವ ಯೋಜನೆ ಯಾಕೋ ನಿಂತಿದೆ.
ಶ್ರೀರಾಮುಲು ಕೂಡಾ ಅತಂತ್ರ: ಅತ್ತ ಜ.23ರಂದು ಜನಾರ್ದನ ರೆಡ್ಡಿಗೆ ಜಾಮೀನು ಸಿಗದಿದ್ದರೆ, ಬಿಎಸ್ ಆರ್ ಪಕ್ಷ ಏಳಿಗೆ ಅಲ್ಲಿಗೆ ನಿಲ್ಲಲಿದೆ. ಕರುಣಾಕರ ರೆಡ್ಡಿ ಹೊಸ ಪಕ್ಷಗಳ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಯಡಿಯೂರಪ್ಪ ಹಾಗೂ ಶ್ರೀರಾಮುಲು ಇಬ್ಬರಿಗೂ ಗಾಲಿ ಜನಾರ್ದನ ರೆಡ್ಡಿ ಅವರ ಆರ್ಥಿಕ ಬೆಂಬಲದ ಅಗತ್ಯ ತುಂಬಾ ಇದೆ.
ಜ.30ರೊಳಗೆ ತಮ್ಮ ನೆಚ್ಚಿನ ಶಾಸಕರಿಗೆ ಒಂದು ನೆಲೆ ಕಲ್ಪಿಸಿ, ಹೊಸ ಪಕ್ಷ ರೂಪು ರೇಷೆಗೆ ಸಿದ್ಧತೆ ನಡೆಸಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ.
ಒಟ್ಟಿನಲ್ಲಿ ಮೂರು ಅಮಾವಾಸ್ಯೆ ಕಳೆಯುವುದರೊಳಗಾಗಿ ಮಾಜಿ ಮುಖ್ಯಮಂತ್ರಿ ಹಾಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಬೆಂಗಳೂರಿನ ಜ್ಯೋತಿಷಿಯೊಬ್ಬರ ಮಾತು ನಿಜವಾಗುವ ಸಾಧ್ಯತೆಯಿದೆ.












Click it and Unblock the Notifications