• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಶಾರ್ಟ್‌ಕಟ್; ಮನಶಾಸ್ತ್ರಜ್ಞರ ಬಳಿ ಇದೆ 9.6 ನಿಮಿಷದ ಸೂತ್ರ

|
Google Oneindia Kannada News

"ಬನ್ರೀ ಒಂದು ನಾಟಕ ನೋಡ್ಕೊಂಡು ಬರೂಣು"
'ಟೈಮ್ ಇಲ್ರೀಯಪ್ಪಾ...'

"ತಗೋರಿ ಈ ಪುಸ್ತಕ ಓದಿ, ಚಲೋ ಅದಾ"
'ಓದೋಕ್ ಪುರುಸೊತ್ತೇ ಸಿಗಂಗಿಲ್ರಿ...'

ನೀವು ಯಾರಿಗೇ ಈ ಪ್ರಶ್ನೆಗಳನ್ನು ಕೇಳಿನೋಡಿ, ಬಹುತೇಕ ಇಂಥವೇ ರೀತಿಯ ಉತ್ತರಗಳು ಬರುತ್ತವೆ. ಆದರೆ, ನಮಗೆ ನಿಮಗೆ ನಿಜಕ್ಕೂ ಟೈಮ್ ಇಲ್ವಾ? ಆತ್ಮಾವಲೋಕನ ಮಾಡಿಕೊಂಡು ನೋಡಿ... ನಾವು ಮನೆಗೆ ಹೋಗಿ ಎಷ್ಟು ಹೊತ್ತು ಹಾಗೆ ಸುಮ್ಮನೆ ಕೂತಿರುತ್ತೇವೆ, ಮೊಬೈಲ್‌ನಲ್ಲಿ ಏನೆಲ್ಲಾ ನೋಡುತ್ತಿರುತ್ತೇವೆ. ದಿನಕ್ಕೆ ಐದಾರು ಗಂಟೆ ಟಿವಿ, ಮೊಬೈಲ್‌ನಲ್ಲಿ ಮುಳುಗಿಹೋಗಿರುತ್ತೇವೆ.

ಅತಿಯಾದ ಕೋಪ ಬಂದಾಗ ನಿರ್ವಹಣೆ ಹೇಗೆ?ಅತಿಯಾದ ಕೋಪ ಬಂದಾಗ ನಿರ್ವಹಣೆ ಹೇಗೆ?

ನಮ್ಮ ಜೀವನ ಒಂದು ರೀತಿಯಲ್ಲಿ ಶಾರ್ಟ್ ಕಟ್‌ನಂತಾಗಿದೆ. ದೀರ್ಘಾವಧಿ ಎನ್ನುವುದು ಬೋರೋ ಬೋರು. ಹೀಗಾಗಿ, ಬಹಳ ಹೊತ್ತು ಕೂತು ಪುಸ್ತಕ ಓದಲು ನಮಗೆ ಆಗುವುದಿಲ್ಲ. ನಮ್ಮ ಶಾರ್ಟ್ ಕಟ್ ಪ್ರಪಂಚ ಹೇಗೆಲ್ಲಾ ಬೆಳೆದುಹೋಗಿದೆ ಎಂಬುದು ನಮ್ಮ ಅರಿವಿಗೇ ಬಾರದಂತಾಗಿ ಹೋಗಿದೆ.

ಶಾರ್ಟ್ ವಿಡಿಯೋ ಕಾಲ

ಶಾರ್ಟ್ ವಿಡಿಯೋ ಕಾಲ

ನಮ್ಮಲ್ಲಿ ಮಧ್ಯವಯಸ್ಸು ದಾಟಿದವರಿಗೆ ನೆನಪಿರಬಹುದು. ಗ್ರಾಮಗಳಲ್ಲಿ ಇಡೀ ರಾತ್ರಿ ನಾಟಕ ನಡೆಯುತ್ತಿತ್ತು. ಅಗೆಲ್ಲಾ ಜನರು ಕಿಕ್ಕಿರಿದು ಕೂತು ರಾತ್ರಿಯಿಂದ ಬೆಳಗಿನ ಜಾವದವರೆಗೂ ಕಣ್ಣು ಎವೆಯಿಕ್ಕದೆ ನೋಡುತ್ತಿದ್ದರು. ನಂತರ ಎರಡೂವರೆ ಗಂಟೆಯ ಸಿನಿಮಾಗಳು ಟ್ರೆಂಡ್ ಆದವು.

ಎರಡೂವರೆ ಗಂಟೆ ಸಿನಿಮಾ ಬದಲು ಚಿಕ್ಕ ಚಿಕ್ಕ ವಿಡಿಯೋಗಳು ಪ್ರಚಲಿತಕ್ಕೆ ಬಂದರು. ಒಂದೇ ಸಿನಿಮಾವನ್ನು ಹತ್ತು ಭಾಗ ಮಾಡಿ ಯೂಟ್ಯೂಬ್‌ನಲ್ಲಿ ಹಾಕಿದ ವಿಡಿಯೋಗಳು ಜನಪ್ರಿಯವಾದವು. ಹತ್ತು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಸರಾಸರಿ ವಿಡಿಯೋ 11.7 ನಿಮಿಷ ಆಗಿತ್ತು.

ಇದೂ ಕೂಡ ಜನಕ್ಕೆ ಬೋರೋ ಬೋರು ಎನಿಸಿತು. ನಂತರ ಬಂದದ್ದೇ ಟಿಕ್ ಟಾಕ್ ಯುಗ. 15 ಸೆಕೆಂಡ್ ಟಿಕ್ ಟಾಕ್ ವಿಡಿಯೋಗಳಂತೂ ಜನರನ್ನು ಸೂಜಿಗಲ್ಲಿನಂತೆ ಹಿಡಿದು ಕೂರಿಸಿಬಿಟ್ಟಿವೆ. ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ಬಳಿಕ ಅಂಥವೇ ರೀತಿಯ ಅನೇಕ ಅಪ್ಲಿಕೇಶನ್‌ಗಳು ತಲೆ ಎತ್ತಿ ನಿಂತಿವೆ. ಫೇಸ್ವುಕ್, ಯೂಟ್ಯೂಬ್‌ನವರೂ ಇಂಥ ಶಾರ್ಟ್ ವಿಡಿಯೋಗಳನ್ನು ಹಾಕುವ ಮಟ್ಟಕ್ಕೆ ನಿಂತಿದ್ದಾರೆ.

ದೃಶ್ಯದ ವಿಚಾರದಲ್ಲಿ ಮಾತ್ರವಲ್ಲ, ಶಿಕ್ಷಣದಲ್ಲೂ ಇದೇ ಪ್ರವೃತ್ತಿ ಇದೆ. ಬೇಗ ಶಿಕ್ಷಣ ಮುಗಿಸುವ ಆತುರ. ಮೂರ್ನಾಲ್ಕು ವರ್ಷದ ಡಿಗ್ರಿ ಬದಲು ಈಗ ನಿರ್ದಿಷ್ಟ ಸಬ್ಜೆಕ್ಟ್‌ನಲ್ಲಿ ಮೈಕ್ರೋಕೋರ್ಸ್‌ಗಳು ಲಭ್ಯ ಇವೆ. ಕೆಲವೇ ಗಂಟೆಗಳ ಅವಧಿಯ ಇಂಥ ಕೋರ್ಸ್‌ಗಳು ಜನಪ್ರಿಯವಾಗಿವೆ. ಫಾಸ್ಟ್ ಫುಡ್‌ನಂತೆ ಹಾಗೆ ತಿಂದು ಹೀಗೆ ಹೋಗುವ ಜಮಾನ.

ಗಂಟೆಗಟ್ಟಲೆ ಕೂತು ಪುಸ್ತಕ ಓದುವ ಸಂಯಮವನ್ನು ಮತ್ತು ಅಭಿರುಚಿಯನ್ನು ನಾವು ಕಳೆದುಕೊಂಡಿದ್ದೇವಾ? ಭಾರತ ಮಾತ್ರವಲ್ಲ, ಇದು ವಿಶ್ವಾದ್ಯಂತ ಇರುವ ಸಾಮಾಜಿಕ ಪರಿಸ್ಥಿತಿ.

ಹರಿದು ಹಂಚಿಹೋಗುತ್ತಿದೆ....

ಹರಿದು ಹಂಚಿಹೋಗುತ್ತಿದೆ....

ತಜ್ಞರು ಹೇಳುವ ಪ್ರಕಾರ, ನಮ್ಮ ವ್ಯವಸ್ಥೆ ಹರಿದುಹಂಚಿಹೋಗುತ್ತಿದೆ. ಒಂದು ಉತ್ಪನ್ನದ ಬಿಡಿಭಾಗವೇ ಪ್ರತ್ಯೇಕ ಉತ್ಪನ್ನವಾಗಿ ಕಾಣಲಾಗುತ್ತಿದೆ. ಇದು ಅರಿಸ್ಟಾಟಲ್ ತತ್ವಕ್ಕೆ ವಿರುದ್ದವಾಗಿರುವ ಸಂಗತಿ. ನಮ್ಮ ದೇಹದ ವಿವಿಧ ಭಾಗಗಳ ಮೊತ್ತಕ್ಕಿಂತ ನಮ್ಮ ಒಟ್ಟಾರೆ ದೇಹ ದೊಡ್ಡದು. ನಮ್ಮ ದೇಹದ ಒಂದು ಭಾಗ ಪ್ರತ್ಯೇಕ ಮಾಡಿದರೂ ನಾವು ತೊಂದರೆಗೆ ಸಿಲುಕುತ್ತೇವೆ. ಇದು ಅರಿಸ್ಟಾಲ್ ಸಿದ್ಧಾಂತ.

ಈಗ ಬಿಡಿಬಿಡಿಯಾಗಿರುವ ಭಾಗಗಳನ್ನು ಮರುಜೋಡಿಸಿ ದೊಡ್ಡ ರೂಪಕ್ಕೆ ತರುವ ಅವಕಾಶವಂತೂ ಇದೆ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ನಾವು ಮಾಡುವ ಸಣ್ಣ ಸಣ್ಣ ಯತ್ನಗಳು ಯಶಸ್ಸಿಗೆ ನಮ್ಮನ್ನು ಕರೆದೊಯ್ಯಬಲ್ಲುವು. ದೊಡ್ಡ ಗುರಿಯನ್ನು ಸಣ್ಣ ಸಣ್ಣ ಭಾಗಗಳಾಗಿ ಮಾಡಿ ಅದನ್ನು ಜೋಡಿಸುತ್ತಾ ಹೋಗಬಹುದು. ಇದು ಜೇಮ್ಸ್ ಕ್ಲಿಯರ್ ಎಂಬ ಪ್ರಖ್ಯಾತ ಲೇಖಕ ಪ್ರಸ್ತುತಪಡಿಸಿರುವ ಟ್ರಿಕ್.

ಬದಲಾವಣೆ ಸುಲಭವಲ್ಲ

ಬದಲಾವಣೆ ಸುಲಭವಲ್ಲ

ಬದಲಾವಣೆ ಎಂಬುದು ಜಗದ ನಿಯಮವಾದರೂ ಸಹಜ ಬದಲಾವಣೆ ಅಷ್ಟು ಸುಲಭವಲ್ಲ. ನಮ್ಮ ಮಾನಸಿಕ ಗೂಡಿನೊಳಗೆ ಬಂಧಿಯಾಗಿರುತ್ತೇವೆ. ಹೊರಬಂದರೆ ವಿಚಲಿತಗೊಳ್ಳುತ್ತೇವೆ. ಸಕಾರಾತ್ಮಕ ಬದಲಾವಣೆ ಆಗುತ್ತದೆ ಎಂದು ಗೊತ್ತಿದ್ದರೂ ಯಥಾಸ್ಥಿತಿಯಿಂದ ಹೊರಬರಲು ಹಿಂಜರಿಯುತ್ತೇವೆ. ಇದರಿಂದ ಹೊರಬರಲು ಇರುವ ದೊಡ್ಡ ಉಪಾಯ ಎಂದರೆ ಅದು ಸಣ್ಣ ಸಣ್ಣ ಗುರಿಗಳನ್ನು ಇಟ್ಟುಕೊಳ್ಳುವುದು.

ಹೀಗೆ ಮಾಡುವುದರಿಂದ ನಿಮಗೂ ಕಷ್ಟ ಎನಿಸುವುದಿಲ್ಲ. ಉದಾಹರಣೆಗೆ, ನೀವು ಜಾಗಿಂಗ್ ಅಥವಾ ವಾಕಿಂಗ್ ಅಭ್ಯಾಸ ರೂಢಿಸಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರುತ್ತೀರಿ ಎಂದಿಟ್ಟುಕೊಳ್ಳಿ. ದಿಢೀರನೇ ನಿಮಗೆ ದಿನವೂ ವಾಕಿಂಗ್ ಹೋಗುವುದು ಬೋರ್ ಎನಿಸಬಹುದು. ಅಗ ನೀವು ದಿನವೂ ಮನೆಯಲ್ಲೇ ಒಂದೆರಡು ನಿಮಿಷ ಹೆಜ್ಜೆ ಹಾಕಬಹುದು. ಅಥವಾ ಶೂ ಧರಿಸಿ ಅತ್ತಿಂದತ್ತ ತಿರುಗಾಡಬಹುದು. ಇದು ಅಭ್ಯಾಸ ಆಗುತ್ತಲೇ ಅದನ್ನು ನಿಧಾನವಾಗಿ ವಾಕಿಂಗ್ ಹಂತಕ್ಕೆ ಬೆಳೆಸಿಕೊಳ್ಳುತ್ತಾ ಹೋಗಬಹುದು.

ಜೇಮ್ಸ್ ಕ್ಲಿಯರ್ 9.6 ನಿಮಿಷದ ಸೂತ್ರ

ಜೇಮ್ಸ್ ಕ್ಲಿಯರ್ 9.6 ನಿಮಿಷದ ಸೂತ್ರ

ಲೇಖಕ ಜೇಮ್ಸ್ ಕ್ಲಿಯರ್ ತಮ್ಮ 'ಅಟಾಮಿಕ್ ಹ್ಯಾಬಿಟ್ಸ್' ಎಂಬ ಪುಸ್ತಕದಲ್ಲಿ ಈ ವಿಚಾರದ ಬಗ್ಗೆ ಬರೆದಿದ್ದಾರೆ. ಅವರ ಪ್ರಕಾರ ದಿನವೂ ನೀವು ಶೇ. 1ರಷ್ಟು ಉತ್ತಮಗೊಳ್ಳುತ್ತಾ ಹೋದರೂ ಸಾಕು ಒಂದು ವರ್ಷದೊಳಗೆ 37 ಪಟ್ಟು ಉತ್ತಮಗೊಂಡಿರುತ್ತೀರಿ.

ನಾವು ದಿನದಲ್ಲಿ ಮಲಗುವ ಸಮಯ ಬಿಟ್ಟು ಉಳಿದ 16 ಗಂಟೆ ಎಚ್ಚರದಲ್ಲಿರುತ್ತೇವೆ, ಚಟುವಟಿಕೆಯಲ್ಲಿರುತ್ತೇವೆ. ಶೇ. 1ರಷ್ಟು ಸಮಯವನ್ನು ನಾವು ನಮ್ಮನ್ನು ಬದಲಾಯಿಸಿಕೊಳ್ಳುವುದಕ್ಕೆ ಮೀಸಲಿಡಬಹುದು. ಅಂದರೆ ಈ ಶೇ. 1 ಎಂಬುದು ನಿಮಿಷಗಳ ಲೆಕ್ಕಾಚಾರದಲ್ಲಿ 9.6 ನಿಮಿಷ ಆಗುತ್ತದೆ. ಒಂದು ದಿನದಲ್ಲಿ ನಾವು 9.6 ನಿಮಿಷ ಕಾಲವನ್ನು ನಮ್ಮ ಉತ್ತಮಗೊಳಿಸುವಿಕೆಗೆ ಮೀಸಲಿಡಬಹುದು ಎನ್ನುತ್ತಾರೆ ಜೇಮ್ಸ್ ಕ್ಲಿಯರ್.

ಉದಾಹರಣೆ

ಉದಾಹರಣೆ

ನಾವ ದಿನದಲ್ಲಿ 9.6 ನಿಮಿಷವನ್ನು ಹೇಗೆಲ್ಲಾ ಬಳಸಬಹುದು ಎಂಬುದಕ್ಕೆ ಅನೇಕ ಉದಾಹರಣೆ ಕೊಡಬಹುದು. ಇಲ್ಲಿ ನಾವು ನಮ್ಮ ಆರೋಗ್ಯ ಕಾಪಾಡಲು ವ್ಯಾಯಾಮ ಮಾಡುವುದನ್ನು ಶುರು ಮಾಡಲು 9.6 ನಿಮಿಷದ ಸೂತ್ರವನ್ನು ಹೀಗೆ ಅಳವಡಿಸಿಕೊಳ್ಳಬಹುದು:
* ಎದ್ದ ಬಳಿಕ 2 ನಿಮಿಷ ಸ್ಟ್ರೆಚಿಂಗ್ ಮಾಡಿ
* 2 ನಿಮಿಷ ಬ್ರೀಥಿಂಗ್ ಎಕ್ಸರ್‌ಸೈಸ್
* ನಮಗೆ ಖುಷಿ ಕೊಟ್ಟಿರುವ ಮೂರು ಸಂಗತಿಗಳನ್ನು ಸ್ಮರಿಸಲು 1 ನಿಮಿಷ
* ಸ್ಕಿಪಿಂಗ್ ಇತ್ಯಾದಿ ಯಾವುದಾದರೂ ಹೈ ಇಂಟೆನ್ಸಿಟಿ ವರ್ಕೌಟ್ 2 ನಿಮಿಷ
* ಮಧ್ಯಾಹ್ನದ ಯಾವುದೋ ಸಮಯದಲ್ಲಿ ನೀವು ಏನೇ ಕೆಲಸದಲ್ಲಿದ್ದರೂ 2.6 ನಿಮಿಷ ಕಾಲ ಬ್ರೇಕ್ ತೆಗೆದುಕೊಂಡು ಹಾಗೆ ಸುಮ್ಮನೆ ತಿರುಗಾಡಿ.

ಇವಿಷ್ಟೂ ಚಟುವಟಿಕೆಗಳನ್ನು ಮಾಡಲು ನಿಮಗೆ ಹೆವಿ ಅನಿಸುವುದಿಲ್ಲ. ನಿಮಗೇ ಗೊತ್ತಿಲ್ಲದಂತೆ 9.6 ನಿಮಿಷಗಳನ್ನು ಕಳೆಯುತ್ತೀರಿ. ಆದರೆ, ಅದು ಮಾಡುವ ಸಕಾರಾತ್ಮಕ ಪರಿಣಾಮ ಮಾತ್ರ ನಿಜಕ್ಕೂ ವಿಶೇಷವಾದುದು. ಮೇಲೆ ಹೇಳಿದ ರೀತಿಯಲ್ಲೇ ಮಾಡಬೇಕಂತಲ್ಲ. ಸಣ್ಣ ಸಣ್ಣ ಚಟುವಟಿಕೆಗಳ ಮೂಲಕ ಬೆಳವಣಿಗೆ ಸಾಧಿಸುತ್ತಾ ಹೋಗುವುದು ಇಲ್ಲಿ ಮುಖ್ಯ.

ಕುತೂಹಲವೆಂದರೆ, ಈ 9.6 ನಿಮಿಷ ಅವಧಿಯಲ್ಲಿ ನೀವು 36 ಟಿಕ್ ಟಾಕ್ ವಿಡಿಯೋಗಳನ್ನು ನೋಡಬಹುದು. ಈಗ ಹೇಳಿ, ನೀವು 9.6 ನಿಮಿಷ ಕಾಲ ಸಣ್ಣ ಸಣ್ಣ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತೀರೋ ಅಥವಾ ಟಿಕ್ ಟಾಕ್ ವಿಡಿಯೋಗಳನ್ನು ನೋಡುತ್ತೀರೋ?

(ಒನ್ಇಂಡಿಯಾ ಸುದ್ದಿ)

English summary
If you want to break the shackles, divide the taks into small ones. Take few minutes to do these small tasks. Know more here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X