ಭಯೋತ್ಪಾದನೆ ಮುಕ್ತ ರಾಜ್ಯ ರೂಪಿಸಲು ಪೊಲೀಸರ ನಿರಂತರ ಶ್ರಮ

ಶ್ರೀನಗರ ಅ. 18: ಭಾರತದ ಮುಖುಟಮಣಿ ಜಮ್ಮು & ಕಾಶ್ಮೀರದ ಶೀರಿ ಬಾರಾಮುಲ್ಲಾ ಇಂದು ವಿಶೇಷ ಘಳಿಗೆಗೆ ಸಾಕ್ಷಿಯಾಗಿತ್ತು. ಕಾನ್‌ಸ್ಟೆಬಲ್‌ಗಳ 16ನೇ ಮೂಲ ನೇಮಕಾತಿ ತರಬೇತಿ ಕೋರ್ಸ್‌ನ ಪಾಸಿಂಗ್-ಔಟ್-ಕಮ್ ಅಟೆಸ್ಟೇಶನ್ ಪರೇಡ್ ಇಂದು ಬಾರಾಮುಲ್ಲಾದ ಸಹಾಯಕ ತರಬೇತಿ ಕೇಂದ್ರದಲ್ಲಿ ನಡೆಯಿತು.

ಈ ವಿಶೇಷ ಸಂದರ್ಭದಲ್ಲಿ ಜಮ್ಮು & ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಜಮ್ಮು & ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪರೇಡ್‌ನಲ್ಲಿ ಪಾಲ್ಗೊಂಡು, ಗೌರವ ವಂದನೆಯನ್ನೂ ಸ್ವೀಕರಿಸಿದರು. ನವೆಂಬರ್ 2022 ರಲ್ಲಿ ಒಟ್ಟು 510 ಜನರ ನೇಮಕಾತಿ ತರಬೇತಿ ಆರಂಭವಾಗಿತ್ತು. ಅವರೆಲ್ಲಾ ಇದೀಗ ತರಬೇತಿ ಪೂರ್ಣಗೊಳಿಸಿದ ನಂತರ ಉತ್ತೀರ್ಣರಾಗಿ ಹುದ್ದೆಗೆ ಸೇರಲು ಸಿದ್ಧರಾಗಿದ್ದಾರೆ.

Jammu and Kashmir Police Working Towards a State Free from Terrorism, Says DGP

ಮಹತ್ವದ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿ

ಸಮಾಂಭದಲ್ಲಿ ಬಾರಾಮುಲ್ಲಾ ಜಿಲ್ಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸಫೀನಾ ಬೇಗ್, ಹಣಕಾಸು ಆಯುಕ್ತ ಗೃಹ, (ಹೆಚ್ಚುವರಿ ಮುಖ್ಯ ಕಾರ್ಯದರ್ಶಿ), ಶ್ರೀ ಆರ್.ಕೆ. ಗೋಯಲ್ ಅವರು ಸೇರಿದಂತೆ ಜಮ್ಮು & ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್‌ ಪ್ರಧಾನ ಕಾರ್ಯದರ್ಶಿ ಡಾ. ಮಂದೀಪ್ ಕುಮಾರ್ ಭಂಡಾರಿ, ಅಪರಾಧ ವಿಭಾಗದ ವಿಶೇಷ ಡಿಜಿಪಿ ಶ್ರೀ ಎ.ಕೆ. ಚೌಧರಿ, ಎಡಿಜಿಎಸ್‌ಪಿ ಎಸ್.ಜೆ.ಎಂ. ಗಿಲಾನಿ, ಶ್ರೀ ಎಂ.ಕೆ. ಸಿನ್ಹಾ, ಮತ್ತು ಶ್ರೀ ವಿಜಯ್ ಕುಮಾರ್, ಜಮ್ಮು & ಕಾಶ್ಮೀರದ ಐಜಿಪಿ ಸಿವಿಐ/ಎಚ್‌ಕ್ಯೂಆರ್‌ಎಸ್/ಟ್ರಾಫಿಕ್ ಶ್ರೀ ಬಿ.ಎಸ್. ತುತಿ ಸೇರಿದಂತೆ

ಡಿಐಜಿ ಎನ್‌ಕೆಆರ್ ಶ್ರೀ ವಿವೇಕ್ ಗುಪ್ತಾ, ಕಾಶ್ಮೀರದ ಡಿಐಜಿ ಐಆರ್‌ಪಿ ಶ್ರೀ ಅಬ್ದುಲ್ ಖಯೂಮ್, ಬಾರಾಮುಲ್ಲಾ ಡಿಸಿ ಡಾ. ಸಯೆದ್ ಸೆಹ್ರಿಶ್ ಅಸ್ಗರ್, ಎಸ್‌ಎಸ್‌ಪಿ ಬಾರಾಮುಲ್ಲಾ ಶ್ರೀ ಅಮೋದ್ ಅಶೋಕ್ ನಾಗ್‌ಪುರೆ, ಪ್ರಿನ್ಸಿಪಾಲ್ ಎಸ್‌ಟಿಸಿ ಶೀರಿ ಶ್ರೀ ಮಜೀದ್ ಮಲಿಕ್, ಎಐಎಸ್‌ಜಿ ಆಫ್ ಪಿಎಚ್‌ಕ್ಯೂ, ನಿವೃತ್ತರು ಮತ್ತು ಸೇವೆ ಸಲ್ಲಿಸುತ್ತಿರುವ ಹಿರಿಯ ಪೊಲೀಸ್/ಸಿವಿಲ್ ಅಧಿಕಾರಿಗಳು, ಸೇನೆ ಮತ್ತು ಸಿಎಪಿಎಫ್ ಅಧಿಕಾರಿಗಳು, ತರಬೇತಿ ಪಡೆಯುತ್ತಿರುವವ ಪೋಷಕರು/ಸಂಬಂಧಿಕರು, ನಾಗರಿಕ ಸಮಾಜದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹುತಾತ್ಮ ಅಧಿಕಾರಿಗಳಿಗೆ ಶ್ರದ್ಧಾಂಜಲಿ

ಈ ಸಮಯದಲ್ಲಿ ಹುತಾತ್ಮ ಅಧಿಕಾರಿಗಳಿಗೆ ಶ್ರದ್ಧಾಂಜಲಿ ಕೂಡ ಸಲ್ಲಿಸಲಾಯಿತು. ಜಮ್ಮು & ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇತರ ಗಣ್ಯ ಜೊತೆಗೆ ಹುತಾತ್ಮ ಡಿವೈಎಸ್‌ಪಿ ಎಂ.ಹಿಮಾಯುನ್ ಮುಝ್‌ಮಿಲ್ ಭಟ್ ಸೇರಿದಂತೆ ದೇಶಕ್ಕೋಸ್ಕರ ಸೇವೆಯನ್ನ ಸಲ್ಲಿಸುವಾಗ ಹುತಾತ್ಮರಾದ ಇತರ ಹಲವು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಭಿನಂದನೆ ತಿಳಿಸಿದ ಡಿಜಿಪಿ

ಜಮ್ಮು & ಕಾಶ್ಮೀರ ಡಿಜಿಪಿ ಅವರು, ತಮ್ಮ ಸ್ವಾಗತ ಭಾಷಣದಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಶ್ರೀ ಮನೋಜ್ ಸಿನ್ಹಾ ಅವರು ಸೇರಿದಂತೆ ಇತರ ಗಣ್ಯರಿಗೆ ಸಮಾರಂಭದಲ್ಲಿ ಭಾಗಿ ಆಗಿದ್ದಕ್ಕೆ ಈ ವೇಳೆ ಧನ್ಯವಾದ ಅರ್ಪಿಸಿದರು. ಹಾಗೇ 11 ತಿಂಗಳ ನೇಮಕಾತಿ ತರಬೇತಿಯನ್ನು ಯಶಸ್ವಿಯಾಗಿ ಪಡೆದಿರುವುದಕ್ಕೆ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಶ್ಲಾಘಿಸಿದರು. ಪ್ರಶಸ್ತಿ ವಿಜೇತ ಯೋಧರಿಗೆ ಮತ್ತು ಉತ್ತೀರ್ಣರಾದ ಕಾನ್ಸ್‌ಟೇಬಲ್‌ಗಳ ಕುಟುಂಬ ಮತ್ತು ಬಂಧುಗಳನ್ನು ಇದೇ ವೇಳೆ ಅಭಿನಂದಿಸಿದರು ಡಿಜಿಪಿ.

ಹಾಗೇ ಪ್ರಸಕ್ತ ಬ್ಯಾಚ್‌ನ ಅಭ್ಯರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಬಿಪಿಆರ್&ಡಿ, ಎಂಎಚ್‌ಎ ಅವರ ನಿರ್ದೇಶನದ ಅಡಿ ನಡೆಯುತ್ತಿರುವ ಮಿಷನ್ ಕರಮಯೋಗಿ ಕಾರ್ಯಕ್ರಮ ಸೇರಿದಂತೆ ಇತ್ತೀಚಿನ ತರಬೇತಿ ವಿಧಾನದ ಅಡಿಯಲ್ಲಿ ತರಬೇತಿ ನೀಡಲಾಗಿದೆ ಎಂದು ಇದೇ ವೇಳೆ ಜಮ್ಮು & ಕಾಶ್ಮೀರ ಡಿಜಿಪಿ ತಿಳಿಸಿದರು. ಅಲ್ಲದೆ ಅತ್ಯುತ್ತಮ ತರಬೇತಿಗೆ ಸಹಕರಿಸಿದ ಪ್ರಾಂಶುಪಾಲರು, ಒಳಾಂಗಣ & ಹೊರಾಂಗಣ ಸಿಬ್ಬಂದಿ, ತರಬೇತಿ ಪಡೆದ ಅಭ್ಯರ್ಥಿಗಳಿಗೆ ಇದೇ ವೇಳೆ ಅಭಿನಂದನೆ ಸಲ್ಲಿಸಿದರು.

ಜಮ್ಮು & ಕಾಶ್ಮೀರ ಪೊಲೀಸರ ಬಗ್ಗೆ ಹೆಮ್ಮೆ

ಅಲ್ಲದೆ ಇದೇ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕಾರ್ಯದ ಬಗ್ಗೆ ಆಯೋಗ ಶ್ಲಾಘಿಸಿದ ವಿಚಾರ ಪ್ರಸ್ತಾಪ ಮಾಡಿದರು. ಅಲ್ಲದೆ ಸಾಮರ್ಥ್ಯ ವರ್ಧನಾ ಆಯೋಗ ಇತ್ತೀಚೆಗೆ ನಡೆಸಿದ ವಿವಿಧ ಇಲಾಖೆ ಕೆಲಸದ ಮೌಲ್ಯಮಾಪನ ಮತ್ತು ಸಮೀಕ್ಷೆ ಬಗ್ಗೆ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಜಮ್ಮು & ಕಾಶ್ಮೀರದ ಪೊಲೀಸ್ ಪರಿವಾರವನ್ನು ಅಭಿನಂದಿಸಿದ ಡಿಜಿಪಿ, ಜಮ್ಮು & ಕಾಶ್ಮೀರ ಪೊಲೀಸರ ಪ್ರಯತ್ನಗಳು ಮತ್ತು ಬದ್ಧತೆಯನ್ನು ರಾಷ್ಟ್ರದ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಹಾಗೇ ಕಣಿವೆ ರಾಜ್ಯದಲ್ಲಿ ಶಾಂತಿಯ ಮೂಡಿಸುವ ಭಾಗವಾಗಿ ಹಾಗೂ ಕರ್ತವ್ಯದ ಸಮಯದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಜಮ್ಮು ಮತ್ತು ಕಾಶ್ಮೀರದ ಹುತಾತ್ಮ ಪೊಲೀಸ್ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಪೊಲೀಸ್ ಸಿಬ್ಬಂದಿಗೆ ತರಬೇತಿ ಮುಖ್ಯ

ಹಾಗೇ ಪೊಲೀಸ್ ಸಿಬ್ಬಂದಿಗೆ ತರಬೇತಿ ಮುಖ್ಯವಾಗಿದೆ ಎಂದು ಹೇಳಿದ್ದಾರೆ ಡಿಜಿಪಿ. ಅಲ್ಲದೆ ಈ ವರ್ಷವೇ ಸುಮಾರು 14 ಸಾವಿರ ಸಿಬ್ಬಂದಿಗೆ, ವಿವಿಧ ತರಬೇತಿ ಕೋರ್ಸ್‌ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದರು. ಹಾಗೇ ಒಟ್ಟು 1800 ಸಿಬ್ಬಂದಿಗೆ ಕಮಾಂಡೋ ತರಬೇತಿ ನೀಡಲಾಗಿದ್ದು, ಜಮ್ಮು & ಕಾಶ್ಮೀರ ವಿವಿಧೆಡೆ ಕಾರ್ಯಾಚರಣೆ ಮತ್ತು ಭದ್ರತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದ್ದಾರೆ. ರಾಜ್ಯ ಪೊಲೀಸ್ ಪಡೆಯ ತನಿಖಾ ಸಂಪನ್ಮೂಲವನ್ನ ಹೆಚ್ಚಿಸಲು ಸುಮಾರು 799 ಪೊಲೀಸ್ ಸಿಬ್ಬಂದಿಗೆ ತನಿಖಾ ಕೌಶಲ್ಯ ತರಬೇತಿ ನೀಡಿದ್ದು, 2,500 ಸಿಬ್ಬಂದಿಗೆ ಸೈಬರ್ ಕ್ರೈಂ ನಿರ್ವಹಣಾ ತರಬೇತಿ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದರು.

ಭಯೋತ್ಪಾದಕರ ವಿರುದ್ಧ ಹಗಲಿರುಳು ಹೋರಾಟ

ಹಾಗೇ ಜಮ್ಮು & ಕಾಶ್ಮೀರ ಪೊಲೀಸರು ಮತ್ತು ಬೇರೆ ಭದ್ರತಾ ಪಡೆಗಳ ಜಂಟಿ ಪ್ರಯತ್ನದಿಂದಾಗಿ ಜಮ್ಮು & ಕಾಶ್ಮೀರದಲ್ಲಿ ಶಾಂತಿ ಮರಳುತ್ತಿದೆ ಎಂದು ಡಿಜಿಪಿ ಹೇಳಿದ್ದಾರೆ. ಹಾಗೇ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಗೌರವಾನ್ವಿತ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಮತ್ತು ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ನೀಡಿದ ಬೆಂಬಲ ಶ್ಲಾಘನೀಯ. ಅವರು ಜಮ್ಮು & ಕಾಶ್ಮೀರದಲ್ಲಿ ಶಾಂತಿಯನ್ನ ಮರುಸ್ಥಾಪಿಸಲು ಶ್ರಮಿಸಿದ ಪಡೆಗಳ ಕಾರ್ಯ ಗುರುತಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಹಾಗೇ ಮತ್ತೊಂದು ಕಡೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಭಯೋತ್ಪಾದನೆ ಮುಕ್ತ ಜಮ್ಮು & ಕಾಶ್ಮೀರಕ್ಕೋಸ್ಕರ, ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಡಿಜಿಪಿ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ನಿರಂತರ ಹೋರಾಟ

ಹಾಗೇ ಜಮ್ಮು & ಕಾಶ್ಮೀರ ಪೊಲೀಸ್ ಠಾಣೆಗಳಿಗೆ ಕಾರ್ಯಾಚರಣೆ ಸಾಮರ್ಥ್ಯ ನಿರ್ಮಾಣದ ಬಲ ತುಂಬಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಇಲ್ಲಿನ 21 ಪೊಲೀಸ್ ಠಾಣೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಭಯೋತ್ಪಾದನೆ ಎದುರಿಸಲು ಬೇಕಾದ ಎಲ್ಲಾ ಅಗತ್ಯತೆ & ವಸ್ತುಗಳನ್ನು ಪೂರೈಸಲಾಗಿದೆ ಎಂದು ಜಮ್ಮು & ಕಾಶ್ಮೀರ ಡಿಜಿಪಿ ತಿಳಿಸಿದ್ದಾರೆ. ಇನ್ನುಳಿದ 22 ಪೊಲೀಸ್ ಠಾಣೆಗಳನ್ನೂ ಇದೇ ರೀತಿ ಅಭಿವೃದ್ಧಿ ಮಾಡುವ ಬಗ್ಗೆ ಡಿಜಿಪಿ ತಿಳಿಸಿದರು.

4000 ಪೊಲೀಸ್ ಸಿಬ್ಬಂದಿಗೆ ಬಡ್ತಿ

ಇದೇ ವೇಳೆ ಜಮ್ಮು & ಕಾಶ್ಮೀರ ಡಿಜಿಪಿ ಕಲ್ಯಾಣ ಕ್ರಮಗಳನ್ನೂ ಉಲ್ಲೇಖಿಸಿದರು. ಪೊಲೀಸ್ ಸಿಬ್ಬಂದಿಗೆ ಮತ್ತು ಎಸ್‌ಪಿಒಗಳ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಈ ವೇಳೆ ಪೊಲೀಸ್ ಅಧಿಕಾರಿಗಳ ಬಡ್ತಿ ವಿಚಾರವನ್ನೂ ಕೂಡ ಡಿಜಿಪಿ ಪ್ರಸ್ತಾಪ ಮಾಡಿದರು. ಜಮ್ಮು & ಕಾಶ್ಮೀರದ 4000 ಪೊಲೀಸ್ ಸಿಬ್ಬಂದಿಗೆ ವಿವಿಧ ಶ್ರೇಣಿಗಳಲ್ಲಿ ಬಡ್ತಿ ನೀಡಲಾಗಿದೆ. ಹಾಗೂ ಕೆಲವು ದಿನಗಳ ಹಿಂದಷ್ಟೇ 27 ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಹುದ್ದೆಗೆ ಬಡ್ತಿ ನೀಡಿದ್ದು, ಇದೊಂದು ದಾಖಲೆ ಎಂದಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಜಮ್ಮು & ಕಾಶ್ಮೀರದ ಪೊಲೀಸರ ಪ್ರಸ್ತಾವನೆ ಅನುಮೋದಿಸಿ ಬೆಂಬಲ ನೀಡಿದ್ದಕ್ಕಾಗಿ ಅವರು ಜಮ್ಮು & ಕಾಶ್ಮೀರದ ಆಡಳಿತಕ್ಕೂ ಧನ್ಯವಾದ ಅರ್ಪಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ನೇಮಕಾತಿ ಬಗ್ಗೆಯೂ ಪ್ರಸ್ತಾಪಿಸಿ 2 ಗಡಿ ಬೆಟಾಲಿಯನ್‌ ಸೇರಿ & 2 ಮಹಿಳಾ ಬೆಟಾಲಿಯನ್‌ಗಳನ್ನ ಇತ್ತೀಚೆಗೆ ನೇಮಕ ಮಾಡಿಕೊಳ್ಳಲಾಗಿದೆ ಎಂದರು. ಅಲ್ದೆ ಈ ಕ್ರಮ ಗಡಿ ಭದ್ರತೆ ಬಲಪಡಿಸುತ್ತದೆ & ಮಹಿಳೆಯರ ಹಕ್ಕು ರಕ್ಷಿಸುತ್ತದೆ ಎಂದು ತಿಳಿದರು.

ಶೀರಿ ಎಸ್‌ಟಿಸಿ ಪ್ರಾಂಶುಪಾಲ ಶ್ರೀ ಮಜೀದ್ ಮಲಿಕ್ ಅವರು ಮಾತನಾಡಿ ತಮ್ಮ ಭಾಷಣದಲ್ಲಿ ಹಲವು ವಿಚಾರ ಪ್ರಸ್ತಾಪ ಮಾಡಿದರು. ಉತ್ತೀರ್ಣರಾದ ಕಾನ್‌ಸ್ಟೆಬಲ್ಸ್ ವಿವರ ತಿಳಿಸಿದರು. ಅಲ್ಲದೆ ಅವರಿಗೆ ನೀಡಲಾದ ತರಬೇತಿಯ ಬಗ್ಗೆಯೂ ಸಂಕ್ಷಿಪ್ತವಾಗಿ ತಿಳಿಸಿದರು. ಮತ್ತೊಂದು ಕಡೆ ತರಬೇತಿ ಕೇಂದ್ರದ ಆವರಣದಲ್ಲಿ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕೂಡ ವಿವರ ನೀಡಿದ್ದಾರೆ.

ಪ್ರಶಸ್ತಿ ಪುರಸ್ಕೃತ ಅಭ್ಯರ್ಥಿಗಳು

ಇದೇ ವೇಳೆ ಕಾನ್ಸ್ಟೇಬಲ್ ಜಿ.ಎಚ್. ಮೊಹಮ್ಮದ್, ನಂ 1618/ಬಿಎಲ್‌ಎ ಅವರನ್ನು ಆಲ್ ರೌಂಡ್ ಬೆಸ್ಟ್ ಎಂದು ಘೋಷಿಸಲಾಯಿತು. ಹಾಗೇ ಅವರಿಗೆ ಸೆಲೆಕ್ಷನ್ ಗ್ರೇಡ್ ಕಾನ್‌ಸ್ಟೆಬಲ್ ಹುದ್ದೆಗೆ ಸ್ಪಾಟ್ ಔಟ್ ಆಫ್ ಟರ್ನ್ ಬಡ್ತಿ ನೀಡಲಾಯಿತು. ಕಾನ್ಸ್‌ಟೇಬಲ್ ಸೈಯದ್ ಮುಜ್ತಬಾ, ನಂ. 491/ದೋಡಾ ಅವರನ್ನು 2ನೇ ಆಲ್ ರೌಂಡ್ ಬೆಸ್ಟ್ ಎಂದು ಘೋಷಣೆ ಮಾಡಲಾಯಿತು ಮತ್ತು ಕಾನ್‌ಸ್ಟೆಬಲ್ ಹುದ್ದೆಗೆ ಬಡ್ತಿ ನೀಡಲಾಯಿತು. ಕಾನ್ಸ್‌ಟೇಬಲ್ ಮೋಹಿತ್ ಕುಮಾರ್, ನಂ. 699/ಐಆರ್‌ಪಿ 7ನೇ ಬಿಎನ್ ಅವರನ್ನು 3ನೇ ಆಲ್ ರೌಂಡ್ ಬೆಸ್ಟ್ ಎಂದು ಘೋಷಿಸಲಾಯಿತು.

ಕಾನ್ಸ್‌ಟೇಬಲ್ ವಾಸು ಶರಮ್, ನಂ 1039/ರಜೌರಿ ಅವರಿಗೆ ಒಳಾಂಗಣದಲ್ಲಿ ಪ್ರಥಮ ಸ್ಥಾನ, ಮತ್ತು ಕಾನ್ಸ್‌ಟೇಬಲ್ ಗೌತಮ್ ಲಾಲ್, ನಂ 1200/ರಜೌರಿ ಹೊರಾಂಗಣದಲ್ಲಿ ಪ್ರಥಮ ಸ್ಥಾನ ಪಡೆದರು. ಕಾನ್ಸ್ಟೇಬಲ್ ಇಶ್ಫಾಕ್ ನಜೀರ್ ಮತ್ತು ಮಹಿಳಾ ಕಾನ್ಸ್ಟೇಬಲ್ ಯುಕ್ತ ಸಮೋತ್ರ, 736/ಐಆರ್‌ಪಿ 15ನೇ ಬಿಎನ್ ಅವರು ಶ್ರೇಣಿಯ ವರ್ಗೀಕರಣದಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾನ್ಸ್‌ಟೇಬಲ್ ಮೋಹಿತ್ ಕುಮಾರ್, ನಂ. 699/ ಐಆರ್‌ಪಿ 7 ನೇ ಬಿಎನ್ ಪರೇಡ್ ಕಮಾಂಡರ್ ಆಗಿದ್ದರೆ, ಕಾನ್ಸ್‌ಟೇಬಲ್ ತಬಿಶ್ ರಂಜಾನ್, ನಂ 455/ 2ನೇ ಪರೇಡ್ ಕಮಾಂಡರ್ ಆಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+