ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಸ್ಕೃತಿಕ ಕಾರ್ಯಕ್ರಮಗಳ ಮೆನು ಕಾರ್ಡ್‌

By Staff
|
Google Oneindia Kannada News

ಮೂರುದಿನಗಳಲ್ಲೂ ರಾತ್ರಿಭೋಜನಾನಂತರದ ಪ್ರೈಮ್‌ಟೈಮ್‌ನಲ್ಲಿ ಅನುಕ್ರಮವಾಗಿ 60-70ರ ದಶಕ, 80-90ರ ದಶಕ ಮತ್ತು 21ನೇ ಶತಮಾನದ ಕನ್ನಡಚಿತ್ರಗೀತೆಗಳ ರಸಮಂಜರಿಯನ್ನು ಸವಿಯುವ ಅವಕಾಶ ಈ ಸಮ್ಮೇಳನದ ವಿಶಿಷ್ಟ ಮತ್ತು ಅತಿಪ್ರಮುಖ ಆಕರ್ಷಣೆಯೆನಿಸಲಿದೆ. ಸಮ್ಮೇಳನದ ಮೂರುದಿನಗಳಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಒಂದು ಪಕ್ಷಿನೋಟ ಇಲ್ಲಿದೆ.

ಮೊದಲ ದಿನ :

ಸೆಪ್ಟೆಂಬರ್‌ 1 ಶುಕ್ರವಾರ ಸಂಜೆ 5 ಗಂಟೆಗೆ ಸರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಶುಭಾರಂಭವಾಗುತ್ತದೆ. ಅವತ್ತಿನ ಸಂಜೆಯ ಪ್ರಮುಖ ಆಕರ್ಷಣೆಗಳು :

  • ಅದ್ದೂರಿಯ ಉದ್ಘಾಟನಾ ಸಮಾರಂಭ, 'ದೀಪಾರತಿ" ಸ್ವಾಗತ ನೃತ್ಯ ಮತ್ತು ಸಮೂಹಗಾನ
  • ಬೆಂಗಳೂರಿನ ಕಲಾವಿದರಿಂದ ವಿಶೇಷ ನೃತ್ಯ ಕಾರ್ಯಕ್ರಮ 'ನೃತನೃತ್ಯ"
  • 'ಹಾಸ್ಯಲೋಕ" : ಹೊಟ್ಟೆಹುಣ್ಣಾಗಿಸುವಷ್ಟು ನಕ್ಕುನಗಿಸುವ ಅದ್ಭುತ ಹಾಸ್ಯರಸಾಯನ
  • ಸಂಗೀತ ರಸಸಂಜೆ (60-70ರ ದಶಕದ ಕನ್ನಡಚಿತ್ರಗೀತೆಗಳು) ಕ್ಯಾಲಿಫೋರ್ನಿಯಾದ ಆರತಿ ಗ್ರೂಪ್‌. ಶಂಕರ ನೇತ್ರ ಚಿಕಿತ್ಸಾಲಯ ಫೌಂಡೇಶನ್‌ ಪ್ರಾಯೋಜಕತ್ವ.

ಎರಡನೇ ದಿನ :

ಸೆಪ್ಟೆಂಬರ್‌ 2, ಶನಿವಾರ ಬೆಳಿಗ್ಗೆ 7:30ಕ್ಕೆ ವರ್ಣರಂಜಿತ ಮೆರವಣಿಗೆಯಾಂದಿಗೆ (ಇದು ಬಾಲ್ಟಿಮೋರ್‌ ಒಳಬಂದರು ಪ್ರದೇಶದಿಂದ ಮುಖ್ಯ ಸಭಾಂಗಣದವರೆಗೆ ಸಾಗುತ್ತದೆ) ಕಾರ್ಯಕ್ರಮಗಳ ಆರಂಭ.

  • 'ಎತ್ತಲೋ ಮಾಯವಾದ ಮುತ್ತು ರಾಜಕುಮಾರ..." ಡಾ।ರಾಜ್‌ ಸ್ಮರಣಾರ್ಥ ಗೀತ ನೃತ್ಯ ನಮನ : ನ್ಯೂಯಾರ್ಕ್‌ ಕನ್ನಡಕೂಟ ಪ್ರಸ್ತುತಿ
  • ನಾಗಾಭರಣ ತಂಡದವರಿಂದ ನಾಟಕ 'ಜೋಕುಮಾರ ಸ್ವಾಮಿ"
  • ಪ್ರವೀಣ್‌ ಗೋಡ್‌ಖಿಂಡಿ ಮತ್ತು ಬಳಗದ ವೇಣುಗಾನ ನಿನಾದ
  • ವಸುಂಧರಾ ದೊರೆಸ್ವಾಮಿ ತಂಡದ ಭರತನಾಟ್ಯ
  • ಕೊಡಗಿನ ಬೆಡಗಿಯರಿಂದ 'ಉಮ್ಮತ್ತಾಟ"
  • 'ಶ್ರೀಕೃಷ್ಣ ಸಂಧಾನ" ಹಾಸ್ಯನಾಟಕ: 'ಯಮ" ಖ್ಯಾತಿಯ ವಲ್ಲೀಶಶಾಸ್ತ್ರಿ ಬಳಗ
  • ಫ್ಯಾಷನ್‌ಶೋ ಮತ್ತು ಯಕ್ಷಗಾನ
  • ಸಂಗೀತ ರಸಸಂಜೆ (80-90ರ ದಶಕದ ಕನ್ನಡಚಿತ್ರಗೀತೆಗಳು) ಪದ್ಮಶ್ರೀ ಡಾ। ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಮತ್ತು ತಂಡದವರಿಂದ ಇಷ್ಟೇ ಅಲ್ಲದೆ ವಿದ್ಯಾಭೂಷಣರಿಂದ ಭಕ್ತಿಗೀತೆಗಳು, ಎಂಡಿ.ಪಲ್ಲವಿಯವರ ಹಾಡುಗಾರಿಕೆ, ಹಾಸ್ಯಲೋಕ ಭಾಗ 2, ಹಾಸಣಗಿ ಗಣಪತಿ ಭಟ್‌ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಹುಚ್ಚೂರಾವ್‌ ಏಂಡ್‌ ಸನ್ಸ್‌ ನಗೆನಾಟಕ ಮತ್ತು ಇನ್ನೂ ಅನೇಕ ಆಕರ್ಷಕ ಕಾರ್ಯಕ್ರಮಗಳಿವೆ.
  • ಶನಿ-ಭಾನುವಾರಗಳಂದು ದಿನವಿಡೀ 'ಪುರಂದರ ಭವನ"ದಲ್ಲಿ ಸಂಗೀತ ಕಾರ್ಯಕ್ರಮಗಳು!

ಅಂತಿಮ ದಿನ :

ಸೆಪ್ಟೆಂಬರ್‌ 3, ಭಾನುವಾರ ಸಮ್ಮೇಳನದ ಮೂರನೆಯ ದಿನದ ಕಾರ್ಯಕ್ರಮಗಳ ಪ್ರಧಾನ ಅಂಶಗಳು

  • 'ಉಂಡೂ ಹೋದ ಕೊಂಡೂ ಹೋದ", 'ವ್ಯಾಧಿಗೆ ತಕ್ಕ ವೈದ್ಯ" ಮತ್ತು 'ಜಮಖಂಡಿ ಮದುವೆ" ನಗೆನಾಟಕಗಳು
  • 'ಬೆರಳ್ಗೆ ಕೊರಳ್‌", 'ಏಕೀಕರಣ", 'ಅಂಗೈ ಅಗಲ ಆಕಾಶ", 'ಕುಜದೋಷವೋ ಶುಕ್ರದೆಸೆಯೋ" ನಾಟಕಗಳು
  • ಪುತ್ತೂರು ನರಸಿಂಹ ನಾಯಕ್‌ ಅವರಿಂದ ಭಕ್ತಿಗೀತೆಗಳು
  • 'ಗೌಡರ ಮಲ್ಲಿ" ನೃತ್ಯಕಾರ್ಯಕ್ರಮ ಮತ್ತು ಮಕ್ಕಳಿಂದ ಯಕ್ಷಗಾನ
  • ನಾಗರಾಜ್‌ ಹವಾಲ್ದಾರ್‌ ಮತ್ತು ಓಂಕಾರ್‌ ಹವಾಲ್ದಾರ್‌ ಹಿಂದುಸ್ತಾನಿ ಗಾಯನ
  • 'ಕಾವೇರಿ ಸುವರ್ಣ ಸಂಗಮ" ಆತಿಥೇಯ ಕಾವೇರಿ ಕನ್ನಡ ಸಂಘದ ಸರ್ವಸದಸ್ಯರ ಅಭೂತಪೂರ್ವ ಗೀತನರ್ತನ.
  • ಸಮ್ಮೇಳನ ವೈಭವಕ್ಕೆ ಕಳಶಪ್ರಾಯವಾದ ಸಮಾರೋಪ ಸಮಾರಂಭ - ಸಂಗೀತ ರಸಸಂಜೆ (21ನೇ ಶತಮಾನದ ಕನ್ನಡಚಿತ್ರಗೀತೆಗಳು) ಗುರುಕಿರಣ್‌ ಮತ್ತು ತಂಡದವರಿಂದ ಇಷ್ಟೇ ಅಲ್ಲದೆ ಕರ್ನಾಟಕ ಸರಕಾರದ ಪ್ರತಿನಿಧಿಗಳಾಗಿ ಆಗಮಿಸಿರುವ ಕಲಾವಿದರಿಂದ ವಿವಿಧ ಪ್ರಸ್ತುತಿಗಳು, ಸಂಗೀತಾ ಕಟ್ಟಿ ಗಾಯನ, ಸುಪರ್ಣಾ ರವಿಶಂಕರ್‌ ವೀಣಾವಾದನ, ಅರುಣ್‌ ಮತ್ತು ತಂಡದವರಿಂದ ತಾಳವಾದ್ಯಕಚೇರಿ, ವಸಂತಾಶಶಿ ಅವರ ಸಂಗೀತ ಕಾರ್ಯಕ್ರಮ, ಸುಪ್ರಿಯಾ ದೇಸಾಯಿ ನೃತ್ಯಕಾರ್ಯಕ್ರಮ, ವಿವಿಧ ಕನ್ನಡಕೂಟಗಳಿಂದ ವೈವಿಧ್ಯಮಯ ಪ್ರಸ್ತುತಿಗಳು ಮತ್ತಿತರ ಆಕರ್ಷಣೆಗಳೂ ಇವೆ.

ಚಲನಚಿತ್ರೋತ್ಸವ :

ಸಮ್ಮೇಳನದ ಮೂರು ದಿನಗಳಲ್ಲಿ ಒಟ್ಟು ಐದು ಕನ್ನಡ ಚಲನಚಿತ್ರಗಳ ಪ್ರದರ್ಶನದ ಏರ್ಪಾಟಾಗಿದೆ. ಪ್ರದರ್ಶಿತವಾಗಲಿರುವ ಚಿತ್ರಗಳು - 'ಸಯನೈಡ್‌", 'ಆಕಸ್ಮಿಕ", 'ಕಾನೂರು ಹೆಗ್ಗಡತಿ", 'ಹಸೀನಾ" ಮತ್ತು 'ಗುಟ್ಟು". ಅಂತೂ ಎಲ್ಲ ವಿಧಗಳಿಂದಲೂ ನ ಭೂತೋ ನ ಭವಿಷ್ಯತಿ... ಎನಿಸಿಕೊಳ್ಳುವತ್ತ ಅಣಿಗೊಂಡಿದೆ.

ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ. ಇದು ಕನ್ನಡಮ್ಮನ ಸ್ವರ್ಣ ಸಂಭ್ರಮದ ಪುಷ್ಪಕ್ಕೆ ಅನಿವಾಸಿ ಕನ್ನಡಿಗರ ವತಿಯಿಂದ ಸುಗಂಧದ ಲೇಪನ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X