ಪ್ರಿ-ಅಪ್ರೂವ್ಡ್ ಪರ್ಸನಲ್ ಲೋನ್ಸ್: ಸುಲಭ ಅರ್ಹತೆ, ಪ್ರಮುಖ ಪ್ರಯೋಜನಗಳು
ತ್ವರಿತವಾಗಿ ಹಣವನ್ನು ಬಹುತೇಕ ಯಾವುದೇ ಪೇಪರ್‌ವರ್ಕ್ ಇಲ್ಲದೇ ಪಡೆಯಲು ಪ್ರಿ-ಅಪ್ರೂವ್ಡ್ ಲೋನ್ ಆಫರ್‌ಗಳು ಅನುವು ಮಾಡುತ್ತವೆ. ಇದರಿಂದ ಅವು ಅನುಕೂಲಕರ ಆಯ್ಕೆಯಾಗಿರಲಿವೆ. ಪ್ರಿ-ಅಪ್ರೂವ್ಡ್ ಸಾಲಗಳು ಸಾಮಾನ್ಯ ಸಾಲಗಳಾಗಿರುತ್ತವೆ. ಇದರ ವೈಶಿಷ್ಟ್ಯತೆಯೆಂದರೆ, ಸಾಲದಾತರನ್ನು ನೀವು ಸಂಪರ್ಕಿಸುವ ಅಗತ್ಯವಿಲ್ಲ. ಬದಲಿಗೆ, ಸಾಲದಾತರೇ ನಿಮಗೆ ಮೊದಲೇ ಮಂಜೂರು ಮಾಡಿರುತ್ತಾರೆ.
ಸಾಲದಾತರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುವ ಮತ್ತು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿರುವ ಇತಿಹಾಸ ಹೊಂದಿರುವ ಮತ್ತು ಸ್ಥಿರ ಆದಾಯವನ್ನು ಹೊಂದಿರುವವರು ಈ ರೀತಿಯ ಸಾಲಕ್ಕೆ ಪ್ರಮುಖ ಗ್ರಾಹಕರಾಗಿರುತ್ತಾರೆ. ಆದರೆ, ಪ್ರಿ-ಅಪ್ರೂವ್ಡ್ ಲೋನ್ಸ್ ಆಫರ್‌ಗಳನ್ನು ನೀಡುವುದಕ್ಕೂ ಮೊದಲೇ ಗ್ರಾಹಕರ ಸಾಲ ಅರ್ಹತೆಯ ಸಂಪೂರ್ಣ ಪರಿಶೀಲನೆಯನ್ನು ಸಾಲದಾತರು ಮಾಡಿರುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ನಿಮ್ಮ ಅನಿರೀಕ್ಷಿತ ವೆಚ್ಚಗಳನ್ನು ಕವರ್ ಮಾಡಲು ನೀವು ಪ್ರಿ-ಅಪ್ರೂವ್ಡ್ ಸಾಲಕ್ಕಾಗಿ ಹುಡುಕುತ್ತಿದ್ದರೆ, ಬಜಾಜ್ ಫೈನಾನ್ಸ್ ಒದಗಿಸುವ ಇನ್‌ಸ್ಟಾ ಪರ್ಸನಲ್ ಲೋನ್ ನಿಮಗೆ ಅತ್ಯಂತ ಸೂಕ್ತವಾದದ್ದಾಗಿರಬಹುದು. ಪ್ರಸ್ತುತ ಗ್ರಾಹಕರು ಪ್ರಿ-ಅಪ್ರೂವ್ಡ್ ಆಫರ್‌ಗಳನ್ನು ಪಡೆಯುತ್ತಾರೆ. ಹೊಸ ಗ್ರಾಹಕರು ತಮಗಾಗಿ ಪ್ರಿ-ಅಪ್ರೂವ್ಡ್ ಮಿತಿಗಳನ್ನು ಜನರೇಟ್ ಮಾಡಿಕೊಳ್ಳಬಹುದು. ನಿಮ್ಮ ಕೊಡುಗೆಯನ್ನು ಪರಿಶೀಲಿಸಲು ನಿಮಗೆ ಬೇಕಿರುವುದು ಮೊಬೈಲ್ ಸಂಖ್ಯೆ ಮತ್ತು ಒಟಿಪಿ.
ಪ್ರಿ-ಅಪ್ರೂವ್ಡ್ ಸಾಲಗಳಿಗೆ ಅರ್ಹತೆ ಮಾನದಂಡ:
ವಯಸ್ಸಿನ ಮಿತಿ, ಸಿಬಿಲ್ ಸ್ಕೋರ್, ಉದ್ಯೋಗ ವಿಧ ಮತ್ತು ಮಾಸಿಕ ಸಂಬಳ ಸೇರಿದಂತೆ ಹಲವು ಅಗತ್ಯಗಳನ್ನು ಸಾಮಾನ್ಯ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಗ್ರಾಹಕರು ಪೂರೈಸಬೇಕಾಗುತ್ತದೆ. ಆದರೆ, ಪ್ರಿ-ಅಪ್ರೂವ್ಡ್ ಸಾಲಗಳನ್ನು ಈಗಾಗಲೇ ಅನುಮೋದಿಸಿರುವುದರಿಂದ, ಯಾವುದೇ ಅರ್ಹತೆ ಮಾನದಂಡವನ್ನು ನೀವು ಪರಿಶೀಲಿಸಬೇಕಿಲ್ಲ.
ನಿಮಗೆ ಇನ್‌ಸ್ಟಂಟ್ ಲೋನ್ ಅನ್ನು ಪ್ರಸ್ತಾಪಿಸುವುದಕ್ಕೂ ಮೊದಲೇ ಕ್ರೆಡಿಟ್ ಸ್ಕೋರ್, ಮರುಪಾವತಿ ಇತಿಹಾಸ ಮತ್ತು ಇತರೆ ಅಂಶಗಳಿಗಾಗಿ ನಿಮ್ಮ ಪ್ರೊಫೈಲ್ ಅನ್ನು ಸಾಲದಾತರು ಪರಿಶೀಲಿಸಿರುತ್ತಾರೆ.
ಪ್ರಿ-ಅಪ್ರೂವ್ಡ್ ಸಾಲಗಳ ಪ್ರಯೋಜನಗಳು:
ಪ್ರಿ-ಅಪ್ರೂವ್ಡ್ ಲೋನ್ ಅನ್ನು ಪಡೆಯುವಲ್ಲಿ ಹಲವು ಅನುಕೂಲಗಳಿವೆ. ಈ ಕೆಳಗೆ ಕೆಲವು ವಿವರಗಳನ್ನು ನಾವು ಪಟ್ಟಿ ಮಾಡಿದ್ದು, ಇವು ನಿಮಗೆ ಸೂಕ್ತ ಆಯ್ಕೆ ಮಾಡಲು ನೆರವಾಗಬಹುದು:
1. ತ್ವರಿತ ಬಟವಾಡೆ:
ಫಂಡ್ ಬಟವಾಡೆ ಮಾಡುವ ವೇಗವು ಪ್ರಿ-ಅಪ್ರೂವ್ಡ್ ಪರ್ಸನಲ್ ಲೋನ್‌ಗಳಲ್ಲಿ ಪ್ರಮುಖ ಪ್ರಯೋಜನವಾಗಿರುತ್ತದೆ. ಉದಾಹರಣೆಗೆ, ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ಅನ್ನು ಬಹುತೇಕ ಪ್ರಕರಣಗಳಲ್ಲಿ ಅರ್ಜಿ ಹಾಕಿದ ನಿಮ್ಮ ಬ್ಯಾಂಕ್ 30 ನಿಮಿಷಗಳಿಂದ 4 ಗಂಟೆಗಳೊಳಗೆ ಪ್ರಕ್ರಿಯಗೊಳಿಸುತ್ತದೆ.
ಏಕೆಂದರೆ, ಸಾಲದಾತರು ಈಗಾಗಲೇ ಸಾಲಗಾರರ ಸಾಲ ಅರ್ಹತೆಯನ್ನು ಪರಿಶೀಲಿಸಿರುವುದರಿಂದ ಸಾಲ ಅರ್ಜಿ ಪ್ರಕ್ರಿಯೆಗೆ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಸಮಯ ಮುಖ್ಯವಾಗಿದ್ದಾಗ, ಉದಾಹರಣೆಗೆ ತುರ್ತು ಪರಿಸ್ಥಿತಿ ಅಥವಾ ಅನಿರೀಕ್ಷಿತ ಸನ್ನಿವೇಶ ಇದ್ದಾಗ ತಕ್ಷಣ ಹಣ ಪಡೆಯುವುದು ಅತ್ಯಂತ ಅಗತ್ಯವಿರುತ್ತದೆ.
2. ತಕ್ಷಣದ ಪ್ರಕ್ರಿಯೆಗೊಳಿಸುವಿಕೆ
ಈಗಾಗಲೇ ಸಾಲಗಾರರಿಂದ ಸಾಲ ಪಡೆದಿರುವ ಗ್ರಾಹಕರು ಅಥವಾ ಈಗಾಗಲೇ ಯಾವುದೋ ರೀತಿಯ ಸಂಬಂಧವನ್ನು ಹೊಂದಿರುವ ಗ್ರಾಹಕರು ಸರಳ ಅರ್ಜಿ ಸಲ್ಲಿಸುವಿಕೆ ವಿಧಾನವನ್ನು ಬಳಸಿ ಪ್ರಿ-ಅಪ್ರೂವ್ಡ್ ಡೀಲ್‌ಗಳ ಪ್ರಯೋಜನ ಪಡೆದುಕೊಳ್ಳಬಹುದು. ಸಾಲದಾತರ ಬಳಿ ಈಗಾಗಲೇ ನಿಮ್ಮ ಕೆವೈಸಿ ದಾಖಲೆ ಇರುತ್ತದೆ. ಆದರೆ, ಕೆಲವು ಪ್ರಕರಣಗಳಲ್ಲಿ ಹೆಚ್ಚುವರಿ ದಾಖಲೆಗಳನ್ನು ನೀವು ಸಲ್ಲಿಸಬೇಕಾಗಬಹುದು.
3. ಫ್ಲೆಕ್ಸಿಬಲ್ ಸಾಲ ಅವಧಿ
ಯಾವುದೇ ಇಬ್ಬರು ಗ್ರಾಹಕರು ಒಂದೇ ರೀತಿಯ ಅಗತ್ಯ ಅಥವಾ ಪರಿಸ್ಥಿತಿಗಳನ್ನು ಹೊಂದಿರುವುದಿಲ್ಲ. ನಿಮಗೆ ಒಂದು ವರ್ಷದ ಮರುಪಾವತಿ ಅವಧಿ ಬೇಕಾಗಬಹುದು. ಇನ್ನೂ ಕೆಲವರಿಗೆ ಹೆಚ್ಚು ಸಮಯ ಬೇಕಾಗಬಹುದು. ಉದಾಹರಣೆಗೆ, ಬಜಾಜ್ ಫಿನ್‌ಸರ್ವ್ ಇನ್‌ಸ್ಟಾ ಪರ್ಸನಲ್ ಲೋನ್ ಪ್ರಸ್ತಾಪದ ಅವಧಿಯು 6 ರಿಂದ 60 ತಿಂಗಳುಗಳ ವರೆಗೆ ಇರುತ್ತದೆ.
ಪ್ರಕ್ರಿಯೆಯ ಭಾಗವಾಗಿ, ನಿಮ್ಮ ಅಗತ್ಯಗಳು ಮತ್ತು ಆರ್ಥಿಕ ಸ್ಥಿತಿಗಳಿಗೆ ಉತ್ತಮವಾಗಿ ಹೊಂದುವ ಅವಧಿಯನ್ನು ನೀವು ನಿರ್ಧರಿಸಬಹುದು. ಯಾವುದೇ ಕಾಗದಪತ್ರ ಸಲ್ಲಿಸದೇ ಪ್ರಿ-ಅಪ್ರೂವ್ಡ್ ಲೋನ್ ಆಫರ್‌ಗಳಿಗಾಗಿ ಬಳಕೆದಾರರು ಅರ್ಜಿ ಸಲ್ಲಿಸಬಹುದಾಗಿದ್ದರೂ, ಕೆಲವು ಸಾಲದಾತರಿಗೆ ಕನಿಷ್ಠ ಕೆವೈಸಿ ಮತ್ತು ಖಾತೆ ಮಾಹಿತಿ ಸಾಲುತ್ತದೆ.
ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿರುವುದರಿಂದ ಪ್ರಕ್ರಿಯೆ ಸರಳವಾಗಿರುತ್ತದೆ ಮತ್ತು ತ್ವರಿತವಾಗಿರುತ್ತದೆ. ಸಾಲದಾತರ ವೆಬ್‌ಸೈಟ್‌ನಲ್ಲಿ ಗ್ರಾಹಕರು ಇನ್‌ಸ್ಟಂಟ್ ಸಾಲ ಕೊಡುಗೆಗಳನ್ನು ಪರಿಶೀಲಿಸಬಹುದು ಮತ್ತು ವಿಶಾಲ ರೀತಿಯ ಗುರಿಗಳನ್ನು ಸಾಧಿಸಲು ಸಹಾಯ ಮಾಡುವುದಕ್ಕಾಗಿ ಕೆಲವೇ ನಿಮಿಷಗಳಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications