ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರು ಹೊಣೆ? ಇದಕ್ಕೆಲ್ಲ ಯಾರು ಹೊಣೆ?

By Staff
|
Google Oneindia Kannada News

ಯಾರು ಹೊಣೆ? ಇದಕ್ಕೆಲ್ಲ ಯಾರು ಹೊಣೆ?
ಸರಕಾರ ಮತ್ತು ನಕ್ಸಲರ ಜಗಳದಲ್ಲಿ ಪೋಲಿಸರು, ಅವರ ಕುಟುಂಬಗಳು, ಮಲೆಮಕ್ಕಳು ಸಂಕಷ್ಟಕ್ಕೆ ಸಿಲುಕಿ, ಸಾರ್ವಜನಿಕ ಆಸ್ತಿ ಪಾಸ್ತಿ (ಕೆಎಸ್‌ಆರ್‌ಟಿಸಿ ಬಸ್‌)ಭಸ್ಮಗೊಂಡಿವೆ. ಇದಕ್ಕೆಲ್ಲ ನಿಜಕ್ಕೂ ಯಾರು ಹೊಣೆ?

  • ರವಿಪ್ರಕಾಶ್‌, ಸ್ವೀಡನ್‌
Dharam singhಪ್ರಿಯ ಸಂಪಾದಕರಿಗೆ,

ನಮ್ಮ ಸಮಯ ಸಾಧಕ ಜನಪ್ರತಿಧಿಗಳಿಗೆ ಮತ ನೀಡಿದ ಪ್ರಜೆಗಳ ಬಗ್ಗೆ ಕಾಳಜಿ ಇದ್ದಿದ್ದರೆ ಏನೂ ತಪ್ಪು ಮಾಡದ ಅಮಾಯಕ ಪೋಲೀಸರನ್ನು ನಕ್ಸಲರಿಗೆ ಆಹುತಿಕೊಡುತ್ತಿರಲಿಲ್ಲ. ತಂಪಾದ ನಮ್ಮ ಮಲೆನಾಡಿನ ಸಮಸ್ಯೆಗೆ ಪರಿಹಾರ ಮದ್ದು ಗುಂಡು, ರಕ್ತ ಕ್ರಾಂತಿಯಿಂದ ಎಂಬ ವದಂತಿ ಹಬ್ಬುವವರೆಗೆ ಸರಕಾರ ಸುಮ್ಮನೆ ಕುಳಿತಿದ್ದು ದೊಡ್ಡ ತಪ್ಪು. ಇತ್ತೀಚಿನ ಒಂದು ಅಸಹ್ಯಕರ ಟ್ರೆಂಡ್‌ ಏನೆಂದರೆ ಎಲ್ಲ ಸಮಸ್ಯೆಗಳಿಗೂ ಪ್ಯಾಕೆಜ್‌ ಘೋಷಣೆ. ಈ ಹಣ ಯಾರಿಗೂ ತಲುಪದ ಯಾವ ಅಭಿವೃದ್ದಿಯನ್ನು ಮಾಡದ ಪಾಪದ ಗಾರ್ಬೇಜು.

ಎಲ್ಲರಿಗೂ(ಜನಪ್ರತಿನಿಧಿಗಳಿಗೆ, ಬುದ್ದಿಜೀವಿಗಳಿಗೆ, ಪೋಲೀಸರಿಗೆ) ಒಂದೇ ಪ್ರಶ್ನೆ ಎಂದರೆ : ನಮಗಿರೊ ಸಮಸ್ಯೆ ನಕ್ಸಲರದೇ ಅಥವ ಮಲೆನಾಡಿನ ಆಳುಮಕ್ಕಳ ಮತ್ತು ಗಿರಿಜನರ ಸಮಸ್ಯೆಯೇ ? ಇದು ಯಾರಿಗೂ ತಿಳಿಯದ ವಿಷಯವೆ ?

ಅವರ ಸಮಸ್ಯೆ ಪರಿಹರಿಸಲು ನಕ್ಸಲರು/ಟೆರರಿಷ್ಟರು ಬರಬೇಕ ? ಯಾರದೋ ಪ್ರಕಾರ ಬಂದೂಕು ಹಿಡಿದು ಸುಡೊ ಬಾಂಬ್‌ ಹಾಕಿ ನರಮೆಧ ನಡೆಸೊ ನಕ್ಸಲರು ಜನರ ಸಮಸ್ಯೆಪರಿಹರಿಸೊ ಜನಪರ ಶಕ್ತಿ ಅಂತ ಪಟ್ಟ ಕಟ್ಟಿದರೆ, ಬ್ರಿಟೀಷರ ಬಂದೂಕಿಗೆ ಎದೆಕೊಟ್ಟು, ಅಹಿಂಸೆಯಿಂದ ನಮಗೆ ಸ್ವಾತಂತ್ರ ತಂದುಕೊಟ್ಟ ಗಾಂಧೀಜಿ, ನೆಹ್ರು, ವಲ್ಲಭರು ಇವತ್ತು ಪೂಜ್ಯ ಸ್ಥಾನದಲ್ಲಿ ಇರುತ್ತಿರಲಿಲ್ಲ.

ಈಗ ಕಷ್ಟ ಕ್ಕೆ ಸಿಕ್ಕಿದವರು ಪ್ರಾಣ ಕಳೆದುಕೊಂಡ ಪೊಲೀಸರು ಹಾಗೂ ಅವರ ಕುಟುಂಬ. ಇನ್ನು ಮುಂದೆ ಎಲ್ಲರ ಕಣ್ಣಿಗೂ ನಕ್ಸಲರಂತೆ ಕಾಣುವ ಅಮಾಯಕ ಮಲೆಮಕ್ಕಳು ಸಂಕಷ್ಟಕ್ಕೆ ಸಿಲುಕುವರು. ಸುಟ್ಟುಹೋದ, ಮುಂದೆ ಸುಡಲಿರುವ ನಮ್ಮದೆ ಆದ ಸರಕಾರಿ ಬಸ್ಸುಗಳ ನಷ್ಟ ತುಂಬೋರು ಯಾರು ? -ಇಷ್ಟು ಬಿಟ್ಟರೆ ಎಲ್ಲಾರು ತಂಪಾಗಿ ಸುಖವಾಗಿದ್ದಾರೆ.

ಈ ಅನಾಹುತದ ನೈತಿಕ ಹೊಣೆ ಹೊರಲು ಯಾರಾದರು ಮುಂದೆ ಬರಲಿದ್ದೀರಾ?

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X