ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಸಂತೋಷ - ಮನಸ್ಥಿತಿ- ಆದ್ಯತೆ

By ರೇಖಾ ಬೆಳವಾಡಿ, ಆಪ್ತಸಲಹೆಗಾರರು
|
Google Oneindia Kannada News

ಹರಿಣಿ ಬಹಳ ಸೌಮ್ಯ ಸ್ವಭಾವದ ಹುಡುಗಿ. ಸಣ್ಣ ಹಳ್ಳಿಯೊಂದರಲ್ಲಿ ಬೆಳೆದು ಕೆಲಸಕ್ಕೆಂದು ಪಟ್ಟಣ ಸೇರಿಕೊಳ್ಳುತ್ತಾಳೆ. ಏನಾದರೂ ಸಾಧಿಸಬೇಕೆಂಬ ಆಸೆ ಹೊತ್ತು ಬಂದ ಹುಡುಗಿ. ಬಹಳ ದಿನಗಳಾದರೂ ಪಟ್ಟಣದ ಜೀವನಶೈಲಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ.

ಊಟ, ಬಟ್ಟೆ, ಜನರು, ಮಾತುಕತೆ ಹೀಗೆ ಪ್ರತಿಯೊಂದು ಅಂಶಗಳಿಗೂ ಹಳ್ಳಿಯ ಜೀವನ ಹಾಗು ಪಟ್ಟಣದ ಜೀವನಕ್ಕೂ ಇರುವ ಹೋಲಿಕೆ ವ್ಯತ್ಯಾಸದ ಕಡೆಯೇ ಗಮನ ಹೋಗುತ್ತಿರುತ್ತದೆ.

ತನಗೆ ಈ ವಾತಾವರಣ ಸರಿ ಬರುವುದಿಲ್ಲ. ಹಳ್ಳಿಯ ಹುಡುಗಿ ಎಂದು ಎಲ್ಲರೂ ತನ್ನ ಬಗ್ಗೆಯೇ ಮಾತನಾಡಿಕೊಳ್ಳುತ್ತಾರೆ, ಕೀಳಾಗಿ ನೋಡುತ್ತಾರೆ, ರಾಜಕೀಯತೆ ಹೆಚ್ಚಿದೆ, ತಾನು ಮಾಡುವ ಯಾವುದೇ ಕೆಲಸವನ್ನು ಒಪ್ಪುವುದಿಲ್ಲ ಬೇಕೆಂದೇ ಏನಾದರೂ ತಪ್ಪು ಹುಡುಕುತ್ತಾರೆ ಎಂಬ ಅನುಮಾನ - ಆತಂಕ ಹರಿಣಿಗೆ.

ಹೀಗಿರುವಾಗ ಸ್ವಲ್ಪ ದಿನಗಳ ನಂತರ ಕಂಪನಿಯ ಮಾಲೀಕರ ಬಳಿ ಹೋಗಿ ತನ್ನ ರಾಜೀನಾಮೆ ಪತ್ರ ಕೊಡುತ್ತಾಳೆ. ಆಶ್ಚರ್ಯಗೊಂಡ ಮಾಲೀಕರು ಹರಿಣಿಯ ಈ ನಿರ್ಧಾರಕ್ಕೆ ಕಾರಣ ಏನೆಂದು ಕೇಳುತ್ತಾರೆ.

Psychology: Happiness Mindset and preferences in life

ಹರಿಣಿಯು ತನ್ನ ದುಃಖಕ್ಕೆ ಹಾಗು ಕೆಲಸ ಬಿಡುವ ಕಠಿಣ ನಿರ್ಧಾರಕ್ಕೆ ಆಫೀಸಿನ ವಿಷಕಾರಿ ವಾತಾವರಣ, ಜನರು (toxic environment and people) ಹಾಗು ಇತರ ಕಾರಣಗಳನ್ನು ತಿಳಿಸುತ್ತಾಳೆ.

ವಿಷಯ ತಿಳಿದ ಮಾಲೀಕರು ರಾಜಿನಾಮೆ ಪತ್ರ ಸ್ವೀಕರಿಸುವ ಮೊದಲು ಒಂದು ಕೆಲಸ ಮಾಡ ಬೇಕೆಂದು ಕೇಳಿಕೊಳ್ಳುತ್ತಾರೆ. ಅದೇನೆಂದರೆ ಹರಿಣಿ ಕೈ ಬೊಕ್ಕಸೆಯಲಿ ನೀರು ಹಾಗು ಪುಟ್ಟ ಮೀನೊಂದನ್ನು ಹಾಕುತ್ತಾ ಆಫೀಸಿನ ಕಚೇರಿ ಒಳಗೆ ಒಂದು ಸುತ್ತು ಹಾಕಿಕೊಂಡು ಬರಬೇಕಾಗಿ ಹೇಳುತ್ತಾರೆ.

ಇದೆಂತಹ ಪರೀಕ್ಷೆ ಎಂದುಕೊಳ್ಳುತ್ತಲೇ ಹರಿಣಿ ತನ್ನ ಬೊಗಸೆಯಲ್ಲಿನ ನೀರು ಹಾಗು ಪುಟ್ಟ ಮೀನನ್ನು ಹಿಡಿದು ಜೋಪಾನ ಮಾಡುತ್ತಾ ಕಛೇರಿಯ ಇಂಚಿಂಚೂ ಓಡಾಡಿ ಮತ್ತೆ ಮಾಲೀಕರನ್ನು ಭೇಟಿಯಾಗುತ್ತಾಳೆ. ಅವಳ‌ ಮುಖದಲ್ಲಿ ಸಣ್ಣ ನಗೆಯೊಂದು ಅರಳಿದೆ.

Psychology: Happiness Mindset and preferences in life

ಮಾಲೀಕರು ಹರಿಣಿಯ ಮುಖದಲ್ಲಿ ಸಂತೋಷವನ್ನು ಗಮನಿಸುತ್ತಾರೆ. ಈಗ ಕಚೇರಿಯ ಜನರು ಹಾಗು ವಾತಾವರಣದ ಬಗ್ಗೆ ಇನ್ನೂ ಅದೇ ನಕಾರಾತ್ಮಕ ಭಾವನೆ ಇದೆಯೇ ಎಂದು ಕೇಳಿದಾಗ. ಹರಿಣಿ ತನಗೆ ಆಫೀಸಿನ ಜನರ ಬಗ್ಗೆ ಹಾಗು ವಾತಾವರಣ ಗಮನಕ್ಕೆ ಬರಲಿಲ್ಲ.

ತನ್ನ ಗಮನವೆಲ್ಲಾ ಬೊಕ್ಕಸೆಯ ನೀರು ಹಾಗು ಪುಟ್ಟ ಮೀನನ್ನು ಜೀವಂತವಾಗಿ ಇಡುವುದಷ್ಟೇ ಆಗಿತ್ತು ಎನ್ನುತ್ತಾಳೆ. ಎಷ್ಟೇ ಅಡೆ ತಡೆಗಳು ಬಂದರೂ ಸಹ ಬೊಕ್ಕಸೆಯ ನೀರು ಚೆಲ್ಲದಂತೆ ಮೀನನ್ನು ಜೀವಂತ ಇರಿಸಿಕೊಂಡಿದ್ದಕ್ಕೆ ತನ್ನ ಮೇಲೆ ತನಗೇ ಖುಷಿ ಇದೆ ಎನ್ನುತ್ತಾಳೆ.

ಆಗ ಮಾಲೀಕರು ಹರಿಣಿಯ ಗಮನವೆಲ್ಲಾ ಬೊಕ್ಕೆಸೆಯ ನೀರು ಹಾಗು ಮೀನಿನ ರಕ್ಷಣೆಯ ಕಡೆಗೆ ಇದ್ದುದರಿಂದ ಕಚೇರಿಯ, ಜನ ಹಾಗು ವಾತಾವರಣದ ನಕಾರಾತ್ಮಕತೆ ಹಾಗು ಕುಂದು ಕೊರತೆಗಳು ಗಮನಕ್ಕೆ ಬಾರದೇ, ಮೀನಿನ ರಕ್ಷಣೆಯ ಜವಾಬ್ದಾರಿ ಉತ್ತಮವಾಗಿ ನಿಭಾಯಿಸಿದಾಗ ತನ್ನ ಆಂತರಿಕ ಸಂತೋಷ ಹೆಚ್ಚಾಗಿ ತನ್ನ ಸಾಮರ್ಥ್ಯದ ಅರಿವು ಹೆಚ್ಚಾಯಿತು ಎನ್ನುತ್ತಾ ಹರಿಣಿಯನ್ನು ಅಭಿನಂದಿಸುತ್ತಾರೆ.

Psychology: Happiness Mindset and preferences in life

ಈ ಮೇಲಿನ ಕಥೆಗೂ ನಮ್ಮ ಜೀವನಕ್ಕೂ ಬಹಳ ಸಾಮ್ಯತೆಗಳಿವೆ ಅಲ್ಲವೇ?
ನಾವು ನಮ್ಮ ಆದ್ಯತೆಗಳ (priorities) ಬಗ್ಗೆ, ಸಾಮರ್ಥ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದಾಗ

* ಹೋಲಿಕೆ, ವ್ಯತ್ಯಾಸಗಳು
* ಇತರರ ದೋಷಗಳು
* ಗಾಳಿಮಾತುಗಳು
* ರಾಜಕೀಯ ವಾತಾವರಣ
* ಇತರರ ಋಣಾತ್ಮಕ ಯೋಚನೆಗಳು ಹಾಗು ವರ್ತನೆಗಳು

ನಮ್ಮ ಬದುಕಿನ ಮೇಲೆ ಹೆಚ್ಚು ಪರಿಣಾಮಕಾರಕವಾಗುವುದಿಲ್ಲ. ನಮ್ಮ ಭಾವನಾತ್ಮಕ ವಾತಾವರಣವನ್ನು ಅಂತಹ ವ್ಯತ್ಯಾಸವಾಗುವುದಿಲ್ಲ.

ಕೆಲವು ಮುಖ್ಯ ಅಂಶಗಳು

* ಬದಲಾವಣೆಗೆ ಹೊಂದಿಕೊಳ್ಳಲು ಪ್ರತಿಯೊಬ್ಬರಿಗೂ ಸಮಯ ಹಿಡಿಯುತ್ತದೆ.

* ಬದಲಾವಣೆಗಳು ಸಹಜ. ಜೀವನ ಸಂದರ್ಭಗಳು ಹಾಗು ಜನರನ್ನು ನಿಭಾಯಿಸುವುದು ಬಹಳ ಮುಖ್ಯವಾದ ಕೌಶಲ್ಯ. ಪರಿಸ್ಥಿತಿಯನ್ನು ಅಲ್ಲಗಳೆಯದೆ ಪ್ರಯತ್ನಿಸಿ.

* ಸಂದರ್ಭವನ್ನು ಅರ್ಥೈಸಿಕೊಳ್ಳಿ

* ಕಾಲಕ್ಕೆ ತಕ್ಕಂತೆ ನಿಮ್ಮನ್ನು ನೀವು ನವೀಕರಿಸಿಕೊಳ್ಳಿ (update)

* ಬೇಕಾದಲ್ಲಿ ಜನರೊಂದಿಗೆ ಮಾತಾಡಿ ಗೊಂದಲ ಪರಿಹರಿಸಿಕೊಳ್ಳಿ

* ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ.

ಪ್ರತಿಯೊಬ್ಬರೂ ಎಲ್ಲಾ ರೀತಿಯಲ್ಲೂ ವಿಭಿನ್ನವಾಗಿರುತ್ತಾರೆ. ಎಲ್ಲರನ್ನೂ ಒಪ್ಪಿಸುವ ಸಲುವಾಗಿ ನಮ್ಮ ನಮ್ಮ ವಿಶೇಷತೆಗಳನ್ನು ಮರೆಯುವುದು ಬೇಡ. ನಮ್ಮ ಗಮನವು ನಮ್ಮ ಆಯ್ಕೆ ಸಾಮರ್ಥ್ಯ, ತೃಪ್ತಿಕರ ಸಂತೋಷ ಜೀವನ ನಡೆಸುವ ಬಗ್ಗೆ ಇದ್ದಾಗ ಸನ್ನಿವೇಶ ಸವಾಲುಗಳನ್ನು ಎದುರಿಸಬಹುದು. ಆಗ ನಕಾರಾತ್ಮಕ ಜನರು, ವಾತಾವರಣ ಉಳಿದೆಲ್ಲವೂ ಗೌಣವಾಗುವುದು ಖಂಡಿತ ಅಲ್ಲವೇ. ನಮ್ಮ ಗುರಿ ಮುಟ್ಟುವುದು ಖಂಡಿತ. ಧನಾತ್ಮಕ ಯೋಚನೆ ಹಾಗು ವರ್ತನೆ ನಮ್ಮ ಜೀವನಶೈಲಿಯ ಹೊಸ ಮಂತ್ರವಾಗಲಿ.

ಒಮ್ಮೆ ಪ್ರಯತ್ನಿಸಿ.

ಅಂದ ಹಾಗೆ ಹರಿಣಿ ತನ್ನ ಕೆಲಸದಲ್ಲಿ ಮುಂದುವರೆಯುತ್ತಾಳೋ ಇಲ್ಲವೋ? ನಿಮ್ಮ ಅನಿಸಿಕೆ ತಿಳಿಸಿ...

Recommended Video

RCB ಈ ಸಲ ಕಪ್ ಗೆಲ್ಲುತ್ತಾ ಅನ್ನೋ ಪ್ರಶ್ನೆಗೆ ದಿನೇಶ್ ಕಾರ್ತಿಕ್ ಕೊಟ್ಟ ಉತ್ತರ ನೋಡಿ | Oneindia Kannada

[email protected];

English summary
Psychology: Happiness can include the preferences and pleasures of the mind and how to overcome toxic environment and people around you.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X