ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರಕ್ಕೆ ಉತ್ಸುಕತೆ ?

ಆ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ, ಬಿಸಿಯೂಟ ಎಲ್ಲಾ ಸೌಕರ್‍ಯಗಳು ದೊರಕಿದೆ. ಅನುದಾನಿತ ಶಾಲೆಯಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳು ಇದರಿಂದ ವಂಚಿತರು. ಈಗಿನ ಹೆಚ್ಚಿನ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 50 ರಿಂದ 60 ಮಕ್ಕಳಿರುತ್ತಾರೆ. ಎಲ್ಲಾ ಕ್ಲಾಸ್‌ಗಳಿಗೂ ಒಂದೇ ಅಧ್ಯಾಪಕ. ಕಿನ್ನಿಗೋಳಿ ಸಮೀಪ ತೋಕೂರು ಹಿರಿಯ ಪ್ರಾಥಮಿಕ ಶಾಲೆ ಹಲವು ವರುಷಗಳ ಮೊದಲು ಪ್ರಾರಂಭವಾಯಿತು. ಸುಮಾರು 300 ಮಕ್ಕಳನ್ನು ಹೊಂದಿ ಪ್ರತಿ ಕ್ಲಾಸಿಗೆ ಒಬ್ಬ ಶಿಕ್ಷಕರಿದ್ದ ಶಾಲೆಯಲ್ಲಿ ಈಗ 63 ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಸರಕಾರಿ ಸಂಬಳ ಪಡೆಯುವ ಶಿಕ್ಷಕರಿದ್ದಾರೆ.
ಈಗ ಆ ಶಾಲೆಯಿಂದ ಒಬ್ಬ ಅಧ್ಯಾಪಕಿಯನ್ನು ಮಕ್ಕಳ ಸಂಖ್ಯೆಯಿಲ್ಲವೆಂದು ಬೇರೆ ಶಾಲೆಗೆ ವರ್ಗಾಯಿಸಲು ಸರಕಾರ ನಿಶ್ಚಯಿಸಿ ಕೌನ್ಸಲಿಂಗ್ ಕರೆದಿದೆ.ಇದರಿಂದಾಗಿ ಅಲ್ಲಿ ಕಾರ್ಯನಿರ್ವಹಿಸುವ ಇನ್ನೊಂದು ಅಧ್ಯಾಪಕಿ ಸ್ವಇಚ್ಛೆಯಿಂದ ನಿವೃತ್ತರಾಗಲು ಅರ್ಜಿ ಸಲ್ಲಿಸಿದ್ದಾರೆ. ಆ ವಿದ್ಯಾರ್ಥಿಗಳ ಪಾಡೇನು ? ಈ ಶಾಲೆಗೆ ನಾಲ್ಕು ಗೌರವ ಶಿಕ್ಷಕರನ್ನು ನೇಮಿಸಿ ಕೈಯಿಂದ ಗೌರವಧನ ನೀಡುತ್ತಿದ್ದಾರೆ.
ಕಳೆದ ವರ್ಷ ಮುಲ್ಕಿ ಬಾರಿ ಎಳತ್ತೂರು ಹಿರಿಯ ಪ್ರಾಥಮಿಕ ಶಾಲೆ ಮುಚ್ಚಲಾಯಿತು. ಮುಂದಿನ ವರ್ಷ ತೋಕೂರು ಹಿರಿಯ ಪ್ರಾಥಮಿಕ ಶಾಲೆ ಮುಚ್ಚಲು ಅನುಮತಿಗೆ ಬರೆಯಲಾಗಿದೆ. ಶಿಮಂತೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80 ಮಕ್ಕಳಿದ್ದು ಒಬ್ಬ ಅಧ್ಯಾಪಕಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯದ ಅಧ್ಯಕ್ಷನಾಗಿ ಕೆಲಸ ಮಾಡಿದ ನಾನು ಹೆತ್ತವರಿಗೆ ನೀಡುವ ಸಲಹೆ ದಯಮಾಡಿ ಕ್ಲಾಸಿಗೊಬ್ಬ ಅಧ್ಯಾಪಕರಿರದ ಕನ್ನಡ ಶಾಲೆಗೆ ಮಕ್ಕಳನ್ನು ಕಳುಹಿಸಿ ಅವರ ಭವಿಷ್ಯವನ್ನು ಹಾಳು ಮಾಡಬೇಡಿರಿ.
ರಾಜಕಾರಣಿಗಳ ಮರ್ಜಿಯಂತೆ ಮನೆಬಾಗಿಲಿಗೆ ಬಂದು ಕರೆದುಕೊಂಡು ಹೋಗುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ, ಈ ರೀತಿಯಿಂದಲಾದರೂ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ.











Click it and Unblock the Notifications