ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಸ್ಟನ್ನಿನಲ್ಲಿ 2013ರ ಆಗಸ್ಟ್‌ನಲ್ಲಿ ನಾವಿಕ ಸಮ್ಮೇಳನ

By * ಮಧುಸೂದನ್ ಅಕ್ಕಿಹೆಬ್ಬಾಳ್
|
Google Oneindia Kannada News

ಮೇ 28ರಂದು ದೇಶವೆಲ್ಲ ಮೆಮೋರಿಯಲ್ ಡೇ ಕುಕ್ಔಟ್ ಸಂಭ್ರಮದಲ್ಲಿದ್ದಾಗ, ನ್ಯೂ ಇಂಗ್ಲೆಂಡ್ ಕನ್ನಡಿಗರು ಉತ್ಸಾಹದಿಂದ ಕನ್ನಡ ಸೇವೆಗೆ ನೆರೆದಿದ್ದರು. ನಾರ್ತ್ ಅಮೇರಿಕ ವಿಶ್ವ ಕನ್ನಡ ಆಗರ (ನಾವಿಕ) ಸಂಸ್ಥೆ 2013ರ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ, ಅಮೆರಿಕಾದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿರುವ ಬೋಸ್ಟನ್‌ನಲ್ಲಿ ವಿಶ್ವ ಕನ್ನಡ ಸಮಾವೇಶ ನಡೆಸಲು ನಿರ್ಧರಿಸಿದೆ. ಇದು ನಾವಿಕ ಸಂಸ್ಥೆಯ ಎರಡನೇ ವಿಶ್ವ ಕನ್ನಡ ಸಮ್ಮೇಳನವಾಗಿದ್ದು, ಮೊದಲನೇ ಸಮ್ಮೇಳನ 2010ರಲ್ಲಿ ಲಾಸ್ ಏಂಜಲಿಸ್‌ನಲ್ಲಿ ಜರುಗಿತ್ತು.

ಡಾ. ಶರಣಬಸವ ರಾಜೂರ್ ಅವರ ಹತ್ತು ವರ್ಷಗಳ ಕನಸು ಹಾಗು ಶ್ರಮದ ಫಲ ಈ ಯೋಜನೆ. ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಹಾಗು ಹೊಯ್ಸಳ ಕನ್ನಡ ಕೂಟಗಳ ಸಹಕಾರದೊಂದಿಗೆ ಈ ವಿಶ್ವ ಕನ್ನಡ ಸಮ್ಮೇಳನ ಜರುಗಲಿದೆ. ಇದಕ್ಕೆ ಸಂಬಂಧಿಸಿದಂತೆ ಡಾ. ರಾಜೂರ್ ಅವರ ನೇತೃತ್ವದಲ್ಲಿ ಬೋಸ್ಟನ್ ಹಾಗು ಕನೆಕ್ಟಿಕಟ್ ರಾಜ್ಯಗಳ ಕನ್ನಡಿಗರಿಗಾಗಿ ಆಂಡೋವರ್ ನ ಚಿನ್ಮಯ ಮಿಶನ್ ನ ಸಭಾಂಗಣದಲ್ಲಿ ಮಾಹಿತಿ ಸಭೆ ಆಯೋಜಿಸಿತ್ತು.

ನಾವಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಕೇಶವ ಬಾಬು ಅವರು ಈ ಸಭೆಯಲ್ಲಿ ಪಾಲ್ಗೊಳಲೆಂದೇ ಫ್ಲೋರಿಡಾದಿಂದ ಆಗಮಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಡಾ. ಕೇಶವ ಬಾಬು ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ನಾವಿಕ ಸಂಸ್ಥೆಯ ಸ್ಥಾಪನೆಯ ಉದ್ದೇಶ ಹಾಗು ಚಟುವಟಿಕೆಗಳ ಬಗ್ಗೆ ವಿವರಿಸಿದರು. ನ್ಯೂ ಇಂಗ್ಲೆಂಡ್ ಕನ್ನಡಿಗರಿಗೆ ಕನ್ನಡ ಸೇವೆ ಸಲ್ಲಿಸಲು ಇದು ಒಂದು ಉತ್ತಮ ಅವಕಾಶ ಹಾಗು ಇಂಥ ಸಮಾವೇಶದಲ್ಲಿ ಮುಖ್ಯವಾಗಿ ನೋಟ (ಮನರಂಜನೆ/ಸಂಸ್ಕೃತಿ) ಹಾಗೂ ಊಟಕ್ಕೆ (ಆತಿಥ್ಯ) ಪ್ರಾಮುಖ್ಯತೆ ನೀಡಲಾಗುವುದು ಎಂದು ವಿವರಿಸಿದರು.

Navika World Kannada Conference in Boston in 2013

ನಾವಿಕ ಬೋಸ್ಟನ್‌ನ ಇತರ ಪದಾಧಿಕಾರಿಗಳಾದ ಡಾ. ಕೃಪಾ ರಾಜೂರ, ಪೂರ್ಣಿಮಾ ರಿಸ್ಬುಡ್, ಹಾಗೂ ಪಲ್ಲವಿ ನಾಗೇಶ ಅವರು ಡಾ. ರಾಜೂರ್ ಅವರ ಜೊತೆಗೂಡಿ ಈ ಸಮಾವೇಶದ ಉದ್ದೇಶ ಹಾಗು ಯೋಜನೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮಂದಾರ ಕನ್ನಡ ಕೂಟದ ಅಧ್ಯಕ್ಷರಾದ ಪ್ರವೀಣ ನಡುತೋಟ ಹಾಗು ಹೊಯ್ಸಳ ಕನ್ನಡ ಕೂಟದ ಪ್ರತಿನಿಧಿಗಳಾಗಿ, ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ಯಶವಂತ್ ಗಡ್ಡಿ ಅವರೂ ಪಾಲ್ಗೊಂಡರು.

ಇಂಥ ಒಂದು ಕಾರ್ಯಕ್ಕೆ ಸ್ವಯಂಸೇವಕರ ಕೊಡುಗೆ ಬಹಳ ಮುಖ್ಯ. ಮನರಂಜನೆ, ಊಟದ ವ್ಯವಸ್ಥೆ, ಪ್ರಚಾರ, ಹಣಕಾಸು, ನೋಂದಣಿ - ಹೀಗೆ ಹಲವಾರು ತಂಡಗಳು ಅವಶ್ಯಕ. ಈ ಸಭೆಯಲ್ಲಿ, ಇಂಥ ಹಲವು ಸಮಿತಿಗಳು ಅಸ್ತಿತ್ವಕ್ಕೆ ಬಂದು, ಅವುಗಳ ಸದಸ್ಯರ ಪರಿಚಯ ಮಾಡಿಕೊಡಲಾಯಿತು.

ಪ್ರಸಿದ್ಧ ಕವಿವಾಣಿ ಹೇಳಿದಂತೆ - ಎಲ್ಲೇ ಇದ್ದರು, ಹೇಗೆ ಇದ್ದರೂ, ಕನ್ನಡ ಭಾಷೆ ಹಾಗು ಸಂಸ್ಕೃತಿ ಮೆರೆಯಲು ಇದು ಸುವರ್ಣ ಅವಕಾಶ ಎನ್ನುವ ಮಾತೇ ಎಲ್ಲರ ಬಾಯಲ್ಲೂ! ಈ ಸಮಾವೇಶದ ದೆಸೆಯಿಂದ ಕನ್ನಡ ಸೇವೆ ಹಾಗು ಕನ್ನಡಿಗರ ಒಡನಾಟಕ್ಕೆ ಎದುರು ನೋಡುತ್ತೇವೆ ಎಂದು ಸಮಿತಿಗಳ ಸದಸ್ಯರು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ವಂದನಾರ್ಪಣೆ ನಂತರ ಬಿಸಿ ಬಿಸಿ ಇಡ್ಲಿ, ಸಾಂಬಾರ್, ಸಮೋಸ ಹಾಗು ಕಾಫಿ ಸೇವಿಸಿ ಮನೆಗೆ ಹೊರಟಾಗ ಎಲ್ಲರ ಮನದಲ್ಲೂ ಸಂತಸ, ಮತ್ತು ಕಿವಿಯಲ್ಲಿ ಗುನುಗುಟ್ಟುತಿದ್ದ ಗೀತೆ "ಜೇನಿನ ಹೊಳೆಯೋ ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿ ನುಡಿಯೋ.

English summary
NAVIKA (North America Vishwa Kannada Association) will conduct World Kannada Conference with the association of Mandara, New England and Hoysala Kannada Koota from August 30-September 1, 2013 in Boston, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X