ನವಿ ಮುಂಬೈಗೆ ವಿಮಾನಗಳ ಸ್ಥಳಾಂತರ:ಇಂಡಿಗೋ, ಏರ್ ಇಂಡಿಯಾ ಗ್ರೂಪ್ ಮತ್ತು ಅದಾನಿ ಏರ್‌ಪೋರ್ಟ್ಸ್ ಮಹತ್ವದ ಘೋಷಣೆ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಳೆಯ ಟರ್ಮಿನಲ್ 1 ರ ಅಭಿವೃದ್ಧಿ ಕಾಮಗಾರಿಯನ್ನ ಕೈಗೊಳ್ಳಲು, ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಏರ್ ಇಂಡಿಯಾ ಗ್ರೂಪ್ ತಮ್ಮ ಕಾರ್ಯಾಚರಣೆಯ ಒಂದು ಭಾಗವನ್ನ ಹೊಸ ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿವೆ.

ಈ ಎರಡೂ ವಿಮಾನ ನಿಲ್ದಾಣಗಳನ್ನ ನಿರ್ವಹಿಸುತ್ತಿರುವ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಜೊತೆಗೆ ವಿಮಾನಯಾನ ಸಂಸ್ಥೆಗಳು ಜಂಟಿಯಾಗಿ ಈ ಮಹತ್ವದ ನಿರ್ಧಾರವನ್ನ ಪ್ರಕಟಿಸಿವೆ.

Flights Shift from Mumbai to Navi Mumbai Airport IndiGo amp amp Air India Announce Phased Transition

ನವಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಕಾರ್ಯಾಚರಣೆ

ಫೆಬ್ರವರಿ 2027 ರಿಂದ ನವಿ ಮುಂಬೈ ವಿಮಾನ ನಿಲ್ದಾಣದಿಂದ ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನ ಆರಂಭಿಸಲು ಇಂಡಿಗೋ ಅಂತಿಮ ಹಂತದ ಸಿದ್ಧತೆ ನಡೆಸಿದೆ. ಮುಂಬೈ ವಿಮಾನ ನಿಲ್ದಾಣದಿಂದ ಬಹ್ರೇನ್, ರಿಯಾದ್, ದಮ್ಮಾಮ್, ಜೆದ್ದಾ, ಮದೀನಾ, ಕುವೈತ್, ರಾಸ್ ಅಲ್ ಖೈಮಾ, ಫುಜೈರಾ, ಮಸ್ಕತ್, ಢಾಕಾ ಮತ್ತು ಜಕಾರ್ತಾಗೆ ಪ್ರತಿದಿನ ಸಂಚರಿಸುವ 12 ಅಂತರಾಷ್ಟ್ರೀಯ ವಿಮಾನಗಳನ್ನು ನವಿ ಮುಂಬೈಗೆ ಸ್ಥಳಾಂತರಿಸಲಾಗುವುದು. ಇದರ ಜೊತೆಗೆ ಕಠ್ಮಂಡುವಿಗೆ ಹೊಸ ದೈನಂದಿನ ಸೇವೆಯನ್ನು ಸೇರಿಸಲಾಗುತ್ತದೆ.

ಜುಲೈ 2027ರ ವೇಳೆಗೆ ಅಂತರಾಷ್ಟ್ರೀಯ ತಾಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಲಿದೆ. ಪ್ರಯಾಣಿಕರಿಗೆ ಸುಗಮ ಸಂಪರ್ಕವನ್ನು ಒದಗಿಸಲು ಅಗತ್ಯವಿರುವ ದೇಶೀಯ ವಿಮಾನಗಳನ್ನು ಸಹ ಇಲ್ಲಿಗೆ ವರ್ಗಾಯಿಸಲಾಗುತ್ತದೆ.

ಇದು ಮುಂಬೈ ವಿಮಾನ ನಿಲ್ದಾಣದಲ್ಲಿ ದಟ್ಟಣೆಯನ್ನ ಕಡಿಮೆ ಮಾಡಲಿದ್ದು, ಭವಿಷ್ಯದಲ್ಲಿ A320/321 ಮತ್ತು A321XLR ವಿಮಾನಗಳನ್ನು ಬಳಸಿಕೊಂಡು ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ಗೆ ಹೊಸ ಸೇವೆಗಳನ್ನ ಆರಂಭಿಸಲು ಇಂಡಿಗೋಗೆ ಅನುಕೂಲವಾಗಲಿದೆ.

ಟರ್ಮಿನಲ್ 1ರ ನವೀಕರಣದ ವೇಳೆ ಅಗತ್ಯವಿರುವ ಎಲ್ಲಾ ಹೆಚ್ಚಿನ ಹೊಂದಾಣಿಕೆಗಳನ್ನ ಟರ್ಮಿನಲ್ 2ರಲ್ಲಿ ಕಲ್ಪಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಂತ ಹಂತವಾಗಿ ಸ್ಥಳಾಂತರ

ಏರ್ ಇಂಡಿಯಾ ಗ್ರೂಪ್ ಕೂಡ ತನ್ನ ಪಶ್ಚಿಮ ಏಷ್ಯಾ ಸೇವೆಗಳನ್ನ ಹಂತ ಹಂತವಾಗಿ ನವಿ ಮುಂಬೈಗೆ ಸ್ಥಳಾಂತರಿಸಲಿದೆ. ಡಿಸೆಂಬರ್ 2026ರಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ 4 ದೈನಂದಿನ ದೇಶೀಯ ವಿಮಾನಗಳನ್ನ ನವಿ ಮುಂಬೈನಿಂದ ನಿರ್ವಹಿಸಲಿದೆ. ಜನವರಿ 2027ರಿಂದ ಕುವೈತ್ ಮತ್ತು ಓಮನ್‌ಗೆ ಸೇವೆಗಳು ಆರಂಭವಾಗಲಿವೆ.

2027ರ ಬೇಸಿಗೆಯ ವೇಳೆಗೆ ಜೆದ್ದಾ, ರಿಯಾದ್, ದಮ್ಮಾಮ್, ದೋಹಾ, ಮಸ್ಕತ್ ಮತ್ತು ಶಾರ್ಜಾಗೆ ಸಂಪೂರ್ಣ ಸೇವೆಗಳು ವರ್ಗಾವಣೆಯಾಗಲಿವೆ. ಇದರಿಂದ ಮುಂಬೈ ಮಹಾನಗರ ಪ್ರದೇಶದಾದ್ಯಂತ ಸಂಪರ್ಕ ಬಲಗೊಳ್ಳಲಿದ್ದು, ಐತಿಹಾಸಿಕ ಸ್ಲಾಟ್‌ಗಳನ್ನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮುಂಬೈ ವಿಮಾನ ನಿಲ್ದಾಣ ಟರ್ಮಿನಲ್ 1 ನವೀಕರಣ ಏಕೆ?

ತಜ್ಞರು ಹೇಳಿರುವ ಸುರಕ್ಷತಾ ಕಾಳಜಿಗಳನ್ನ ಪರಿಹರಿಸಲು ಮತ್ತು ಟರ್ಮಿನಲ್ ಅನ್ನ ಜಾಗತಿಕ ಮಟ್ಟಕ್ಕೆ ಸುಸಜ್ಜಿತಗೊಳಿಸಲು ಟರ್ಮಿನಲ್ 1ರ ಪುನರಾಭಿವೃದ್ಧಿ ತುಂಬ ಮುಖ್ಯ. ಇದು ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನ 15 ಮಿಲಿಯನ್‌ನಿಂದ 20 ಮಿಲಿಯನ್‌ಗೆ (ಶೇ. 33ರಷ್ಟು) ಹೆಚ್ಚಿಸಲಿದೆ. ಇದಕ್ಕಾಗಿ ಆರಂಭಿಕ ಹಂತದಲ್ಲಿ ಸುಮಾರು 5 ಮಿಲಿಯನ್ ಪ್ರಯಾಣಿಕರನ್ನು ನವಿ ಮುಂಬೈಗೆ ವರ್ಗಾಯಿಸುವ ಗುರಿ ಹೊಂದಲಾಗಿದೆ.

ಸಿಎಸ್‌ಎಂಐಎ ವಾರ್ಷಿಕ 55 ಮಿಲಿಯನ್ ಪ್ರಯಾಣಿಕರಲ್ಲಿ ಕೇವಲ 9% ರಷ್ಟು ಮಾತ್ರ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲಿದ್ದು, ಉಳಿದ 91% ರಷ್ಟು ಸಂಚಾರ ಮುಂಬೈ ವಿಮಾನ ನಿಲ್ದಾಣದಿಂದಲೇ ಎಂದಿನಂತೆ ಮುಂದುವರಿಯಲಿದೆ. ಯೋಜನೆ ಪೂರ್ಣಗೊಂಡ ನಂತರ ಹಳೆಯ ಸ್ಲಾಟ್‌ಗಳನ್ನ ಮರುಸ್ಥಾಪಿಸಲಾಗುವುದು.

ನವಿ ಮುಂಬೈ ವಿಮಾನ ನಿಲ್ದಾಣದ ಮೂಲಸೌಕರ್ಯ ಮತ್ತು ಸಿದ್ಧತೆ

ಸುಮಾರು 18 ತಿಂಗಳ ಸುದೀರ್ಘ ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನವಿ ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್ 1 ಆರಂಭದಲ್ಲಿ 20 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಭವಿಷ್ಯದಲ್ಲಿ ಇದನ್ನು 90 ಮಿಲಿಯನ್‌ಗೆ ವಿಸ್ತರಿಸುವ ಯೋಜನೆಯಿದೆ.

ಸಿಡ್ಕೊ (CIDCO) ನಿರ್ಮಿಸಿರುವ ಮೂರು ಹೊಸ ಸೇತುವೆಗಳ ಮೂಲಕ ಪನ್ವೇಲ್ ಕ್ರೀಕ್ ಮತ್ತು ಗಧಿ ನದಿಗೆ ಅಡ್ಡಲಾಗಿ ಉತ್ತಮ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದು ಅಟಲ್ ಸೇತು, ಉಲ್ವೆ ಕರಾವಳಿ ರಸ್ತೆ ಮತ್ತು NH-4B ಗೆ ಸಂಪರ್ಕವನ್ನ ಸುಲಭಗೊಳಿಸಿದೆ.

ಈ ಹೊಸ ವಿಮಾನ ನಿಲ್ದಾಣವು ಡಿಜಿ ಯಾತ್ರಾ, ಸ್ವಯಂಚಾಲಿತ ಬ್ಯಾಗೇಜ್ ನಿರ್ವಹಣೆ, ಸುಧಾರಿತ ಕಾರ್ಗೋ ಮತ್ತು ಕೋಲ್ಡ್-ಚೈನ್ ಸೌಲಭ್ಯಗಳನ್ನು ಹೊಂದಿರಲಿದೆ. ಈ ಎರಡು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಿಂದ ಮುಂಬೈ ನಗರವು ಅಂತರಾಷ್ಟ್ರೀಯ ಪ್ರಯಾಣಿಕರ ಅತಿದೊಡ್ಡ 'ಡ್ಯುಯಲ್-ಏರ್‌ಪೋರ್ಟ್' ಕೇಂದ್ರವಾಗಿ ಹೊರಹೊಮ್ಮಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+