ಕೇರಳದ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ್ದು ಹೇಗೆ?

ಕೊಚ್ಚಿ, ನವೆಂಬರ್. 20: ಆನ್ ಲೈನ್ ವೇಶ್ಯಾವಾಟಿಕೆ ಜಾಲ ಮತ್ತು ಮಕ್ಕಳ ಮಾರಾಟಕ್ಕೆ ಸಂಬಂಧಿಸಿ ಕೇರಳ ಪೊಲೀಸರು ಕಿಸ್ ಆಫ್ ಲವ್ ಅಭಿಯಾನ ಆರಂಭಿಸಿದ್ದ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ಆರ್ ನಾಯರ್ ಅವರನ್ನು ಬಂಧಿಸಿದ್ದು ಹೇಗೆ? ಎಂಬುದಕ್ಕೆ ವಿವರವಾದ ಉತ್ತರ ಇಲ್ಲಿದೆ.

ಆಪರೇಶನ್ ಬಿಗ್ ಡ್ಯಾಡಿ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಡುಂಬಸಿರಿಯ ಯುವ ಜೋಡಿ ಸೇರಿದಂತೆ ಎಂಟು ಜೊಡಿ ಯುವಕ ಯುವತಿಯರನ್ನು ವಶಕ್ಕೆ ಪಡೆದಿದ್ದರು. ಕೇರಳವನ್ನು ನಡುಗಿಸಿದ್ದ ಗ್ಯಾಂಗ್ ಸ್ಟರ್ ಕಾಸರಗೋಡು ನಿವಾಸಿ ಅಕ್ಬರ್ ನನ್ನು ಸಹ ಪೊಲೀಸರು ಬಂಧನ ಮಾಡಿದ್ದರು.[ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್ ಲವ್ ನಾಯಕಿ]

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅಪ್ರಾಪ್ತರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿದ್ದ ಗಂಡ ಹೆಂಡತಿ ಇಂದು ಪೊಲೀಸರು ಬಂಧನದಲ್ಲಿದ್ದಾರೆ. ಬೆಂಗಳೂರಿನಿಂದಲೇ ಬಾಲಕಿಯರನ್ನು ಸಾಗಾಟ ಮಾಡುತ್ತಿದ್ದರು ಎಂಬ ಆತಂಕಾರಿ ಅಂಶವು ವಿಚಾರಣೆ ವೇಳೆ ಬಯಲಾಗಿದೆ. ಪೊಲೀಸರ ಕಾರ್ಯಾಚರಣೆ ಯಾವ ರೀತಿ ಇತ್ತು? ಎಂಬುದರ ವಿವರ ಇಲ್ಲಿದೆ.

ಸಾಮಾಜಿಕ ತಾಣ ಬಳಕೆ

ಸಾಮಾಜಿಕ ತಾಣ ಬಳಕೆ

ಫೇಸ್ ಬುಕ್ ನ 'ಕೊಚು ಸುಂದರಿಕಲ್' ಪೇಜ್ ನ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಲೈಂಗಿಕ ವಿಚಾರಗಳಿಗೆ ಸಂಬಂಧಿಸಿದ ಬರಹಗಳು ಮತ್ತು ಮಕ್ಕಳ ಕುರಿತ ಕೆಲ ಅಶ್ಲೀಲ ಬರಹಗಳನ್ನು ಪತ್ತೆ ಮಾಡಿದ್ದರು. ಒಮ್ಮೆ ಈ ಪೇಜ್ ಗೆ ನಿರ್ಭಂಧ ಹೇರಿದ್ದರು ಮತ್ತೆ ತೆರೆದುಕೊಂಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.

ಲೀನೇಶ್ ಮ್ಯಾಥ್ಯೂ 2ನೇ ಆರೋಪಿ

ಲೀನೇಶ್ ಮ್ಯಾಥ್ಯೂ 2ನೇ ಆರೋಪಿ

ಪ್ರಕರಣದ 2ನೇ ಆರೋಪಿ ಲೀನೇಶ್ ಮ್ಯಾಥ್ಯೂ ಎಂಬ ಮಹಿಳೆ ದಕ್ಷಿಣದ ವಿವಿಧ ರಾಜ್ಯಗಳಿಂದ ಮಕ್ಕಳನ್ನು ಕೊಚ್ಚಿಗೆ ತರುವ ಕೆಲಸ ಮಾಡುತ್ತಿದ್ದಳು.

ತನಿಖೆ ನಡದಿದ್ದು ಹೇಗೆ?

ತನಿಖೆ ನಡದಿದ್ದು ಹೇಗೆ?

ಫೇಸ್ ಬುಕ್ ಪೇಜ್ ನಲ್ಲಿನ ದ್ವಂದ್ವಾರ್ಥದ ಸಂದೇಶ ಓದುಕೊಂಡ ಪೊಲೀಸರು ನೀಡಿದ್ದ ನಂಬರ್ ಗೆ ಕರೆ ಮಾಡಿದ್ದಾರೆ. ನಮಗೆ ಹುಡುಗಿಯರು ಬೇಕು ಎಂದು ಕೇಳಿದ್ದಾರೆ.

5 ಲಕ್ಷ ರು. ಆಗುತ್ತೆ

5 ಲಕ್ಷ ರು. ಆಗುತ್ತೆ

ಪೊಲೀಸರು ನಮಗೆ 5 ಹುಡುಗಿಯರು ಬೇಕು ಎಂದು ಹೇಳಿದಾಗ ಅತ್ತ ಕಡೆಯಿಂದ ಪ್ರತಿಕ್ರಿಯೆ ನೀಡಿದ ಅಕ್ಬರ್ 5 ಲಕ್ಷ ರು. ಆಗುತ್ತೆ ಎಂದು ಹೇಳುತ್ತಾನೆ.

ಅಡ್ವಾನ್ಸ್ ನೀಡಿದ ಪೊಲೀಸರು

ಅಡ್ವಾನ್ಸ್ ನೀಡಿದ ಪೊಲೀಸರು

ಮಾಹಿತಿ ದೃಢಪಟ್ಟ ತಕ್ಷಣ ಇದರ ಹಿಂದಿರುವ ಎಲ್ಲರನ್ನು ಬಂಧಿಸಬೇಕು ಎಂದು ತೀರ್ಮಾನ ಮಾಡಿದ ಪೊಲೀಸರು ಅಕ್ಬರ್ ಗೆ ಅಡ್ವಾನ್ಸ್ ಹಣವನ್ನು ನೀಡುತ್ತಾರೆ.

ಬೆಂಗಳೂರಿಂದ ಹುಡುಗಿಯರನ್ನು ಕರೆತಂದರು

ಬೆಂಗಳೂರಿಂದ ಹುಡುಗಿಯರನ್ನು ಕರೆತಂದರು

ಇದಾದ ನಂತರ ಲೀನೇಶ್ ಮ್ಯಾಥ್ಯೂ ಎಂಬ ಮಹಿಳೆ ಬೆಂಗಳೂರಿನಿಂದ 5 ಹುಡುಗಿಯರನ್ನು ಕರೆದುಕೊಂಡು ಕೊಚ್ಚಿಗೆ ಬರುತ್ತಾಳೆ. ಪೊಲೀಸರು ಇನ್ನಿಬ್ಬರು ಹುಡುಗಿಯರು ಬೇಕು ಎಂದಾಗ ಅಕ್ಬರ್ ಮತ್ತಿಬ್ಬರನ್ನು ಕಳುಹಿಸಿಕೊಡುತ್ತಾನೆ.

ರೇಶ್ಮಿ ಬಂಧನ

ರೇಶ್ಮಿ ಬಂಧನ

ಪೊಲೀಸರು ಹೇಳಿದ ಹೋಟೆಲ್ ಗೆ ಹಣ ತೆಗೆದುಕೊಳ್ಳಲು ತನ್ನ ಆರು ವರ್ಷದ ಮಗನೊಂದಿಗೆ ಆಗಮಿಸಿದ ಪ್ರಕರಣದ ರೂವಾರಿ ರೇಶ್ಮಿಯನ್ನು ಪೊಲೀಸರು ಬಂಧಿಸುತ್ತಾರೆ.

ಡಿಜಿಟಲ್ ಮಾಹಿತಿ

ಡಿಜಿಟಲ್ ಮಾಹಿತಿ

ಆರೋಪಿಗಳ ಮೊಬೈಲ್ ಮತ್ತು ಮ್ಯಾಪ್ ಟಾಪ್ ವಶಕ್ಕೆ ಪಡೆದ ಪೊಲೀಸರಿಗೆ ದಂಧೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ದೊರೆತವು. ಈ ಹಿನ್ನೆಲೆಯಲ್ಲಿ ಒಟ್ಟು 13 ಜನರನ್ನು ಬಂಧಿಸಿದರು.

ಯುಎಇಗೂ ನಂಟು

ಯುಎಇಗೂ ನಂಟು

ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಉಮರ್ ಎಂಬಾತ ಯುಎಇಯಲ್ಲಿ ಕೆಲಸ ಮಾಡುತ್ತಿದ್ದ. ಈತ ಎಲ್ಲ ಬಗೆಯ ಆನ್ ಲೈನ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ.

ಎಲ್ಲ ವೆಬ್ ತಾಣ ಪರಿಶೀಲನೆ

ಎಲ್ಲ ವೆಬ್ ತಾಣ ಪರಿಶೀಲನೆ

ಅಶ್ಲೀಲ ಸಂದೇಶಗಳನ್ನು ಬಿತ್ತರಿಸುವ ಎಲ್ಲ ವೆಬ್ ತಾಣಗಳ ಬಗ್ಗೆ ಕೇರಳದ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಇದೇ ಬಗೆಯ ವ್ಯವಹಾರ ನಡೆಸುತ್ತಿರುವ ಇತರ ಫೇಸ್ ಬುಕ್ ಪೇಜ್ ಮತ್ತು ತಾಣಗಳ ಬಗೆಗೂ ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರಕರಣದ ಸಂಪೂರ್ಣ ವಿಡಿಯೋ

ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆದ ಪೊಲೀಸರ ಕಾರ್ಯಾಚರಣೆ ಪ್ರಕರಣದ ಸಂಪೂರ್ಣ ವಿಡಿಯೋ ನೋಡಿಕೊಂಡು ಬನ್ನಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
Are You Over 18?
By entering the site, you agree to our terms and conditions