ಜೈಲಲ್ಲಿದ್ದ ಮಾಡೆಲ್ ಬಿಡಿಸಲು ಅಪ್ಪನ ಹಣವನ್ನೇ ದೋಚಿದ್ದ!

ಕೊಚ್ಚಿ, ನವೆಂಬರ್. 23: ಆನ್ ಲೈನ್ ವೇಶ್ಯಾವಾಟಿಕೆ ಜಾಲ ಮತ್ತು ಮಕ್ಕಳ ಮಾರಾಟಕ್ಕೆ ಸಂಬಂಧಿಸಿ ಕೇರಳ ಪೊಲೀಸರು ಬಂಧಿಸಿರುವ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ಮಾಡಿದ ಕರ್ಮಕಾಂಡಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಮಾಡೆಲ್ ಒಬ್ಬಳನ್ನು ಜೈಲಿನಿಂದ ಬಿಡಿಸಲು ಸ್ವಂತ ಮನೆಯಿಂದಲೇ ಪಶುಪಾಲನ್ 1.5 ಲಕ್ಷ ಕಳ್ಳತನ ಮಾಡಿದ್ದ ಎಂಬ ಸಂಗತಿ ಬಹಿರಂಗವಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಶುಪಾಲನ್ ತಂದೆ, ಮಾಡೆಲ್‌ ಒಬ್ಬಳು ಕರ್ನಾಟಕದ ಜೈಲಲ್ಲಿ ಬಂಧಿತಳಾಗಿದ್ದಳು. ಆಕೆಯನ್ನು ಬಿಡಿಸಲು, ನನ್ನ ಮಗಳ ಮದುವೆಗೆಂದು ಸಂಗ್ರಹಿಸಿದ್ದ 1.5 ಲಕ್ಷ ರೂ. ಹಣವನ್ನು ರಾಹುಲ್‌ ದೋಚಿದ್ದ. ಮತ್ತೆ ಹಿಂದಕ್ಕೆ ಬಂದು ಮನೆಯ ಪೀಠೊಪಕರಣ ಹಾಳು ಮಾಡಿದ್ದ ಎಂದಿದ್ದಾರೆ.[ಕೇರಳದ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ್ದು ಹೇಗೆ?]

Kiss Of Love Organizer Rahul Pasupalan arrest was no surprise

ಮಗ ರಾಹುಲ್‌ ಮತ್ತು ಸೊಸೆ ರೇಶ್ಮಿ ಯಾವುದೋ ಅವ್ಯವಹಾರ ಮಾಡುತ್ತಿದ್ದಾರೆ ಎಂಬ ಸುಳಿವಿತ್ತು. ಅವರ ಬಂಧನದ ನನಗೆ ಯಾವ ಆಘಾತವನ್ನು ಉಂಟುಮಾಡಲಿಲ್ಲ ಎಂದು ಹೇಳಿದ್ದಾರೆ.[ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್ ಲವ್ ನಾಯಕಿ]

ಆರೋಪಿಗಳು ನ್ಯಾಯಾಲಯಕ್ಕೆ: ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವೆರಗೆ ಒಟ್ಟು 11 ಜನರನ್ನು ಬಂಧನ ಮಾಡಲಾಗಿದೆ. ನವೆಂಬರ್ 23 ರಂದು ನ್ಯಾಯಾಲಯದ ಎದರು ಹಾಜರು ಪಡಿಸಲಾಗುತ್ತಿದ್ದು ಪೊಲೀಸರು ರಕ್ಷಿಸಿರುವ ಬೆಂಗಳೂರು ಮೂಲದ ಇಬ್ಬರು ಬಾಲಕಿಯರನ್ನು ಪಾಲಕರೊಂದಿಗೆ ಕಳುಹಿಸಿಕೊಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
Are You Over 18?
By entering the site, you agree to our terms and conditions