ನಕ್ಸಲ್‌ಬಾರಿ ಪ್ರೇಮ್‌ ಸತ್ತಾಗ ಅತ್ತವರು, ಪೊಲೀಸರು ಸತ್ತಾಗ ಏನು ಮಾಡುತ್ತಿದ್ದರು?

;?

  • ಡಾ. ಭರತ್‌ ಎನ್‌ ಎಸ್‌ ಶಾಸ್ತ್ರಿ
    ಪೊರ್ಟ್‌ ಟಾಲ್ಬಟ್‌, ಉಯ್‌.ಕೆ.
AK 47ಮಾನ್ಯ ಸಂಪಾದಕರಿಗೆ,

ಈ ವಾರದ ಸೂರ್ಯ ಶಿಕಾರಿ ಯನ್ನು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದೆ. ನನಗೆ ಬಹಳ ನಿರಾಸೆಯಾಗಿದ್ದು ನಿಜ. ಪೋಲಿಸರು ಪಶ್ಚಿಮಘಟ್ಟದಲ್ಲಿ ಕಾರ್ಯಾಚರಣೆ ಮಾಡಿದಾಗಲೆಲ್ಲ ಫಡಫಡಿಸಿ ಉದ್ದುದ್ದ ಭಾಷಣ ಬಿಗಿಯುವ ‘ ಸೋ ಕಾಲ್ಡ್‌’ ಪ್ರಗತಿಪರರ ಗುಂಪಿಗೆ ರವಿ ಬೆಳಗೆರೆ ಸೇರಿಹೋದರೆಂಬುದು ತಿಳಿದಾಗ ಇನ್ನೂ ನಿರಾಸೆಯಾಯಿತು. ಅವರು ವೃತ್ತ ಪತ್ರಿಕೆಗಳನ್ನು ಓದಿಲ್ಲವಾದರೆ ಈ ಸುದ್ದಿಯನ್ನು ಈಗಲಾದರೂ ದಯವಿಟ್ಟು ಗಮನಿಸಲಿ ಎಂದು ಅವರ ಅವಗಾಹನೆಗೆ ತರುತ್ತಿದ್ದೇನೆ.

ತಾ. 11ಫೆಬ್ರುವರಿ 2005ರ ರಾತ್ರಿ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಮ್ಮನಹಳ್ಳಿಯಲ್ಲಿ ಶಾಲೆಯಾಂದರಲ್ಲಿ ಶಿಬಿರ ಹೂಡಿದ್ದ ಕರ್ನಾಟಕ ಮೀಸಲು ಪೋಲಿಸ್‌ ಪಡೆಯ 6ಜನ ಪೋಲಿಸರನ್ನು ಹಾಗೂ ಒಬ್ಬ ಖಾಸಗಿ ಬಸ್‌ ಕ್ಲೀನರ್‌ನನ್ನು ಸುಮಾರು 100-150ರ ಸಂಖ್ಯೆಯಲ್ಲಿದ್ದ ನಕ್ಸಲೀಯರೆಂದು ಹೇಳಲಾದ ಎಕೆ47 ಮತ್ತು ಗ್ರೆನೇಡುಗಳಿಂದ ಶಸ್ತ್ರ ಸಜ್ಜಿತರಾದ ಗುಂಪೊಂದು ಕಗ್ಗೊಲೆ ಮಾಡಿದೆ. ತೀವ್ರವಾಗಿ ಗಾಯಗೊಂಡ ಮುಖ್ಯ ಪೇದೆಯಾಬ್ಬರು ಎರಡು ದಿನಗಳ ನಂತರ ಬೆಂಗಳೂರಿನಲ್ಲಿ ತೀರಿಕೊಂಡು ಸತ್ತವರ ಸಂಖ್ಯೆ 8 ಕ್ಕೆ ಏರಿದೆ.

ನಕ್ಸಲೀಯರೇನು ನರಹಂತಕರಾ ಧರಂ? ರವಿ ಬೆಳೆಗೆರೆಯವರು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಹೋಗಿದೆ. ಆದರೆ ಈ ವಾರದ ಸೂರ್ಯ ಶಿಕಾರಿ ನೋಡಿದರೆ ಆ ಆಘಾತದಿಂದ ಅವರು ದಿಕ್ಕೆಟ್ಟಂತೇನೂ ಕಾಣುವುದಿಲ್ಲ, ಬದಲಿಗೆ ರೋಮ್‌ ಸುಡುವಾಗ ನೀರೋ ಪಿಟೀಲು ಬಾರಿಸಿದಂತೆ ಕಾಣುತ್ತದೆ. ಇಂತಹದ್ದೊಂದು ಘಟನೆ ನಡೆದೇ ಇಲ್ಲವೋ ಎಂಬಂತೆ ನಟಿಸಿ, ಜೀವನದ ಬಗ್ಗೆ ತಮ್ಮ ‘ಉಪದೇಶಾ ಮೃತ’ ವನ್ನು ಪುಕ್ಕಟೆಯಾಗಿ ಹಂಚುವ ಕಾಯಕ ಮುಂದುವರಿಸಿದ್ದಾರೆ. ಈ ಕೃತ್ಯವನ್ನು ಖಂಡಿಸುವ ಕನಿಷ್ಠ ಒಂದೆರಡು ಮಾತು ಬರೆದಿದ್ದರೂ ಶಾಂತಿಗಾಗಿ ಅವರಿಗೆ ಇರುವ ಕಳಕಳಿ ವ್ಯಕ್ತವಾಗುತ್ತಿತ್ತು, ನೈಜವೆನ್ನಿಸುತ್ತಿತ್ತು. ಆದರೆ, ಪೋಲಿಸರು ನಕ್ಸಲೀಯರಲ್ಲವಲ್ಲ!

ನಕ್ಸಲ್‌ ಚಟುವಟಿಕೆಯ ಬಗ್ಗೆ ಸುದ್ದಿ ಮಾಧ್ಯಮಗಳೂ ಕೂಡ ಅದೊಂದು ಚಳುವಳಿಯಷ್ಟೆ ಎಂಬ ಮನೋಭಾವದಿಂದ ನೋಡುವುದನ್ನು ಬಿಡಬೇಕು. ಎ ಕೆ 47 ಹಿಡಿದು ಪೋಲಿಸರೊಂದಿಗೆ ಗುಂಡಿನ ಕಾಳಗ ನಡೆಸುವಂತಹ ದೌರ್ಜನ್ಯ ಪಶ್ಚಿಮಘಟ್ಟದಲ್ಲಿ ಎಲ್ಲಾಗಿದೆ? ಈ ಚಳುವಳಿಯಿಂದ ಮಲೆನಾಡಿಗೇನೂ ಲಾಭವಾಗಿಲ್ಲ, ಬದಲಿಗೆ ಹಫ್ತಾವಸೂಲಿಯ ತರಹದ ಹಿಂಸೆಯೇ ಆಗಿದೆ ಎಂದು ನಕ್ಸಲ್‌ಪೀಡಿತ ಸ್ಥಳಿಯರು ಹೇಳುತ್ತಾರೆ.

ಪಶ್ಚಿಮಘಟ್ಟದಲ್ಲಿರುವ ದಟ್ಟ ಅರಣ್ಯ ಮತ್ತು ಮೈಲುಗಟ್ಟಲೆಯ ವಿರಳ ಜನಸಂಖ್ಯೆಯಿಂದಾಗಿ ಸಿಗಬಹುದಾದ ಗೋಪ್ಯತೆ ಕಂಡು ನಕ್ಸಲೀಯರು ಅದನ್ನು ತಮ್ಮ ಅಡಗುತಾಣವನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆಯೇ ಹೊರತು ಕುದುರೆಮುಖ ಪ್ರದೇಶದ ಆದಿವಾಸಿಗಳ ಬಗ್ಗೆ ಯಾವುದೇ ಕನಿಕರದಿಂದೇನೂ ಅಲ್ಲ. ಕುದುರೆಮುಖ ಪರಿಸರದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸದಿದ್ದರೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ನಿಂದನೆಯ ಆಪಾದನೆ ಬರುವ ಸಾಧ್ಯತೆಗಳಿವೆ ಎಂಬುದೂ ಅಷ್ಟೇ ಖಚಿತ.

ಈ ಮಧ್ಯೆ ಜ್ಞಾನಪಿತ್ತ ಹತ್ತಿದವರೊಬ್ಬರು ‘ ಕೋಮುವಾದದ ಹಿಂಸೆ ಕ್ಯಾನ್ಸರಿನಂತೆ, ಮಾವೋವಾದ ರೇಬಿಸ್‌ನಂತೆ’ ಎಂದೆಲ್ಲ ಅಸಂಬದ್ಧವಾಗಿ ಹೇಳಿಕೆ ಕೊಟ್ಟು ಓಡಾಡಿಕೊಂಡಿದ್ದಾರೆ. ತಿಳಿದೋ ತಿಳಿಯದೆಯೋ ಸರಿಯಾಗೇ ಹೇಳಿದ್ದಾರೆ. ಕ್ಯಾನ್ಸರನ್ನು ಗುಣ ಪಡಿಸಲು ಆಗದಿದ್ದರೂ ಅದನ್ನು ಹತೋಟಿಯಲ್ಲಿ ಇಡಬಹುದಾದ, ಮತ್ತು ರೋಗಿ ಬದುಕಿರುವಷ್ಟು ದಿವಸ ಅದರ ದುಷ್ಪರಿಣಾಮಗಳನ್ನು ಶಮನಗೊಳಿಸಬಹುದಾದ ಔಷಧಗಳು ಲಭ್ಯವಿದೆ. ಆದರೆ ರೇಬಿಸ್‌ ತಗುಲಿದರೆ ಮರಣ ಘೋರರೀತಿಯಲ್ಲಿಯೇ ಆಗುತ್ತದೆ. ಮತ್ತು ರೇಬಿಸ್‌ ಹತ್ತಿದ ರೋಗಿಗಳನ್ನು Intencive Care Unitನಲ್ಲಿ ಉಪಚರಿಸಬೇಕಾಗುತ್ತದೆ ಎನ್ನುವ ವಾಸ್ತವ ಅವರಿಗೆ ತಿಳಿಯಲಿ ಎಂದು ಹಾರೈಸುತ್ತೇನೆ.


ಮುಖಪುಟ / ಓದುಗರ ಓಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+