ಯಡ್ಡಿ ಹೊಸ ಪಕ್ಷ ಶಿವರಾತ್ರಿ ಅಥವಾ ಯುಗಾದಿಗೆ?

BS Yeddyurappa
ಬೆಂಗಳೂರು, ಜ.20: ಮತ್ತೆ ಸಿಎಂ ಪಟ್ಟಕ್ಕೇರುವ ಕನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಹೊಸ ಪಕ್ಷ ಕಟ್ಟುವಂತೆ ಒತ್ತಡ ಹೆಚ್ಚುತ್ತಿದೆ. ಇದರ ಪೂರ್ವಭಾವಿಯಾಗಿ ರಾಜ್ಯದ ಪ್ರವಾಸ ಕೈಗೊಂಡು ಜನರ ಬಳಿಗೆ ಯಡಿಯೂರಪ್ಪ ಹೋಗುತ್ತಿದ್ದಾರೆ ಎನ್ನಲಾಗಿದೆ.

ಸಂಘ ಪರಿವಾರದ ನಾಯಕರು ವ್ಯವಸ್ಥಿತವಾಗಿ ಆಸೆಗೆ ಕಲ್ಲು ಹಾಕಿದ ಮೇಲೆ ಎನ್ ಸಿಪಿ ಸೇರಲು ಒತ್ತಡ ಆರಂಭವಾಗಿತ್ತು. ನಂತರ ಈ ಪಟ್ಟಿಗೆ ಜೆಡಿಯು ಸೇರಿಕೊಂಡಿತ್ತು. ಆದರೆ, ಎಲ್ಲಾ ಆಫರ್ ಗಳನ್ನು ಯಡ್ಡಿ ಎಡಗಾಲಿನಿಂದ ಒದ್ದಿದ್ದರು.

ಯಡಿಯೂರಪ್ಪ ಅವರಿಗೆ 73 ಶಾಸಕರು, 15 ಸಂಸದರು ಹಾಗೂ 3 ರಾಜ್ಯ ಸಭಾ ಸದಸ್ಯರ ಬೆಂಬಲ ಪತ್ರ ಕಂಡು ದಂಗಾಗಿದ್ದ ಬಿಜೆಪಿ ಹೈಕಮಾಂಡ್ ನಂತರ ಸುಧಾರಿಸಿಕೊಂಡು, ಆರೆಸ್ಸೆಸ್ ಬೆಂಬಲದಿಂದ ಯಡ್ಡಿಗೆ ಮೂಗುದಾರ ಹಾಕುವ ಪ್ರಯತ್ನ ಮಾಡಿತ್ತು.

ಈ ಹಿನ್ನೆಲೆಯಲ್ಲಿಯೇ ಜನವರಿ ಮೂವತ್ತರಂದು ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ತಮ್ಮ ಬೆಂಬಲಿಗ ಸಚಿವರು ಹಾಗೂ ಶಾಸಕರ ಜತೆ ಸತತ ಸಭೆಗಳನ್ನು ನಡೆಸಲಿರುವ ಯಡಿಯೂರಪ್ಪ ಹೊಸ ಪಕ್ಷ ರಚನೆಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ದಗೊಳಿಸಲಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ನೀಡಿರುವ ಡೆಡ್ ಲೈನ್ ಮೀರಿದರೆ ಏನಾಗಲಿದೆ..?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+