ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲ ಓಕೆ, ನಮಸ್ಕಾರ ಯಾಕೆ?

By Staff
|
Google Oneindia Kannada News

;?
ನಮ್ಮ ಸಂಸ್ಕೃತಿಯ ಬಗ್ಗೆ ಚಕಾರವೆತ್ತುವ ಪ್ರಶ್ನೆಯೇ ಇಲ್ಲ. ಆದರೆ ಪಾಶ್ಚಿಮಾತ್ಯರ ಕೆಲವು ಅರ್ಥಪೂರ್ಣ ಸಂಸ್ಕೃತಿಯನ್ನು ಅನುಕರಿಸಿದರೆ ತಪ್ಪೇನಿಲ್ಲ. ಏನಂತೀರಾ?

  • ವಲ್ಲೀಶ ಶಾಸ್ತ್ರಿ ,ಚಿನೋ ಹಿಲ್ಸ್‌, ಕ್ಯಾಲಿಫೋರ್ನಿಯ
Vallisha Shastriತ್ರಿವೇಣಿಯವರೇ, ನಮಸ್ಕಾರ.

ನಿಮ್ಮ ಲೇಖನ ಬಹಳ ಚೆನ್ನಾಗಿದೆ. ನನಗೆ ಈ ನಮಸ್ಕಾರದ ಮೂಲದ ಬಗ್ಗೆ ಬಹಳ ಕುತೂಹಲವಿದೆ. ಎಲ್ಲಾ ದೇಶದ ಸಂಸ್ಕೃತಿಗಳಲ್ಲಿ ಒಬ್ಬರನ್ನೊಬ್ಬರು ಆತ್ಮೀಯತೆಯಿಂದ ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಟ್ಟೋ, ಹೆಗಲಿಗೆ ಹೆಗಲು ತಗಲಿಸಿಯೋ, ಕಡೇ ಪಕ್ಷ ಕೈಕೈ ಕುಲಕಿಯಾದರೂ ತಮ್ಮ ನಮಸ್ಕಾರ ಸಂಸ್ಕೃತಿಯನ್ನು ಪ್ರದರ್ಶಿಸುತ್ತಾರೆ. ಅಂದರೇ, ಅಲ್ಲಿ ದೇಹ ಸ್ಪರ್ಶವಿದೆ.

ನಮ್ಮಲ್ಲಿ ದೂರದಿಂದಲೇ ನಮಸ್ಕಾರ ಹೇಳುವ ಸಂಸ್ಕೃತಿ ಹೇಗೆ ಬಂತು ಮತ್ತು ಯಾಕೆ ಬಂತು? ಎಂಬುದೇ ನನ್ನ ಪ್ರಶ್ನೆ. ಇದನ್ನು ನಾವು ಕಾಣುವುದು ಈಶಾನ್ಯ ಏಷಿಯಾದಲ್ಲಿ ಮಾತ್ರ. ಸ್ವಲ್ಪ ಸೂಕ್ಷ್ಮವಾಗಿ ಪರಿಶೀಲಿಸಿದಾಗ ನನಗನ್ನಿಸುವುದು; ಇದು ನಮ್ಮ ವಿವಿಧ ಜಾತಿ, ಪಂಗಡಗಳಿಗೆ ಸೇರಿದ ಜನ ಒಬ್ಬರನ್ನೊಬ್ಬರು (ಅಸ್ಪೃಶ್ಯತೆಯಿಂದ) ಮುಟ್ಟುತ್ತಿರಲಿಲ್ಲವೇನೋ? ಜಾತಿಯಾಳಗಡೆಯೇ ಇದ್ದ ಮೇಲು ಮತ್ತು ಕೀಳು ಮನೋಭಾವಗಳು, ಇದನ್ನು ಹೀಗೆ ಬೆಳೆಸಿತೇ? ಅಥವಾ ನಮ್ಮ ಹಿಂದಿನ ಜನಾಂಗ ಶುಭ್ರತೆಯಲ್ಲಿ ಪ್ರವೀಣರೇ? ಇದ್ಯಾವುದೂ ನನಗೆ ಅರ್ಥವನ್ನು ಕೊಡುವುದಿಲ್ಲ.

ಈಗ ಬಹಳ ಹತ್ತಿರದ ಸ್ನೇಹಿತರು ಅಥವಾ ಬಂಧುಗಳನ್ನು ನಾವು ಅಪರೂಪಕ್ಕೆ ಕಂಡಾಗ ಅಪ್ಪಿಕೊಳ್ಳುತ್ತೇವೆ. ಅದರಲ್ಲಿ ಪ್ರೀತಿ-ವಿಶ್ವಾಸ ಬಿಟ್ಟರೆ ಬೇರೇ ಏನೂ ಉದ್ದೇಶವಿರುವುದಿಲ್ಲ. ಅದರಲ್ಲಿ ಇರುವ ಪ್ರೀತಿ-ವಿಶ್ವಾಸ ದೂರದಿಂದ ನಮಸ್ಕಾರ ಹೇಳಿದಾಗ ಸಿಗುವುದಿಲ್ಲ. ಮನಸ್ಸಿನೊಳಗೆ ಅವರೆಂದಿಗೂ ಹತ್ತಿರವಾಗುವುದಿಲ್ಲ ಎಂದು ನನ್ನ ಅನಿಸಿಕೆ. ನಮ್ಮಲ್ಲಿ ಕೆಲವು ಎಲ್ಲೂ ಕಾಣದಂತಹ ಒಳ್ಳೆಯ ಪದ್ದತಿಗಳೂ ಇವೆ.

ನೀವೇ ಹೇಳಿದ ಹಾಗೆ ಕಾಲು ತಗುಲಿದರೆ ಅವರನ್ನು ಮುಟ್ಟಿ ಕ್ಷಮೆ ಕೇಳುವುದು, ಮನೆಗೆ ಬಂದವರಿಗೆ ಮೊದಲು ಒಳಗೆ ಬನ್ನಿ ಎನ್ನುವುದು... ಹೀಗೆ ಹಲವಾರು ಒಳ್ಳೆಯ ಪದ್ಧತಿಗಳಿದ್ದರೂ, ಹೊಸಬರನ್ನು ನೋಡಿದಾಗ ಪರಿಚಯವಿರಲಿ ಇಲ್ಲದಿರಲಿ, ಹಲೋ ಹೇಳುವ ಅಥವಾ ನಗುಮುಖ ಮಾಡುವ ಪದ್ಧತಿ ನಮ್ಮಲ್ಲಿ ಇಲ್ಲದಿರುವುದು ನನಗೆ ಅಶ್ಚರ್ಯವೆನಿಸುತ್ತದೆ. ಲಿಫ್ಟ್‌ನಲ್ಲಿ ಹೋಗುವಾಗಲೋ, ಬಸ್ಸಿನಲ್ಲಿ ಹೋಗುವಾಗಲೋ ನೋಡಬೇಕು ನಮ್ಮ ಕೆಲವು ದೇಸಿ ಜನರ ಮುಖ ಗಾಢ ಯೋಚನೆಯಲ್ಲಿರುತ್ತದೆ. ಪ್ರಪಂಚವೇ ತಲೆಯ ಮೇಲೆ ಬಿದ್ದಿರುವ ತರಹ ಮುಖಭಾವವಿರುತ್ತದೆ.

ಕೆಲವು ದೇಶಗಳಲ್ಲಿ ಜನ ನೋಡಿದ ತಕ್ಷಣ ಗುಡ್‌ ಮಾರ್ನಿಂಗೋ, ಹಲೋನೋ, ಹೇಳುತ್ತಾರೆ. ಅದರಲ್ಲೂ ಮುಸ್ಲಿಂ ದೇಶಗಳಲ್ಲಿ ‘ಸಲಾಮ್‌ ವಾಲೇಕುಮ್‌’ ಮೊದಲು ಹೇಳಲು ಪೈಪೋಟಿಯಿದೆ.

ನಿಮ್ಮ ಅಂಕಣ ಹೀಗೆ ಕುತೂಹಲಕಾರಿ ವಿಷಯಗಳನ್ನು ತರಲಿ.

ಮುಖಪುಟ / ಓದುಗರ ಓಲೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X