ನಾವಿಕ ಕನ್ನಡ ಸಮ್ಮೇಳನ ಉದ್ಘಾಟನೆಗೆ ಸಿದ್ದುಗೆ ಆಹ್ವಾನ

ಬೆಂಗಳೂರು, ಜೂ. 23 : ಅಮೆರಿಕಾದ ಬಾಸ್ಟನ್ ನಗರದಲ್ಲಿ ನಡೆಯುವ ನಾವಿಕ ಎರಡನೇ ವಿಶ್ವ ಕನ್ನಡ ಸಮಾವೇಶಕ್ಕೆ ನಾವಿಕ ಸಂಘಟನೆಯ ನಿಯೋಗ ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ನಾವಿಕ ಅಧ್ಯಕ್ಷ ಡಾ.ಕೇಶವ ಬಾಬು ನೇತೃತ್ವದ ನಿಯೋಗ ಮುಖ್ಯಮಂತ್ರಿಗಳನ್ನು ಶನಿವಾರ ಭೇಟಿ ನೀಡಿ ವಿಶ್ವ ಕನ್ನಡ ಸಮಾವೇಶ ಉದ್ಘಾಟನೆಗೆ ಆಹ್ವಾನ ನೀಡಿತು.

ಅಮೆರಿಕದ ನಾವಿಕ ಸಂಸ್ಥೆ ಎರಡನೇ ವಿಶ್ವ ಕನ್ನಡ ಸಮಾವೇಶವನ್ನು ಬಾಸ್ಟನ್ ನಗರದಲ್ಲಿ ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್ 1, 2013ರಂದು ಹಮ್ಮಿಕೊಂಡಿದೆ. ನಾವಿಕದ ಮೊದಲ ಸಮ್ಮೇಳನ 2010ರ ಜುಲೈನಲ್ಲಿ ಲಾಸ್ ಏಂಜಲಿಸ್ ನಗರದಲ್ಲಿ ಜರುಗಿತ್ತು.

Navika invites Siddaramaiah to 2nd WKC

ಈ ಸಮ್ಮೇಳನದಲ್ಲಿ ಸುಮಾರು 3000ಕ್ಕೂ ಹೆಚ್ಚು ವಿಶ್ವ ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಮ್ಮೇಳನದ ಅಂಗವಾಗಿ ವಾಣಿಜ್ಯ ವೇದಿಕೆಯಲ್ಲಿ ಅಮೆರಿಕ ದೇಶದ ವಿವಿಧ ವಾಣಿಜ್ಯೋದ್ಯಮಿಗಳು, ಹೆಸರಾಂತ ಸಂಸ್ಥೆಗಳ ಮುಖ್ಯಸ್ಥರು ಪಾಲುಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಸಮಾವೇಶದಲ್ಲಿ ವಿಚಾರ ವಿನಿಮಯ ನಡೆಯಲಿದೆ. ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ ತಂಡದಲ್ಲಿ ನಾವಿಕ ಅಧ್ಯಕ್ಷ ಡಾ.ಕೇಶವ ಬಾಬು, ಉಪಾಧ್ಯಕ್ಷೆ ಡಾ ರೇಣುಕಾ ರಾಮಪ್ಪ, ಟ್ರಸ್ಟಿ ಡಾ.ರಾಮಪ್ಪ, ಎಂ.ಕೃಷ್ಣಮೂರ್ತಿ ಆನೇಕಲ್, ನಾವಿಕ ಕರ್ನಾಟಕ ಸಂಚಾಲಕರಾದ ಗಜಲಕ್ಷ್ಮೀ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಆಹ್ವಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮುಖ್ಯಮಂತ್ರಿ, ಅಮೆರಿಕಾದಲ್ಲಿ ಕನ್ನಡ ಸಮ್ಮೇಳನ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವ ನಾವಿಕ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ತಾವು ಸಮ್ಮೇಳನ ಉದ್ಘಾಟಿಸುವ ಬಗ್ಗೆ ಜುಲೈನಲ್ಲಿ ಕನ್ ಫರ್ಮ್ ಮಾಡುವುದಾಗಿ ಹೇಳಿದರು.

ಅಮೆರಿಕಾದಲ್ಲಿ ಕನ್ನಡದ ಕಂಪನ್ನು ಪಸರಿಸಲು ಪ್ರಯತ್ನಿರುವ ನಾವಿಕ ಸಂಸ್ಥೆಯ ಪ್ರಸ್ತುತ ಸಮ್ಮೇಳನಕ್ಕೆ ಅಗತ್ಯ ನೆರವು ನೀಡುವ ಭರವಸೆಯನ್ನು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+