ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಂಧತಿ ರಾಯ್ ದೇಶದ ಕ್ಷಮೆಯಾಚಿಸಲಿ

By * ಗಣೇಶ್ ಎ, ಹಂಪನಕಟ್ಟೆ, ಮಂಗಳೂರು
|
Google Oneindia Kannada News

Arundathi Roy
ಈ ಹಿಂದೆ ಅರುಂಧತಿ ರಾಯ್ ನಕ್ಸಲೈಟರೊಂದಿಗೆ ಬೆರೆತು, ಅವರ ಬಗ್ಗೆ ಸಹಾನುಭೂತಿಯ ಮಾತುಗಳನ್ನಾಡಿದಾಗ ಜನರು ವಿಚಲಿತರಾಗಿದರೂ, ಅವರು ಸರಕಾರ ಮತ್ತು ನಕ್ಸಲೈಟ್‌ಗಳ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿ ನಕ್ಸಲ್ ಸಮಸ್ಯೆ ಪರಿಹಾರ ಕಾಣಬಹುದು ಎಂಬ ಆಶಾಭಾವನೆಯೊಂದು ಮೊಳೆತಿತ್ತು.

ಆದರೆ, ಇದೀಗ ಅರುಂದತಿ ಕಾಶ್ಮೀರ ಕುರಿತು ಕೊಟ್ಟಿರುವ ಹೇಳಿಕೆ ನಿಜಕ್ಕೂ ಶಾಕ್ ನೀಡಿದೆ. ಕಾಶ್ಮೀರ ಜನತೆಯನ್ನು ಭಾರತದಿಂದ ಮುಕ್ತಗೊಳಿಸಿ ಎಂದು ಹೇಳಲು ಇವರಿಗೇನಿದೆ ಅಧಿಕಾರ? ಇದು ಪ್ರಚಾರ ಪಡೆಯಲು ಹೂಡಿದ ತಂತ್ರ ಎಂಬ ವಿಷಯ ಎಲ್ಲರನ್ನು ಕಾಡುತ್ತಿದೆ.

ಕಾಶ್ಮೀರದ ಸಲುವಾಗಿ ಎರಡು ಯುದ್ಧಗಳಾಗಿವೆ. ಬಾಂಗ್ಲಾದೇಶ ಉದಯವಾಗಿದೆ. ಅದೆಷ್ಟೋ ಸೈನಿಕರು ಪ್ರಾಣ ತೆತ್ತಿದ್ದಾರೆ. ಈಗಲೂ ಕಾರ್ಗಿಲ್‌ನಂತಹ ಸಣ್ಣ ಯುದ್ಧದಲ್ಲಿ ಎಷ್ಟೋ ಹೆಣ್ಣು ಜೀವಿಗಳು ತಮ್ಮ ಗಂಡ, ಅಣ್ಣ, ತಮ್ಮ, ಅಪ್ಪಂದಿರನ್ನು ಕಳೆದುಕೊಂಡು ಅನಾಥವಾಗಿವೆ.

ಇವರೆಲ್ಲ ಪ್ರಾಣ ಕಳೆದುಕೊಂಡಿದ್ದು ಕಾಶ್ಮೀರವನ್ನು ಭಾರತದಿಂದ ಬೇರೆ ಮಾಡಲಿಕ್ಕಾಗಿಯೇ? ನಮ್ಮ ದೇಶಕ್ಕೆ ಆಗಾಗ ಪಾಕಿಸ್ತಾನ ಮತ್ತು ಚೀನಾಗಳಿಂದ ಅಪಾಯವಿರುವುದರಿಂದ ಸರ್ಕಾರ ತನ್ನ ಪ್ರಜೆಗಳನ್ನು ರಕ್ಷಿ ವುದಕ್ಕೋಸ್ಕರ ಏಷ್ಯಾದಲ್ಲಿಯೇ ಬೃಹತ್ತಾದ ಸೀಬರ್ಡ್ (ಕದಂಬ) ನೌಕಾನೆಲೆಗೆ ತಳಪಾಯ ಹಾಕಿತು. ನಮ್ಮ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ತಾಲೂಕಿನ ಜನತೆ ದೇಶದ ರಕ್ಷಣೆಗೋಸ್ಕರ ತಮ್ಮ ಸಮಸ್ತ ಆಸ್ತಿಗಳನ್ನೂ ಮತ್ತು ಸಾವಿರಾರು ಎಕರೆ ಭೂಮಿಗಳನ್ನು ಧಾರೆಯೆರೆದರು.

ಅಸಂಖ್ಯ ಜನತೆ ಅನಾದಿಕಾಲದಿಂದಲೂ ಇದ್ದ ತಮ್ಮ ಮನೆಗಳನ್ನು ಬಿಟ್ಟು ಹೊರಬರಲಾರದೇ ಚಡಪಡಿಸಿತು. ಆದರೂ ದೇಶಸೇವೆಗಾಗಿ ಎಲ್ಲವನ್ನೂ ತ್ಯಾಗಮಾಡಿದ್ದಾರೆ. ಇನ್ನೂ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಹೆಣ್ಣು ಮಗಳು ಅದೆಲ್ಲೋ ಕುಳಿತು, ಕಾಶ್ಮೀರಕ್ಕೆ ಪ್ರತ್ಯೇಕತೆ ಬೇಕು ಎಂದು ಹೇಳಿ ಬಿಡುವುದೆಂದರೆ ಅರ್ಥವೇನು? ಇಂಥ ಹೇಳಿಕೆ ಕೊಡುವ ಮುನ್ನ ಅರುಂಧತಿ ಮತ್ತೊಮ್ಮೆ ಯೋಚಿಸಲಾರದೆ ಹೋದರೆ? ಉದ್ದೇಶಪೂರ್ವಕವಾಗಿ ಹೇಳಿಕೆ
ಕೊಟ್ಟಿದ್ದೇ ಆದರೆ, ಅದನ್ನು ಸಮರ್ಥಿಸಿಕೊಳ್ಳುವುದು ಬೇಡ. ಈ ಬಗ್ಗೆ ಕ್ಷಮೆ ಯಾಚಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X