ಪ್ರಪ್ರಥಮ ಬಾರಿಗೆ ಅಕ್ಕ ಸಮ್ಮೇಳನದಲ್ಲಿ ಒಂದು ದಿನದ ನೋಂದಾವಣಿ!

By: ವರದಿ: ಅನು ಬೆನಕಟ್ಟಿ
Subscribe to Oneindia Kannada

ಅಕ್ಕ ಸಮ್ಮೇಳನದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಒಂದು ದಿವಸ ಪ್ರವೇಶದ ಅವಕಾಶ ಲಭ್ಯವಾಗುತ್ತಿದೆ. ಕೇವಲ $100 ಗಳಲ್ಲಿ ಜೀ ಟಿವಿಯ ಸರಿಗಮಪ ಅಥವಾ $125 ಗಳಲ್ಲಿ ಅಂಬಿ ನೈಟ್ ಆನಂದಿಸುವ ಸುವರ್ಣಾವಕಾಶ ಈ ಬಾರಿಯ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಭಿಸಲಿದೆ.

ದಿನಚರಿಯ ಕಾರ್ಯಕ್ರಮಗಳ ಒತ್ತಡದಲ್ಲಿ ಮೂರು ದಿವಸಗಳ ರಜಾ ಸಿಗದೇ ಇರಬಹುದು. ಒಂದು ದಿವಸವಾದರೂ ಸುಪ್ರಭಾತದಿಂದ ಸಂಜೆಯವರೆಗೂ ಎಲ್ಲ ಸ್ನೇಹಿತರ ಜೊತೆಗೆ ಸಮಯ ಕಳೆಯುವುದರ ಜೊತೆಗೆ ಸವಿಯಾದ ಭೋಜನ ಮತ್ತು ಮೆಗಾ ಕಾರ್ಯಕ್ರಮಗಳ ರಸದೌತಣ ಕೂಡ ಮಾಡಬಹುದು. ಬರುವ ಸೆಪ್ಟೆಂಬರ್ 2, 3, ಮತ್ತು 4ರಂದು ನಡೆಯಲಿರುವ ಅಕ್ಕ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಈ ವಿಧವಾದ ಸೌಲಭ್ಯಗಳನ್ನು ಅಕ್ಕ ಸಂಯೋಜಕ ತಂಡ ಅತಿಥಿಗಳಿಗೆ ನೀಡುತ್ತಿದೆ! [ಅಕ್ಕ ಸಮ್ಮೇಳನದ ಮೂಲಸೌಕರ್ಯ ತಂಡದೊಡನೆ ಚಿಟ್ ಚಾಟ್]

One day registration : First time at AKKA Sammelan

ಶನಿವಾರ ನೊಂದಾವಣಿ ದರಗಳು ಈ ಕೆಳಗಿನಂತಿವೆ

ಅಟ್ಲಾಂಟಿಕ್ ಸಿಟಿಯು 2016ರ ಅಕ್ಕಳನ್ನು ಅಕ್ಕರೆಯಿಂದ ಬರಮಾಡಿಕೊಂಡು ಸ್ವಾಗತಿಸಲು ಕಾತರದಿಂದ ಕಾಯುತ್ತಿದೆ. ಅಕ್ಕ ಸಮ್ಮೇಳನಕ್ಕೆ ವಿಶ್ವದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಿಂದ ಭಾಗವಹಿಸಲು ಉತ್ಸಾಹದಿಂದ ಅತಿಥಿಗಳು ಬರುವುದರ ತಯಾರಿಯಲ್ಲಿ ಇರುವಾಗ, ಅದಕ್ಕೆ ತಕ್ಕಂತೆ ಸಮಾರಂಭದ ಸಿದ್ಧತೆ ಕೂಡ ಅತೀ ಭರದಿಂದ ನಡೆಯುತ್ತಿದೆ.

One day registration : First time at AKKA Sammelan

ಈ ಬಾರಿಯ ಅಕ್ಕಳ ಒಂದು ಮುಖ್ಯ ಆಕರ್ಷಣೆ ಎಂದರೆ ಜೀ ಟಿವಿ ಕನ್ನಡ ನಡೆಸಿ ಕೊಡುವ 'ಸರಿಗಮಪ' ರಿಯಾಲಿಟಿ ಶೋ. ಸಂಗೀತ ಲೋಕದ ಸುಪ್ರಸಿದ್ಧ ಸಂಯೋಜಕ, ಗಾಯಕ ಮತ್ತು ನಿರ್ದೇಶಕ ಅರ್ಜುನ್ ಜನ್ಯ, ಪ್ರತಿಭಾವಂತ ಗಾಯಕ ರಾಜೇಶ್ ಕೃಷ್ಣನ್ ಅವರೊಂದಿಗೆ ಅನುಶ್ರೀ ಅವರ ನಿರೂಪಣೆ ಕಾರ್ಯಕ್ರಮಕ್ಕೆ ರಂಗೇರಿಸುವದರ ಜೊತೆಗೆ ಜನರ ಮನಸೂರೆಗೊಳ್ಳಲಿದೆ. [ಅಟ್ಲಾಂಟಿಕ್ ಸಿಟಿ ಅಕ್ಕ ಕನ್ನಡ ಸಮ್ಮೇಳನದಲ್ಲಿ ಹಲವಾರು ವಿಶೇಷತೆ]

One day registration : First time at AKKA Sammelan

ಎಲ್ಲ ಕನ್ನಡಾಭಿಮಾನಿಗಳಿಗೂ ಅನುಕೂಲವಾಗುವಂತೆ ಸಂಯೋಜಕ ಸಮಿತಿ ತಮ್ಮೆಲರಿಗೂ ಒಂದು ಸುವರ್ಣಾವಕಾಶ ನೀಡಿದೆ. ಶನಿವಾರ ನಡೆಯಲಿರುವ ಈ mega event ಗೆ ಒಂದು ದಿವಸದ ಪ್ರವೇಶ ಈಗ ದೊರೆಯುತ್ತಿದೆ. ಈ ಅವಕಾಶದ ಲಾಭ ಪಡೆಯಿರಿ ಮತ್ತು ಮುಂಬರುವ "ಕನ್ನಡ ಸೂಪರ್ ಸ್ಟಾರ್"ನ ಆಯ್ಕೆಯ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿರಿ. [ಅತಿಥಿಗಳ ಆದರಾತಿಥ್ಯಕ್ಕೆ 'ಅಕ್ಕ' ಆತಿಥ್ಯ ತಂಡ ಸಜ್ಜು]

One day registration : First time at AKKA Sammelan

ಹೆಚ್ಚಿನ ಮಾಹಿತಿಗಾಗಿ ತಕ್ಷಣ ಸಂಪರ್ಕಿಸಿ

ಭಾನುವಾರ ನೊಂದಾವಣಿ ದರಗಳು ಈ ಕೆಳಗಿನಂತಿವೆ

ಮೂರು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿರುವ 2016ರ ಕನ್ನಡಮ್ಮನ ಜಾತ್ರೆಯ ಸಡಗರ ವಿಶ್ವದಾದ್ಯಂತ ಎಲ್ಲ ಕನ್ನಡಿಗರನ್ನು ಕೈ ಬೀಸಿ ಕರೆಯುತ್ತಿದೆ. ಅಟ್ಲಾಂಟಿಕ್ ಸಿಟಿಯಲ್ಲಿ ಹಬ್ಬದ ಮೆರುಗು ಮುಗಿಲನ್ನೇರುತ್ತಿದೆ. ಅತೀ ಉತ್ಕೃಷ್ಟಮಯವಾದ ಹಾಗು ರಸಭರಿತ ಮನರಂಜನೆ ಕಾರ್ಯಕ್ರಮಗಳು ಭೇಟಿ ನೀಡುವ ಎಲ್ಲ ಅತಿಥಿಗಳನ್ನೂ ಆಹ್ಲಾದಗೊಳಿಸಲಿವೆ.

One day registration : First time at AKKA Sammelan

ಈ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಅಂಬಿ ನೈಟ್ ಈ ಬಾರಿಯ ಅಕ್ಕಳ ವಿಶೇಷ ಕೊಡುಗೆ! ಪ್ರಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ನ ಚಲನಚಿತ್ರದ ಎಲ್ಲ ನಕ್ಷತ್ರಗಳು, ಜನಪ್ರಿಯ ಪ್ರತಿಭೆಗಳೆಲ್ಲವೂ ಒಂದೇ ಬಾರಿಗೆ ಸೇರಿ ರಂಗ ಮಂಚದ ಮೇಲೆ ಅದ್ಧೂರಿಯಾದ ಕಾರ್ಯಕ್ರಮವನ್ನು ಉತ್ತರ ಅಮೇರಿಕಾದಲ್ಲಿ ನೀಡಿ ಈ ಕನ್ನಡ ಹಬ್ಬದ ಮೆರುಗನ್ನೇರಿಸಲು ಸಿದ್ಧವಾಗಿದ್ದಾರೆ.

ರವಿವಾರ ನಡೆಯಲಿರುವ ಈ mega eventನಲ್ಲಿ ಮಾತ್ರ ಭಾಗವಹಿಸಿ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಅಂಬಿ, ಶಿವಣ್ಣ, ಯಶ್, ಪುನೀತ್, ಸಾಧು ಕೋಕಿಲ.. ಮುಂತಾದವರನ್ನು ಭೇಟಿಯಾಗುವ ಸದವಕಾಶವನ್ನು ಒದಗಿಸುತ್ತಿದೆ ಅಕ್ಕ ಸಂಯೋಜಕ ತಂಡ. ಈ ಅವಕಾಶದ ಸಂಪೂರ್ಣ ಲಾಭವನ್ನು ಪಡೆಯಲು ನೊಂದಾವಣಿಗಾಗಿ ತಕ್ಷಣ ಸಂಪರ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Golden opportunity for universal Kannadigas to register and enjoy cultural activities at 9th AKKA World Kannada Conference. Kannadigas can register for just for one day and enjoy SaRiGaMaPa or Ambi Night mega events. World Kannada Convention will be held in Atlantic City in New Jersey, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ