ಬಸವಣ್ಣ ಮಾಡಿದಷ್ಟು ಕೆಲಸ ನಾನು ಮಾಡಿಲ್ಲ: ಅಣ್ಣಾ ಹಜಾರೆ
ಕೂಡಲಸಂಗಮ,
ಸೆ. 5: ಮಹಾರಾಷ್ಟ್ರದ ರಾಳೆ ಗಣಸಿದ್ಧಿಯಲ್ಲಿ ಪ್ರಗತಿಪರ ಸಂಘಟನೆಗಳು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಣ್ಣಾ ಹಜಾರೆಯವರನ್ನು ಬಸವ ನಾಡಿನ ಪರವಾಗಿ ಸನ್ಮಾನಿಸಿ ಗೌರವಿಸಿದರು. id="toptextpromo">ಭ್ರಷ್ಟಾಚಾರ
ವಿರೋಧಿ ಹೋರಾಟವನ್ನು 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಪ್ರಧಾನ ಮಂತ್ರಿಯಾಗಿದ್ದಾಗ ಮಾಡಿದ್ದರು ಎಂದು ನೆನಪಿಸಿದ ಶ್ರೀಗಳು ಬಸವ ನಾಡಾದ ಕೂಡಲಸಂಗಮ ಹಾಗೂ ಬಸವನ ಬಾಗೇವಾಡಿಗೆ ಬರಲು ಅಣ್ಣಾ ಹಜಾರೆಯವರನ್ನು ಆಮಂತ್ರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಣ್ಣಾ ಹಜಾರೆ, ಇನ್ನು ಕೆಲವೇ ದಿನಗಳಲ್ಲಿ ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮಕ್ಕೆ ಬರುವುದಾಗಿ ತಿಳಿದರು. id='are-slot-1' class='oiad oi-axt oiadv'> id='top-searched-articles'>ಬಸವಣ್ಣ
ಮಾಡಿದಷ್ಟು ಕೆಲಸ ನಾನು ಮಾಡಿಲ್ಲ. ಆದರೆ ಸ್ವಲ್ಪ ಕೆಲಸ ಮಾಡಿದ್ದೇನೆಂಬ ತೃಪ್ತಿ ಇದೆ ಎಂದು ಅಣ್ಣಾ ಹೇಳಿದರು. ಬಸವ ಸೈನ್ಯದ ಸಂಸ್ಥಾಪಕ ಶಂಕರಗೌಡ ಬಿರಾದಾರ, ಮಹಾರಾಷ್ಟ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರಾಮ ನಾಯಕ, ಶ್ರೀಕಾಂತ ಕೊಟ್ರಶೆಟ್ಟಿ ಮುಂತಾದವರು ಇದ್ದರು.











Click it and Unblock the Notifications