ಭಾರತದ ಅಭಿವೃದ್ಧಿಯಲ್ಲಿ ಅದಾನಿ ಗ್ರೂಪ್ ಪಾತ್ರಕ್ಕೆ ಜೆಫ್ರಿ ಸ್ಯಾಕ್ಸ್ ಮೆಚ್ಚುಗೆ

Adani Group: ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಡಿ. ಸ್ಯಾಕ್ಸ್ ಅವರು ಭಾರತದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಬದಲಾವಣೆಗೆ ಅದಾನಿ ಗ್ರೂಪ್ ನೀಡಿರುವ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಈ ಗ್ರೂಪ್‌ ದೇಶದ ಪ್ರಗತಿ ಮತ್ತು ಬದಲಾವಣೆಯ ಪ್ರಮುಖ ಪಾತ್ರವಹಿಸಿದೆ ಎಂದು ಬಣ್ಣಿಸಿದ್ದಾರೆ.

ವಾರಾಣಸಿಯಲ್ಲಿ ಸೋಮವಾರ (ಅಕ್ಟೋಬರ್ 02) ನಡೆದ ಆಧುನಿಕ ಸವಾಲುಗಳಿಗೆ ಪ್ರಾಚೀನ ಜ್ಞಾನ (Ancient Wisdom for Modern Challenges) ಎಂಬ ವಿಷಯದ ಮೇಲಿನ ವಿಶ್ವ ಸಿಂಪೋಸಿಯಂ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಯಾಕ್ಸ್, ಅದಾನಿ ಗ್ರೂಪ್ ಮತ್ತು ಅದಾನಿ ಫೌಂಡೇಶನ್ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಸುಸ್ಥಿರ ಅಭಿವೃದ್ಧಿಗಾಗಿ ಮಾಡುತ್ತಿರುವ ಮಹತ್ವದ ಕೆಲಸಗಳನ್ನು ಶ್ಲಾಘಿಸಿದರು. ಜೆಫ್ರಿ ಸ್ಯಾಕ್ಸ್ ಅವರು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ಜಾಲದ ಅಧ್ಯಕ್ಷರೂ ಆಗಿದ್ದಾರೆ.

Jeffrey Sachs Praises Adani Group s Role in India s Infrastructure and Economic Transformation

ಕೌಟುಂಬಿಕ ಉದ್ಯಮಗಳು ಮತ್ತು ಸಾಮಾಜಿಕ ಜವಾಬ್ದಾರಿ

ಕೌಟುಂಬಿಕ ನಾಯಕತ್ವ ಹೊಂದಿರುವ ಉದ್ಯಮಗಳ ಜವಾಬ್ದಾರಿಯ ಕುರಿತು ಮಾತನಾಡಿದ ಸ್ಯಾಕ್ಸ್, ಕೌಟುಂಬಿಕ ಹೆಸರನ್ನು ಹೊಂದಿರುವ ಉದ್ಯಮಗಳು ಕೇವಲ ವಾಣಿಜ್ಯ ಲಾಭಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅವು ಕುಟುಂಬದ ಗುರುತು, ಮೌಲ್ಯಗಳು, ಪರಂಪರೆ ಮತ್ತು ಸಮಾಜದ ಬಗೆಗಿನ ಹೊಣೆಗಾರಿಕೆಯನ್ನು ಪ್ರತಿನಿಧಿಸುತ್ತವೆ. ಅಲ್ಲದೆ, ಉದ್ಯಮಗಳು ಕೇವಲ ಹಣಕಾಸಿನ ಲಾಭವನ್ನು ನೋಡದೆ, ತಾವು ಕಾರ್ಯಾಚರಣೆ ನಡೆಸುವ ಸಮಾಜ ಮತ್ತು ಸಮುದಾಯಗಳಿಗೆ ಧನಾತ್ಮಕ ಕೊಡುಗೆಯನ್ನು ನೀಡಬೇಕು ಎಂದು ಅವರು ಹೇಳಿದರು.

ಕಾರ್ಪೊರೇಟ್ ವಲಯದ ಸವಾಲುಗಳು

ವಾಣಿಜ್ಯ ಹಿತಾಸಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಗಳ ನಡುವಿನ ಸಮತೋಲನ ಕಾಯ್ದುಕೊಳ್ಳುವುದರಲ್ಲಿ ಎದುರಾಗುವ ಸವಾಲುಗಳನ್ನು ವಿವರಿಸಲು ಯೂನಿಲಿವರ್ ಮಾಜಿ ಸಿಇಒ ಪೌಲ್ ಪೋಲ್‌ಮನ್ ಅವರ ಉದಾಹರಣೆಯನ್ನು ನೀಡಿದರು. ಸಂಸ್ಥೆಯನ್ನು ಸಾಮಾಜಿಕ ಹೊಣೆಗಾರಿಕೆಯತ್ತ ಕೊಂಡೊಯ್ಯಲು ಪ್ರಯತ್ನಿಸಿದಾಗ ಷೇರುದಾರರು ಮತ್ತು ಮಾರುಕಟ್ಟೆ ವಿಶ್ಲೇಷಕರಿಂದ ತೀವ್ರ ಒತ್ತಡ ಎದುರಿಸಬೇಕಾಯಿತು ಎಂದು ಸ್ಯಾಕ್ಸ್ ನೆನಪಿಸಿಕೊಂಡರು.

ಕೃತಕ ಬುದ್ಧಿಮತ್ತೆ ಕುರಿತು ಎಚ್ಚರಿಕೆ

ವೇಗವಾಗಿ ಬೆಳೆಯುತ್ತಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಕ್ಷೇತ್ರದಲ್ಲಿ ಎದುರಾಗುತ್ತಿರುವ ಅಪಾಯಗಳ ಕುರಿತು ಸ್ಯಾಕ್ಸ್ ಕಳವಳ ವ್ಯಕ್ತಪಡಿಸಿದರು. 'ಆಂಥ್ರೋಪಿಕ್' (Anthropic)ನಂತಹ ತಂತ್ರಜ್ಞಾನ ಸಂಸ್ಥೆಗಳ ಉದಾಹರಣೆ ನೀಡುತ್ತಾ, ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ಬೀರುವ ತಂತ್ರಜ್ಞಾನಗಳ ವಾಣಿಜ್ಯೀಕರಣ ಮತ್ತು ಐಪಿಒ ತರುವ ಆತುರವನ್ನು ಪ್ರಶ್ನಿಸಿದರು.

ಕೇವಲ ವಾಣಿಜ್ಯೀಕರಣ ಲಾಭದ ಕಡೆಗೆ ಗಮನ ಹರಿಸುವ ಬದಲು, ಈ ಹೊಸ ತಂತ್ರಜ್ಞಾನಗಳಿಂದ ಸಮಾಜದ ಮೇಲಾಗುವ ಅಪಾಯಗಳನ್ನು ತಡೆಯುವುದರ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಕೌಟುಂಬಿಕ ಉದ್ಯಮಗಳ ಸಾಮಾಜಿಕ ಜವಾಬ್ದಾರಿ ಮತ್ತು ಹೊಸ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಕೆಗೆ ತರುವ ಅಗತ್ಯತೆಯನ್ನು ಅವರು ಎತ್ತಿಹಿಡಿದರು.

ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ

ಭಾರತದ ಬಂದರುಗಳು, ವಿಮಾನ ನಿಲ್ದಾಣಗಳು, ಇಂಧನ, ಸಾರಿಗೆ ಮತ್ತು ಹಸಿರು ಇಂಧನ (Green Energy) ಸೇರಿದಂತೆ ವಿವಿಧ ವಲಯಗಳಲ್ಲಿ ಅದಾನಿ ಗ್ರೂಪ್ ವಹಿಸುತ್ತಿರುವ ಪಾತ್ರವು ದೇಶದ ಮೂಲಸೌಕರ್ಯ ಬೆಳೆವಣಿಗೆಗೆ ಪ್ರಮುಖ ಶಕ್ತಿಯಾಗಿದೆ ಎಂದು ಸ್ಯಾಕ್ಸ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೌಟುಂಬಿಕ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ

ಅಮೆರಿಕದ ಸ್ಪೇಸ್‌ಎಕ್ಸ್ ಮತ್ತು ಅಮೆಜಾನ್‌ನಂತಹ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಹೋಲಿಸಿದರೆ, ಭಾರತದ ಅದಾನಿ ಗ್ರೂಪ್‌ನಂತಹ ಕೌಟುಂಬಿಕ ನಾಯಕತ್ವ ಹೊಂದಿರುವ ಸಂಸ್ಥೆಗಳು ಕೇವಲ ಷೇರುದಾರರ ಲಾಭವನ್ನಷ್ಟೇ ನೋಡುವುದಿಲ್ಲ. ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಮತ್ತು ಕೌಟುಂಬಿಕ ಮೌಲ್ಯಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಪ್ರದರ್ಶಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+