Viksit Bharat: ಒನ್‌ಇಂಡಿಯಾದಿಂದ 'ವಿಕ್ಷಿತ್ ಭಾರತ್' ಉಪಕ್ರಮ: ಪ್ರಮುಖ ಸರ್ಕಾರಿ ಯೋಜನೆಗಳ ಸರಳೀಕರಣ
ಕನ್ನಡ ಸುದ್ದಿ ಜಾಲತಾಣ ಸಂಸ್ಥೆಯಾಗಿರುವ ಒನ್ಇಂಡಿಯಾ 'ವಿಕ್ಷಿತ್ ಭಾರತ್' ಸಂಚಿಕೆ ಆರಂಭಿಸುವುದಾಗಿ ಘೋಷಣೆ ಮಾಡಿದೆ. ಇದರಿಂದ ನಾಗರಿಕರಿಗಾಗಿ ದೇಶದ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಸರಳೀಕರಿಸುವ ಮತ್ತು ಮಾನವೀಯಗೊಳಿಸುವ ಗುರಿ ಇಟ್ಟುಕೊಂಡಂತಹ ಸರ್ಕಾರ-ಕೇಂದ್ರಿತ ಐಪಿ ಆಗಿದೆ. ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಜನರ ಮಧ್ಯದ ಮಾಹಿತಿ ಅಂತರ ಕಡಿಮೆ ಮಾಡುತ್ತದೆ. ರಚನಾತ್ಮಕವಾಗಿ ಯೋಜನೆಗಳ ಒಳನೋಟವನ್ನು ಕಥೆ ಸ್ವರೂಪದಲ್ಲಿ ಪ್ರಸ್ತುತಪಡಿಸುವ ಉಪಕ್ರಮ ಇದಾಗಿದೆ.

ವಿಕ್ಷಿತ್ ಭಾರತದಲ್ಲಿ ಎರಡು ಪಾತ್ರಗಳು ಬರುತ್ತವೆ
1. ವಿಕ್ಷಿತ್ - ಯುವಕನಾಗಿ ಭಾರತದ ಮಹತ್ವಾಕಾಂಕ್ಷೆ ಮತ್ತು ಕುತೂಹಲವನ್ನು ಈ ಪಾತ್ರ ಸಂಕೇತಿಸುತ್ತದೆ.
2. ಭಾರತ್- ಇದು ಚಾಚಾ ರೀತಿಯಲ್ಲಿ ಬುದ್ಧಿವಂತಿಕೆ ಮತ್ತು ದೇಶದ ಸಾಮೂಹಿಕ ನೀತಿಯನ್ನು ಈ ಪಾತ್ರ ಪ್ರತಿನಿಧಿಸುತ್ತದೆ.
ಒನ್ಇಂಡಿಯಾ ಈ ಪರಿಕಲ್ಪನೆಯು ವಿಶಿಷ್ಟವಾದ ಕಥೆ ಹೇಳುವ ಸ್ವರೂಪದ್ದಾಗಿದೆ. ಯಾವುದೇ ಜಿಜ್ಞಾಸೆಯುಳ್ಳ 'ಜೆನ್-ಝಡ್' ಸೋದರಳಿಯ ವಿಕ್ಷಿತ್, ಪ್ರತಿಯೊಂದು ರಾಷ್ಟ್ರೀಯ ಕಲ್ಯಾಣ ಯೋಜನೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ನಿರಂತರವಾಗಿ ತನ್ನ ಭಾರತ್ ಚಾಚಾಗೆ ಪ್ರಶ್ನೆಗಳನ್ನು ಕೇಳುತ್ತಾ ಸವಾಲು ಹಾಕುತ್ತದೆ. ವಿಷಯಗಳನ್ನು ಸ್ವೀಕರಿಸುವಾಗ ಮ್ತು ಸರ್ಕಾರಿ ವೆಚ್ಚವೆಂದು ಪರಿಗಣಿಸುವ ಬದಲು ವಿಕ್ಷಿತ್ ಪ್ರತಿ ಯೋಜನೆಯು ಸೃಷ್ಟಿಸಲು ಉದ್ದೇಶಿಸಿರುವ ತರ್ಕ, ಉದ್ದೇಶ ಮತ್ತು ನಿಜವಾದ ಪರಿಣಾಮ ವಿಕ್ಷಿತ್ ಮತ್ತು ಭಾರತ್ ಚಾಚಾ ಸಂಚಿಕೆಯಲ್ಲಿ ಪ್ರಶ್ನಿಸಲಾಗುತ್ತದೆ.
ಚಾಚಾ ಭಾರತ್ ತನ್ನ ಅನುಭವ, ಸಾಂಸ್ಥಿಕ ಸ್ಮರಣೆ ಮತ್ತು ಆಧಾರವಾಗಿರುವ ಬುದ್ಧಿವಂತಿಕೆಯನ್ನು ಪ್ರಸ್ತುತಪಡಿಸುತ್ತದೆ. ಇದರೊಂದಿಗೆ ಸರ್ಕಾರದ ನೀತಿಗಳ ಹಿಂದಿನ ಉದ್ದೇಶವನ್ನು ಬಿಚ್ಚಿಡುವ ಪ್ರಯತ್ನ ಮಾಡುತ್ತದೆ. ಅವುಗಳು ಹೇಗೆ ನಾಗರಿಕರನ್ನು ಬಲಪಡಿಸುತ್ತವೆ, ಸಹಾಯ ಮಾಡುವುದರರ ಜೊತೆಗೆ ಅಭಿವೃದ್ಧಿಗೆ ವೇಗ ನೀಡುತ್ತವೆ ಹಾಗೂ ದೀರ್ಘಕಾಲೀನ ರಾಷ್ಟ್ರೀಯ ಸಾಮರ್ಥ್ಯ ತೋರಿಸುತ್ತದೆ.
ಕುತೂಹಲ ಮತ್ತು ಸ್ಪಷ್ಟತೆಯ ಮಧ್ಯದಲ್ಲಿ ನಿರೂಪಣೆಯ ಎಂಜಿನ್ ಆಗಿ ಕಾರ್ಯ ನಿರ್ವಹಿಸುತ್ತದೆ. ಸರ್ಕಾರದ ಪ್ರಮುಖ ಯೋಜನೆಗಳ "ಏಕೆ" ಮತ್ತು "ಹೇಗೆ" ಮೂಲಕ ಪ್ರೇಕ್ಷಕರಿಗೆ ಮಾರ್ಗದರ್ಶನ ನೀಡುವುತ್ತವೆ. ನಾಗರಿಕರಿಗೆ ಸಂಕೀರ್ಣ ನೀತಿಗಳನ್ನು ಅರ್ಥ ಮಾಡುತ್ತದೆ. ಸರಳೀಕರಣಗೊಳಿಸುತ್ತದೆ.
ಒನ್‌ಇಂಡಿಯಾ 'ವಿಕ್ಷಿತ್ ಭಾರತ್' ಸಂಚಿಕೆಯು ಒಂದೇ ಉಪಕ್ರಮದ ಮೇಲೆ ಕೇಂದ್ರೀಕರಿಸುತ್ತದೆ. ಹೇಗೆ ಎಂಬ ವಿವರ ಇಲ್ಲಿದೆ
* ಯೋಜನೆಯು ನಾಗರಿಕರಿಗೆ ಹೇಗೆ ಪ್ರಯೋಜನ ಒದಗುತ್ತದೆ.
* ವಿವರಣಾತ್ಮಕ ನೈಜ-ಪ್ರಪಂಚಕ್ಕೆ ಹೇಗೆ ಅನ್ವಯವಾಗುತ್ತದೆ
* ಇದರ ಆರ್ಥಿಕ ಮತ್ತು ರಾಷ್ಟ್ರೀಯ ಮಹತ್ವವೇನು ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸಲಾಗಿದೆ.
ವಿಕ್ಷಿತ್ ಭಾರತ್ ಸಂಚಿಕೆ ಎಲ್ಲಿ ನೋಡಬೇಕು?
21.8 ಮಿಲಿಯನ್ ಚಂದಾದಾರರನ್ನು ತಲುಪಿದ 'ಒನ್‌ಇಂಡಿಯಾ'ದ ಯೂಟ್ಯೂಬ್ ಚಾನೆಲ್‌ನಲ್ಲಿ ಮತ್ತು 'ಒನ್‌ಇಂಡಿಯಾ ವೆಬ್‌ಸೈಟ್'ನಲ್ಲಿ ಪ್ರತ್ಯೇಕವಾಗಿ ಪ್ರದರ್ಶನಗೊಳ್ಳಲಿದೆ. ಇದು ಆಯಾ ಪ್ರದೇಶಗಳು, ವಿವಿಧ ಭಾಷೆಗಳಲ್ಲಿ ತನಗೆ ಸರಿಸಾಟಿಯೇ ಇಲ್ಲದಂತೆ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.
ಆರಂಬದಲ್ಲಿ 'ವಿಕ್ಷಿತ್ ಭಾರತ್' ಪ್ರತಿ ವಾರ ಒಂದು ಸಂಚಿಕೆ ಬಿಡುಗಡೆ ಆಗಲಿದೆ. ಇದು ವಿಭಿನ್ನ ಸರ್ಕಾರಿ ಯೋಜನೆ ಮತ್ತು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಆಯಾ ಭಾಗದ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ. ಮೊದಲ ಸಂಚಿಕೆ ಈಗಾಗಲೇ ಲೈವ್ ಆಗಿದೆ.
ಒನ್‌ಇಂಡಿಯಾ ವಿಕ್ಷಿತ್ ಭಾರತ್ ಜೊತೆಗೆ ಮತ್ತಷ್ಟು ಅಧಿಕ ಪ್ರಭಾವ ಬೀರಲಿದೆ. ಸಾರ್ವಜನಿಕರಿಗೆ ಪೂರಕವಾದ ಮಾಹಿತಿ ವಿಷಯ ಒಳಗೊಂಡಿರಲಿದ್ದು, ನಾಗರಿಕರನ್ನು ಸಬಲೀಕರಣಗೊಳಿಸಲಿದೆ. ಸಾಕ್ಷರತೆಯತ್ತ ಜನರನ್ನು ಒಯ್ಯಲಿದೆ. ಭಾರತಕ್ಕಾಗಿ ಉತ್ತಮ ಮಾಹಿತಿಯುಕ್ತ ಅಭಿವೃದ್ಧಿ ನಿರೂಪಣೆಗೆ ಕೊಡುಗೆ ನೀಡಲಿದೆ.
'ವಿಕ್ಷಿತ್ ಭಾರತ್' ಉಪಕ್ರಮ ಉದ್ಘಾಟನೆಯ ಕುರಿತು ಮಾತನಾಡಿದ ಒನ್‌ಇಂಡಿಯಾದ ಸಿಇಒ ರಾವಣನ್ ಎನ್ ಅವರು, 'ವಿಕ್ಷಿತ್ ಭಾರತ್ ಪ್ರತಿಯೊಬ್ಬ ಭಾರತೀಯನಿಗೂ ವಿಶ್ವಾಸಾರ್ಹ ಸಾರ್ವಜನಿಕ ಮಾಹಿತಿ ನೀಡುವ ನಮ್ಮ ಧ್ಯೇಯವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಉಪಕ್ರಮದಿಂದ ನಾಗರಿಕರಿಗೆ ದೇಶದ ಬೆಳವಣಿಗೆಯಲ್ಲಿ ಅಗತ್ಯ ಸ್ಪಷ್ಟತೆ, ಅರಿವು ಮತ್ತು ಜ್ಞಾನವನ್ನು ನೀಡಿ ಅವರನ್ನು ಸಬಲೀಕರಣಗೊಳಿಸುವಲ್ಲಿ ಮಹತ್ವ ಪಾತ್ರ ವಹಿಸುತ್ತದೆ. ಸರ್ಕಾರದ ನೀತಿಗಳು ಪ್ರಯೋಜನೆ, ರೂಪಾಂತರಗೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ತಿಳಿಸಿದರು.
ಒನ್‌ಇಂಡಿಯಾದ ಮುಖ್ಯ ಸರ್ಕಾರಿ ಸಂಬಂಧಗಳ ಮುಖ್ಯಸ್ಥರಾದ ಜೋಗಜ್ಯೋತಿ ಪತಿ ಅವರು, ಸಂಕೀರ್ಣ ಯೋಜನೆಗಳನ್ನು ನಾಗರಿಕರಿಗೆ ಸ್ಪಷ್ಟವಾಗಿ, ರಚನಾತ್ಮಕ ಜ್ಞಾನವಾಗಿ ಪರಿವರ್ತಿಸಲು ವಿಕ್ಷಿತ್ ಭಾರತ್ ಸಹಾಯ ಮಾಡುತ್ತದೆ. ದೇಶದ ಬೆಳವಣಿಗೆಯಲ್ಲಿ ಮಾಹಿತಿ ಸಹಿತ ಭಾಗವಹಿಸುವಿಕೆಗೆ ಬೆಂಬಲಿಸುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲಿಸಿ, ಅಗುಳ ಒಳನೋಟಗಳನ್ನು ನಾಗರಿಕರ ಮುಂದೆ ಪ್ರಸ್ತುತಪಡಿಸುತ್ತದೆ. ಇದರಿಂದ ನಾಗರಿಕ ಸಮಾಜವನ್ನು ಜಾಗೃತರನ್ನಾಗಿ ಮಾಡಿ ಭಾರತದ ಬೆಳವಣಿಗೆಯಲ್ಲಿ ಮಾಹಿತಿಯುಕ್ತ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ. ಈ ವಿಕ್ಷಿತ್ ಭಾರತ್ ಸರಣಿಯು ಪ್ರತಿಯೊಬ್ಬ ವ್ಯಕ್ತಿಗೂ ಅವರಿಗೆ ಇರುವ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ಸಾರ್ವಜನಿಕ ಜ್ಞಾನ ಉಪಕ್ರಮವಾಗಿ ಒದಗಿಸುವ ಉದ್ದೇಶದೊಂದಿಗೆ ಕಾರ್ಯ ಮಾಡಲಿದೆ ಎಂದರು.












Click it and Unblock the Notifications