ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಭಾಷೆಗಳಲ್ಲಿ ಇ-ಮೇಲ್‌ ಮತ್ತು ಯಾಹೂ

By Staff
|
Google Oneindia Kannada News


ಅವರು ನಮ್ಮ ಇ-ಮೇಲ್‌ಗೆ ಉತ್ತರಾನೇ ಬರೆಯಲ್ಲ , ಇನ್ನು ಸ್ಪಂದಿಸುವ ಮಾತು?!

  • ನಾರಾಯಣ್‌, ಇನ್ನೊವಾ ಸಲ್ಯೂಷನ್ಸ್‌, ಹೈದರಾಬಾದ್‌.
    [email protected]
Kannada baratta? yahoo!ಮಾನ್ಯರೆ,

ಸುಮಾರು ಒಂದು ತಿಂಗಳ ಹಿಂದೆ ಪ್ರಖ್ಯಾತ ಈ-ಮೇಲ್‌ ಸಂಸ್ಥೆ ಯಾಹೂ ನವರು ತಮ್ಮ ಇನ್‌ಬಾಕ್ಸ್‌ ಗಾತ್ರವನ್ನು 1 ಗಿಗಾಬೈಟ್‌ಗೆ ವಿಸ್ತರಿಸುತ್ತೇವೆಂದು ಹೇಳಿದರು. ಅವರು ಅದನ್ನು ಮಾಡಿದರೆನೋ ನಿಜ. ಆದರೆ, ಯಾಹೂ ಇಂಡಿಯಾ ಈ-ಮೇಲ್‌ ಸಂಸ್ಥೆ, ಭಾರತದ ವೈವಿಧ್ಯವನ್ನು ಪರಿಗಣಿಸಲಿಲ್ಲವೆಂದು ಭಾಸವಾಗುತ್ತದೆ.

ನಾನು ಸುಮಾರು ನಾಲ್ಕೈದು ಸಲ ಅವರಿಗೆ ಈ-ಮೇಲ್‌ ಮಾಡಿ, ತಮ್ಮ ಈ-ಮೇಲ್‌ ವ್ಯವಸ್ಥೆಯಲ್ಲಿ ಹಿಂದಿ, ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಈ-ಮೇಲ್‌ ಮಾಡಲು ಸಲಕರಣೆಗಳನ್ನು ಒದಗಿಸಿ ಎಂದು ಕೋರಿದ್ದೆ. ಅವರಿಂದ ಉತ್ತರವಿಲ್ಲ.

ಸಧ್ಯಕ್ಕೆ, ರೆಡಿಫ್‌ ಈ-ಮೇಲ್‌ನಲ್ಲಿ ಭಾರತೀಯ ಭಾಷೆಗಳಲ್ಲಿ ಈ-ಮೇಲ್‌ ಕಳಿಸುವ ವ್ಯವಸ್ಥೆಯಿದೆ. ಯಾಹೂದವರ ಪುಟವಿನ್ಯಾಸ ರೆಡಿಫ್‌ಗಿಂತಲೂ ಆಕರ್ಷಕವಾಗಿದೆ; ಆದರೆ ಅವರು ಭಾರತೀಯ ಭಾಷೆಗಳಲ್ಲಿ ಈ-ಮೇಲ್‌ ಮಾಡುವ ವ್ಯವಸ್ಥೆ ಒದಗಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಬೆಂಗಳೂರಿನಲ್ಲಿ ಯಾಹೂದವರ ವಿಳಾಸ ಇಲ್ಲಿದೆ:

Yahoo! software development India pvt. ltd.
4th floor, "Esquire Center"
#9, M.G. Road
Bangalore - 560 001.
+91 80 5694 9494

ಬರಹ.ಕಾಂ ನವರು ಕನ್ನಡ, ಹಿಂದಿ ಫಾಂಟ್‌ಗಳನ್ನು ತಯಾರಿಸಿ ಮುಕ್ತವಾಗಿ ನಮ್ಮ ಕಂಪ್ಯೂಟರ್‌ಗಳಿಗೆ ಇಳಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಈ ವಿಷಯ ಯಾಹೂದವರಿಗೆ ಬಹುಶಃ ಗೊತ್ತಿರುತ್ತದೆ. ಇವರು ‘ಬರಹ’ ದವರೊಂದಿಗೆ ತಾಂತ್ರಿಕ ಒಪ್ಪಂದ ಮಾಡಿಕೊಂಡು, ಭಾರತೀಯ ಭಾಷೆಗಳಲ್ಲಿ ಈ-ಮೇಲ್‌ ಮಾಡುವ ವ್ಯವಸ್ಥೆಯನ್ನು ಒದಗಿಸಬಹುದಲ್ಲ!

ಸಹ ಓದುಗರು ಯಾರಾದರೂ ಯಾಹೂನಲ್ಲಿ ಉದ್ಯೋಗಿಗಳಾಗಿದ್ದಲ್ಲಿ , ಈ ಕೋರಿಕೆಯನ್ನು ತಾಂತ್ರಿಕ ವಿಭಾಗಕ್ಕೆ ತಿಳಿಸುವಿರಾ?

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X