’ಕಡಲ ತೀರದ’ಲ್ಲಿ ಹೊಸಬರ ಕನಸು: ಮಾರ್ಚ್ 3ಕ್ಕೆೆ ಚಿತ್ರ ತೆರೆಗೆ!

ಕಡಲ ತೀರದ ಭಾರ್ಗವ ಚಿತ್ರದ ಮೂಲಕ ಪಟೇಲ್ ವರುಣ್ ರಾಜ್ ನಟನಾಗಿ ಹಾಗೂ ನಿರ್ಮಾಪಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಲಿದ್ದಾರೆ.

'ಕಡಲ ತೀರದ ಭಾರ್ಗವ' ಎನ್ನುವ ಹೆಸರಿನಲ್ಲಿ ಸಿನಿಮಾವೊಂದು ತಯಾರಾಗುತ್ತಿರುವುದು ನಿಮಗೆ ಗೊತ್ತಿರಬಹುದು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ಈ ಚಿತ್ರ, ಈಗ ಬಿಡುಗಡೆಯ ಹಂತಕ್ಕೆೆ ಬಂದಿದೆ. ಈಗಾಗಲೇ ಶೂಟಿಂಗ್, ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ 'ಕಡಲ ತೀರದ ಭಾರ್ಗವ' ಇದೇ ಮಾರ್ಚ್ 3ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೇ 'ಕಡಲ ತೀರದ ಭಾರ್ಗವ' ಚಿತ್ರದ ಟೀಸರ್, ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಸದ್ಯ ಚಿತ್ರತಂಡ ಭರದಿಂದ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ.

ಇನ್ನು 'ಕಡಲ ತೀರದ ಭಾರ್ಗವ' ಎಂದ ಕೂಡಲೇ ಮೊದಲು ನೆನಪಾಗುವುದು ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತರ ಹೆಸರು. ಆದರೆ ಈ ಸಿನಿಮಾಕ್ಕೂ ಶಿವರಾಮ ಕಾರಂತರ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೊದು ಚಿತ್ರತಂಡದ ಸ್ಪಷ್ಟನೆ. ಈ ಸಿನಿಮಾದಲ್ಲಿ ನಾಯಕ ಹೆಸರು ಭಾರ್ಗವ ಎಂಬುದಾಗಿದ್ದು, ಆತ ಕಡಲ ತೀರದವನಾಗಿರುತ್ತಾಾನೆ. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ ಎಂತಲೂ ಕರೆಯುತ್ತಾರೆ. ಭಾರ್ಗವ ರಾಮ ಸಾವಿಲ್ಲದವನಾಗಿದ್ದು, ದುಷ್ಟ ಕ್ಷತ್ರಿಯರನ್ನು ದ್ವಂಸ ಮಾಡುತ್ತಾಾನೆ. ನಾಯಕನ ಪಾತ್ರದಲ್ಲೂ ಇಂಥ ಗುಣಗಳಿರುವುದರಿಂದ ಚಿತ್ರದ ಕಥಾಹಂದರಕ್ಕೆ ಸೂಕ್ತ ಎಂಬ ಕಾರಣಕ್ಕೆೆ 'ಕಡಲ ತೀರದ ಭಾರ್ಗವ' ಎಂಬ ಟೈಟಲ್ ಇಟ್ಟಿದ್ದೇವೆ ಎಂಬುದು ಚಿತ್ರತಂಡ ವಿವರಣೆ.

 Patel Varun Raj entering Sandalwood as an actor and producer with the movie Kadala Theeradha Bhargava

ನವ ಪ್ರತಿಭೆ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ 'ಕಡಲ ತೀರದ ಭಾರ್ಗವ' ಚಿತ್ರದಲ್ಲಿ ಶೃತಿ ಪ್ರಕಾಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆೆ ಪನ್ನಗ ಸೋಮಶೇಖರ್ ನಿರ್ದೇಶನವಿದೆ. ಸದ್ಯ ತನ್ನ ಟೈಟಲ್ ಮತ್ತು ಕಂಟೆಂಟ್‌ನಿಂದ ಗಮನ ಸೆಳೆದಿರುವ 'ಕಡಲ ತೀರದ ಭಾರ್ಗವ'ನ ಅಬ್ಬರ ತೆರೆಮೇಲೆ ಹೇಗಿರಲಿದೆ ಎಂಬುದು ಮಾರ್ಚ್ ಮೊದಲವಾರ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+