• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಋಣಾನುಬಂಧ

By Staff
|

ಖಾಸನೀಸರು, ಸುಧಾಮೂರ್ತಿ ಮತ್ತು ದಟ್ಸ್‌ಕನ್ನಡ ಪತ್ರಿಕೆಯ ಆಪ್ತ ಓದುಗ ವೃಂದ

ಪ್ರೀತಿಯ ರಘುನಾಥ್‌ ಚ.ಹ ಅವರೆ,

Sheshadri Vasuಕಥೆಗಾರ ಶ್ರೀ ರಾಘವೇಂದ್ರ ಖಾಸನೀಸರ ಬಗ್ಗೆ ನಿಮ್ಮ ಲೇಖನ ಓದಿದೆ. ಈ ಹಿಂದೆ ದಟ್ಸ್‌ಕನ್ನಡದಲ್ಲಿ ಇವರ ಬಗ್ಗೆ ಕೆಲವು ಲೇಖನಗಳು ಪ್ರಕಟಗೊಂಡಿದ್ದವು. ಇದರಿಂದ ಜನ ಪ್ರೇರಿತರಾಗಿ ಸಹಾಯ ಮಾಡಲು ಮುಂದೆ ಬಂದಿರುವುದು ಪ್ರಶಂಸನೀಯ. ಇತ್ತೀಚೆಗೆ ನಮ್ಮ ತಂದೆ ಕೆ.ಟಿ.ಚಂದ್ರಶೇಖರನ್‌ ಅನಕೃ ಪ್ರತಿಷ್ಠಾನದ ಮೂಲಕ ಶ್ರೀ ಖಾಸನೀಸರಿಗೆ ಚೆಕ್‌ ಒಂದನ್ನು ಕಳಿಸಿದ್ದರು. ವಿಳಾಸ ಸರಿಯಿರದ ಕಾರಣ ಅದು ವಾಪಸ್ಸು ಬಂದಿದೆ. ದಯವಿಟ್ಟು ಅವರ ವಿಳಾಸವನ್ನು ಪ್ರಕಟಿಸಿ.

ಮತ್ತೊಂದು ಬಹಳ ಖುಷಿ ಕೊಡುವ ಸಂಗತಿಯೆಂದರೆ, ಕಳೆದ ವಾರ ಬೆಂಗಳೂರಿನಲ್ಲಿರುವ ನಮ್ಮ ಮನೆಗೆ ಇನ್‌ಫೋಸಿಸ್‌ ಪ್ರತಿಷ್ಠಾನದ ಶ್ರೀಮತಿ ಸುಧಾ ಮೂರ್ತಿಯವರು ಬಂದಿದ್ದರು. ಹಲವಾರು ವರ್ಷಗಳಿಂದ ಲೇಖನಗಳನ್ನು ಬರೆಯಲು ಬರಹ ತಂತ್ರಾಂಶವನ್ನು ಉಪಯೋಗಿಸುತ್ತಿರುವ ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸಲು, ಈಗ ಬೆಂಗಳೂರಿನಲ್ಲಿ ನಾನಿಲ್ಲದೇ ಇದ್ದರೂ ಸಹಾ, ನಮ್ಮ ತಂದೆ-ತಾಯಿಯರನ್ನು ಭೇಟಿಯಾಗುವ ಸಲುವಾಗಿ ನಮ್ಮ ಮನೆಗೆ ಬಂದಿದ್ದರು. ಉತ್ಸಾಹದ ಚಿಲುಮೆಯಾದ ಸುಧಾ ಮೂರ್ತಿಯವರು ತಮ್ಮ ಸರಳ ನಡವಳಿಕೆ, ಆಕರ್ಷಕ ವ್ಯಕ್ತಿತ್ವದಿಂದ ನಮ್ಮೆಲ್ಲರ ಹೃದಯಗಳನ್ನು ತುಂಬಿಕೊಂಡಿದ್ದಾರೆ. ಈ ಘಟನೆ ನಮ್ಮ ಕುಟುಂಬದವರಿಗೆ ಅವಿಸ್ಮರಣೀಯವಾದ ಸಂಗತಿಯಾಗಿದೆ.

ಈ ಭೇಟಿಯ ಸಂದರ್ಭದಲ್ಲಿ ಕನ್ನಡ ಸಾಹಿತ್ಯ, ಸಾಹಿತಿಗಳ ಬಗ್ಗೆ ಮಾತನಾಡುತ್ತಾ... ಕನ್ನಡದಲ್ಲಿ 500ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಸಾಹಸಿ, ಪತ್ತೇದಾರಿ ಕಾದಂಬರಿ ಸಾರ್ವಭೌಮ ಶ್ರೀ ಎನ್‌. ನರಸಿಂಹಯ್ಯನವರ ಪುಸ್ತಕಗಳಿಂದ ಆಕರ್ಷಿತರಾಗಿ ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನು ಓದಲು ಸ್ಫೂರ್ತಿ ನೀಡಿತು ಎಂದು ನೆನಪಿಸಿಕೊಂಡರು. ಮತ್ತು ಈಗ ಕಷ್ಟದಲ್ಲಿರುವ ಕನ್ನಡ ಸಾಹಿತಿಗಳಿಗೆ ನೆರವು ನೀಡುವ ಆಸೆಯನ್ನು ವ್ಯಕ್ತಪಡಿಸಿದರು. ಆ ಸಮಯದಲ್ಲಿ ನಮ್ಮ ತಂದೆಯವರು ಸಾಹಿತಿಗಳಾದ ಶ್ರೀ ಎನ್‌. ನರಸಿಂಹಯ್ಯ, ಶ್ರೀ ಸೂರ್ಯನಾರಾಯಣ ಚಡಗ ಮತ್ತು ಶ್ರೀ ರಾಘವೇಂದ್ರ ಖಾಸನೀಸರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದಾದ ಮಾರನೆಯ ದಿನವೇ ಸುಧಾ ಮೂರ್ತಿಯವರು ಶ್ರೀ ನರಸಿಂಹಯ್ಯ ಮತ್ತು ಶ್ರೀ ಚಡಗರ ಮನೆಗೆ ಖುದ್ದಾಗಿ ಭೇಟಿ ನೀಡಿ, ಪ್ರತಿಷ್ಠಾನದ ವತಿಯಿಂದ 10,000 ರೂಗಳನ್ನು ನೀಡಿದ್ದಾರೆ. (ಇನ್‌ಫೋಸಿಸ್‌ ನ ದಕ್ಷತೆಗೆ ಇದೊಂದು ಉದಾಹರಣೆ!). ಸದ್ಯಕ್ಕೆ ತ್ಸುನಾಮಿ ಪರಿಹಾರ ಕಾರ್ಯಕ್ರಮದಲ್ಲಿ ತೊಡಗಿಸಿಕೊಡಿರುವ ಅವರಿಗೆ ಆದಷ್ಟು ಬೇಗ ಬಿಡುವು ದೊರಕಿ ಖಾಸನೀಸರ ಮನೆಗೂ ಭೇಟಿ ನೀಡಿ ಸಹಾಯ ಹಸ್ತ ನೀಡಲಿ ಎಂದು ಹಾರೈಸೊಣ. ಹೀಗೆ ಕನ್ನಡ ಸಾಹಿತಿಗಳ ನೆರವಿಗೆ ಒದಗಿಬಂದಿರುವ ಶ್ರೀಮತಿ ಸುಧಾ ಮೂರ್ತಿಯವರಿಗೆ ಅಭಿನಂದನೆಗಳು.

-ಶೇಷಾದ್ರಿವಾಸು, ನ್ಯೂಜರ್ಸಿ

A Charity gesture by Sudha MurthyDear Vasu,

It was my pleasure to meet your parents. I enjoyed that evening.I traced Khasnis address (which was very difficult to do) and gave him10,000 rupees. His family was reluctant to accept my help. If they require more help I will certainly do.

Keep in touch.

May God bless you for the wonderful work you have done for Kannada language.

With warm regards

Sudha Murty, Bangalore

ಕಥೆಗಾರರ ಖಾಸನೀಸರ ಬಗ್ಗೆ ನಮ್ಮ ಪತ್ರಿಕೆಯ ಮೂಲಕ ವಿಷಯ ತಿಳಿದ ನಂತರ ಅನೇಕ ಓದುಗರು, ಅಭಿಮಾನಿಗಳು ಅವರ ವಿಳಾಸಕೋರಿ ಪತ್ರ ಬರೆದಿದ್ದಾರೆ. ಖಾಸನೀಸರದು ತುಂಬಾ ಸಂಕೋಚ ಪ್ರವೃತ್ತಿ. ‘ ವಿನಾ ದೈನ್ಯೇನ ಮರಣಂ ’ ಎನ್ನುವುದೇ ಅವರ ಅಂಕಿತ. ಹಾಗಿದ್ದರೂ ಸಂಚಯ ಬಳಗದ ಉತ್ಸಾಹಿಗಳು ಕಲೆತು ಒಂದಿಷ್ಟು ಹಣ ಕೂಡಿಸಿ ಅವರ ಮನೆಗೆ ಹೋಗಿ ಅವರ ಮಗಳ ಕೈಗಿತ್ತು ಶುಭ ಹಾರೈಸಿ ಬಂದರು. ಹಾಸಿಗೆ ಹಿಡಿದ ಖಾಸನೀಸರಿಗೆ ವಿಷಯ ಗೊತ್ತಾದ ಮೇಲೆ ತುಂಬಾ ಕಸಿವಿಪಟ್ಟುಕೊಂಡರು. ‘ ಇನ್ನು ದಯವಿಟ್ಟು ಬೇಡ. ನನ್ನ ಮನೆಯ ವಿಳಾಸವನ್ನು ಪ್ರಕಟಿಸಬೇಡಿ ’ ಎಂದು ಕೇಳಿಕೊಂಡರು.

ಖಾಸನೀಸರ ವಿಳಾಸವನ್ನು ನಾವು ಪ್ರಕಟಿಸುವುದಿಲ್ಲ. ಕ್ಷಮಿಸಿ. (- ಸಂಪಾದಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more