• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವುದು ರಾಷ್ಟ್ರಗೀತೆ? ಈ ಮೂರರೊಳಗೆ?

By Staff
|

ಯಾವುದು ರಾಷ್ಟ್ರಗೀತೆ? ಈ ಮೂರರೊಳಗೆ?

ಉರ್ದು ಅಕಾಡೆಮಿಯು ಭಾರತ ಮತ್ತು ವಂದೇ ಮಾತರಂ ಕುರಿತ ತನ್ನ ನಿಲುವನ್ನು ಸ್ಪಷ್ಟಪಡಿಸಲಿ...

  • ಡಾ.ಎಂ.ಚಿದಾನಂದ ಮೂರ್ತಿ
ಕರ್ನಾಟಕ ಉರ್ದು ಅಕಾಡೆಮಿಯು ಕವಿ ಇಕ್ಬಾಲರ ‘ ಸಾರೇ ಜಹಾನ್‌ ಸೆ ಅಚ್ಚಾ, ಹಿಂದೂಸ್ತಾನ್‌ ಹಮಾರಾ’ಗೀತೆಯನ್ನು ‘Indias National Song’ ಎಂದು ಹೆಸರಿಸಿ ಆ ಗೀತೆಯ ನೂರು ಉಜ್ವಲ ವರ್ಷಗಳನ್ನು 10.8.2005ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಚರಿಸಿದೆ. ಅದರಲ್ಲಿ ಮುಖ್ಯಮಂತ್ರಿಗಳೂ ಅಧಿಕಾರಿಗಳೂ ಭಾಗವಹಿಸಲಿದ್ದಾರೆ ಎಂದು ಆಹ್ವಾನ ಪತ್ರದಲ್ಲಿ ಅಚ್ಚು ಮಾಡಲಾಗಿತ್ತು.

ವಸ್ತು ಸ್ಥಿತಿಯೆಂದರೆ ಭಾರತದ ಅಧಿಕೃತ ರಾಷ್ಟ್ರಗೀತೆ ‘ಜನ-ಗಣ-ಮನ’ ಮಾತ್ರ. ಅದಕ್ಕೆ ಸಮಾನ ಸ್ಥಾನಮಾನ ‘ವಂದೇ ಮಾತರಂ’ಗೆ ಇದೆ. 24.1.1950ರಂದು ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಕರತಾಡನದ ಮಧ್ಯೆ ಅದರ ಅಧ್ಯಕ್ಷ ಶ್ರೀ ರಾಜೇಂದ್ರ ಪ್ರಸಾದರು ಅದನ್ನು ಘೋಷಿಸಿದರು.

Dr.Chidananda Murthiಅವರ ಮಾತುಗಳು ಹೀಗಿವೆ -‘...the song ವಂದೇ ಮಾತರಂ which has played a historic part is the struggle for Indian freedom,shall be honoured equally with ಜನ-ಗಣ-ಮನ and shall have equal status with it’. ಮುಂದಿನ ಎರಡು ದಿನಗಳಲ್ಲಿ (26.1.1950)ಭಾರತ ಗಣರಾಜ್ಯವಾಯಿತು. ಈಗಲೂ ಲೋಕಸಭೆಯ ಮೊದಲ ದಿನ ‘ಜನ-ಗಣ-ಮನ’ವನ್ನು ಕೊನೆಯ ದಿನ ‘ವಂದೇ-ಮಾತರಂ’ ಗೀತೆಯನ್ನು ಹಾಡಿ ಎರಡಕ್ಕೂ ಗೌರವ ಸಲ್ಲಿಸಲಾಗುತ್ತಿದೆ.

ಹೀಗಿರುವಾಗ ಹಲವು ದೇಶಪ್ರೇಮ ಗೀತೆಗಳಲ್ಲಿ ಒಂದಾದ ಇಕ್ಬಾಲರ ಕವನವನ್ನು ಇಂಗ್ಲಿಷಿನಲ್ಲಿ Indias National Song ಎಂದು, ಉರ್ದುವಿನಲ್ಲಿ ‘ಹಿಂದೂಸ್ತಾನ್‌ ಕೆ ಕೌಮಿ ತರಾನ’ (ಹಿಂದೂಸ್ತಾನದ ರಾಷ್ಟ್ರಗೀತೆ) ಎಂದು ಹೆಸರಿಸಿದೆ. ಮುಸ್ಲಿಮರು ಭಾರತವನ್ನು ‘ಭಾರತ’ ಎಂದು ಕರೆಯದೆ ಇಂಡಿಯಾ, ಹಿಂದೂಸ್ತಾನ್‌ ಎಂದು ಮಾತ್ರ ಕರೆಯುತ್ತಾರೆ. ಆಹ್ವಾನ ಪತ್ರದಲ್ಲಿ ಆ ಹಾಡನ್ನು ಕನ್ನಡದಲ್ಲಿ ‘ರಾಷ್ಟ್ರೀಯ ಹಾಡು’ ಎಂದು ಕರೆದಿದೆ. National Song, National Anthem ಎರಡೂ ಸಮಾನಾರ್ಥಕಗಳು.

Song ಮತ್ತು Anthem ಪದಗಳಿಗೆ ಸ್ವಲ್ಪ ಭಿನ್ನಾರ್ಥ ಹೇಳಲು ಸಾಧ್ಯವಾದರೂ National Songಎಂದು ಭಾರತವು ಬೇರೆ ಯಾವ ಹಾಡನ್ನೂ ಗುರುತಿಸಿಲ್ಲ. ಆಡು ಭಾಷೆ, ಬರಹದ ಭಾಷೆಗಳಲ್ಲಿ National Songಎಂದರೆ ರಾಷ್ಟ್ರಗೀತೆಯೆಂದೇ ಅರ್ಥ. 1.9.1905ರಲ್ಲಿ ಬಂಗಾಳವನ್ನು ಇಬ್ಭಾಗಿಸಿ ಇಂದಿನ ಬಾಂಗ್ಲಾದೇಶಕ್ಕೆ ಅಣಿ ಮಾಡಿಕೊಟ್ಟ ಬ್ರಿಟಿಷ್‌ ಆಡಳಿತದ ವಿರುದ್ಧ ನಡೆದ ‘ವಂಗ ಭಂಗ ಚಳವಳಿ’ ಐತಿಹಾಸಿಕ ಪಾತ್ರ ವಹಿಸಿತ್ತು. ರಾಷ್ಟ್ರಗೀತೆಗೆ ಸಮಾನ ಸ್ಥಾನವಿರುವ ‘ವಂದೇ ಮಾತರಂ’ ಗೀತೆಯನ್ನು ಹಲವು ಮುಸ್ಲಿಮರು ಗೌರವಿಸುವುದಿಲ್ಲವೆಂಬುದು ಗುಟ್ಟಿನ ವಿಷಯವೇನೂ ಅಲ್ಲ. ಕವಿ ಇಕ್ಬಾಲ್‌ ಅಖಂಡ ಭಾರತದಲ್ಲಿದ್ದರೂ ಒಳಗೆ ಪಾಕಿಸ್ತಾನದ ಪರವಾಗಿದ್ದು ಸ್ವಾತಂತ್ರ್ಯ ಬಂದ ಬಳಿಕ ಅಲ್ಲಿಗೆ ಹೋಗಿ ನೆಲೆಸಿದರು.

ಹೀಗಿರುವಾಗ, ಇಕ್ಬಾಲರ ಗೀತೆಯನ್ನು India’s National Songಎಂದು ಹೆಸರಿಸಿರುವುದರ ಬಗ್ಗೆ,‘ಭಾರತ’, ‘ವಂದೇ ಮಾತರಂ’, ಇವುಗಳ ಬಗ್ಗೆ ಉರ್ದು ಅಕಾಡೆಮಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನಾವು ಕೋರುತ್ತೇವೆ.

ಮುಖಪುಟ / ಓದುಗರ ಓಲೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more