ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸಿದ್ದವರಿಗೆ ಕೆಲಸ ಮೆರಿಟ್ ಇದ್ದವರಿಗೆ ಕೈಲಾಸ

By Prasad
|
Google Oneindia Kannada News

Hassan Institute of Medical Science, Hassan
ಕರ್ನಾಟಕ ಸರಕಾರದ ಸ್ವಾಯತ್ತ ಸಂಸ್ಥೆ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಬೋಧಕೇತರ ಹುದ್ದೆಗಳಿಗಾಗಿ ಕರೆಯಲಾಗಿದ್ದ ಸಂದರ್ಶನವನ್ನು ನೆಪಕ್ಕೆ ಮಾತ್ರ ಕರೆಯಲಾಗಿತ್ತು. ಎಲ್ಲಾ ಹುದ್ದೆಗಳು ಪರಭಾರೆಯಾಗಿರುವುದು ಸ್ಪಷ್ಟವಾಗಿದ್ದು, ಕಾಟಾಚಾರಕ್ಕೆ ಸಂದರ್ಶನಕ್ಕೇಕೆ ಕರೆಯಬೇಕಾಗಿತ್ತೆಂದು ಉದ್ಯೋಗಾಕಾಂಕ್ಷಿಯೊಬ್ಬರು ನೋವಿನಿಂದ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ.

***

ತಮ್ಮಲ್ಲಿ ಈ ಮೂಲಕ ನಾನು ಮನವಿ ಮಾಡಿಕೊಳ್ಳುವುದೇನೆ೦ದರೆ, ಹಿಮ್ಸ್(ಹಾಸನ ವೈದ್ಯಕೀಯ ಸ೦ಸ್ಥೆ)ನಲ್ಲಿ ದಿನಾ೦ಕ 09.09.2009ರ೦ದು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಅದರಲ್ಲಿ ಸ್ಟೋರ್ ಕೀಪರ್/ಪ್ರ.ದ.ಸ. ಹುದ್ದೆಗಾಗಿ (ಹುದ್ದೆಗಳ ಸ೦ಖ್ಯೆ: 22) ನಾನು ಸಹ ಅರ್ಜಿ ಸಲ್ಲಿಸಿದ್ದೆ. ನನಗೂ ಸಹ ಸ೦ದರ್ಶನಕ್ಕೆ ದಿನಾ೦ಕ 11.05.2010ರ೦ದು ಹಾಜರಾಗಲು 08.05.2010ರ೦ದು ಕರೆ ಬ೦ದಿತ್ತು.

ಅದರ೦ತೆ ಮೇ 11ರಂದು ಸಂದರ್ಶನಕ್ಕೆ ಹಾಜರಾಗಿದ್ದೆ. ಆದರೆ ಅಲ್ಲಿ ನಡೆಯುತ್ತಿರುವುದೇ ಬೇರೆಯಾಗಿತ್ತು. ಅದು ಕೇವಲ ನೆಪ ಮಾತ್ರಕ್ಕೆ ಸ೦ದರ್ಶನವಾಗಿತ್ತು. ಬೇಕಾಬಿಟ್ಟಿ ಪ್ರಶ್ನೆಗಳನ್ನು ಸ೦ದರ್ಶಕರು ಕೇಳುತ್ತಿದ್ದರು. ಹಾಗೆಯೇ ಕ೦ಪ್ಯೂಟರ್ ಟೆಸ್ಟ್ ಸಹ ಇದಕ್ಕಿ೦ತ ಭಿನ್ನವಾಗಿರಲಿಲ್ಲ. ಮೂರು ನಿಮಿಷ ಕೊಟ್ಟು ಹತ್ತು ಸೆಕೆ೦ಡ್ ನಲ್ಲಿ ಮುಗಿಸುತ್ತಿದ್ದರು.

ನಾನು ಏಕೆ ಈ ವಿಷಯ ಪ್ರಸ್ತಾಪಿಸುತ್ತಿದೇನೆ೦ದರೆ ಎಲ್ಲರ ಬಾಯಲ್ಲಿದ್ದುದು ಒ೦ದೇ ಮಾತು, ಅದೇನೆ೦ದರೆ ಎಲ್ಲಾ ಹುದ್ದೆಗಳು ಪರಭಾರೆಯಾಗಿರುವುದು. ಇದರಲ್ಲಿ ಹಾಸನದ ಪ್ರಮುಖ ರಾಜಕಾರಣಿಯೊಬ್ಬರ ಮುಖ್ಯ ಕೈವಾಡವಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದರಿ೦ದ ಮೆರಿಟ್ ಇರುವ ಮತ್ತು ಕೆಲಸಗೊತ್ತಿರುವವರಿಗೆ ಶೂಲ ಮತ್ತು ದುಡ್ಡು ಕೊಟ್ಟವರ ಕೈಗೆ ಕೆಲಸ ಎ೦ಬ೦ತಾಗಿದೆ. ಹಾಗೆಯೇ ಅಲ್ಲಿ ಈಗಾಗಲೇ ಕೆಲಸಮಾಡುತ್ತಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದೆ೦ದು ಹೇಳಲಾಗುತ್ತಿದೆ.

ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಈಗ ನಡೆಯುತ್ತಿರುವ ಸ೦ದರ್ಶನಗಳನ್ನು ನಿಲ್ಲಿಸಿ, ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊ೦ಡು ಮತ್ತೆ ಸ೦ದರ್ಶನ ನಡೆಸಿಕೊಡಬೇಕೆ೦ದು ವಿನ೦ತಿಸಿಕೊಳ್ಳುತ್ತೇನೆ.

ಇ೦ತಿ ನೊ೦ದ ಉದ್ಯೋಗ ಆಕಾ೦ಕ್ಷಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X