ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಕ್ಸ್ ತರ ಪೆಟ್ರೋಲ್ ಬೆಲೆ ಕುಸಿಯೋದು ಯಾವಾಗ?

By Staff
|
Google Oneindia Kannada News


ಪೆಟ್ರೋಲ್ ಬೆಲೆ ಏರಿಕೆಯ ಗುಮ್ಮ ದಿನದಿಂದ ದಿನಕ್ಕೆ ಜನ ಸಾಮಾನ್ಯರ ನಿದ್ದೆಗೆಡಿಸುತ್ತಿದೆ. ಇಂದು ಬೆಲೆ ಏರಿಕೆ ಆಗುತ್ತದೆ, ನಾಳೆ ಆಗುತ್ತದೆ, ನಾಳಿದ್ದು ಆಗುತ್ತದೆ ಎಂದು ಗ್ರಾಹಕರು ಆತಂಕದಲ್ಲಿ ಬದುಕಬೇಕಾದ ಪರಿಸ್ಥಿತಿ ಬಂದಿದೆ. ಇದು ಬರೀ ನಮ್ಮ ದೇಶದ ಪರಿಸ್ಥಿತಿನಾ? ಅಂತ ಕೇಳುವ ಮುಂಚೆ ಏಷ್ಯಾದ ಇತರ ದೇಶಗಳಲ್ಲಿನ ಪೆಟ್ರೋಲ್ ದರಗಳನ್ನು ಒಮ್ಮ್ಮೆ ನೋಡಿ.

  • ಅರುಣ್ ಕುಮಾರ್, ಬೆಂಗಳೂರು.

ಲೀಟರ್ ಪೆಟ್ರೋಲ್ ಬೆಲೆ ಅಕ್ಕಪಕ್ಕದ ದೇಶಗಳಲ್ಲಿ ಹೇಗಿದೆ ಅಂದರೆ ಪಾಕಿಸ್ತಾನದಲ್ಲಿ 17 ರೂ. ಮಲೇಷ್ಯಾದಲ್ಲಿ 18 ರೂ. ಅದೇ ನಮ್ಮ ಬೆಂಗಳೂರಿನಲ್ಲಿ 50.66 ಪೈಸೆ. ಇನ್ನು ಭಾರತದ ವಿವಿಧ ನಗರಗಳಲ್ಲಿ ಒಂದೊಂದು ಥರಾ ಇದೆ. ಏಷ್ಯಾ ಖಂಡದಲ್ಲೇ ಯಾಕಿಷ್ಟು ಬೆಲೆ ತಾರತಮ್ಯ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ ಎನ್ನುವುದು ಶುದ್ಧ ಅಪದ್ಧ. ಹೀಗೆ ಕಂಡಾಪಟ್ಟೆ ಬೆಲೆ ಏರಲು ಖಾಸಗಿ ಒಡೆತನದ ಮಾಲೀಕರ ಲಾಭದಾಸೆಯೇ ಇದಕ್ಕೆ ಕಾರಣ. ನಾವು ಈ ದೇಶದ ಸಾರ್ವಜನಿಕರಾಗಿ, ಆರ್.ಕೆ.ಲಕ್ಷ್ಮಣ್ ಅವರ ಸಾಮಾನ್ಯ ಪ್ರಜೆಯಾಗಿ ಇದನ್ನು ಖಂಡಿಸಬೇಕಾಗಿದೆ. ಈ ಬೆಲೆ ಏರಿಕೆಯನ್ನು ನಾವು ಖಂಡಿಸಿಲ್ಲ ಅಂದರೆ ಮುಂದೊಂದು ದಿನ ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ.

ಈಗ ತಕ್ಷಣ ನಾವು ಮಾಡಬೇಕಿರುವ ಕೆಲಸ ಅಂದ್ರೆ ಒಂದು ದಿನದ ಮಟ್ಟಿಗೆ ಒಂದೇ ಒಂದು ಹನಿ ಪೆಟ್ರೋಲನ್ನು ಬಳಸುವುದಿಲ್ಲ ಅಂತ ಗಟ್ಟಿ ನಿರ್ಧಾರ ಮಾಡಬೇಕು. ನೀವು ಇಷ್ಟು ಮಾಡಿದರೆ ಸಾಕು ಪೆಟ್ರೋಲ್ ಕಂಪನಿಗಳ ಬುಡ ಅಲುಗಾಡುತ್ತದೆ. ನಿಮ್ಮ ಒಂದು ದಿನದ ಈ ದೃಢ ನಿರ್ಧಾರ 4.6 ಶತಕೋಟಿ ಡಾಲರ್ ‌ಗಳಷ್ಟು ನಷ್ಟ ತಂದೊಡ್ಡುತ್ತದೆ ತೈಲ ಕಂಪನಿಗಳಿಗೆ.

ಅಯ್ಯೋ ನಮಗ್ಯಾಕೆ ಬಿಡಿ ಈ ಉಸಾಬರಿ ಎಲ್ಲಾ? ಅಂತ ನೀವು ಸುಮ್ಮನೆ ಕುಳಿತರೆ ಬೆಳಗ್ಗೆ ಎದ್ದಾಗ ಹಾಲಿನ ಬೆಲೆ ಹೆಚ್ಚಾಗಿದ್ದನ್ನು ಪತ್ರಿಕೆಯಲ್ಲಿ ಓದಬೇಕಾಗುತ್ತದೆ. ತರಕಾರಿ ತರಬೇಕಾದರೆ ಅಂಗಡೀಲಿ ಕಮ್ಮಿ ಬೆಲೆ ತರಕಾರಿಗಳನ್ನು ತಡಕಾಡ ಬೇಕಾಗುತ್ತದೆ. ಕಾಫಿ, ಟೀಗಳು ಕೈ ಸುಡುತ್ತವೆ. ಹೀಗೆ ಪೆಟ್ರೋಲ್ ಬೆಲೆಯನ್ನು ಅನುಸರಿಸಿ ಒಂದೊಂದೇ ಏರುತ್ತವೆ. ಆಗ ಇದರ ಬಿಸಿ ತಟ್ಟುತ್ತದೆ. ಅಲ್ಲಿಯವರೆಗೂ ಸುಮ್ಮನೆ ಕುಳಿತುಕೊಳ್ಳದೆ ಎಚ್ಚೆತ್ತ್ತುಕೊಳ್ಳಿ .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X