ಅಡ್ವಾಣಿ ರಥಯಾತ್ರೆ ನಾಡಿನ ಶಾಂತಿ ನೆಮ್ಮದಿ ಭಂಗ ಮಾಡದಿರಲಿ
ಅಣ್ಣಾ
ಹಜಾರೆಯವರ ಯಶಸ್ವಿ ನಿರಶನದ ನಂತರ ದೇಶದಲ್ಲಿ ಜನಪ್ರತಿನಿಧಿಗಳು ಸಮೂಹ ಸನ್ನಿಗೆ ಒಳಗಾದಂತೆ ಕಾಣುತ್ತಿದ್ದಾರೆ. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸಾಂಕೇತಿಕ ನಿರಶನದ ಮೂಲಕ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತು ಹಾಕುವವರಂತೆ ತಮ್ಮ 'ಸದ್ಭಾವನೆಯ' ವಿರಾಟ ಸ್ವರೂಪವನ್ನು ಜನತೆಗೆ ತೋರಿಸಿದರು. id="toptextpromo">ಮೋದಿಯವರ
ಆ ಪ್ರಹಸನ ಮುಗಿಯುವ ಮೊದಲೇ ಭಾರತೀಯ ಜನತಾ ಪಕ್ಷದ ಅಗ್ರ ನಾಯಕ ಲಾಲ್ ಕೃಷ್ಣ ಕಿಶನಚಂದ್ ಅಡ್ವಾಣಿಯವರು ಅ. 11 ರಿಂದ ರಥಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ. ಅಡ್ವಾಣಿಯವರ ರಥಯಾತ್ರೆ ಎಂದ ಕೂಡಲೇ ನೆನಪಿಗೆ ಬರುವುದು 1991ರ ರಥಯಾತ್ರೆ ಸಂದರ್ಭದಲ್ಲಿ ದೇಶದಾದ್ಯಂತ ನಡೆದ ಕೊಮುಗಲಭೆಗಳು. id='are-slot-1' class='oiad oi-axt oiadv'> id='top-searched-articles'>ನಿರಶನ,
ರ‌್ಯಾಲಿ, ರಥ ಯಾತ್ರೆಗಳು ಸಮಾಜದ ಶಾಂತಿ ನೆಮ್ಮದಿ ಹಾಳುಮಾಡಿ ಅಮಾಯಕರ ಪ್ರಾಣಹಾನಿ, ಆಸ್ತಿಹಾನಿ ಮಾಡುವಂತಾಗಬಾರದು. ಇತ್ತೀಚಿನ ಕೆಲ ವರ್ಷಗಳಿಂದ ದೇಶದಾದ್ಯಂತ ಶಾಂತ ವಾತಾವರಣ ನಿರ್ಮಾಣವಾಗಿದೆ. ಈಗ ಮತ್ತೊಮ್ಮೆ ರಥಯಾತ್ರೆ ಎಂಬ ಸುನಾಮಿ ದೇಶದ ಹಾಗೂ ರಾಜ್ಯದ ಶಾಂತಿ ನೆಮ್ಮದಿಯನ್ನು ಭಂಗ ಮಾಡದಿರಲಿ.











Click it and Unblock the Notifications