ಯಡಿಯೂರಪ್ಪ ನೀಡಿದ ನೇರ, ದಿಟ್ಟ, ನಿರಂತರ ಉತ್ತರ

ಸುವರ್ಣ ಸುದ್ದಿ ವಾಹಿನಿಯ ರಂಗನಾಥ್ ಭಾರದ್ವಾಜ್, ಹಮೀದ್ ಪಾಳ್ಯ ಹಾಗೂ ತ್ಯಾಗರಾಜ್ ಆವರ ಯಾವ ಚುಚ್ಚು ಮಾತು ಬಿಎಸ್ ವೈ ಅವರ ಬಿಚ್ಚುಮಾತು ನಿಲ್ಲಿಸಲಾಗಲಿಲ್ಲ.
[ಸುವರ್ಣ ವಾಹಿನಿ ಸಂದರ್ಶನದ ವಿಡಿಯೋ ನೋಡಿ: ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6]
ನಿರೂಪಕರು ಕೇಳಿದ ಮನಚುಚ್ಚುವಂಥ ಪ್ರಶ್ನೆಗಳಿಗೆ ಶಾಂತವಾಗಿ ನಗುಮೊಗದ ಉತ್ತರ ನೀಡುತ್ತಿದ್ದ ಬಿಎಸ್ ಯಡಿಯೂರಪ್ಪ ಅವರನ್ನು ನೋಡಿದ ಪ್ರೇಕ್ಷಕರಿಗೆ ಶಾಕ್ ಆಗಿತ್ತು. ಸದಾ ಸಿಡುಕಿನ ಸ್ವಭಾವಕ್ಕೆ ಹೆಸರಾಗಿರುವ ಉಗ್ರಪ್ರತಾಪಿ ಯಡಿಯೂರಪ್ಪ ಅವರು ಮನ ಬಿಚ್ಚಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದರು.
ಯಡಿಯೂರಪ್ಪ ನೀಡಿದ ಉತ್ತರಗಳ ಪ್ರಮುಖಾಂಶ ಇಲ್ಲಿದೆ:
* ರಾಜ್ಯಪಾಲರೇ ನನಗೆ ವಿಲನ್ ಸರ್ಕಾರ ವಜಾಕ್ಕೆ ಎರಡು ಬಾರಿ ಕೇಂದ್ರ ಶಿಫಾರಸ್ಸು ಕಳಿಸಿದ್ದರು. ಆದರೆ, ರಾಜ್ಯಪಾಲರ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿದ್ದರೆ, ಕೇಂದ್ರ ಸರ್ಕಾರವೇ ಇರುತ್ತಿರಲಿಲ್ಲ ಎಂದರು ಯಡಿಯೂರಪ್ಪ.
ಅಂದರೆ, ಕೇಂದ್ರ ಸರ್ಕಾರ ಉರುಳಿಸುವ ತಾಕತ್ತು ಬೆಳೆಸಿಕೊಂಡಿದ್ದರೆ ಯಡಿಯೂರಪ್ಪ? ಗೊತ್ತಿಲ್ಲ ಉತ್ತರ ಸಿಗಲಿಲ್ಲ...
* ನಮ್ಮವರೇ ಪಿತೂರಿ ಮಾಡಿದ್ದು ದುಃಖಕರ ಸಂಗತಿ. ಆದರೆ, ನಾನು ಅವರನ್ನು ದ್ವೇಷಿಸುವುದಿಲ್ಲ, ವಿರೋಧ ಪಕ್ಷಗಳನ್ನು ಅಭಿನಂದಿಸುತ್ತೇನೆ. ಇದು ಯಾಕೋ ಯೇಸು ಕ್ರಿಸ್ತನ ಬೋಧನೆಯ ಯಥಾವತ್ ಡೈಲಾಗ್ ರೀತಿಯಲ್ಲಿತ್ತು. ಯಾರು ಪಿತೂರಿ ನಡೆಸಿದ್ದು ಎಂದು ಕೊನೆವರೆಗೂ ತಿಳಿಯಲೇ ಇಲ್ಲ.
* ನಿಕಟ ಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ನಮ್ಮ ನಡುವೆ ಯಾವುದೇ ಯಾವುದೇ ಮನಸ್ತಾಪಗಳಿಲ್ಲ ಎಂದರು. ಆದರೂ, ಹೆಗ್ಡೆ ಅವರು ನಿಮ್ಮ ಹೆಸರು ಏಕೆ ಗಣಿ ವರದಿಯಲ್ಲಿ ಸೇರಿಸಿದರು ಅಂದ್ರೆ ನನಗೆ ಗೊತ್ತಿಲ್ಲ ಎಂದರು.
ಧರಂ ಬಗ್ಗೆ ಗರಂ ಆಗದೆ ಮಾಜಿ ಸಿಎಂ ಶಾಂತವಾಗಿದ್ದು ಏಕೆ?...












Click it and Unblock the Notifications