ಉತ್ತರ ಅಮೆರಿಕಾಗೆ ಆಲ್ ದಿ ಬೆಸ್ಟ್!

ಮರಾಠಿ ರಂಗಭೂಮಿಯ ಮಟ್ಟಿಗೆ ಇದೊಂದು ದಾಖಲೆಯ ಮತ್ತು ಹೊಸ ಚೈತನ್ಯವನ್ನು ತುಂಬಿದ ಖ್ಯಾತ ನಾಟಕ. ಯುವ ನಾಟಕಕಾರ ದೇವೇಂದ್ರ ಪೇಮರ ಮೊದಲ ಪೂರ್ಣ ಪ್ರಮಾಣದ ನಾಟಕವಿದು. ಭಾರತದ ಹತ್ತಾರು ಭಾಷೆಗೆ ಅನುವಾದಗೊಂಡು ಸಾವಿರಾರು ಪ್ರದರ್ಶನವನ್ನು ಕಂಡ ಅಪರೂಪದ ನಾಟಕ. ಕನ್ನಡಕ್ಕೆ ಇದನ್ನು ಅನುವಾದಿಸಿದವರು ನ್ಯಾಯವಾದಿ ಪ್ರಹ್ಲಾದ ಸರದೇಶಪಾಂಡೆ.
ಮೂವರು ಅಂಗವಿಕಲ ಯುವಕರು ಒಂದೇ ಹುಡುಗಿಯನ್ನು ಪ್ರೀತಿಸಿ, ತಮ್ಮ ಪ್ರೀತಿಯನ್ನು ಅವಳಲ್ಲಿ ತೋಡಿ ಕೊಳ್ಳುವ ಕಥೆಯಿದು. ಆ ಮೂವರು ತಾವು ಎಲ್ಲರಂತೆ ಸಾಮಾನ್ಯರು ಎಂಬುದನ್ನು ಸ್ಪಷ್ಟಪಡಿಸುವದರೊಂದಿಗೆ We dont want sympathy ಎಂದು ಖಡಾಖಂಡಿತವಾಗಿ ಹೇಳುತ್ತಾರೆ. ಅಂಗ ವೈಕಲ್ಯತೆಯನ್ನು ಲೇವಡಿ ಮಾಡದೆ ತಿಳಿಯಾದ ಹಾಸ್ಯದೊಂದಿಗೆ ಅರಳುತ್ತದೆ. ಸಮಾಜದ ಎಲ್ಲಾ ವರ್ಗದ ಎಲ್ಲಾ ವಯಸ್ಸಿನ ಜನರನ್ನು ರಂಜಿಸಿ ಜನಪ್ರಿಯವಾಗಿರುವ ಈ ನಾಟಕವನ್ನು ಒಮ್ಮೆಯಾದರೂ ನೀವು ನೋಡಲೇಬೇಕು.
ಮೇಲಿನ ಎಲ್ಲಾ ವಿಶೇಷತೆಗಳನ್ನು ಹೊಂದಿರುವ ನಾಟಕ ಆಲ್ ದಿ ಬೆಸ್ಟ್! ಈ ವರ್ಷ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಯುವ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಗುರು ಸಂಸ್ಥೆಯ ಈ ನಾಟಕದಲ್ಲಿ ಹಲವಾರು ವರ್ಷಗಳಿಂದ ಅಭಿನಯಿಸುತ್ತಾ ಬಂದಿದ್ದಾರೆ ಕಲಾವಿದರಾದ ಮಾಲತಿ ಸರದೇಶಪಾಂಡೆ, ಗುರುರಾಜ ಛಪ್ಪರದ, ಮತ್ತು ಧರ್ಮಣ್ಣ ಕಡೂರು ಎಚ್.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಅಕ್ಕ ಸಮ್ಮೇಳನದ ಕಲಾವಿದರ ಪಟ್ಟಿಯಲ್ಲಿ ಇವರ ಹೆಸರನ್ನು ಪ್ರಕಟಿಸಿದೆ. ಈ ಕಲಾವಿದರಿಗೆ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿ ಕೊಟ್ಟಿದೆ. ಜೊತೆಗೆ ಇದರ ಮೂಲ ರೂವಾರಿ, ನಾಟಕದ ನಿರ್ದೇಶಕ ಹಾಗೂ ನಟರಾದ ಯಶವಂತ ಸರದೇಶಪಾಂಡೆ ಅವರನ್ನು ಅಕ್ಕ ಕೂಟದವರೇ ಕರೆಸಿಕೊಂಡಿರುವುದು ಇನ್ನೊಂದು ವಿಶೇಷ. ಇಂತಹ ಆಲ್ ದಿ ಬೆಸ್ಟ್! ನಾಟಕ ಅಮೆರಿಕಾದ ಕನ್ನಡಿಗರನ್ನು ಮತ್ತು ಅಮೆರಿಕನ್ನರನ್ನು ರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಸರದೇಶಪಾಂಡೆಯವರ ಇನ್ನೊಂದು ಸ್ವಾರಸ್ಯಮಯ ಏಕವ್ಯಕ್ತಿ ಪ್ರಯೋಗ ರಾಶಿಚಕ್ರ. ಸುಮಾರು ಎರಡು ತಾಸು ನಲವತ್ತೈದು ನಿಮಿಷಗಳ ಕಾಲ ಎಡಬಿಡದೆ ರಂಜಿಸುವ ಈ ಹಾಸ್ಯಧಾರೆ ನಯಾಗರಾ ಜಲಧಾರೆಯಷ್ಟೇ ಫೇಮಸ್ಸಾಗಿದೆ. ಆಯೋಜಕರು ಸಮಯಾವಕಾಶ ಕಲ್ಪಿಸಿದಲ್ಲಿ ನಿತ್ಯ ನೂತನ 'ರಾಶಿ ಚಕ್ರ'ವನ್ನು ಪ್ರಯೋಗ ಮಾಡುವ ಆಶಾಭಾವನೆಯನ್ನು ಯಶವಂತ ಸರದೇಶಪಾಂಡೆಯವರು ಇಟ್ಟುಕೊಂಡಿದ್ದಾರೆ. ಯಶವಂತರ ಇ ಮೇಲ್ ವಿಳಾಸ : [email protected]
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications