ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಅಕ್ಷರಗಳು ಅರಳೋದಕ್ಕೆ ಎದೆಯಲ್ಲಿನ ಪ್ರೀತಿಯಷ್ಟೇ ಸಾಕೆ?

By Staff
|
Google Oneindia Kannada News

;?
‘ಕನ್ನಡವನ್ನು ಬಳಸುವುದರ ಮೂಲಕ ಉಳಿಸಿ’ ಎನ್ನುವ ಓದುಗರೊಬ್ಬರ ಕಳಕಳಿಯನ್ನು ಒಪ್ಪುತ್ತಲೇ, ಬಳಕೆಯಲ್ಲಿನ ಅಡೆತಡೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿ ನಡೆದಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳಿಗೂ ಸ್ವಾಗತ.

ರಾಘವೇಂದ್ರ ಅವರಿಗೆ ನಮಸ್ಕಾರ.

ನಿಮ್ಮ ಸಾತ್ವಿಕ ಸಿಟ್ಟು ಸರಿಯಾದದ್ದೇ. ಓರಾಟ, ಚೀರಾಟಕ್ಕಿಂತಲೂ ಹೆಚ್ಚಿನ ಕನ್ನಡ ಕಾಳಜಿ ಇವತ್ತು ಬೇಕಾಗಿದೆ ಅನ್ನೋದೂ ನಿಜವೇ. ಪತ್ರ ಬರೆದು ನಿಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದೀರಿ.

ಇನ್ನು ದಟ್ಸ್‌ಕನ್ನಡ ಅ ವಿಷಯಕ್ಕೆ ಬಂದರೆ, ಪತ್ರಿಕೆಯ ಹೆಸರಲ್ಲೇ ಸ್ವಲ್ಪ ಭಾಗ ಇಂಗ್ಲಿಷ್‌ ಇರುವುದರಿಂದ ಆಗೊಮ್ಮೆ ಈಗೊಮ್ಮೆ ಇಂಗ್ಲಿಷ್‌ ಪತ್ರ/ಲೇಖನಗಳ ಪ್ರಕಟಣೆ ತೊಂದರೆಯಿಲ್ಲ ಇರಬಹುದು :-)

-ಶ್ರೀವತ್ಸ ಜೋಶಿ, ಅಗಸನಕಟ್ಟೆ (ವಾಷಿಂಗ್‌ಟನ್‌)

*

ಸಂಪಾದಕರೇ,

ಓದುಗರ ಓಲೆಯಲ್ಲಿ ಪ್ರಕಟವಾದ ರಾಘವೇಂದ್ರ ಅವರ ಪತ್ರದ ಕೆಲವು ಅಂಶಗಳನ್ನು ನಾನು ಒಪ್ಪುತ್ತೇನೆ, ಎಲ್ಲವನ್ನೂ ಅಲ್ಲ. ಕನ್ನಡ ಪತ್ರಿಕೆಯಾಂದಕ್ಕೆ ಬರುವ ಉದ್ದುದ್ದದ ಇಂಗ್ಲೀಷ್‌ ಪತ್ರಗಳ ಬಗ್ಗೆ ನನಗೂ ಬೇಸರವಿದೆ! ಕಂಪ್ಯೂಟರಿನಲ್ಲಿ ಕನ್ನಡ ಬರೆಯಲು ಎಲ್ಲಾ ಅನುಕೂಲತೆಗಳು ಇದ್ದಾಗ, ಅದನ್ನು ಉಪಯೋಗಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಕೆಲವು ಸಣ್ಣ ಪುಟ್ಟ ತೊಂದರೆಗಳು ಉಂಟಾಗುವುದು ನಿಜವಾದರೂ, ಯಾವುದೇ ಒಂದು ವ್ಯವಸ್ಥೆ ಅದನ್ನು ಬಳಸಿಕೊಳ್ಳುತ್ತಾ ಹೋದಂತೆ ಸುಧಾರಣೆ ಹೊಂದುವುದು ನಿಜವಷ್ಟೇ? ಇನ್ನಾದರೂ ‘ಓದುಗರ ಓಲೆ’ ವಿಭಾಗಕ್ಕೆ ಕನ್ನಡ ಪತ್ರಗಳು ಹೆಚ್ಚಾಗಿ ಬರಲಿ ಎಂದು ಆಶಿಸುತ್ತೇನೆ.

ರಾಘವೇಂದ್ರ ಅವರು ಹಚ್‌ ಕಂಪನಿಯ ಅಧಿಕಾರಿಯಾಡನೆ ಶಶಾಂಕ ಸ್ವಾಮಿಯವರು ಕನ್ನಡದಲ್ಲಿ ಮಾತನಾಡಿದ್ದು ಸರಿಯಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಅಧಿಕಾರಿಗೆ ಕನ್ನಡ ಬರದಿದ್ದರೆ ಹೋಗಲಿ, ಇಡೀ ಆಫೀಸಿನಲ್ಲಿಯೇ ಕನ್ನಡ ಬಲ್ಲ ಒಬ್ಬನೂ ಗತಿ ಇಲ್ಲವೆಂದರೆ, ಅಲ್ಲಿ ಕನ್ನಡಕ್ಕೆ ಇನ್ನೆಂತಹ ಸ್ಥಾನಮಾನಗಳು ಲಭಿಸಲು ಸಾಧ್ಯ? ಅಷ್ಟಕ್ಕೂ ಶಶಾಂಕ್‌ ಅವರು ಕನ್ನಡಕ್ಕಾಗಿ ಒತ್ತಾಯಿಸಿದ್ದು ಎಲ್ಲಿ? ಅಮೆರಿಕಾದಲ್ಲೋ? ಇಂಗ್ಲೆಂಡಿನಲ್ಲೋ? ಕರ್ನಾಟಕದ ಹೃದಯ ಬೆಂಗಳೂರಿನಲ್ಲಿಯೇ ಕನ್ನಡದಲ್ಲಿ ಮಾತನಾಡಿದ್ದು ಒಂದು ಅಪರಾಧವೆಂದಾದರೆ ಕನ್ನಡ ಇನ್ನೆಲ್ಲಿ ಉಳಿದೀತು? ಬೆಳೆದೀತು? ಶಶಾಂಕ್‌ ಅವರಿಗೇನೋ ಇಂಗ್ಲೀಷ್‌ ಬರುತ್ತಿತ್ತು ಸರಿ, ಆದರೆ ಇಂಗ್ಲೀಷ್‌ ತಿಳಿಯದ ಬೇರೊಬ್ಬ ಕನ್ನಡಿಗ ಈ ಕಚೇರಿಯನ್ನು ಹೊಕ್ಕಿದ್ದರೂ ಅವನಿಗೆ ಸಿಗುತ್ತಿದ್ದ ಮರ್ಯಾದೆಯೂ ಇದೇ ತಾನೇ?

ರಾಘವೇಂದ್ರ ಅವರ ಪ್ರಕಾರ - ಪರಭಾಷಿಗರಿಗೆ ಕನ್ನಡವನ್ನು ಕಲಿಸಿ, ಆಮೇಲೆ ಅವರೊಡನೆ ನಾವು ಕನ್ನಡದಲ್ಲಿ ಮಾತಾಡಬೇಕು! ಈಗ ನನ್ನ ಮುಂದಿರುವ ಪ್ರಶ್ನೆ ಏನೆಂದರೆ - ಹತ್ತಾರು ವರ್ಷಗಳಿಂದ ಇಲ್ಲೇ ನೆಲೆಸಿರುವ ಈ ಪರಭಾಷಿಗರು ಕನ್ನಡವನ್ನು ಯಾವಾಗ ಕಲಿಯುತ್ತಾರೆ? ಅವರಿರುವ ಜಾಗದಲ್ಲೇ ಎಲ್ಲಾ ಅನುಕೂಲತೆಗಳು ಸಿಗುವಾಗ, ಕನ್ನಡದ ಅವಶ್ಯಕತೆಯಿಲ್ಲದೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿರುವಾಗ, ರಾಘವೇಂದ್ರ ಅವರಂತಹ ಸಹೃದಯಿ ಕನ್ನಡಿಗರು ಬೇರೆ ಅವರ ಪರವಾಗಿಯೇ ವಾದಿಸುತ್ತಿರುವಾಗ, ಅವರಾದರೂ ಕನ್ನಡವನ್ನು ಯಾಕೆ ಕಲಿಯಬೇಕು? ಇಷ್ಟು ವರ್ಷಗಳೇ ಕಲಿಯದಿದ್ದವರು ಇನ್ನಾದರೂ ಯಾಕೆ ಕಲಿಯುತ್ತಾರೆ?

ಸ್ವಾಭಿಮಾನ, ದುರಭಿಮಾನಗಳ ನಡುವೆ ಇರುವ ಸ್ಪಷ್ಟ ವ್ಯತ್ಯಾಸ ನಮಗೂ ತಿಳಿದಿದೆ. ಈಗ ಇವೆರಡರ ಅಗತ್ಯವೂ ಇಲ್ಲ. ಈ ಕೂಡಲೇ ನಮಗೆ ಬೇಕಾಗಿರುವುದು ಕನಿಷ್ಟ ಅಭಿಮಾನ! ಆದರೆ ಅದೆಲ್ಲಿದೆ? ಯಾರಿಗಿದೆ?

-ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

*

ಮಾನ್ಯರೇ,

ರಾಘವೇಂದ್ರ ಅವರು ಹೇಳುವುದು ನೂರಕ್ಕೆ ನೂರು ಸತ್ಯ. ಕನ್ನಡ ಪತ್ರಿಕೆಗೆ ಬರೆಯುವವರು ಕನ್ನಡದಲ್ಲೇ ಬರೆಯಬೇಕು. ಕನ್ನಡ ತಂತ್ರಾಂಶ ಸೌಲಭ್ಯವಿಲ್ಲವಾದಲ್ಲಿ (ಏನೇ ಸಬೂಬು ಇದ್ದರೂ) ಒಂದು ಕಾಗದದಲ್ಲಿ ಕನ್ನಡ ಭಾಷೆಯಲ್ಲಿ ಬರೆದು (ಕಾಗದ ಬಳಸಿ ಎಷ್ಟು ಜನರಿಗೆ ಬರೆಯಲು ಬರುತ್ತದೆ?) ಅದನ್ನು ಪತ್ರಿಕೆಗೆ ಫ್ಯಾಕ್ಸ್‌ ಮಾಡಬಹುದಲ್ಲ? ಸಂಪಾದಕರೇ, ಕನ್ನಡ ಭಾಷೆಯಲ್ಲಿ ಬರದ ಪತ್ರಗಳನ್ನು ಪ್ರಕಟಿಸಬೇಡಿ.

ಸಿಗೋಣ,

-ಯು.ಬಿ.ಪವನಜ

*

ಮಾನ್ಯರೇ,

ಕನ್ನಡ ಭಾಷಾಭಿಮಾನವನ್ನು ಕನ್ನಡ ಲಿಪಿಯಲ್ಲಿ ಅಳೆಯುವ ವಾದ ನನಗೆ ಸರಿ ಎನಿಸಲಿಲ್ಲ.

ಬರಹದಲ್ಲಿ ಬರೆಯಲು ಅದರ ತಂತ್ರಾಂಶವನ್ನು Install ಮಾಡಬೇಕು. ಅದು ಎಲ್ಲವಾಗಲು ಸಾಧ್ಯವಾಗಬೇಕೆನ್ನುವುದು ಸರಿಹೋಗುವುದಿಲ್ಲ. ಕಚೇರಿಗಳಲ್ಲಿ ಡೌನ್‌ಲೋಡ್‌ ಮಾಡಲು ಅಡ್ಡಿಇರುತ್ತದೆ(policies). ಒಂದು ಪಕ್ಷ ಬರಹ ಇದ್ದರೂ ಬರಹದ Transiletaration ತಿಳಿಯದಿದ್ದಲ್ಲಿ ಅದು ಕಿವುಡನಿಗೆ ಇತ್ತ ತಂಬೂರಿಯಷ್ಟೆ. ಬರಹ ಎಡಿಟರ್‌ ಇರದೆ ಕಂಗ್ಲೀಶ್‌ ಬರೆಯುವುದು ಸ್ವಲ್ಪ ಯಾಕೆ ತುಂಬಾನೆ ಕಷ್ಟ(ನನಗಂತೂ ಕಷ್ಟ)!!

ನನ್ನದೇ ಒಂದು ಅನುಭವ ಇಲ್ಲಿ ಬರೆದಿದ್ದೇನೆ. ಇದು kannaDa Font MS Arial Unicode ಬಗ್ಗೆ. ಬರಹದಲ್ಲಿ UNICODE Fontಇದೆ ಆದ್ರೆ ನಾನು ಕೆಲವು ವೆಬ್‌ಸೈಟ್‌ ಅನ್ನು ಇಂಟರ್ನೆಟ್‌ ಎಕ್ಸ್‌ಪ್ಲೊರರ್‌ ನಲ್ಲಿ ನೊಡಿದ್ರೆ ಅದು ಅರ್ಧರ್ಧ ಅಕ್ಷರ ಕಾಣಿಸುತ್ತಿತ್ತು. ಆದ್ರೆ ಅದನ್ನು ಕಾಪಿ ಮಾಡಿ ಎಂ.ಎಸ್‌.ವರ್ಡ್‌ ನಲ್ಲಿ ನೋಡಿದರೆ MS Arial Unicode font ಅನ್ನು ಸೆಲೆಕ್ಟ್‌ ಮಾಡಿದರೆ ಸರಿಯಾಗಿ ಕಾಣ್ತಿತ್ತು.ಇದರ ಬಗ್ಗೆ ರಿಸರ್ಚ್‌ ಮಾಡಲು ಸುಮಾರು ಎರಡು ಘಂಟೆಗಳ ಕಾಲ ಫಾಂಟ್‌ಗಳ ಬಗ್ಗೆ ಓದಿ ತಿಳಿದ ಮಾಹಿತಿ ಇಂದ ಹೀಗೆಂದು ಕೊಂಡೆ.

The problem could be with the unicode engine ie., the library version of usp10.dll (The version must be above 1.473 to support the dynamic glyph substitution but I had 1.325). ಇದಕ್ಕೆ ಸಮಯ ಬೇಕಾಗುತ್ತದೆ, ಅದು ನಮ್ಮಲ್ಲಿ ಇಲ್ಲವೆಂದಲ್ಲ ಆದರು ಅದರೆ ವಿನಿಯೋಗ ಇದಕ್ಕಿಂತ ಬೇರೆ ಉನ್ನತ ರೀತಿಯಲ್ಲಿ ಮಾಡಬಹುದು.

ಶಶಾಂಕ್‌ ಸ್ವಾಮಿಯವರು ಕನ್ನಡದ ಅಭಿಮಾನವನ್ನು ತಮ್ಮ ಅಮೂಲ್ಯ ಸಮಯ, ಶಕ್ತಿ ಹಾಗು ಸಂಯಮ ಇವೆಲ್ಲವನ್ನು ಧಾರೆಯೆರೆದು ತೋರಿಸಿದ್ದಾರೆ, ನನ್ನ ಶುಭ ಹಾರೈಕೆಗಳು. ಅವರು ಕನ್ನಡದಲ್ಲಿ ಪತ್ರ ಬರೆಯದಿದ್ದಲ್ಲಿ ಅವರ ಅಭಿಮಾನಕ್ಕೆ(ಅದರ ಪಾತಿವ್ರತ್ಯಕ್ಕೆ) ಭಂಗ ತಂದಿದೆ ಎನ್ನುವುದು ತರವಲ್ಲ ಎನ್ನುವುದು ನನ್ನ ಸ್ವಂತ ಅಭಿಪ್ರಾಯ.

ಸಮಯ ಮತ್ತು ಆಸಕ್ತಿ ಇದ್ದಲ್ಲಿ, ಕಿರಣ್‌ ಬಿ ಆರ್‌ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಮುಂದಿನದಾರಿ’ಯ ಯೋಜನೆಯಲ್ಲಿ ಪಾಲ್ಗೊಂಡು ಸಹ ಕನ್ನಡ ಭಾಷೆಗೆ ಕೊಡುಗೆ ನೀಡಬಹುದು. ಬನವಾಸಿ ಬಳಗದವರು ನಡೆಸುತ್ತಿರುವ ಕಾರ್ಯಗಾರದ ಬಗ್ಗೆಯು ಸಹ ಪ್ರಶಂಸೆ ವ್ಯಕ್ತಪಡಿಸಲು ಇಚ್ಚಿಸುತ್ತೇನೆ.

(ವಿ.ಸೂ - ನಾನು ಈ ಪತ್ರ ಬರೆಯಲು ತೆಗೆದುಕೊಂಡ ಸಮಯ ಸುಮಾರು 40 ನಿಮಿಷಗಳು. ಇದನ್ನು ಆಂಗ್ಲದಲ್ಲಿ ಬರೆದಿದ್ದರೆ 4 ನಿಮಿಷದಲ್ಲಿ ಬರೆಯುತಿದ್ದೆ. ಮುಖ್ಯವಾಗಿ ಯಾವ ಅಕ್ಷರವನ್ನು ಮತ್ತೆ ಮತ್ತೆ ಅಳಿಸದೆ!!)

-ವೀಣಾ ಶಿವಣ್ಣ, ಬೆಂಗಳೂರು


ಪೂರಕ ಓದಿಗೆ :
ಪ್ರೀತಿ ಇಲ್ಲದ ಮೇಲೆ... ಕನ್ನಡ ಅರಳೀತು ಹೇಗೆ?!
ಸುಲಿದ ಬಾಳೆಯಹಣ್ಣು : ಅಮೇಲಲ್ಲ... ಕನ್ನಡ ಇ-ಮೇಲ್‌!


ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X