ಉದ್ಯಮಿ ವರುಣ್ ಮುನಿರಾಜು ಜೊತೆ ಹಸೆಮಣೆ ಏರಿದ ಬಿಗ್‌ಬಾಸ್ ಬೆಡಗಿ ಸ್ಪಂದನಾ ಸೋಮಣ್ಣ, ಇಲ್ಲಿದೆ ಲವ್‌ಸ್ಟೋರಿ

ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡು, ಬಿಗ್‌ಬಾಸ್ ಮನೆಯಲ್ಲೂ ಸದ್ದು ಮಾಡಿದ್ದ ನಟಿ ಸ್ಪಂದನಾ ಸೋಮಣ್ಣ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ದಿನಗಳಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಸ್ಪಂದನಾ ಮದುವೆ ಕೊನೆಗೂ ಅದ್ಧೂರಿಯಾಗಿ ನೆರವೇರಿದೆ. ಬಹುಕಾಲದ ಗೆಳೆಯ ವರುಣ್ ಮುನಿರಾಜು ಅವರ ಕೈಹಿಡಿದಿರುವ ನಟಿ, ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ. ಅಂದಹಾಗೆ, ಇದು ನಿನ್ನೆ ಮೊನ್ನೆಯ ಪ್ರೀತಿಯಲ್ಲ. ಬರೋಬ್ಬರಿ ಆರು ವರ್ಷಗಳ ಪ್ರೀತಿಗೆ ಈಗ ಮದುವೆಯ ಮುದ್ರೆ ಬಿದ್ದಿದೆ. ಹಾಗಾದರೆ ಯಾರು ಈ ವರುಣ್? ಸ್ಪಂದನಾ ಮತ್ತು ವರುಣ್ ಪ್ರೀತಿ ಶುರುವಾಗಿದ್ದು ಹೇಗೆ? ಇಲ್ಲಿದೆ ಅವರ ಸುಂದರ ಪ್ರೇಮಕಥೆಯ ಇಂಟರೆಸ್ಟಿಂಗ್ ವಿವರ.

ಮೈಸೂರಿನಲ್ಲಿ ಅದ್ಧೂರಿ ಮದುವೆ, ಒಂದಾದ ಪ್ರೇಮಿಗಳು

ನಟಿ ಸ್ಪಂದನಾ ಸೋಮಣ್ಣ ಮತ್ತು ವರುಣ್ ಮುನಿರಾಜು ಅವರ ಮದುವೆ ಮೈಸೂರಿನಲ್ಲಿ ಇಂದು ಅಂದರೆ ನವೆಂಬರ್ 29ರಂದು ಅದ್ಧೂರಿಯಾಗಿ ನಡೆದಿದೆ. ಕುಟುಂಬದವರು, ಆತ್ಮೀಯರು, ಸ್ನೇಹಿತರು ಹಾಗೂ ಕಿರುತೆರೆ ಮತ್ತು ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆಯ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Bigg Boss Fame Spandana Somanna Marries Entrepreneur Varun Muniraju After 6 Years of Love

ವಿಶೇಷವೆಂದರೆ, ಬಿಗ್‌ಬಾಸ್ ಕನ್ನಡದ ಮೂಲಕ ಜನಪ್ರಿಯತೆ ಗಳಿಸಿದ್ದ ಸ್ಪಂದನಾ ಅವರ ಮದುವೆಗೆ ಅವರ ಸಹ ಸ್ಪರ್ಧಿಗಳು ಕೂಡ ಆಗಮಿಸಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಗಿಲ್ಲಿ ನಟ, ಕಾವ್ಯಾ ಶೈವ ಸೇರಿದಂತೆ ಪರಿಚಿತ ಮುಖಗಳು ಮದುವೆಯ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಪಂದನಾ ಅವರ ಮದುವೆ ಸಹಜವಾಗಿಯೇ ಅಭಿಮಾನಿಗಳ ಗಮನ ಸೆಳೆದಿದೆ.

ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದ ಬಿ.ವೈ ವಿಜಯೇಂದ್ರ; ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ನೆಟ್ಟಿಗರ ತೀವ್ರ ವಿರೋಧ
ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದ ಬಿ.ವೈ ವಿಜಯೇಂದ್ರ; ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ನೆಟ್ಟಿಗರ ತೀವ್ರ ವಿರೋಧ

ಆರು ವರ್ಷಗಳ ಪ್ರೀತಿ, ಈಗ ಮದುವೆಯ ಸಂಭ್ರಮ!

ಸ್ಪಂದನಾ ಅವರ ಪ್ರೇಮಕಥೆಯಲ್ಲಿ ವಿಶೇಷವಾದ ಸಂಗತಿಯೆಂದರೆ, ಇವರಿಬ್ಬರ ಸಂಬಂಧ ಆರು ವರ್ಷಗಳಷ್ಟು ಹಳೆಯದು. ಆದರೆ ಇಷ್ಟು ವರ್ಷಗಳ ಕಾಲ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ತಮ್ಮ ವೃತ್ತಿಜೀವನದ ಆರಂಭದ ದಿನಗಳಿಂದಲೂ ಜೊತೆಗಿದ್ದ ವ್ಯಕ್ತಿಯೇ ಈಗ ಜೀವನ ಸಂಗಾತಿಯಾಗಿರುವುದು ಈ ಪ್ರೇಮಕಥೆಯ ವಿಶೇಷ.

ಕಷ್ಟಸುಖಗಳಲ್ಲಿ ಭಾಗಿ

ಇತ್ತೀಚೆಗೆ ವರುಣ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದ ಸ್ಪಂದನಾ, ತಮ್ಮ ಆರು ವರ್ಷಗಳ ಪಯಣದ ಬಗ್ಗೆ ಭಾವುಕವಾಗಿ ಬರೆದುಕೊಂಡಿದ್ದರು. ಜೀವನದಲ್ಲಿ ಏನು ಮಾಡಬೇಕು ಎಂಬ ಸ್ಪಷ್ಟತೆ ಇಲ್ಲದ, ಕೆಲಸವಿಲ್ಲದ, ಕೈಯಲ್ಲಿ ಹಣವೂ ಇಲ್ಲದ ದಿನಗಳಲ್ಲಿ ಇಬ್ಬರೂ ಭೇಟಿಯಾಗಿದ್ದರಂತೆ. ಆಗಿನಿಂದಲೂ ಕಷ್ಟ-ಸುಖಗಳಲ್ಲಿ ಪರಸ್ಪರ ಜೊತೆಯಾಗಿ ನಿಂತಿದ್ದಾರಂತೆ.

ನಟಿಯಾಗಬೇಕು ಎಂಬ ಕನಸು ಹೊತ್ತು ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದಾಗ ವರುಣ್ ಸ್ಪಂದನಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರಂತೆ. ಆಡಿಷನ್‌ಗಳಿಗೆ ಜೊತೆಯಲ್ಲಿ ಹೋಗುವುದು, ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವುದು, ಕೆಲವೊಮ್ಮೆ ತಮ್ಮ ಮೇಲೆಯೇ ನಂಬಿಕೆ ಕಳೆದುಕೊಂಡಾಗಲೂ ಸ್ಪಂದನಾ ಅವರನ್ನು ನಂಬಿ ಧೈರ್ಯ ತುಂಬುವುದು ಹೀಗೆ ಅವರ ಪ್ರಯಾಣದಲ್ಲಿ ವರುಣ್ ಪ್ರಮುಖ ಪಾತ್ರ ವಹಿಸಿದ್ದಾರಂತೆ. ಈಗ ಅದೇ ವ್ಯಕ್ತಿಯ ಜೊತೆ ಜೀವನಪೂರ್ತಿ ಜೊತೆಯಾಗಿರುವ ಅವಕಾಶ ಸ್ಪಂದನಾ ಅವರಿಗೆ ಸಿಕ್ಕಿದೆ.

ಲೋಕಸಭಾ ಕ್ಷೇತ್ರ ಮರುವಿಂಗಡಣೆ: ಡಿಎಂಕೆ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ; ತೆರಿಗೆದಾರರ ಹಣ ಲೆಕ್ಕ ಮುಂದಿಟ್ಟ ಅಭಿಜೀತ್ ದೀಪ್ಕೆ
ಲೋಕಸಭಾ ಕ್ಷೇತ್ರ ಮರುವಿಂಗಡಣೆ: ಡಿಎಂಕೆ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ; ತೆರಿಗೆದಾರರ ಹಣ ಲೆಕ್ಕ ಮುಂದಿಟ್ಟ ಅಭಿಜೀತ್ ದೀಪ್ಕೆ

ಪ್ಯಾರಿಸ್‌ನಲ್ಲಿ ಪ್ರಪೋಸ್, ಅಭಿಮಾನಿಗಳಿಗೆ ಅಚ್ಚರಿ!

ಸ್ಪಂದನಾ ತಮ್ಮ ಮದುವೆಯ ವಿಚಾರವನ್ನು ಬಹಿರಂಗಪಡಿಸುವುದಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದರು. ಪ್ಯಾರಿಸ್‌ನ ಐಫೆಲ್ ಟವರ್ ಎದುರು ಅಪರಿಚಿತ ವ್ಯಕ್ತಿಯ ಕೈಹಿಡಿದು ನಡೆಯುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಫೋಟೋದಲ್ಲಿ ಆ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಾಣಿಸದ ಕಾರಣ ಅಭಿಮಾನಿಗಳು ತಮ್ಮದೇ ಆದ ಲೆಕ್ಕಾಚಾರ ಶುರುಮಾಡಿದ್ದರು.

ಯಾರು ಆ ಹುಡುಗ? ಸ್ಪಂದನಾ ಮದುವೆಯಾಗುತ್ತಿರುವುದು ಯಾರನ್ನು? ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡಿದ್ದವು. ಕೆಲವರು ಬಿಗ್‌ಬಾಸ್ ಸ್ಪರ್ಧಿ ಸೂರಜ್ ಅವರ ಹೆಸರನ್ನೂ ಜೋಡಿಸಿ ವದಂತಿ ಹಬ್ಬಿಸಿದ್ದರು. ಆದರೆ ಸ್ಪಂದನಾ ಈ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿ, ತಾವು ಮದುವೆಯಾಗುತ್ತಿರುವ ಹುಡುಗ ಸೂರಜ್ ಅಲ್ಲ ಎಂದು ಹೇಳಿದ್ದರು.

ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಪ್ರತ್ಯಕ್ಷ! ಸ್ಪರ್ಧಿಗಳ ಕಥೆ ಹರೋಹರ, ಮನುಷ್ಯನಿಗೆ ನರಿಯಾಗೋದು ಕಷ್ಟವೇ?
ಬಿಗ್ ಬಾಸ್ ಮನೆಯಲ್ಲಿ ಗುಳ್ಳೆನರಿ ಪ್ರತ್ಯಕ್ಷ! ಸ್ಪರ್ಧಿಗಳ ಕಥೆ ಹರೋಹರ, ಮನುಷ್ಯನಿಗೆ ನರಿಯಾಗೋದು ಕಷ್ಟವೇ?

ಅಕ್ಟೋಬರ್‌ನಲ್ಲಿ ಸಿಹಿಸುದ್ದಿ ನೀಡಿದ್ದ ನಟಿ

ಬಳಿಕ ಅಕ್ಟೋಬರ್‌ನಲ್ಲಿ ವರುಣ್ ಮುನಿರಾಜು ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, 'ನಾವು ಮದುವೆಯಾಗುತ್ತಿದ್ದೇವೆ' ಎಂಬ ಸಿಹಿ ಸುದ್ದಿ ನೀಡಿದ್ದರು. ಅಷ್ಟೇ ಅಲ್ಲ, ತಮ್ಮ ಭಾವಿ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು. ಪ್ಯಾರಿಸ್‌ನಲ್ಲೇ ವರುಣ್ ಸ್ಪಂದನಾ ಅವರಿಗೆ ಪ್ರಪೋಸ್ ಮಾಡಿದ್ದ ಕ್ಷಣಗಳೂ ಅಭಿಮಾನಿಗಳ ಗಮನ ಸೆಳೆದಿದ್ದವು.

ಯಾರು ಈ ವರುಣ್ ಮುನಿರಾಜು?

ಸ್ಪಂದನಾ ಅವರ ಪತಿ ವರುಣ್ ಮುನಿರಾಜು ಉದ್ಯಮಿ ಎನ್ನಲಾಗಿದೆ. ಎಂಜಿನಿಯರಿಂಗ್ ಓದಿದ್ದು, ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿರುವವರು. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ವರುಣ್, ಸ್ಪಂದನಾ ಅವರ ನಟನೆಯ ಕನಸಿಗೆ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇವರಿಬ್ಬರ ನಡುವಿನ ಸಂಬಂಧ ಕೇವಲ ಪ್ರೀತಿಗೆ ಸೀಮಿತವಾಗಿರದೆ, ಪರಸ್ಪರರ ಕನಸುಗಳಿಗೆ ಬೆಂಬಲವಾಗಿ ನಿಂತಿರುವ ಸ್ನೇಹವೂ ಆಗಿದೆ. ಸ್ಪಂದನಾ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ವರುಣ್ ತಮ್ಮನ್ನು ಎಷ್ಟರಮಟ್ಟಿಗೆ ನಂಬಿದ್ದರು ಎಂಬುದನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದರು. ತಮ್ಮ ಮೇಲೆ ತಮಗೇ ನಂಬಿಕೆ ಇಲ್ಲದ ಸಮಯದಲ್ಲೂ ವರುಣ್ ನಂಬಿಕೆ ಕಳೆದುಕೊಳ್ಳಲಿಲ್ಲ ಎಂಬ ಅವರ ಮಾತು ಅಭಿಮಾನಿಗಳ ಮನಮುಟ್ಟಿತ್ತು.

ಹಳದಿ ಶಾಸ್ತ್ರದಿಂದ ಮದುವೆಯವರೆಗೆ ಸಂಭ್ರಮವೋ ಸಂಭ್ರಮ!

ಮದುವೆಗೂ ಮುನ್ನ ಸ್ಪಂದನಾ ಮನೆಯಲ್ಲಿ ಹಲವು ಸಂಭ್ರಮದ ಕಾರ್ಯಕ್ರಮಗಳು ನಡೆದಿವೆ. ಹಳದಿ ಶಾಸ್ತ್ರದಲ್ಲಿ ವಧು-ವರ ಇಬ್ಬರೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಪರಸ್ಪರ ಹಳದಿ ಹಚ್ಚಿಕೊಂಡು, ನಗುತ್ತಾ, ತಮಾಷೆ ಮಾಡುತ್ತಾ ಕಳೆದ ಕ್ಷಣಗಳನ್ನು ಸ್ಪಂದನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಂಗೀತ ಕಾರ್ಯಕ್ರಮವೂ ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ತಂದಿತ್ತು. ಹಳದಿ ಶಾಸ್ತ್ರದ ವಿಡಿಯೋಗಳಲ್ಲಿ ಸ್ಪಂದನಾ ಮತ್ತು ವರುಣ್ ನಡುವಿನ ಆತ್ಮೀಯತೆ, ಪ್ರೀತಿ ಗಮನ ಸೆಳೆದಿತ್ತು. ಇದೀಗ ಎಲ್ಲಾ ಶಾಸ್ತ್ರಗಳನ್ನೂ ಸಂಭ್ರಮದಿಂದ ಮುಗಿಸಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

"ಕರಿಮಣಿ'ಯಿಂದ ಬಿಗ್‌ಬಾಸ್‌ವರೆಗೆ ಸ್ಪಂದನಾ ಜರ್ನಿ!

ಸ್ಪಂದನಾ ಸೋಮಣ್ಣ ಅವರಿಗೆ ಕಿರುತೆರೆಯಲ್ಲಿ ಒಳ್ಳೆಯ ಹೆಸರಿದೆ. 'ಕರಿಮಣಿ' ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ಅವರು, 'ಗೃಹಪ್ರವೇಶ', 'ನಾನು ನನ್ನ ಕನಸು' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ದಿಲ್ ಖುಷ್', 'ಮರೀಚಿ' ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ ಬಿಗ್‌ಬಾಸ್ ಕನ್ನಡ ಸೀಸನ್ 12 ಸ್ಪಂದನಾ ಅವರ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು. ಮನೆಯೊಳಗೆ ಸುಮಾರು 99 ದಿನಗಳ ಕಾಲ ಇದ್ದು, ತಮ್ಮ ವ್ಯಕ್ತಿತ್ವ ಮತ್ತು ಆಟದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್‌ಬಾಸ್‌ನಿಂದ ಹೊರಬಂದ ಬಳಿಕ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳ ಕುತೂಹಲ ಹೆಚ್ಚಾಗಿತ್ತು.

ಉದ್ಯಮಿಯಾಗ್ತಾರ ನಟಿ?

ಮದುವೆಯ ಬಳಿಕವೂ ನಟನೆ ಮುಂದುವರಿಸುವ ಆಸಕ್ತಿ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಉದ್ಯಮ ಆರಂಭಿಸುವ ಯೋಜನೆಯ ಬಗ್ಗೆ ಈ ಹಿಂದೆ ಸ್ಪಂದನಾ ಮಾತನಾಡಿದ್ದರು. ಹೀಗಾಗಿ ಮದುವೆಯ ನಂತರ ಅವರ ವೃತ್ತಿಜೀವನ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನೂ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+