ಮಡೆಸ್ನಾನದ ರಗಳೆ: ಬ್ರಾಹ್ಮಣರ ವಿರುದ್ಧ ಪಿತೂರಿ

Madesnana in Udupi
ಮಡೆಸ್ನಾನದ ಪರ, ವಿರೋಧ ಹೇಳಿಕೆಗಳ ನಡುವೆ ಈ ಲೇಖನದ ಮೂಲಕ ನನ್ನ ಕೆಲ ಅಭಿಪ್ರಾಯ ಬರೆಯಲು ಇಷ್ಟಪಡುತ್ತೇನೆ. ಮಡೆಸ್ನಾನ ಪದ್ದತಿ ಸುಮಾರು 400 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದು ಕುಕ್ಕೇ ಅಥವಾ ಉಡುಪಿ ದೇವಾಲಯದ ಸೇವಾಪಟ್ಟಿಯಲ್ಲಿರದ ಸೇವೆ. ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರೂ ಈ ಸೇವೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುವುದನ್ನು ಮಹಾಜನತೆ ಮೊದಲು ತಿಳಿದುಕೊಳ್ಳಬೇಕಾದುದು ಇಂದಿನ ಅಗತ್ಯ

ಮಡೆಸ್ನಾನದ ವಿಚಾರದಲ್ಲಿ ಬ್ರಾಹ್ಮಣರು Vs ಬ್ರಾಹ್ಮಣೇತರರೆಂದು ಎರಡು ವರ್ಗಗಳ ನಡುವೆ ತಂದಿಟ್ಟು ಮಜಾ ನೋಡುವವರಿಗೆ ಪುಕ್ಸಟ್ಟೆ ಪ್ರಚಾರ ಬೇಕೇ ವಿನಹ ಕ್ಷೇತ್ರದಲ್ಲಿ ನಡೆಯುವ ಈ ಸೇವೆಯ ವಿಶಿಷ್ಟತೆ ಏನೆಂದು ತಿಳಿಯುವ ಆಸಕ್ತಿಯಿಲ್ಲ. ಇಷ್ಟು ವರ್ಷ ಸುಮ್ಮನಿದ್ದ ವಿಚಾರವಾದಿಗಳಿಗೆ ಕಳೆದ ವರ್ಷದಿಂದ ಇದ್ದಕ್ಕಿದ್ದಂತೆ ಈ ಸೇವೆಯ ಬಗ್ಗೆ ಜ್ಞಾನೋದಯವಾಗಿ, ಗುಲ್ಲೆಬ್ಬಿಸುತ್ತಿರುವುದು ಏತಕ್ಕೆ? ವಿಷಯ ತಿಳಿದಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಏತಕ್ಕೆ?

ಕೆಲದಿನಗಳ ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ಗಮನಿಸಿ. ತುರುವೇಕೆರೆ ಪಟ್ಟಣದ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಕೂಡಾ ಈ ಪದ್ದತಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಇಲ್ಲಿ ಬ್ರಾಹ್ಮಣೇತರರು ಊಟ ಮಾಡಿದ ಎಲೆಯ ಮೇಲೆ ಬ್ರಾಹ್ಮಣರು ಉರುಳು ಸೇವೆ ನಡೆಸುತ್ತಾರೆ. ಸೇವಾಧರ್ಮದಿಂದ ಮನುಷ್ಯ ನಿಯತ್ತಿನಿಂದ ನಡೆಸುವ ಸೇವೆಗೆ ಜಾತಿ ಬಣ್ಣ ಏಕೆ? ಈ ವಿಚಾರದಲ್ಲಿ ಮೂಲಭೂತವಾದಿಗಳ ನಿಲುವೇನು? ದೇವರಿದ್ದಾನೆ ಎಂದು ನಂಬುವುದಾದರೆ, ದೇವರಿಲ್ಲ ಎನ್ನುವುದನ್ನೂ ನಂಬಬೇಕಾಗುತ್ತದೆ.

ಮಡೆಸ್ನಾನದ ವಿಚಾರದಲ್ಲಿ ಪೇಜಾವರ ಶ್ರೀಗಳ ಹೇಳಿಕೆ ನ್ಯಾಯಸಮ್ಮತವಾಗಿದೆ. ದಲಿತರ ಕೇರಿಗೆ ಹೋಗಿ ಶ್ರೀಗಳು ಮತಾಂತರ ಮತ್ತು ಅಸ್ಪ್ರಶ್ಯತೆಯ ಬಗ್ಗೆ ಮಾತನಾಡುವುದಕ್ಕೂ ಭಕ್ತರ ಮಡೆಸ್ನಾನದಂತಹ ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ಶ್ರೀಗಳ ಹೇಳಿಕೆಯ ನಡುವೆ ತುಲನೆ ಮಾಡುವುದು ನ್ಯಾಯಸಮ್ಮತವಲ್ಲ.

ಹೀಗೆ ವೃಥಾ ತುಲನೆ ಮಾಡುವುದು, ಹೋಲಿಕೆ ಮಾಡಿ ಅಸಂಬದ್ಧ ಸೃಷ್ಟಿಸುವುದು ಬ್ರಾಹ್ಮಣ ಸಮುದಾಯದ ವಿರುದ್ಧ ನಡೆಯುತ್ತಿರುವ ಪಿತೂರಿಗಳಲ್ಲಿ ಒಂದು. ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+