1991 ರಥಯಾತ್ರೆ: ದಾವಣಗೆರೆಯ ಸಂತ್ರಸ್ತರಿಗೆ ಅಡ್ವಾಣಿ ಉತ್ತರವೇನು?

advani-yatra-davanagere-voilance-who-to-blame
ಆ ಸಂದರ್ಭದಲ್ಲಿ, ಲೆಕ್ಕವಿಲ್ಲದಷ್ಟು ಅಮಾಯಕರ ಮಾರಣ ಹೋಮ ಆ ಸಂದರ್ಭದಲ್ಲಿ ನಡೆದು ಹೋಯಿತು. ನಮ್ಮ ರಾಜ್ಯದ ದಾವಣಗೆರೆ ಅಕ್ಷರಶಃ ಉರಿದು ಹೋಯಿತು, ಅಲ್ಲಿ ನಡೆದ ಕೊಲೆ ಸುಲಿಗೆಗಳಿಗೆ ಇಂದಿಗೂ ಲೆಕ್ಕ ಸಿಕ್ಕಿಲ್ಲ.

ದೇಶದಾದ್ಯಂತ ಆಗ ನಡೆದ ಕೊಮುದಳ್ಳುರಿಯ ನೆನಪು ಇದುವರೆಗೂ ಜನರ ಮನಸ್ಸಿನಲ್ಲಿ ತನ್ನ ಕರಾಳ ನೆನಪನ್ನು ಬಿಟ್ಟು ಹೊಗಿದೆ. ಆ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡು ಅವರ ಅಗಲುವಿಕೆಯ ನೋವಲ್ಲಿ ಜೀವನ ನಡೆಸುತ್ತಿರುವವರ ಆಕ್ರಂದನ ಕೇಳುವವರಾರು?

ಒಬ್ಬ ಅಮಾಯಕ ವ್ಯಕ್ತಿಯ ಸಾವು ಸಮಾಜಕ್ಕೆ ಅಥವಾ ದೇಶಕ್ಕೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡಲಾರದು. ಆದರೆ ಅವನ ಕುಟುಂಬಕ್ಕೆ ಹಾಗೂ ಆತನ ಅವಲಂಬಿತರಿಗೆ ಜೀವನಪರ್ಯಂತ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ.

ಗಲಭೆ ಸಂದರ್ಭದಲ್ಲಿ ತಮ್ಮವರನ್ನು ಕಳೆದುಕೊಂಡವರು ಎಂದಿಗೂ ಆ ರಥಯಾತ್ರೆ ಹಾಗೂ ಲಾಲ್ ಕೃಷ್ಣ ಅಡ್ವಾಣಿಯವರನ್ನು ಮಾತ್ರ ಮರೆಯಲಾರರು. ರಥಯಾತ್ರೆ ಎಂದರೆ ಅವರ ಪಾಲಿಗೆ ಸುನಾಮಿ ಇದ್ದಂತೆ. ದಾವಣಗೆರೆಯದ್ದು ಈ ಸ್ಥಿತಿಯಾದರೆ ಹುಬ್ಬಳ್ಳಿ, ಶಿವಮೊಗ್ಗ, ಭದ್ರಾವತಿ ಮುಂತಾದ ನಗರಗಳು ಗಲಭೆ ಪಿಡಿತ ಪ್ರದೇಶಗಳಾಗಿ ಸಾಕಷ್ಟು ಸಾವು ನೋವು ಹಾಗೂ ವಾರಗಟ್ಟಲೆ ಕರ್ಫ್ಯೂ ಸ್ಥಿತಿಗೆ ಒಳಗಾಗಿ ವ್ಯಾಪಾರ ವಹಿವಾಟಿನ ನಷ್ಟ ಅನುಭವಿಸಿದವು.

ಆ ಸಮಯದಲ್ಲಿ ಕೇವಲ ನಮ್ಮ ರಾಜ್ಯದ ಸ್ಥಿತಿ ಈ ರೀತಿಯಾಗಿರಬೇಕಾದರೆ ದೇಶದ ಇನ್ನುಳಿದ ರಾಜ್ಯಗಳ ಪರಸ್ಥಿತಿ ಹೇಗಿರಬೇಡ? ಒಂದು ರಥಯಾತ್ರೆ ಸಮಾಜದ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಲ್ಲದು ಎನ್ನುವುದಕ್ಕೆ ಇದೊಂದು ನಿದರ್ಶನ ಮಾತ್ರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+