"ಮತಗಳ್ಳತನದ ಮಾತೃಪಕ್ಷ ಕಾಂಗ್ರೆಸ್, ವೋಟ್ ಚೋರಿಯ ಆದಿ ಮಾತೆ ಸೋನಿಯಾ ಗಾಂಧಿ!'

"ಮತಗಳ್ಳತನದ ಮಾತೃಪಕ್ಷ ಕಾಂಗ್ರೆಸ್, ವೋಟ್ ಚೋರಿಯ ಆದಿ ಮಾತೆ ಸೋನಿಯಾ ಗಾಂಧಿ!' ಎಂದು ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

ಇಂದು ರಾಹುಲ್ ಗಾಂಧಿ ಅವರು ಬೀದಿಬೀದಿಯಲ್ಲಿ ನಿಂತು 'ವೋಟ್ ಚೋರಿ' ಎಂದು ಗಂಟಲು ಹರಿದುಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಮೊದಲು ತಮ್ಮ ಮನೆಯ ಇತಿಹಾಸದತ್ತ ಕಣ್ಣು ಹಾಯಿಸಲಿ!

R Ashoka Questions Rahul Gandhi Over Sonia Gandhi s Voter List Entry Before Indian Citizenship

1980ರಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಭಾರತದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಆದರೆ ಅವರಿಗೆ ಭಾರತೀಯ ಪೌರತ್ವ ದೊರೆತಿದ್ದು 1983ರಲ್ಲಿ ಎಂಬ ಸತ್ಯ ಈಗ ಪೊಲೀಸ್ ವರದಿಯಿಂದಲೇ ಕೋರ್ಟ್ ಮುಂದೆ ಬಟಾಬಯಲಾಗಿದೆ.

ರಾಹುಲ್ ಗಾಂಧಿ ಅವರೇ, ಪೌರತ್ವ ಪಡೆಯುವ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೇಗೆ ಬಂತು?, ಯಾರ ಪ್ರಭಾವದಿಂದ ಬಂತು ಹಾಗೂ ಯಾವ ನಿಯಮದಡಿ ಬಂತು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು, ಈ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಇಡೀ ದೇಶಕ್ಕೆ ಚುನಾವಣಾ ಪಾಠ ಹೇಳಲು ಹೊರಟಿದ್ದೀರಲ್ಲಾ ರಾಹುಲ್ ಗಾಂಧಿ ಅವರೇ, ಮೊದಲು ನಿಮ್ಮ ತಾಯಿಯವರ ಮತದಾನದ ಹಕ್ಕಿನ ಸುತ್ತ ಎದ್ದಿರುವ ಈ ಪ್ರಶ್ನೆಗಳಿಗೆ ಉತ್ತರ ಕೊಡಿ!

ತಮ್ಮ ಮನೆಯಲ್ಲೇ ಇಂತಹ ಗಂಭೀರ ಪ್ರಶ್ನೆಗಳು ಎದ್ದಿರುವಾಗ, ದೇಶಕ್ಕೆ 'ವೋಟ್ ಚೋರಿ'ಯ ಪಾಠ ಹೇಳುವ ನೈತಿಕತೆ ರಾಹುಲ್ ಗಾಂಧಿ ಅವರಿಗೆ ಎಲ್ಲಿದೆ ಎಂದು ಪ್ರಶ್ನೆ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಇತರರ ಮತಗಳ ಲೆಕ್ಕ ಕೇಳುವ ಮೊದಲು, ನಿಮ್ಮ ಮನೆಯ ಮತದಾರರ ಪಟ್ಟಿಯ ಲೆಕ್ಕ ಕೊಡಿ ಎಂದಿದ್ದಾರೆ.

ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದ ಬಿ.ವೈ ವಿಜಯೇಂದ್ರ; ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ನೆಟ್ಟಿಗರ ತೀವ್ರ ವಿರೋಧ
ವೀರಶೈವ-ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು ಎಂದ ಬಿ.ವೈ ವಿಜಯೇಂದ್ರ; ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಗೆ ನೆಟ್ಟಿಗರ ತೀವ್ರ ವಿರೋಧ

R Ashoka: ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಧ್ವನಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕು!

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಧ್ವನಿಗೂ ಸಮಾನ ಪ್ರಾತಿನಿಧ್ಯ ಸಿಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ. ದೇಶದ ಜನಸಂಖ್ಯೆ, ಸಾಮಾಜಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳಿಗೆ ಅನುಗುಣವಾಗಿ ಪ್ರಜಾಪ್ರಭುತ್ವದ ಪ್ರಾತಿನಿಧ್ಯ ವ್ಯವಸ್ಥೆಯೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಸಂವಿಧಾನದ 82 ಮತ್ತು 170ನೇ ವಿಧಿಗಳ ಆಶಯದಂತೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಪ್ರಜಾಪ್ರಭುತ್ವದ ಸಮತೋಲಿತ ಪ್ರಾತಿನಿಧ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ.

ಅದೇ ರೀತಿ, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಅವರ ನ್ಯಾಯಯುತ ಪಾಲು ದೊರೆಯುವುದು ಅತ್ಯಗತ್ಯ. ಮಹಿಳಾ ಮೀಸಲಾತಿ ಎನ್ನುವುದು ಕೇವಲ ಸ್ಥಾನಗಳ ಹಂಚಿಕೆಯಲ್ಲ; ಆಡಳಿತದ ನಿರ್ಧಾರಗಳಲ್ಲಿ ನಾರಿಶಕ್ತಿಯ ಧ್ವನಿಗೂ ಸಮಾನ ಅವಕಾಶ ಕಲ್ಪಿಸುವ ಮಹತ್ವದ ಹೆಜ್ಜೆ.

ಲೋಕಸಭಾ ಕ್ಷೇತ್ರ ಮರುವಿಂಗಡಣೆ: ಡಿಎಂಕೆ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ; ತೆರಿಗೆದಾರರ ಹಣ ಲೆಕ್ಕ ಮುಂದಿಟ್ಟ ಅಭಿಜೀತ್ ದೀಪ್ಕೆ
ಲೋಕಸಭಾ ಕ್ಷೇತ್ರ ಮರುವಿಂಗಡಣೆ: ಡಿಎಂಕೆ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ; ತೆರಿಗೆದಾರರ ಹಣ ಲೆಕ್ಕ ಮುಂದಿಟ್ಟ ಅಭಿಜೀತ್ ದೀಪ್ಕೆ

ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಎರಡೂ ಬಲಿಷ್ಠ, ಸಮಾನತೆಯ ಹಾಗೂ ಹೆಚ್ಚು ಜನಪ್ರತಿನಿಧಿತ್ವ ಹೊಂದಿರುವ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಪ್ರತಿಯೊಂದು ಕ್ಷೇತ್ರಕ್ಕೂ ನ್ಯಾಯಯುತ ಪ್ರಾತಿನಿಧ್ಯ, ಪ್ರತಿಯೊಬ್ಬ ಮಹಿಳೆಗೂ ನಿರ್ಧಾರ ಕೈಗೊಳ್ಳುವ ಅಧಿಕಾರ - ಇದೇ ಸಶಕ್ತ ಪ್ರಜಾಪ್ರಭುತ್ವದ ಆಶಯ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+