ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಮೇಕ್‌ಗಳನ್ನು ಅಟ್ಟಕ್ಕೇರಿಸಿ ಸ್ವಮೇಕನ್ನು ತೆಗಳುವುದೇಕೆ?

By Staff
|
Google Oneindia Kannada News

Jaya, Bengalooruಪ್ರೀತಿಯ ಕನ್ನಡಿಗರೆಲ್ಲರಿಗೂ ನನ್ನ ವಂದನೆಗಳು,

ನಿನ್ನೆ ಭಾನುವಾರ ನಾನು "ಹೊಂಗನಸು" ಚಿತ್ರ ನೋಡಿದೆ. ಚಿತ್ರ ತುಂಬಾ ಚೆನ್ನಾಗಿ, ಪರಿಶುದ್ಧವಾಗಿ ಮೂಡಿ ಬಂದಿದೆ. ಚಿತ್ರದ ಎಳೆ ಎಳೆಯಲ್ಲೂ ರತ್ನಜ ಅವರ ಶ್ರಮ ಎದ್ದು ಕಾಣುತ್ತದೆ. ಪ್ರೇಮ್ ಅಭಿನಯವಂತೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿ ಗುರು ವಂದನೆ ಸಲ್ಲಿಸಿದ್ದಾರೆ ಪ್ರೇಮ್. ಚಿತ್ರವು ಒಂದು ಒಳ್ಳೆಯ ಸಾಮಾಜಿಕ ಸಂದೇಶವನ್ನು ಒಳಗೊಂಡಿದೆ. ಚಿಕ್ಕ ಮಗುವಿನಿಂದಾ ಎಲ್ಲಾ ವಯಸ್ಸಿನವರು ನೋಡಬಹುದಾದ ಚಿತ್ರ. ಥ್ಯಾಂಕ್ಯೂ ರತ್ನಜ.

ಆದರೆ ನನಗೆ ಬೇಸರ/ನೋವು ತರಿಸಿದ ವಿಷಯ ಅಂದರೆ ಒಂದು ಕನ್ನಡ ಪತ್ರಿಕೆಯಲ್ಲಿ ಪ್ರಕಟವಾಗಿರುವ "ಗಾಳಿಪಟ" ಚಿತ್ರದ ವಿಮರ್ಶೆ. ನಾನು ತುಂಬಾ ದಿನಗಳಿಂದಾ ನೋಡ್ತಾನೆ ಇದ್ದಿನಿ, ಕೆಲವು ಸಿನಿಮಾ ಪತ್ರಕರ್ತರು ಸ್ವಮೇಕ್ ಚಿತ್ರಗಳಿಗೆ ಯಾವತ್ತು ಒಳ್ಳೆಯ ವಿಮರ್ಶೆ ಬರೆಯಲ್ಲಾ. ಅವುಗಳಲ್ಲಿ ಬರೀ ತಪ್ಪುಗಳನ್ನು ಎತ್ತಿ ತೋರಿಸುವುದೇ ಅವರ ಉದ್ದೇಶ ಅನ್ನುವಂತೆ ವಿಮರ್ಶೆ ಬರೆಯುತ್ತಾರೆ. ಯಾಕೆ ಹೀಗೆ? ಅದೇ ಇವರಿಗೆ ಹಳಸಲು ಚಿತ್ರಗಳಾದ "ಅನಾಥರು","ಲವ-ಕುಶ","ಚೆಲುವಿನ-ಚಿತ್ತಾರ","ಗಜ" ಇತ್ಯಾದಿಗಳು ತುಂಬಾ ಚೆನ್ನಾಗಿರುವ ಚಲನಚಿತ್ರಗಳಾಗಿ ತೋರುಬರುತ್ತವೆ.

ಉದಾಹರಣೆಗೆ, ಚೆಲುವಿನ-ಚಿತ್ತಾರವಂತೂ ಕನ್ನಡದ ಸಂಸ್ಕ್ರತಿಯನ್ನು ಸ್ವಲ್ಪವೂ ಎತ್ತಿ ಹಿಡಿಯದ ಚಿತ್ರ. ಅದರೆ ಇದೇ ಚಿತ್ರ ಕೆಲವು 'ಪ್ರಭೃತಿ'ಗಳಿಗೆ ಅತೀ ಚೆನ್ನಾಗಿರುವ ಚಿತ್ರವಾಗಿ ಕಂಡು ಬಂತು. ಇನ್ನು ಅನಾಥರು ಕೇವಲ ಪಡ್ಡೆ ಹುಡುಗರು ನೋಡುವ ಚಿತ್ರ, ಇದರಲ್ಲಿ ಇವರಿಗೆ ನಿರ್ದೇಶನ ಅತಿ ಚೆನ್ನಾಗಿ ಕಂಡು ಬಂತು. ಆದರೆ, "ಮಾ.ಮಾ.ಮ", "ಸವಿ ಸವಿ ನೆನಪು", "ಮಿಲನ" ಇತ್ಯಾದಿಗಳನ್ನು ತೀರಾ ಸಾಧರಣ ಚಿತ್ರಗಳು ಅನ್ನುವಂತೆ ಬರೆದರು.

ನಲ್ಮೆಯ ಕನ್ನಡಿಗರೇ, ಆಂಗ್ಲ ಪತ್ರಿಕೆಗಳಲ್ಲಿ ದಟ್ಸ್ ಕನ್ನಡದಲ್ಲಿ "ಗಾಳಿಪಟ" ಮತ್ತು "ಹೊಂಗನಸು" ಎರಡೂ ಚಿತ್ರಗಳಿಗೂ ಒಳ್ಳೆಯ ಅಭಿಪ್ರಾಯವೇ ದೊರೆತಿದೆ. ಕನ್ನಡಿಗರೇ ನೀವೇ ಯೊಚಿಸಿ. ನಮ್ಮಲ್ಲಿ ಕೆಳವರ್ಗದ ಎಷ್ಟು ಜನ ಆಂಗ್ಲ ಪತ್ರಿಕೆಗಳನ್ನು ಓದುತ್ತಾರೆ ಅಥವಾ ಅಂತರ್ಜಾಲದ ಪುಟಗಳನ್ನು ಓದುತ್ತಾರೆ. ಇವರೆಲ್ಲ ಪೇಪರುಗಳಲ್ಲಿ ಪ್ರಕಟವಾಗುವ ವಿಮರ್ಶೆಯಿಂದಾಗಿ ಕೆಟ್ಟ ಅಭಿರುಚಿ ಇರುವ ಚಿತ್ರಗಳನ್ನು ನೊಡುತ್ತಾರೆಯೇ ಹೊರತು ಒಳ್ಳೆಯ ಚಿತ್ರಗಳನ್ನಲ್ಲ. ಇದರಿಂದಾಗಿ ಬಡವಾಗುವುದು ನಮ್ಮ ಕನ್ನಡ ಚಿತ್ರರಂಗವೇ ಹೊರತು ವಿಮರ್ಶಶಕರಲ್ಲ.

ಒಂದು ಕೆಟ್ಟ ವಿಮರ್ಶೆ ಒಂದು ಚಿತ್ರದ ಭವಿಷ್ಯವನ್ನೇ ಹಾಳುಮಾಡಬಹುದು. ನಮ್ಮ ಚಿತ್ರ ರಂಗ ಭವಿಷ್ಯದಲ್ಲಿ ಎಷ್ಟೋ ಒಳ್ಳೆಯ ನಿರ್ದೆಶಕರನ್ನು ಕಳೆದುಕೊಳ್ಳಬಹುದು. ನಮಗೆ ಬೇಕಾಗಿರುವುದು ಒಳ್ಳೆಯ ನಿರ್ದೆಶಕರುಗಳಿಗೆ ಸಗುಣಾತ್ಮವಾಗಿ ಪ್ರೋತ್ಸಾಹಿಸಿ, ಅವರಲ್ಲಿ ನಿಜವಾದ ತಪ್ಪು ಕಂಡು ಬಂದಲ್ಲಿ ಅವರನ್ನು ತಿದ್ದಿ ಬೆಳೆಸುವ ವಿಮರ್ಶಕರೇ ಹೊರತು ಒಳ್ಳೆಯ, ಸೃಜನಶೀಲ ನಿರ್ದೆಶಕರನ್ನು ಕೆಳಗೆ ತಳ್ಳುವ ವಿಮರ್ಶಕರಲ್ಲಾ.

ಚಲನ ಚಿತ್ರಗಳು ಸಾಮಾಜಿಕ ಸಂದೇಶವನ್ನು ಹರಡುವ ಸುಲಭವಾದ ಮಾಧ್ಯಮ. ಕೆಟ್ಟ ಅಭಿರುಚಿ ಚಿತ್ರಗಳನ್ನು ನೋಡುವ ಯುವ ಜನರ ಮನಸಿನ ಮೇಲೆ ಕೆಟ್ಟ ಪರಿಣಾಮಗಳಾಗಬಹುದು. ಪರಿಣಾಮವಾಗಿ ಕನ್ನಡ ಸಾಮಾಜಿಕ ಮಟ್ಟ ಕುಸಿಯಬಹುದು. ಕನ್ನಡಿಗರೆ ನೀವೇನು ಹೇಳುತ್ತಿರಿ?

ನಿಮ್ಮ ವಿಶ್ವಾಸಿ
ಜಯಾ, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X