ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಉಳಿದರೆ ಹಿಂದೂ ರಾಷ್ಟ್ರ ಉಳಿದೀತು!

By * ಅಶೋಕ್, ವಾಮಂಜೂರು,
|
Google Oneindia Kannada News

RSSmust survive to build Hindu nation
ಅನೂಚಾರ ಸಾತ್ವಿಕ ಶಕ್ತಿಯ ಆಧುನಿಕ ರೂಪವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ತಪ್ಪಾಗದು. ತನ್ನಲ್ಲಿನ ಆದರ್ಶ ಪರಂಪರೆಯನ್ನು ಮಹಾನ್ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಮುಂಚೂಣಿಯಲ್ಲಿ ಶ್ರಮಿಸು ತ್ತಿರುವ ಬೃಹತ್ ಶಕ್ತಿಯದು. ಈ ಸತ್ಯ ಅರ್ಥ ವಾದ ದಿನದಿಂದಲೇ ಸಂಘವನ್ನು ಹಣೆ ಯಲು ದಮನಿಸಲು ವಿರೋಧಿ ಶಕ್ತಿಗಳು ದೊಡ್ಡ ರೀತಿಯಲ್ಲಿ ಸನ್ನಾಹ ಆರಂಭಿಸಿವೆ. ಆದರೆ ಅದೆಲ್ಲವೂ ವಿಫಲಗೊಂಡು ಈ ಮಣ್ಣಿನ ಸತ್ವಪ್ರೀತಿಗೆ ಅನುಗುಣವಾದಂತೆ ರಾ.ಸ್ವ. ಸಂಘವು ದಿನೇ ದಿನೇ ವರ್ಧಿಸುತ್ತಲೇ ಇವೆ. ಇದರಿಂದಾಗಿ ಈ ವಿಧ್ವಂಸಕ ಶಕ್ತಿಗಳಿಗೆ ಇನ್ನಷ್ಟು ಸಂಕಟವಾಗುತ್ತಲೇ ಸಾಗಿದೆ.

1948ರಲ್ಲಿ ಗಾಂಧೀಜಿಯವರ ಹತ್ಯೆ ಸಂದರ್ಭದಿಂದ ಆರಂಭಿಸಿ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಹತ್ತಿಕ್ಕಲು ಅನೇಕರು ವಿವಿಧ ರೀತಿಯ ಪ್ರಯತ್ನದಲ್ಲಿದ್ದಾರೆ ಮತ್ತು ಆ ಕಾರ್ಯದಲ್ಲಿ ತಪ್ಪದೆ ವಿಫಲರಾಗಿ ತಮ್ಮ ಮುಖಕ್ಕೆ ಮಸಿ ಬಳಿದುಕೊಂಡಿದ್ದರೆ ಸೋನಿಯಾ ಗಾಂಧಿಯವರು ಕಾಂಗ್ರೆಸ್ ನಾಯಕತ್ವವನ್ನು ವಹಿಸಿಕೊಂಡ ಮೇಲಂತೂ ಸಂಘ ಎತ್ತಿ ಹಿಡಿಯುವ ಆದರ್ಶಗಳನ್ನು, ಶ್ರದ್ಧೆಗಳನ್ನು ಒಳಗೇ ಕೊರೆದು ಹಾಕಲು ಸತತ ಪ್ರಯತ್ನಗಳು ಮತ್ತಷ್ಟು ವೇಗವಾಗಿ ನಡೆದಿರುವುದು ಸರ್ವವಿಧಿತ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನೇರವಾಗಿ ಭಯೋತ್ಪಾದಕ ಸಂಘಟನೆ ಎಂದು ಕರೆಯುವ ಮೂಲಕ ಸೋನಿಯಾಗಾಂಧಿಯವರು ಭಾರೀ ಪ್ರಮಾದಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ನೇತಾ ರರು ಹುಟ್ಟುಹಾಕಿರುವ ಕೇಸರಿ ಭಯೋತ್ಪಾದನೆ ಎನ್ನುವ ಪದಮಿಶ್ರಣವೇ ಆಸಂಗತವಾದುದು. ಎಣ್ಣೆ-ಸೀಗೇಕಾಯಿ ಬೆಂಕಿ-ನೀರು ಎಂಬುವು ದಾಗಿ ಒಂದು ಬಾಂಧವ್ಯವನ್ನು ಕರೆಯುವುದು ಎಷ್ಟು ಸರಿಯೋ ಈ ಪದಪ್ರಯೋಗವೂ ಅಷ್ಟೇ ಸರಿ. ಕೇಸರಿ ಹಾಗೂ ಭಯೋತ್ಪಾದನೆ ಎರಡೂ ಒಂದಕ್ಕೊಂದು ಹೊಂದದ ಅರ್ಥವ್ಯಾಪ್ತಿಯುಳ್ಳ ಪದಗಳು.

ಕೇಸರಿ ಎಂಬುದಕ್ಕೆ ತ್ಯಾಗ, ಜ್ಞಾನ, ಪವಿತ್ರ, ಪರಿಶುದ್ಧ ಎಂದೆಲ್ಲಾ ಅರ್ಥವಿದ್ದರೆ ಭಯೋತ್ಪಾದನೆ ಎಂಬುದಕ್ಕೆ ಆಕ್ರಮಣ ಪರಮ ಸ್ವಾರ್ಥ, ಅಜ್ಞಾನ, ಕಲುಷಿತ ಚಿಂತನೆ ಎಂದೆಲ್ಲಾ ಅರ್ಥಗಳು. ವಸ್ತುಸ್ಥಿತಿ ಹೀಗಿರುವಾಗ ಇವೆರಡೂ ವಿರೋಧಾರ್ಥಕ ಪದಗಳನ್ನು ಒಟ್ಟುಗೂಡಿಸಿ ಹೊಸದೊಂದು ಪದಗುಚ್ಛ ತಯಾರಿಸುವುದು, ಅದನ್ನು ಹೊಸ ಅರ್ಥದಲ್ಲಿ ಪ್ರಯೋಗಿಸುವುದು ಖಂಡಿತ ವೈರುಧ್ಯಮಯ.

ರಾಜಕೀಯ ಷಡ್ಯಂತ್ರ:
ನವದೆಹಲಿಯಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ಪ್ರಯತ್ನ ಮಾಡಿರುವುದು ಕಡು ಮೂರ್ಖತನ. ಆದರೆ ಹಾಗೆಂದು ಭಾವಿಸಿ ಅದನ್ನು ನಿರ್ಲಕ್ಷಿಸು ವುದು ಮಾತ್ರ ಅಪಾಯಕರ. ಏಕೆಂದರೆ ಈ ಪ್ರಯತ್ನದ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿದೆ.

ಇದರ ಅಂಗವಾಗಿಯೇ ಲಕ್ಷ್ಮಣಾನಂದ ಸರಸ್ವತಿ ಯವರ ಹತ್ಯೆ ನಡೆದುದು. ಆರೆಸ್ಸೆಸ್ ಮಾತ್ರವಲ್ಲದೆ ಮತ್ತೂ ಕೆಲವು ಹಿಂದು ಸಂಘಟನೆಗಳ ಮೇಲೆ ಇನ್ನಿಲ್ಲದ ಆರೋಪಗಳನ್ನು ಹೊರೆಸುತ್ತಿರುವುದು ಸಾಧ್ವಿ ಪ್ರeಸಿಂಗ್, ಬಾಬಾ ರಾಮದೇವ್‌ಜೀ, ಮಾತಾ ಅಮೃತಾನಂದ ಮಯೀ, ರವಿಶಂಕರ್ ಗುರೂಜೀ, ಕಂಚಿಶ್ರೀಗಳು ಮೊದಲಾದ ಹಿಂದು ಪ್ರಮುಖರ ಮೇಲೆ ಯಾವುದೋ ಒಂದು ರೀತಿಯಲ್ಲಿ ಗೂಬೆ ಕೂರಿಸಿ ಅವರ ಹೆಸರಿಗೆ ಮಸಿ ಬಳಿಯಲು ಅವಿರತ ಪ್ರಯತ್ನಗಳು ನಡೆಯುತ್ತಿರುವುದು.

ಇಡೀ ಪ್ರಪಂಚದಲ್ಲಿ ಅತೀ ದೊಡ್ಡ ಸಂಘಟನೆ ಎಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ದೇಶಭಕ್ತಿಗಾಗಿ ತನ್ನನ್ನು ಬೃಹತ್ ರೂಪ ದಲ್ಲಿ ತೊಡಗಿಸಿಕೊಂಡಿರುವ ಮುಂಚೂಣಿ ಹಿಂದು ಶಕ್ತಿಯದು. ಈ ಶಕ್ತಿಯನ್ನು ಹ್ರಾಸಗೊಳಿಸಿದರೆ ಇಡೀ ಹಿಂದುಸ್ತಾನದ ಬಲವನ್ನೇ ಕುಗ್ಗಿಸಿದಂತೆ ಎನ್ನುವುದು ದೇಶದ ಉತ್ಕರ್ಷವನ್ನು ಬಯಸದ ಹಿತಾಸಕ್ತಿಗಳ ಚಿಂತನೆ, ಆ ಚಿಂತನೆಗೆ ಅನುಗುಣವಾಗಿಯೇ ಈ ಎಲ್ಲ ಷಡ್ಯಂತ್ರಗಳು ಕಾಂಗ್ರೆಸ್‌ನ ಅಧಿನಾಯಕಿಯು ರಾ.ಸ್ವ. ಸಂಘ ವನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ಹಿನ್ನೆಲೆಯಲ್ಲಿ ಇರುವುದು ಕೂಡಾ ಇದೇ ಷಡ್ಯಂತ್ರವೇ.

ರಾ.ಸ್ವ. ಸಂಘದ ಹಿರಿಯರನ್ನು, ಅಧಿಕಾರಿಗಳನ್ನು ಭಯೋತ್ಪಾದನಾ ಕೃತ್ಯಗಳಲ್ಲಿ ಹೆಸರಿಸುವ ಕೃತ್ರಿಮ ನಡೆಯುತ್ತಿರುವುದೂ ಈ ಷಡ್ಯಂತ್ರದ ಒಂದು ಭಾಗವೇ ಆಗಿದೆ. ಈ ಮರ್ಮವನ್ನು ದೇಶವಾಸಿಗಳು ಅರ್ಥೈಸಿಕೊಂಡು ಸಂಘದ ವಿರುದ್ಧ ಕೇಳಿಬಂದಿ ರುವ ಆಪಾದನೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ಪ್ರತಿಭಟನೆಯನ್ನು ದಾಖಲಿಸುವುದು ಈ ಸಂದರ್ಭದ ತುರ್ತು ಅಗತ್ಯವಾಗಿದೆ.

ಈ ದೇಶ ಉಳಿಯಬೇಕೆಂದರೆ ಹಿಂದು ಉಳಿಯಬೇಕು, ಹಿಂದುಗಳು ಉಳಿಯಬೇಕೆಂ ದರೆ ಅವರ ಶ್ರದ್ಧಾಕೇಂದ್ರಗಳು ಬಲಿಷ್ಠವಾಗಿ ಇರಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷ್ಕಳಂಕಿತವಾಗಿ ಇರಬೇಕು. ಆದರಿಂದ ಸಂಘವನ್ನು ಹಾಗೆ ಉಳಿಸಿಕೊಳ್ಳಬೇ ಕಾದುದು ದೇಶವಾಸಿಗಳು ನಡೆಸಬೇಕಾದ ಆದ್ಯ ಕರ್ತವ್ಯವೇ ಆಗಿದೆ. ಇನ್ನು ಹೇಳಬೇಕೆಂದರೆ ಇಡೀ ಪ್ರಪಂಚ ಉಳಿಯಬೇಕೆಂದರೆ, ಭಾರತ ದೇಶದ ಹಿರಿಮೆಯನ್ನು ಸಮರ್ಥವಾಗಿ ಎತ್ತಿ ಹಿಡಿಯಬಲ್ಲ ರಾ.ಸ್ವ.ಸಂಘವನ್ನು ಸಂಪೂರ್ಣ ಕಾಪಾಡಬೇಕಾದ ಹೊಣೆ ನಮ್ಮ ಮೇಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X