ಭವಿಷ್ಯದ ಇಂಜಿನಿಯರ್‌ಗಳಿಗೆ 3 ವಾರಗಳ ಸಮಗ್ರ ತರಬೇತಿ: ಅದಾನಿ ವಿಶ್ವವಿದ್ಯಾಲಯದ 'ಇಂಡಕ್ಷನ್ ಪ್ರೋಗ್ರಾಂ 2026' ಯಶಸ್ವಿ ಮುಕ್ತಾಯ

ಅಹಮದಾಬಾದ್: ಹೊಸ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಅಂದರೆ ಬಿ.ಟೆಕ್ ಹಾಗೂ ಇಂಟಿಗ್ರೇಟೆಡ್ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನ ಉನ್ನತ ಶಿಕ್ಷಣಕ್ಕೆ ತಯಾರಿ ಮಾಡುವ ಉದ್ದೇಶದಿಂದ ಅದಾನಿ ವಿಶ್ವವಿದ್ಯಾಲಯವು ಆಯೋಜಿಸಿದ್ದ 3 ವಾರಗಳ 'ಇಂಡಕ್ಷನ್ ಕಾರ್ಯಕ್ರಮ 2026 ' ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜುಲೈ 13 ರಿಂದ ಜುಲೈ 31ರವರೆಗೆ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನದ ಜೊತೆಗೆ ಉದ್ಯಮ ವಲಯದ ಪ್ರಾಯೋಗಿಕ ಪರಿಚಯ ಮತ್ತು ನಾಯಕತ್ವದ ಕೌಶಲ್ಯಗಳನ್ನ ತಿಳಿಸಿಕೊಡಲಾಯಿತು.

ಶಾಲಾ-ಕಾಲೇಜಿನಿಂದ ವಿಶ್ವವಿದ್ಯಾಲಯದ ಉನ್ನತ ವ್ಯಾಸಂಗಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನದ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

Adani

ಇಂಜಿನಿಯರಿಂಗ್ ಇಂಡಕ್ಷನ್ ಕಾರ್ಯಕ್ರಮ: ಮೂರು ಹಂತಗಳ ಸಮಗ್ರ ತರಬೇತಿ

ಅದಾನಿ ವಿಶ್ವವಿದ್ಯಾಲಯವು ಇಂಡಕ್ಷನ್ ಕಾರ್ಯಕ್ರಮವನ್ನ ಅತ್ಯಂತ ವ್ಯವಸ್ಥಿತವಾಗಿ ಮೂರು ಹಂತಗಳಲ್ಲಿ ನಡೆಸಿತ್ತು. ಮೊದಲಿಗೆ ಆನ್‌ಲೈನ್ ಮೂಲಕ ಬ್ರಿಡ್ಜ್ ಕೋರ್ಸ್ ನಡೆಸಿ ಗಣಿತ, ಭೌತಶಾಸ್ತ್ರ ಮತ್ತು ಸಂವಹನ ಕೌಶಲ್ಯಗಳ ಬೇಸಿಕ್‌ ಪಾಠಗಳನ್ನ ಬೋಧಿಸಲಾಯಿತು. ಶೈಕ್ಷಣಿಕ ಪಠ್ಯಕ್ರಮದ ಒತ್ತಡವಿಲ್ಲದೆ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಮೂಲಭೂತ ಅಂಶಗಳನ್ನ ಸುಲಭವಾಗಿ ಅರ್ಥಮಾಡಿಕೊಳ್ಳಲು ಈ ಇದು ನೆರವಾಯಿತು.

ಐಐಟಿ ತಜ್ಞರ ಉಪನ್ಯಾಸ

ಎರಡನೇ ಹಂತದಲ್ಲಿ ಒಂದು ವಾರಗಳ ಕಾಲ ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ತಜ್ಞರಿಂದ ಆನ್‌ಲೈನ್ ಉಪನ್ಯಾಸಗಳನ್ನ ಆಯೋಜಿಸಲಾಗಿತ್ತು. ಐಐಟಿ ಬಾಂಬೆ, ಎನ್‌ಐಟಿ ರೂರ್ಕೆಲಾ, ಐಐಟಿ ಇಂದೋರ್, ಪಂಡಿತ್ ದೀನದಯಾಳ್ ಎನರ್ಜಿ ಯೂನಿವರ್ಸಿಟಿ ಹಾಗೂ ಪಿಎಸ್‌ಇ2 ಕನ್ಸಲ್ಟಿಂಗ್ ಸಂಸ್ಥೆಗಳ ಹಿರಿಯ ಪ್ರಾಧ್ಯಾಪಕರು ಮತ್ತು ಸಂಶೋಧಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿಶೇಷವಾಗಿ ಇಂದಿನ ಬೇಡಿಕೆ ಕ್ಷೇತ್ರಗಳಾದ ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಹೊಸ ಇಂಜಿನಿಯರಿಂಗ್ ಆವಿಷ್ಕಾರಗಳು ಮತ್ತು ಮುಂಬರುವ ನೂತನ ತಂತ್ರಜ್ಞಾನಗಳ ಕುರಿತು ಆಳವಾದ ಮಾಹಿತಿ ನೀಡಲಾಯಿತು.

ಉದ್ಯಮ ರಂಗದ ನಾಯಕರೊಂದಿಗೆ ಸಂವಾದ ಮತ್ತು ನಾಯಕತ್ವ ಕೌಶಲ್ಯ

ಮೂರನೇ ಹಂತವಾಗಿ ಕ್ಯಾಂಪಸ್‌ನಲ್ಲಿ ನಡೆದ ನೇರ ಕಾರ್ಯಕ್ರಮಗಳಲ್ಲಿ ದೇಶದ ಪ್ರಸಿದ್ಧ ಉದ್ಯಮ ರಂಗದ ಗಣ್ಯರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ್ ಬನ್ಸಾಲ್, ವಿಶಾಖ ಗ್ರೂಪ್ ಅಧ್ಯಕ್ಷ ಜಿಗೀಶ್ ದೋಷಿ ಹಾಗೂ ಅದಾನಿ ಗ್ರೂಪ್‌ನ ಜಂಟಿ ಅಧ್ಯಕ್ಷ ಅಜಯ್ ಕುಮಾರ್ ತೋಮರ್ ಅವರು ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣಗಳು, ವೃತ್ತಿಪರತೆ, ಸಮಸ್ಯೆಗಳನ್ನಾ ಎದುರಿಸುವ ಸಾಮರ್ಥ್ಯ ಹಾಗೂ ನಿರಂತರ ಕಲಿಕೆಯ ಮಹತ್ವವನ್ನ ವಿವರಿಸಿದರು.

ಪ್ರೊವೋಸ್ಟ್ ಡಾ. ಧವಲ್ ಪೂಜಾರ ಹೇಳಿಕೆ

ಇಂಡಕ್ಷನ್ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಂಶೋಧನಾ ವ್ಯವಸ್ಥೆ, ಪರೀಕ್ಷಾ ಪ್ರಕ್ರಿಯೆ, ಡಿಜಿಟಲ್ ಲರ್ನಿಂಗ್ ಪ್ಲಾಟ್‌ಫಾರ್ಮ್, ರ‍್ಯಾಗಿಂಗ್ ವಿರೋಧಿ ಕ್ರಮಗಳು ಹಾಗೂ ಲೈಂಗಿಕ ಕಿರುಕುಳ ತಡೆ (POSH) ನೀತಿಗಳ ಕುರಿತು ಜಾಗೃತಿ ಮೂಡಿಸಲಾಯಿತು. ಜೊತೆಗೆ ಸಾಮಾಜಿಕ ಜಾಲತಾಣಗಳ ಜವಾಬ್ದಾರಿಯುತ ಬಳಕೆಯ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಅದಾನಿ ವಿಶ್ವವಿದ್ಯಾಲಯದ ಪ್ರೊವೋಸ್ಟ್ ಪ್ರೊ. (ಡಾ.) ಧವಲ್ ಪೂಜಾರ, "ವಿಶ್ವವಿದ್ಯಾಲಯವು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಆ ಜ್ಞಾನವನ್ನು ನಿಜವಾದ ಜಗತ್ತಿನ ಸವಾಲುಗಳನ್ನ ಪರಿಹರಿಸಲು ಹೇಗೆ ಬಳಸಬೇಕು ಎಂಬುದನ್ನು ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ವಿಮರ್ಶಾತ್ಮಕವಾಗಿ ಆಲೋಚಿಸಿ, ಜವಾಬ್ದಾರಿಯುತ ಇಂಜಿನಿಯರ್‌ಗಳಾಗಿ ರೂಪುಗೊಳ್ಳಬೇಕು ಎನ್ನುವುದೇ ನಮ್ಮ ಗುರಿ," ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+