ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು

By Staff
|
Google Oneindia Kannada News

Old horses sold out!ಕ್ರಿಕೆಟ್ ಆಟಗಾರರ ಹರಾಜು ಸುದ್ದಿ ಓದಿ ಸಖೇದಾಶ್ಚರ್ಯವಾಯಿತು. ಅವರನ್ನೇಕೆ ಹರಾಜು ಹಾಕುತ್ತಾರೆ? ಅವರೇನು ಪಾಪರ್ ಆಗಿದ್ದಾರಾ? ಹರಾಜು ಎಂದರೆ ನಾನಾ ಅರ್ಥಗಳಿವೆ. ಯಾರು ಕಡಿಮೆ ಬೆಲೆಯಿಂದ ಕೂಗುತ್ತಾ , ಒಂದು ಹಂತದಲ್ಲಿ ಗರಿಷ್ಠ ಮೊತ್ತಕ್ಕೆ ಬಂದು ನಿಲ್ಲುವ ಬೆಲೆಗೆ ಒಂದು ವಸ್ತುವನ್ನು ಕೊಳ್ಳುತ್ತಾರೋ ಅದನ್ನು ಹರಾಜು ಅಥವಾ ಆಕ್ಷನ್ ಎಂದು ಕೇಳಿದ್ದೆ. ಉದಾಹರಣೆಗೆ, ಬಿಡಿಎ ಕಾರ್ನರ್ ಸೈಟು ಹರಾಜು, ಸಾಲ ತೀರಿಸದಿರುವವರು ಬ್ಯಾಂಕು ಮತ್ತಿತರ ಫೈನಾನ್ಸ್ ಸಂಸ್ಥೆಗಳಿಂದ ಕೊಂಡ ವಾಹನ, ಯಂತ್ರ, ಜಮೀನು ಮುಂತಾದವುಗಳನ್ನು ಹರಾಜು ಹಾಕುವುದು ಇತ್ಯಾದಿ.

ಅವನನ್ನು ಹರಾಜು ಹಾಕಿದರೂ ಒಂದು ರೂಪಾಯಿಗೆ ಸಿಗುವುದಿಲ್ಲ ಎಂಬ ಮಾತುಗಳನ್ನು ನೀವು ಕೇಳಿರಬಹುದು. ಒಬ್ಬ ವ್ಯಕ್ತಿಯ ಆರ್ಥಿಕ ದುಸ್ಥಿತಿಯ ಬಗೆಗೆ, ಅನುಪಯುಕ್ತತೆಯ ಬಗೆಗೆ ನೀಡುವ ಚಿತ್ರಣ ಅದಾಗಿರುತ್ತದೆ. ಆದರೆ ಇದೇನಿದು? ಧೋನಿಗೇ ಆರು ಕೋಟಿ, ಜಯಸೂರ್ಯನಿಗೆ ನಾಕು ಕೋಟಿ, ಹೇಡನ್‌ಗೆ 1.9 ಕೋಟಿ ರೂಪಾಯಿ. ಯಾಕೆ ಅವರೆಲ್ಲ ಅಷ್ಟು ಕಷ್ಟದಲ್ಲಿದ್ದಾರಾ?

ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಯಿತು ಎನ್ನುವುದನ್ನೂ ನಾನು ಕೇಳಿದ್ದೇನೆ. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ, ಅಧೋಗತಿ ತಲಪುತ್ತದೆ ಎಂದು ತಿಳಿಸುವ ಪ್ರಯೋಗ ಆದಾಗಿರುತ್ತದೆ. ನಮ್ಮ ದೇಶದಲ್ಲಿ ಕ್ರಿಕೆಟ್ ಆಟ ಬಿಟ್ಟರೆ ಮತ್ತೊಂದಿಲ್ಲ , ಸಮಯ ಹಾಳು, ಪ್ರತಿಭೆ ವ್ಯರ್ಥ, ಎಂದು ದೂರುವವರು ಇರುವಾಗ ಇದೀಗ ಆಟಗಾರರೇ ಹರಾಜು ಆಗುತ್ತಿರುವ ಮತ್ತು ಕ್ರೀಡೆಯ ಹೆಸರಲ್ಲಿ ಹರಾಜಿನಲ್ಲಿ ಕೂಗಿ ಖರೀದಿಸುವ ಸಾಮಾಜಿಕ ಪರಿವರ್ತನೆ ಕಂಡು ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ.

ಕ್ರಿಕೆಟ್ ಆಟವನ್ನು ನಾನು 25 ವರ್ಷ ಆಡಿದ್ದೇನೆ. ಟಿವಿ ಮೂಲಕ ಮತ್ತು ಆಗಾಗ ಮೈದಾನಕ್ಕೆ ಹೋಗಿ ಆಟ ನೋಡುತ್ತೇನೆ.ನನ್ನ ಮಗನಿಗೂ ಬ್ಯಾಟಿಂಗ್ ಹೇಳಿ ಕೊಡುತ್ತೇನೆ. ಆದರೆ ಐಪಿಎಲ್ ಮಣ್ಣು ಮಸಿ ಹೆಸರಲ್ಲಿ ಹರಾಜು ಕೂಗಿ ಆಟಗಾರರನ್ನು ಕುದುರೆ, ಕತ್ತೆಗಳ ಮಾದರಿಯಲ್ಲಿ ಖರೀದಿಸಿ ಅವರನ್ನು ಆಡಿಸಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಮತ್ತು ಹಣ ಗಳಿಸುವ ಹುನ್ನಾರಗಳನ್ನು ಕಂಡು ನನಗೆ ಖಿನ್ನತೆ ಉಂಟಾಗಿದೆ.

ಹಣ ಎಂದರೆ ಹೆಣ ಕೂಡ ಬಾಯಿ ಬುಡುತ್ತದೆ ಎನ್ನುತ್ತಾರೆ. ಇಲ್ಲಿ ನೋಡಿ, ರಿಟೈರಾಗಿ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಾಗಿ ಕಾಲಕಳೆಯಬೇಕಿದ್ದ ಮುದಿಗೂಬೆಗಳೆಲ್ಲ ಹಣದ ಆಸೆಗೆ ಬಾಯಿಬಿಟ್ಟು ಸ್ವತಃ ಹರಾಜಾಗಲು ನಿಂತಿದ್ದಾರೆ. ಮೆಗ್ರಾತ್, ಫ್ಲೆಮಿಂಗ್, ಗಿಲ್ ಕ್ರಿಸ್ಟ್, ಶೇನ್... ಶೇಮ್ ಶೇಮ್. ಇನ್ಮುಂದೆ ಇಂಥ ಮುದಿಗೊಡ್ಡುಗಳ ಕ್ರಿಕೆಟನ್ನೂ ನೋಡಬೇಕೆ? ನಮ್ಮ ಕರ್ಮ. ಕ್ರಿಕೆಟ್ ಬಗ್ಗೆಯೇ ಅಸಹ್ಯ ಹುಟ್ಟುವಂತಾಗಿದೆ. ನಮ್ಮ ದೇಶವೇ ಹರಾಜಾದಷ್ಟು ಬೇಜಾರಾಗಿದೆ, ಛೆ.

ಸುಭಾಷ್ ಚಂದ್ರ, ಮಾಗಡಿ

ಪೂರಕ ಓದಿಗೆ:

ದಾಖಲೆ ಬೆಲೆಗೆ ಹರಾಜಾದ ಮಹೇಂದ್ರಸಿಂಗ್ ಧೋನಿ
ಐಪಿಎಲ್ :ಕ್ರಿಕೆಟಿಗರ ಹರಾಜು ಪ್ರಕ್ರಿಯೆ ಶುರುವಾಗಿದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X