ಹೆಣ್ಣನ್ನು ಹೊಡೆಯುವುದು ಯಾವ ಪೌರುಷ ಅಂಬರೀಷಣ್ಣಾ !?

Ambarish
ಚಿತ್ರನಟ ದರ್ಶನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಕ್ಷೇತ್ರದ ಗಣ್ಯರಾದ ಅಂಬರೀಷ್ ಅವರು 'ಕುಟುಂಬ ಎಂದ ಮೇಲೆ ಜಗಳ ಸಾಮಾನ್ಯ. ಗಂಡ-ಹೆಂಡತಿಗೆ ಹೊಡೆಯುವುದು, ಮಗ-ಅಮ್ಮನಿಗೆ ಹೊಡೆಯುವುದು ಇದೆಲ್ಲವೂ ಇರುತ್ತದೆ. ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವಿಲ್ಲ' ಎಂದು ಗಂಡು, ಹೆಣ್ಣನ್ನು ಹೊಡೆಯುವುದು ಪೌರುಷದ ಸಂಕೇತವೆಂಬಂತೆ ಫರ್ಮಾನು ಹೊರಡಿಸಿದ್ದಾರೆ!

ಹಾಗಿದ್ದರೆ ಹೆಂಡತಿ-ಗಂಡನಿಗೆ ಹೊಡೆಯುವುದು, ಮಗಳು-ಅಪ್ಪನಿಗೆ ಹೊಡೆಯುವುದನ್ನೂ ಅಂಬರೀಷ್ ಅವರು ಸರಿಯೆಂದು, ಶೌರ್ಯದ ಸಂಕೇತವೆಂದು ಒಪ್ಪಿಕೊಳ್ಳುತ್ತಾರೆಯೇ?

ದರ್ಶನ್ ಅವರ ಅಮಾನವೀಯ ಕ್ರೌರ್ಯವನ್ನು ಒಪ್ಪಿ, ಪ್ರತಿಪಾದಿಸುತ್ತಿರುವ ಅವರ ನಡವಳಿಕೆ ಹಾಗೂ ಹೇಳಿಕೆ ಸಂವಿಧಾನ ಹಾಗೂ ಕಾನೂನು ವಿರೋಧಿಯಾದುದು ಎಂಬ ಅರಿವು ಅವರಿಗಿದೆಯೇ? ಹೆಣ್ಣೆಂದರೆ ಹೊಡೆಸಿ-ಬಡಿಸಿಕೊಳ್ಳಲು ಇರುವವಳೆಂಬ ಅವರ ಅನಾಗರಿಕ ತಿಳಿವಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನವೆಂದು ನಾವು ಭಾವಿಸುತ್ತೇವೆ.

- ರೂಪ ಹಾಸನ (ಹಾಸನ), ಸ. ಉಷಾ (ಶಿವಮೊಗ್ಗ), ಶಾರದಾ ಗೋಪಾಲ(ಧಾರವಾಡ), ಡಿ. ನಾಗಲಕ್ಷ್ಮಿ (ಬಳ್ಳಾರಿ), ಪಿ. ಹೇಮಲತ (ಮೈಸೂರು), ಜಿ. ಅನ್ನಪೂರ್ಣ (ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+