ಎಲ್‌ಎಸಿ ವಕೀಲ ಕೆ.ಜಿ.ಅನಿಲ್‍ಕುಮಾರ್ ಗುಡ್‍ವಿಲ್ ರಾಯಭಾರಿಯಾಗಿ ನೇಮಕ
ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಟ್ರೇಡ್ ಕೌನ್ಸಿಲ್ (LACTC) ಶ್ರೀ ಕೆ.ಜಿ .ಅನಿಲ್ ಕುಮಾರ್ ಅವರನ್ನು ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ (LAC) ಪ್ರದೇಶಕ್ಕೆ ಗುಡ್‍ವಿಲ್ ರಾಯಭಾರಿಯನ್ನಾಗಿ ನೇಮಕ ಮಾಡಿರುವುದನ್ನು ಪ್ರಕಟಿಸಲು ಸಂತೋಷವೆನಿಸುತ್ತದೆ. ಈ ನೇಮಕಾತಿಯು ಭಾರತ, ಮಧ್ಯಪ್ರಾಚ್ಯ ಮತ್ತು LAC ಪ್ರದೇಶದ ನಡುವಿನ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಂಬಂಧಗಳನ್ನು ಬಲಪಡಿಸಲು ICL Fincorp ನಡೆಸುತ್ತಿರುವ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ. ಲ್ಯಾಟಿನ್ ಅಮೇರಿಕನ್ ಕೆರಿಬಿಯನ್ ಟ್ರೇಡ್ ಕೌನ್ಸಿಲ್ (LACTC) ಅನ್ನು 2016 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು LAC ಪ್ರಾದೇಶಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅವರಿಂದ ಉದ್ಘಾಟಿಸಲಾಯಿತು.
ಭಾರತ ಮತ್ತು LAC ಪ್ರದೇಶದ ನಡುವಿನ ಸಂಬಂಧವು ಸಂಪೂರ್ಣವಾಗಿ ಬಳಕೆಮಾಡದೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಹಂಚಿಕೊಳ್ಳುವಿಕೆಯ ಹೊರತಾಗಿಯೂ, ವ್ಯಾಪಾರ ಮತ್ತು ಪ್ರವಾಸೋದ್ಯಮ ವಿನಿಮಯವು ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿಲ್ಲ. ಭಾಷಾ ಅಡೆತಡೆಗಳು, ಭೌಗೋಳಿಕ ಅಂತರಗಳು ಮತ್ತು ವಿಭಿನ್ನ ನಿಯಂತ್ರಕ ಚೌಕಟ್ಟುಗಳು ಕೆಲವು ಗಮನಿಸಬಹುದಾದ ಅಡಚಣೆಗಳಾಗಿವೆ. ಇವುಗಳ ಹೊರತಾಗಿ, ಸೀಮಿತ ನೇರ ವಿಮಾನ ಸಂಪರ್ಕ ಮತ್ತು ಪರಸ್ಪರರ ಮಾರುಕಟ್ಟೆಗಳ ತಿಳುವಳಿಕೆಯ ಕೊರತೆಯು ಈ ಸಂಬಂಧಕ್ಕೆ ಮತ್ತಷ್ಟು ಅಡಚಣೆ ಉಂಟುಮಾಡುತ್ತಿದೆ.

ಈ ನಿಟ್ಟಿನಲ್ಲಿ ಶ್ರೀ ಕೆ.ಜಿ.ಅನಿಲ್ ಕುಮಾರ್ ಅವರ ಸದ್ಭಾವನಾ ರಾಯಭಾರಿಯ ನೇಮಕಾತಿ ಈ ಅಡೆತಡೆಗಳಿಗೆ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಹಣಕಾಸು ಮತ್ತು ಪ್ರವಾಸೋದ್ಯಮ ವಲಯಗಳಲ್ಲಿ ಪ್ರಭಾವೀ ವ್ಯಕ್ತಿಯಾಗಿರುವ ICL Fincorp CMD ಶ್ರೀ ಕೆ.ಜಿ. ಅನಿಲ್ ಕುಮಾರ್ ಅವರು ಅಂತರರಾಷ್ಟ್ರೀಯ ಸಹಯೋಗಗಳನ್ನು ಬೆಳೆಸುವಲ್ಲಿ ಮತ್ತು ಭಾರತದ ಜಾಗತಿಕ ಸೌಹಾರ್ದವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ಯೂಬಾದೊಂದಿಗಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರು ಮಾಡುತ್ತಿರುವ ಪ್ರಯತ್ನಗಳು ಸಂಪೂರ್ಣ LAC ಪ್ರದೇಶದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ವಿಸ್ತರಿಸಲು ಭದ್ರ ಬುನಾದಿಯನ್ನು ಹಾಕಿವೆ. ಹೆಚ್ಚುವರಿಯಾಗಿ, ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೂಲಕ LAC ದೇಶಗಳನ್ನು ಹತ್ತಿರ ತರಲು ಕೆಲಸ ಮಾಡುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿರುವ ಗಣನೀಯ ಸಂಖ್ಯೆಯ ಭಾರತೀಯರು ತಮ್ಮ ವ್ಯವಹಾರಗಳನ್ನು ಮತ್ತು ವ್ಯಾಪಾರವನ್ನು ವಿಸ್ತರಿಸಲು ಉತ್ಸುಕರಾಗಿರುವುದರಿಂದ, UAE ಯಲ್ಲಿ ಶ್ರೀ ಕೆ ಜಿ ಅನಿಲ್ ಕುಮಾರ್ ಅವರ ಕಚೇರಿಗಳು ನಿರ್ಣಾಯಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತವೆ.

ಈ ವೇದಿಕೆಯು ಭಾರತೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು LAC ಪ್ರದೇಶಕ್ಕೆ ವಿಸ್ತರಿಸಲು ಅನುವು ಮಾಡಿಕೊಡುತ್ತದೆ,ಅಲ್ಲದೆ UAEಗೆ ನೀರು ಪೂರೈಸುವ ಚಿಲಿ ಮತ್ತು ಪೆರುವಿನಂತಹ ಲ್ಯಾಟಿನ್ ಅಮೇರಿಕನ್ ದೇಶಗಳು ಈ ವರ್ಧಿತ ಸಂಪರ್ಕಗಳಿಂದ ಪ್ರಯೋಜನ ಪಡೆಯುತ್ತವೆ.
LACTC ಅಧ್ಯಕ್ಷರಾದ ಡಾ. ಆಸಿಫ್ ಇಕ್ಬಾಲ್ ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಘನ ನಾಯಕತ್ವದಲ್ಲಿ, ಉದ್ದೇಶಿತ ಉಪಕ್ರಮಗಳು ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳ ಮೂಲಕ ಈ ಅಂತರವನ್ನು ನಿವಾರಿಸಲು ಮಂಡಳಿಯು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಭಾರತ ಸರ್ಕಾರವು LACTC ಕೌನ್ಸಿಲ್ ಪ್ರಸ್ತುತಪಡಿಸಿದ ಶ್ರೀ ಕೆ. ಜಿ ಅನಿಲ ಕುಮಾರ್ ಅವರ ಪ್ರಯತ್ನಗಳನ್ನು ಗುರುತಿಸಿದೆ, ಇದನ್ನು ಕ್ಯೂಬಾ ಸೇರಿದಂತೆ ಹಲವಾರು LAC ಸರ್ಕಾರಗಳು ಪ್ರೀತಿಯಿಂದ ಸ್ವೀಕರಿಸಿವೆ.
ಅವರ ಹೊಸ ಪಾತ್ರದಲ್ಲಿ, ಶ್ರೀ. ಕೆ.ಜಿ. ಅನಿಲ್ ಕುಮಾರ್ ಅವರು ಭಾರತ, ಮಧ್ಯಪ್ರಾಚ್ಯ ಮತ್ತು 33 ಲ್ಯಾಟಿನ್ ಅಮೇರಿಕನ್ ದೇಶಗಳಾದ ಮೆಕ್ಸಿಕೋ, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ, ಎಲ್ ಸಾಲ್ವಡಾರ್, ಕೋಸ್ಟಾ ರಿಕಾ, ಪನಾಮ , ಬೆಲೀಜ್, ಹೈಟಿ, ಕ್ಯೂಬಾ, ಡೊಮಿನಿಕನ್ ರಿಪಬ್ಲಿಕ್, ಜಮೈಕಾ, ಟ್ರಿನಿಡಾಡ್ ಮತ್ತು ಟೊಬಾಗೊ, ಬಹಾಮಾಸ್, ಬಾರ್ಬಡೋಸ್, ಸೇಂಟ್ ಲೂಸಿಯಾ, ಗ್ರೆನಡಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಆಂಟಿಗುವಾ ಮತ್ತು ಬಾರ್ಬುಡಾ, ಡೊಮಿನಿಕಾ, ಸೇಂಟ್ ಕಿಟ್ಸ್ ಮತ್ತು ನೆವಿಸ್, ಬ್ರೆಜಿಲ್, ಕೊಲಂಬಿಯಾ, ಅರ್ಜೆಂಟೀನಾ, ಪೆರು, ವೆನೆಜುವೆಲಾ, ಚಿಲಿ, ಈಕ್ವೆಡಾರ್, ಬೊಲಿವಿಯಾ, ಪರಾಗ್ವೆ, ಉರುಗ್ವೆ, ಸುರಿನಾಮ್ ಮತ್ತು ಗಯಾನಾ ನಡುವೆ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಹಲವಾರು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಹರಿಸುತ್ತಾರೆ.
ಫ್ರೆಂಚ್ ಗಯಾನಾ ಮತ್ತು ಪೋರ್ಟೊ ರಿಕೊದಂತಹ ಇತರ ಆಶ್ರಿತ ಮತ್ತು ಭೂಪ್ರದೇಶಗಳು ಲ್ಯಾಟಿನ್ ಅಮೆರಿಕದ ಭಾಗವಾಗಿದೆ. ಅವರು ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಲು ಮತ್ತು ಅಸ್ತಿತ್ವದಲ್ಲಿರುವ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು ಶ್ರಮಿಸುತ್ತಾರೆ ತಮ್ಮ ವ್ಯಾಪಕವಾದ ಜಾಲವನ್ನು ಮತ್ತು ಮಾರುಕಟ್ಟೆಯ ಗತಿಶೀಲತೆ ಮತ್ತು ಆಳವಾದ ತಿಳುವಳಿಕೆಯನ್ನು ಬಳಸಿಕೊಂಡು, ಶ್ರೀ ಕೆ.ಜಿ. ಅನಿಲ್ ಕುಮಾರ್ ಅವರು ಒಳಗೊಂಡಿರುವ ಎಲ್ಲಾ ಪಕ್ಷಗಳಿಗೆ ವಾಸ್ತವಿಕ ಪ್ರಯೋಜನಗಳನ್ನು ತಲುಪಿಸುವ ಗುರಿಯನ್ನು ಹೊಂದಿದ್ದಾರೆ.
ಪ್ರವಾಸೋದ್ಯಮ ಪ್ರಚಾರವು ಶ್ರೀ ಕೆ.ಜಿ.ಅನಿಲ್ ಕುಮಾರ್ ಅವರ ಕಾರ್ಯಸೂಚಿಯ ಮಹತ್ವದ ಭಾಗವಾಗಿದೆ. ಪ್ರವಾಸೋದ್ಯಮ ಬೆಳವಣಿಗೆಯ ಅಪಾರ ಸಾಮರ್ಥ್ಯವನ್ನು ಗುರುತಿಸಿ, ಅವರು LAC ಪ್ರದೇಶದ ವಿಶಿಷ್ಟ ಸಾಂಸ್ಕೃತಿಕ, ಐತಿಹಾಸಿಕ ಮತ್ತು ನೈಸರ್ಗಿಕ ಆಕರ್ಷಣೆಗಳಿಗೆ ಒತ್ತುಕೊಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಉಪಕ್ರಮಗಳನ್ನು ಮುನ್ನಡೆಸುತ್ತಾರೆ. ಅವರ ಯೋಜನೆಗಳಲ್ಲಿ ಮಾರ್ಕೆಟಿಂಗ್ ಪ್ರಚಾರಗಳು, ಪ್ರವಾಸೋದ್ಯಮ ಮೇಳಗಳು ಮತ್ತು ಪ್ರವಾಸೋದ್ಯಮದ ಮಧ್ಯಸ್ಥಗಾರರೊಂದಿಗೆ ಕಾರ್ಯತಂತ್ರದ ಮೈತ್ರಿಗಳನ್ನು ರೂಪಿಸುವುದು ಒಳಗೊಂಡಿರುತ್ತದೆ.
ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೂ ಸಹಿತ ಶ್ರೀ ಕೆ.ಜಿ.ಅನಿಲ್ ಕುಮಾರ್ ಅವರ ವಿಧಾನದ ಮೂಲಾಧಾರವಾಗಿರುತ್ತದೆ. ಸಾಂಸ್ಕೃತಿಕ ಸಂವಹನ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವ ಮೂಲಕ, ಈ ಪ್ರದೇಶಗಳ ವೈವಿಧ್ಯಮಯ ಜನಸಾಮಾನ್ಯರ ನಡುವೆ ಬಲವಾದ ಸಂಬಂಧಗಳನ್ನು ನಿರ್ಮಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಈ ಸಾಂಸ್ಕೃತಿಕ ರಾಜತಾಂತ್ರಿಕತೆಯು ಸದ್ಭಾವನೆಯನ್ನು ಬೆಳೆಸುತ್ತದೆ ಮತ್ತು ದೇಶಗಳೊಂದಿಗೆ ಹೆಚ್ಚು ದೃಢವಾದ ಆರ್ಥಿಕ ಮತ್ತು ಸಾಮಾಜಿಕ ಸಂಪರ್ಕಗಳಿಗೆ ದಾರಿ ಮಾಡಿಕೊಡುತ್ತದೆ.
ಅವರ ನೇಮಕಾತಿಯ ಕುರಿತು ಪ್ರತಿಕ್ರಿಯಿಸಿದ ICL Fincorp CMD ಶ್ರೀ. ಕೆ ಜಿ ಅನಿಲ್ ಕುಮಾರ್, "LAC ಪ್ರದೇಶಕ್ಕೆ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ನಾನು ತುಂಬಾ ಉಪಕೃತನಾಗಿದ್ದೇನೆ" ಎಂದು ಹೇಳಿದ್ದಾರೆ. ಈ ಪಾತ್ರವು ನಾವು ಹಾಕಿದ ಗಟ್ಟಿ ಅಡಿಪಾಯಗಳ ಮೇಲೆ ನೆಲೆ ನಿಲ್ಲಲು ಮತ್ತು ಇಡೀ LAC ಪ್ರದೇಶದಾದ್ಯಂತ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಒಂದು ಅದ್ಭುತ ಅವಕಾಶವನ್ನು ಒದಗಿಸುತ್ತದೆ. ಭಾರತ, ಮಧ್ಯಪ್ರಾಚ್ಯ ಮತ್ತು LAC ದೇಶಗಳಿಗೆ ಪರಸ್ಪರ ಪ್ರಯೋಜನಗಳನ್ನು ತರುವ ದೃಢವಾದ ವ್ಯಾಪಾರ ಮತ್ತು ಪ್ರವಾಸೋದ್ಯಮ ಕೊಂಡಿಗಳನ್ನು ಬಲಶಾಲಿಗೊಳಿಸಲು ನಾನು ಬದ್ಧನಾಗಿದ್ದೇನೆ."
ಡಾ ಇಕ್ಬಾಲ್ ಅವರು ಹೇಳಿದರು, "ಶ್ರೀ. ಕೆ.ಜಿ. ಅನಿಲ್ ಕುಮಾರ್ ಅವರು ಈ ಪ್ರಮುಖ ಪಾತ್ರವನ್ನು ನಿರ್ವಹಿಸುವುದನ್ನು ನೋಡಲು ನಾವು ರೋಮಾಂಚನಗೊಂಡಿದ್ದೇವೆ. ಸವಾಲುಗಳನ್ನು ಜಯಿಸಲು ಮತ್ತು ಎಲ್‍ಎಸಿ ಪ್ರದೇಶದೊಂದಿಗಿನ ನಮ್ಮ ಸಂಬಂಧಗಳ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ನಾವು ಕೆಲಸ ಮಾಡುವಾಗ ಶ್ರೀ ಅನಿಲ್ ಕುಮಾರ್ ಅವರ ವ್ಯಾಪಕ ಅನುಭವ ಮತ್ತು ಪುಷ್ಠೀಕರಿಸಿದ ನಾಯಕತ್ವವು ಅಮೂಲ್ಯವಾಗಿರುತ್ತದೆ. ಈ ನೇಮಕಾತಿಯು ಈ ಪ್ರದೇಶಗಳಲ್ಲಿ ಆರ್ಥಿಕ ಮತ್ತು ಸಾಂಸ್ಕೃತಿಕ ಪಾಲುದಾರಿಕೆಯನ್ನು ಬೆಳೆಸುವ ನಮ್ಮ ನಿರಂತರ ಪ್ರಯತ್ನಗಳಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
LAC ಟ್ರೇಡ್ ಕೌನ್ಸಿಲ್ ಎಲ್‍ಎಸಿ ಪ್ರದೇಶ ಮತ್ತು ಪ್ರಪಂಚದ ಇತರ ಭಾಗಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸಲು ಶ್ರೀ ಕೆ.ಜಿ.ಅನಿಲ್ ಕುಮಾರ್ ಅವರಿಗೆ ಮಾರ್ಗದರ್ಶನ ನೀಡಲು ಕಟಿಬದ್ಧವಾಗಿದೆ. ಕಾರ್ಯತಂತ್ರದ ಉಪಕ್ರಮಗಳು ಮತ್ತು ನವೀನ ಸಹಯೋಗಗಳ ಮೂಲಕ, ಹೆಚ್ಚು ಅಂತರ್ಸಂಪರ್ಕಿತ ಮತ್ತು ಸಮೃದ್ಧ ಜಾಗತಿಕ ಸಮುದಾಯವನ್ನು ರಚಿಸುವ ಗುರಿಯನ್ನು ಕೌನ್ಸಿಲ್ ಹೊಂದಿದೆ.
ಜಾಗತಿಕ ಸಂಪರ್ಕಗಳನ್ನು ಸಶಕ್ತಗೊಳಿಸುವುದು
ಈ ಪತ್ರಿಕಾ ಪ್ರಕಟಣೆಯು LACಯೊಂದಿಗೆ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಗಟ್ಟಿಗೊಳಿಸುವ LACTCಯ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಕರೆಯಲಾಗುತ್ತದೆ. ಶ್ರೀ ಕೆ.ಜಿ.ಅನಿಲ್ ಕುಮಾರ್ ಗುಡ್‍ವಿಲ್ ರಾಯಭಾರಿತ್ವದಲ್ಲಿ, ಕೌನ್ಸಿಲ್ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲು ಉತ್ತಮ ಅವಕಾಶಗಳನ್ನು ಹೊಂದಿದೆ ಮತ್ತು ಹೆಚ್ಚಿನ ಅಂತರರಾಷ್ಟ್ರೀಯ ಸಹಕಾರ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸುತ್ತದೆ.












Click it and Unblock the Notifications