ಶಿವ ಶಿವಾ ಯಡಿಯೂರಪ್ಪಗೇ ಬಹಿರಂಗ ಪತ್ರ!

Yeddyurappa
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಲಿಗೆ ಶಿವರಾತ್ರಿ ಜಾಗರಣೆ ಮುಂಚಿತವಾಗಿ ಬಂದಿದೆ. ಹಿರಿಯ ನಾಯಕ ಬಿಬಿ ಶಿವಪ್ಪ ಅವರು ಬರೆದ ಬಹಿರಂಗ ಪತ್ರ ಕಂಡ ನಂತರ ಯಡಿಯೂರಪ್ಪ ಅವರ ರಾತ್ರಿ ಹಾರಿ ಹೋಗಿದೆ.

ಶಿವರಾತ್ರಿಗೆ ಹೊಸ ಪಕ್ಷ ಘೋಷಣೆ ಇರಲಿ, ಮಾಜಿ ಸಚಿವ ಬಿಬಿ ಶಿವಪ್ಪ ಅವರ ಪತ್ರ ಯಡಿಯೂರಪ್ಪ ಅವರಿಗೆ ಮಾನಸಿಕ ಆಘಾತ ತಂದಿರುವುದಂತೂ ನಿಜ. ಪತ್ರದ ಪ್ರತಿ ಇಲ್ಲಿದೆ ನೋಡಿ...

ಮಾನ್ಯ ಶ್ರೀ ಯಡಿಯೂರಪ್ಪನವರೇ,
ಖಾಸಗಿ ಟಿವಿಯಲ್ಲಿ ನಿಮ್ಮ ಸಂದರ್ಶನನೋಡಿದೆ. ತಾವು ಮಾತನಾಡಿದ ಒಂದು ಮಾತು ನನಗೆ ತುಂಬಾ ಹಿಡಿಸಿತು. ಏನೆಂದರೆ, "ಇಡೀ ರಾಜ್ಯ ಪ್ರವಾಸ ಮಾಡಿ ಕಾರ್ಯಕರ್ತರನ್ನು ಭೇಟಿ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದಿರಿ.

ಅಂತೂ ಕೊನೆಗಾದರೂ ತಮಗೆ ಕಾರ್ಯಕರ್ತರ ನೆನಪಾಯಿತಲ್ಲ, ಸಂತೋಷ. ತಾವು ಅಧಿಕಾರದಲ್ಲಿದ್ದಾಗ ಯಾವತ್ತೂ ತಮ್ಮ ಬಾಯಲ್ಲಿ ತಪ್ಪಿ ಕೂಡ ಕಾರ್ಯಕರ್ತ ಅಥವಾ ಬಿಜೆಪಿ ಎಂದು ಬರಲಿಲ್ಲ . ನಾನು, ಯಡಿಯೂರಪ್ಪ ಎಂದು ಹೇಳುತ್ತಿದ್ದಿರಿ ನಿಜ.

ಸಂಕಟ ಬಂದಾಗ ವೆಂಕಟರಮಣನ ನೆನಪಾಗುತ್ತದೆ. ನನ್ನ ಕೆಲವು ಪ್ರಶ್ನೆಗಳಿಗೆ ತಮ್ಮಿಂದ ದೊರಕಬಹುದೆಂದು ನಿರೀಕ್ಷಿಸುತ್ತೇನೆ.

1999 ಅಕ್ಟೋಬರ್ 25 ರಂದು ನನ್ನನ್ನು ಪಕ್ಷದಿಂದ ಹೊರ ಹಾಕಿದಿರಿ. ಇದು ಯಾರ ಕುತಂತ್ರ ಎಂದು ತಿಳಿಯಬಹುದೇ?

ವಿರೋಧ ಪಕ್ಷ ನಾಯಕನ ಚುನಾವಣೆ ಸಂದರ್ಭದಲ್ಲಿ ನನಗೆ ವಿರೋಧ ಪಕ್ಷ ನಾಯಕನಾಗುವ ಎಲ್ಲಾ ಅರ್ಹತೆ ಅವಕಾಶ ಇದ್ದರೂ ತಪ್ಪಿ ಹೋಯಿತು ಕಾರಣ? ಇದರ ಹಿಂದೆ ಇದ್ದ ಪಿತೂರಿ ಯಾರಗಿರಬಹುದು ತಿಳಿಸುವಿರಾ?

ನನಗೆ ಮತ್ತೊಮ್ಮೆ ಎಂಎಲ್‌ಸಿ ಆಗುವ ಅವಕಾಶವಿತ್ತು. ಅಂದಿನ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗ್ಗಡೆ ಅವರು ಪಕ್ಷದ ವತಿಯಿಂದ ಒಂದು ಪತ್ರ ಬರೆಸುವಂತೆ ಹೇಳಿದರು. ಅಂದು ಪಕ್ಷದ ಅಧ್ಯಕ್ಷರಾಗಿದ್ದ ತಮಗೆ ನಾನು ಮತ್ತು ಪಕ್ಷದ ಕೆಲವು ವರಿಷ್ಠರನ್ನು ಕೇಳಿಕೊಂಡೆವು. ತಾವು ಪತ್ರ ಕೊಡಲು ಒಪ್ಪಲಿಲ್ಲ.

ಕೊನೆ ಪಕ್ಷ ದೂರವಾಣಿ ಮುಖಾಂತರವಾದರೂ ತಿಳಿಸುವಂತೆ ಕೇಳಿಕೊಂಡೆವು. ತಾವು ಮನಸು ಮಾಡಲಿಲ್ಲ. ಕಾರಣ? (ದಿವಂಗತ ರಾಮಕೃಷ್ಣ ಹೆಗ್ಗಡೆ ಅವರ ಮಂತ್ರಿ ಮಂಡಲದಲ್ಲಿದ್ದ ಹಾಲಿ ನಿಮ್ಮ ಜೊತೆಯಲ್ಲಿರುವ ಡಿಬಿ ಚಂದ್ರೇಗೌಡರಿಗೆ ಗೊತ್ತಿದೆ. ಈ ಪ್ರಯತ್ನ ನಡೆದಿದ್ದು ಅವರ ಮುಖಾಂತರ).

ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸರಕಾರದಲ್ಲಿ ಒಂದು ಅವಕಾಶವಿತ್ತು. ಆದರೆ ನಾನು ಪಕ್ಷದಿಂದ ಅಮಾನತ್ತಿಲ್ಲಿ ಇದ್ದೆ. ಬಿಜೆಪಿಯಿಂದ ಅಮಾನತಿನಲ್ಲಿ ಇಡುವುದರ ಬದಲು ವಜಾ ಮಾಡಿದ್ದ ನನಗೆ ಸರಕಾರದಲ್ಲಿ ಒಂದು ಅವಕಾಶ ಸಿಗುತ್ತಿತ್ತು. ನಾನು ತಮ್ಮಲ್ಲಿ ಈ ಕುರಿತು ಮನವಿ ಮಾಡಿಕೊಂಡೆ. ಆದರೆ ತಾವು ನನ್ನನ್ನು ಬಿಟ್ಟು ಉಳಿದ ಇಬ್ಬರನ್ನು ವಜಾ ಮಾಡಿದಿರಿ.


ವಜಾ ಮಾಡಿದರೆ ಕೃಷ್ಣ ಅವರು ಏನಾದರೂ ಅವಕಾಶ ಮಾಡುತ್ತಾರೆ ಎಂದು ನಿಮಗೆ ಗೊತ್ತಿತ್ತು. ಹಾಗಾಗಿ, ನನಗೆ ಸಿಗಬಹುದಿದ್ದ ಒಂದು ಉನ್ನತ ಹುದ್ದೆ ತಪ್ಪಿತು. ಇದರ ಹಿಂದೆ ಇದ್ದ ಪಿತೂರಿದಾರರು ಯಾರು? ನಾನು ರಾಜ್ಯಾಧ್ಯಕನಾಗಿ ಮಾತ, ಅಲ್ಲ, ನನ್ನ ಶ್ರೀಮತಿ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷಳಾಗಿ ನಾಲ್ಕು ವರ್ಷಗಳ ಕಾಲ ಮನೆ-ಮಠ, ಮಕ್ಕಳು ಮೊಮ್ಮಕ್ಕಳನ್ನು ಬಿಟ್ಟು ಇಡೀ ರಾಜ್ಯ ಸುತ್ತಿ ಪಕ್ಷ ಸಂಘಟನೆಯಲ್ಲಿ ದುಡಿಯಲಿಲ್ಲವೇ? ಈ ರೀತಿ ಇಡೀ ಕುಟುಂಬ ಪಕಕ್ಕಾಗಿ ದುಡಿದಿದಕ್ಕೆ ತಮ್ಮಿಂದ ದೊರೆತ ಪ್ರತಿಫಲ ಏನು ?

ನಮ್ಮ ಪಕ್ಷ ದಿಂದ ಹೊರ ಹಾಕುವವರೆಗೆ ನೀವು ಶಿವಪ್ಪನವರು ತಂದೆ ಸಮಾನ, ಸುಶೀಲಕ್ಕನವರು ತಾಯಿ ಸಮಾನ ಎತ್ತುತ್ತಿದ್ದಿರಿ. ಕೇಂದ್ರ ನಾಯಕರಲ್ಲಿ ಕೆಲವರು
'ಶಿವಪ್ಪಾ ಜಿ ಹಮಾರಾ ಪಾರ್ಟಿಕಾ ಪಿತಾಮಹಾ' ಎನ್ನುತ್ತಿದ್ದರು. ಅಧಿಕಾರ ಬಂದ ತಕ್ಷಣ ವೃದ್ಧಾಶ್ರಮಕ್ಕೆ ಕಳುಹಿಸಿದಿರಿ ಏಕೆ ? ಮಾನ್ಯ ಯಡಿಯೂರಪ್ಪನವರೇ ತಾವು ಅಧ್ಯಕ್ಷ ಸ್ಥಾನ ಅಲಂಕರಿಸಿದ ದಿನದಿಂದ ನನ್ನನ್ನು ಪಕ್ಷದಿಂದ ದೂರವಿಡುತ್ತಾ ಬಂದಿರಿ.

ನನ್ನ ರಾಜಕೀಯ ಭವಿಷ್ಯವನ್ನೆ ಹಾಳು ಮಾಡಿದಿರಿ, ನಾನು ಎಂದೂ ನಿಮಗೆ ದ್ರೋಹ ಮಾಡಿದವನಲ್ಲ. ಏಕೆ ನನ್ನ ರಾಜಕೀಯ ಭವಿಷ್ಯ ಹಾಳು ಮಾಡಿದಿರಿ. ನಾವು ನಿಮಗೆ ಮಾಡಿರುವ ದ್ರೋಹವಾದರೂ ಏನು? ಬರೆಯಲು ಇನ್ನೂ ಸಾಕಷ್ಟಿದೆ.

ಸದ್ಯಕ್ಕೆ ಸಾಕು ತಮ್ಮ ಮೊಂಡುತನ ಬಿಟ್ಟು ನಾನು, ಯಡಿಯೂರಪ್ಪ ಎಂಬ ಅಹಂ ಬಿಟ್ಟು, ನೀವು ಮೊದಲನೇ ಯಡಿಯೂರಪ್ಪ ಆಗಿ ನಾವೆಲ್ಲಾ ನಿಮ್ಮ ಹಿಂದೆ ಇದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+