ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ವೈಭವದ ತೆರೆ

By ಎಸ್.ಕೆ. ಶಾಮಸುಂದರ, ಸ್ಯಾನ್ ಹೋಸೆಯಿಂದ
|
Google Oneindia Kannada News

ಸ್ಯಾನ್ ಹೋಸೆ, ಸೆ. 1 : ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ವರ್ಣರಂಜಿತ ತೆರೆಬಿತ್ತು. ಮೂರು ದಿನಗಳ ನಿರಂತರ ಮಾತು-ಮಂಥನ, ಹಾಡು ಕುಣಿತ, ಊಟ ತಿಂಡಿ, ಬಂಧು-ಬಳಗ ಸ್ನೇಹಿತರ ಸಮಾಗಮಕ್ಕೆ ಸಮ್ಮೇಳನ ಸಾಕ್ಷಿಯಾಯಿತು.

ಮುಖ್ಯವೇದಿಕೆ ಮಲ್ಲಿಗೆ ಸಭಾಂಗಣದಲ್ಲಿ ಜರುಗಿದ ಜಗಮಗಿಸುವ ಸಮಾರೋಪ ಕಾರ್ಯಕ್ರಮಗಳಿಗೆ ನಟ ಪುನೀತ್ ರಾಜ್ ಕುಮಾರ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಹೂ ವಿಲ್ ಬಿಕಂ ಎ ಮಿಲೇನಿಯರ್ ಮಾದರಿಯ ಅದೃಷ್ಟಾಧಿಪತಿ ನಡೆಸಿಕೊಟ್ಟ ನಂತರ ಅವರು ಎರಡು ಹಾಡು ಹೇಳಿದರು. ಆನಂತರ ಡ್ಯಾನ್ಸ್, ಸಾಧು ಕೋಕಿಲ ಅವರ ಕಚಗುಳಿ ಇಡುವ ಡೈಲಾಗುಗಳು ನಂತರ ಮೆಡ್ಲೆಗಳು.

ಸುಮಾರು 4,000 ಕನ್ನಡಿಗರನ್ನು ಅಮೆರಿಕಾದ ಒಂದೇ ವೇದಿಕೆಯಲ್ಲಿ ಕಲೆಹಾಕುವುದು ಸಾಹಸ. ಅಂಥ ಇನ್ನೊಂದು ಸಾಹಸಕ್ಕೆ ಕೈಹಾಕಿದ ಅಕ್ಕ ಸಮ್ಮೇಳನಕ್ಕೆ ಹೆಗಲೆಣೆಯಾದದ್ದು ಸ್ಥಳೀಯ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ. [ಕಡಲಾಚೆ ಲೇಖಕರಿಗೆ ಎಸ್ಎಲ್ ಭೈರಪ್ಪ ಕಿವಿಮಾತು]

ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲ ಕಾಯಾ ವಾಚಾ ಮನಸಾ ದುಡಿದಿದ್ದೇವೆ. ಪ್ರತಿನಿಧಿಗಳಿಗೆ ಮನಸ್ಸಂತೋಷದ ಜತೆಗೆ value for money ಸಿಕ್ಕಿದೆ ಎಂಬ ವಿಶ್ವಾಸ ನಮಗಿದೆ ಎಂದು ವ್ಯವಸ್ಥಾಪಕ ಸಮಿತಿಯ ಎಲ್ಲ ಸದಸ್ಯರು ಹೆಮ್ಮೆಯಿಂದ ಹೇಳಿದರು. [ಅಕ್ಕ ಸಹ ಸಂಚಾಲಕ ರಘು ಹಾಲೂರು ಸಂದರ್ಶನ]

AKKA WKC 8

ಕ್ಯಾಮರಾಗಳಲ್ಲಿ, ವಿಡಿಯೋಗಳಲ್ಲಿ, ಫೇಸ್ ಬುಕ್ಕುಗಳಲ್ಲಿ, ನೆನಪಿನ ಭಿತ್ತಿಗಳಲ್ಲಿ, Time Line ಗಳಲ್ಲಿ ಮಧುರ ನೆನಪುಗಳನ್ನು ಮಡಿಚಿಟ್ಟುಕೊಂಡ ಜನಸಾಗರ ಸೋಮವಾರ ತಮ್ಮ ತಮ್ಮ ಊರ ದಾರಿ ಹಿಡಿಯಿತು.

English summary
Curtains for 8th akka world Kannada convention. Three days of non-stop celebration of language, culture in west coast of north America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X