ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನ ಅತಿಥಿಯಾಗಿ ಎಸ್ಎಲ್ ಭೈರಪ್ಪ 'ಯಾನ'

By Mahesh
|
Google Oneindia Kannada News

ಆಧುನಿಕ ಕನ್ನಡ ಸಾಹಿತ್ಯದ ಅತಿ ಜನಪ್ರಿಯ ಸಾಹಿತಿ ಎನಿಸಿರುವ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಈ ಬಾರಿಯ 8ನೇ ಅಕ್ಕ ವಿಶ್ವಕನ್ನಡ ಸಮ್ಮೇಳನದ ಅತಿಥಿಯಾಗಿ ಅಮೆರಿಕದಲ್ಲಿರುತ್ತಾರೆ. ಕನ್ನಡಿಗರಲ್ಲಿ ಓದುವ ಹವ್ಯಾಸ ಹೆಚ್ಚಿಸಿದ ಅನೇಕ ಕಾದಂಬರಿಕಾರರಲ್ಲಿ ಭೈರಪ್ಪನವರು ಅಗ್ರಗಣ್ಯರು.

ಹಳ್ಳಿ ಸೊಗಡು, ಪೇಟೆ ಪರಪಂಚ, ಸಂಗೀತ, ತತ್ತ್ವಶಾಸ್ತ್ರ, ಇತಿಹಾಸ, ಮಾನವ ಸಂಬಂಧಗಳು ಹೀಗೆ ಎಲ್ಲಾ ಬಗೆಯ ವಿಷಯ ವಸ್ತುಗಳನ್ನು ಅವರ ಕೃತಿಗಳಲ್ಲಿ ಕಾಣಬಹುದು ಜೊತೆಗೆ ತಿಳಿದಿರುವ ಜ್ಞಾನವನ್ನು ಇತರರಿಗೆ ತಲುಪಿಸುವ ಕಲೆ ಭೈರಪ್ಪ ಅವರಿಗೆ ಒಲಿದಿದೆ. ಅವರ ಮಾತುಗಳನ್ನು ಅಮೆರಿಕದಲ್ಲಿರುವ ಕನ್ನಡಿಗರು ಕೇಳಿಸಿಕೊಳ್ಳುವ ಅವಕಾಶ ಈಗ ಸಿಕ್ಕಿದೆ. ಈ ನಿಟ್ಟಿನಲ್ಲಿ ಭೈರಪ್ಪ ಅವರ ಬದುಕು ಬರಹದ ಬಗ್ಗೆ ಸಂಕ್ಷಿಪ್ತ ನೋಟ ಈ ಲೇಖನ ಸಿಗಲಿದೆ.

ಭೈರಪ್ಪ ಅವರಿಗೆ ಕಾದಂಬರಿಗಳನ್ನು ಬರೆಯಲು ಸ್ಪೂರ್ತಿ ನೀಡಿದ್ದು ಅವರ ಹಳ್ಳಿ ಜೀವನದ ಬದುಕು, ಬೇಜವಾಬ್ದಾರಿ ತಂದೆ, ಕಿತ್ತು ತಿನ್ನುವ ಬಡತನದ ಜೊತೆಗೆ ಓದಿನ ಹಸಿವು ತೀವ್ರವಾಗಿದ್ದು, ಮಹಾಮಾರಿಗೆ ಬಲಿಯಾದ ಆಪ್ತರ ನಡುವೆ ಸಮಾಹಿತ ಭಾವದಲ್ಲಿ ಬೆಳೆದ ಭೈರಪ್ಪ ಅವರು ಬದುಕಿನುದ್ದಕ್ಕೂ ಕಹಿಯುಂಡು ಓದುಗರಿಗೆ ಸಿಹಿ ನೀಡಿದರು. ಈ ಬಗ್ಗೆ ಅವರ ಆತ್ಮಕಥನ ಭಿತ್ತಿಯಲ್ಲಿ ಓದಬಹುದು.[ಭೈರಪ್ಪ ಅವರ ದೃಷ್ಟಿಯಲ್ಲಿ ಸಾಹಿತ್ಯ ಎಂದರೆ ಏನು...?]

ಭೈರಪ್ಪ ಅವರ ಕಾದಂಬರಿಗಳು ಹೆಚ್ಚು ಮುದ್ರಣ ಕಾಣುವುದು, ಬೇರೆ ಭಾಷೆಗೆ ಅನುವಾದವಾಗುವುದು, ಭಾರಿ ಚರ್ಚೆಗೊಳಗಾಗುವುದು ಎಲ್ಲರಿಗೂ ತಿಳಿದ ವಿಷಯ. ಈ ಪೈಕಿ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ಗೃಹಭಂಗ, ದಾಟು ಟಿವಿ ಧಾರಾವಾಹಿಯಾಗಿದ್ದವು. ಈ ಮೂಲಕ ಕಿರುತೆರೆ ಹಾಗೂ ಕನ್ನಡ ಚಿತ್ರರಂಗಕ್ಕೂ ಭೈರಪ್ಪ ತಮ್ಮ ಕೊಡುಗೆ ನೀಡಿದ್ದರು.

Kannada Writer Santeshivara Lingannaiah Bhyrappa Profile

ಪ್ರಪಂಚ ಪರ್ಯಟನೆ ಮಾಡಿ ಅಲ್ಲಿನ ವಿಶಿಷ್ಟತೆಗಳನ್ನು ಕಾದಂಬರಿಯ ವಸ್ತುವನ್ನಾಗಿಸಿಕೊಳ್ಳುವುದು, ಯಾವುದೇ ಒಂದು ಕೃತಿ ಬರೆಯುವ ಮುನ್ನ ಅದಕ್ಕೆ ಬೇಕಾದ ಅಗತ್ಯ ಓದು, ಅಭ್ಯಾಸ, ಪರಿಣತರಿಂದ ಮಾಹಿತಿ ಸಂಗ್ರಹ ಮಾಡುವುದು ನಂತರ ಗಳಿಸಿದ ವ್ಯಾಪಕ ಅನುಭವಕ್ಕೆ ಅಕ್ಷರ ರೂಪ ನೀಡುವುದು, ಬರೆದಿದ್ದಕ್ಕೆ ಪುರಾವೆ ಸಮರ್ಥನೆ ನೀಡುವುದು ಭೈರಪ್ಪ ಅವರಿಗೆ ಕರಗತವಾಗಿದೆ.

ಅಭಿಮಾನಿಗಳಿಗೆ ಭೈರಪ್ಪನವರೇ ಉತ್ತರ ನೀಡಿದ್ದರು. 2011ರಲ್ಲಿ ಮಂದ್ರ ಕಾದಂಬರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ಮಾತನಾಡಿ ಸರಸ್ವತಿ ಸಮ್ಮಾನ್ ಸಿಕ್ಕವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗುವುದಿಲ್ಲ. ಎರಡು ಸಮಾನವಾದ ಪ್ರಶಸ್ತಿಗಳು ಎಂದಿದ್ದರು.

ಜಪಾನ್, ಇಂಗ್ಲೆಂಡ್, ಈಜಿಪ್ಟ್, ಜರ್ಮನಿ, ಇಟಲಿ, ಫ್ರಾನ್ಸ್ ಮುಂತಾದ ದೇಶಗಳಿಗೆ ಭೇಟಿ ನೀಡಿರುವ ಭೈರಪ್ಪ ಅವರ ಮಾತುಗಳನ್ನು ಅಕ್ಕ ಸಮ್ಮೇಳನದಲ್ಲಿ ತಪ್ಪದೇ ಕೇಳಿ...
ಭೈರಪ್ಪ ಅವರು ಕಾದಂಬರಿಗಳ ಪಟ್ಟಿ
1. ಭೀಮಕಾಯ
2. ಧರ್ಮಶ್ರೀ (1961)
3. ದೂರ ಸರಿದರು (1962)
4. ಮತದಾನ (1965)
5. ವಂಶವೃಕ್ಷ (1965)
6. ಜಲಪಾತ (1967)
7. ನಾಯಿ ನೆರಳು (1968)
8. ತಬ್ಬಲಿಯು ನೀನಾದೆ ಮಗನೆ (1968)
9. ಗೃಹಭಂಗ (1970)
10. ನಿರಾಕರಣ (1971)
11. ಗ್ರಹಣ (1972)
12. ದಾಟು (1973)
13. ಅನ್ವೇಷಣ (1976)
14. ಪರ್ವ (1979)
15. ನೆಲೆ (1983)
16. ಸಾಕ್ಷಿ (1986)
17. ಅಂಚು (1990)
18. ತಂತು (1993)
19. ಸಾರ್ಥ (1998)
20. ಮಂದ್ರ (2001)
21. ಆವರಣ (2007)
22. ಕವಲು (2010)
23. ಯಾನ (2014)

English summary
Kannada Writer Santeshivara Lingannaiah Bhyrappa is one of the chief guest of 8th AKKA World Conference to be held from Aug. 29 to Sept.1. Professor S.L. Bhyrappa is the bestselling novelist in the southern Indian language of Kannada over the last 25 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X