ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತು ಗುಣಮಟ್ಟ ಮಂಡಳಿ ನಿದ್ರಿಸುತ್ತಿದೆಯೇ...?

By Staff
|
Google Oneindia Kannada News

.?
‘ಕೃಷ್ಣದತ್ತ ಅವರು ಹೇಳುವ ಹಾಗೆ, ಜಾಹೀರಾತು ಮಾರಾಟ ತಂತ್ರವೇ ನಿಜ. ನಾವು ಮಾರಾಟ ತಂತ್ರವನ್ನೇನೂ ವಿರೋಧಿಸುತ್ತಿಲ್ಲ. ಆದರೆ ಮಾರಾಟ ತಂತ್ರದ ಹೆಸರಿನಲ್ಲಿ ಸುಳ್ಳುಜಾಹೀರಾತು ನೀಡುವುದು ಮೋಸವಲ್ಲದೇ ಮತ್ತೇನು? ಒಂದು ಸರ್ಕಾರಿ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ನ ವರ್ತನೆ ಎಷ್ಟು ಸರಿ?’

Dr.U.B.Pavanajaಮಾನ್ಯರೇ,

ನಮಸ್ಕಾರ.

ಕೃಷ್ಣದತ್ತ ಅವರು ತಾವೇ ಒಪ್ಪಿಕೊಂಡಂತೆ ಅವರು ಬಿ.ಎಸ್‌.ಎನ್‌.ಎಲ್‌.ನವರ ಜಾಹೀರಾತನ್ನು ಓದಿಲ್ಲ. ಅವರು ಅಮೆರಿಕಾದಲ್ಲಿ ಕುಳಿತುಕೊಂಡು, ಇಲ್ಲಿ ಏನು ನಡೆಯುತ್ತಿದೆ ಎಂಬುದರ ಪೂರ್ತಿಚಿತ್ರಣ ಇಲ್ಲದೆ, ಬೇಳೂರು ಸುದರ್ಶನ ಅವರ ಲೇಖನಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ವಸ್ತುಸ್ಥಿತಿಯನ್ನು ನಾನು ಸ್ವಲ್ಪ ವಿವರಿಸುತ್ತೇನೆ.

ಬಿ.ಎಸ್‌.ಎನ್‌.ಎಲ್‌.ನವರ ಡಾಟಾ ಒನ್‌ ಬ್ರಾಡ್‌ಬಾಂಡ್‌ ಸಂಪರ್ಕಕ್ಕೆ ತಿಂಗಳಿಗೆ ರೂ.500 ಇತ್ತು. ಇದರಲ್ಲಿ ತಿಂಗಳಿಗೆ 1 GBಮಾತ್ರ ಮಾಹಿತಿ ಸಾರಿಗೆಯ ಮಿತಿ ಇತ್ತು ಅದರಿಂದ ಹೆಚ್ಚಾದರೆ ಪ್ರತಿ MBಗೆ ರೂ.2.00 ಕೊಡಬೇಕಿತ್ತು. ಈ ಸ್ಕೀಮಿನಲ್ಲಿ ಅವರು ಹೆಚ್ಚಿನ ಮಾರ್ಪಾಡು ಮಾಡಿಲ್ಲ. ಹೆಚ್ಚಿನ ಪ್ರತಿ MBಗೆ ರೂ.2.00ರ ಬದಲು ರೂ.1.20 ಕೊಡಬೇಕು. ತಿಂಗಳಿಗೆ ರೂ.250ರ ಒಂದು ಹೊಸ ಸ್ಕೀಮನ್ನು ಘೋಷಿಸಿದ್ದಾರೆ. ಅದರಲ್ಲಿ 400 MBಯಷ್ಟು ಮಾತ್ರ ಅಪ್‌ಲೋಡ್‌ ಡೌನ್‌ಲೋಡ್‌ ಮಾಡಬಹುದು. ಹೆಚ್ಚಿನ ಪ್ರತಿ MBಗೆ ರೂ.1.40 ಕೊಡಬೇಕು.

ಕೃಷ್ಣದತ್ತ ಅವರು ಹೇಳಿದಂತೆ ಇದು ಮಾರಾಟ ತಂತ್ರವೇ ಹೌದು. ಆದರೆ ನಮ್ಮ ವಿರೋಧ ಇರುವುದು ಈ ಹೊಸ ಸ್ಕೀಮನ್ನು ಘೋಷಿಸುವಾಗ ಕೊಟ್ಟ ತಪ್ಪು ದಾರಿಗೆಳೆಯುವ ಜಾಹೀರಾತಿನ ಬಗ್ಗೆ. ಅರ್ಧಪುಟದ ಜಾಹೀರಾತಿನಲ್ಲಿ ಅವರು ಘೋಷಿಸಿದ್ದೇನೆಂದರೆ ಬಿ.ಎಸ್‌.ಎನ್‌.ಎಲ್‌.ನ ಬ್ರಾಡ್‌ಬಾಂಡ್‌ ಸೇವೆಯ ದರದಲ್ಲಿ ಅರ್ಧದಷ್ಟು ಕಡಿತ ಎಂದು. ಎಲ್ಲಿದೆ ಸ್ವಾಮಿ ಅರ್ಧದಷ್ಟು ಕಡಿತ? ಅರ್ಧದಷ್ಟು ಕಡಿತ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ರೂ.500ರ ಬದಲಿಗೆ ರೂ.250 ಎಂದು.

ಆದರೆ ಅದರ ಜೊತೆ ಮಾಹಿತಿ ಸಾರಿಗೆಯಲ್ಲಿ ಅರ್ಧಕ್ಕಿಂತ ಹೆಚ್ಚಿನ ಕಡಿತ ಎಂದರೆ ಇದು ಮೋಸದ ಜಾಹೀರಾತು ತಾನೆ? Advertising Standards Councilನವರು ಏನು ಮಾಡುತ್ತಿದ್ದಾರೆ? ಅವರೇಕೆ ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ? ಅವರೇಕೆ ಇಂತಹ ಸುಳ್ಳು ಜಾಹೀರಾತುದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ? ಕೃಷ್ಣದತ್ತ ಅವರೇ, ದಯವಿಟ್ಟು http://groups.msn.com/broadbandindiaforum/ನಲ್ಲಿ ಜನರು ನಡೆಸಿರುವ ಚರ್ಚೆಗಳನ್ನು ಸ್ವಲ್ಪ ಓದಿ. ನಿಮಗೆ ಆಗ ವಸ್ತುಸ್ಥಿತಿಯ ಸರಿಯಾದ ಪರಿಚಯ ಆಗುವುದು.


ಪೂರಕ ಓದಿಗೆ-
‘ಬಿಎಸ್‌ಎನ್‌ಎಲ್‌ ಟೋಪಿ ಹಾಕುತ್ತಿಲ್ಲ ; ಅದು ಮಾರಾಟ ತಂತ್ರ!’
ಡಾಟಾ ಒನ್‌ನ ದರಗಳಲ್ಲಿ ಭರ್ಜರಿ ಕಡಿತ ಎಂಬ ಭರ್ಜರಿ ಸುಳ್ಳು!


ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X