ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕನ್ನಡಿಗರ ಜಾತ್ರೆಯಲ್ಲಿ ನೂರೊಂದು ಮಾತು!

By Staff
|
Google Oneindia Kannada News
  • ಬೇರೆಯವರ ತಪ್ಪಿನಿಂದ ಕಲಿ ಅಂತಾರೆ. ಬಾಲ್ಟಿಮೋರ್ನವರು ಡೆಟ್ರಾಯ್ಟ್‌ುನವರ ಮತ್ತು ಓರ್ಲ್ಯಾಂಡೋನವರ ತಪ್ಪಿನಿಂದ ಏನೂ ಕಲೀಲೇ ಇಲ್ವಲ್ರೀ. ಮತ್ತೆ ಅದೇ ತಪ್ಪನ್ನೇ ಮಾಡ್ತಾ ಇದ್ದರೆ ಹೇಗೆ? ಹೊಸಾ ಹೊಸಾ ತಪ್ಪನ್ನು ಮಾಡಬೇಕಪ್ಪ.
  • ಈ ವಿಶ್ವ ಕನ್ನಡ ಸಮ್ಮೇಳನದಲ್ಲೂ ಸಾಹಿತ್ಯ ಅಂತ ಗೋಳುಹುಯ್ಕೊಂಡರೆ ಹೆಂಗೆ.
  • ಆರಾರು ಕಡೆ ಒಟ್ಟಿಗೇ ಪ್ರೋಗ್ರಾಮ್‌ ಮಾಡಿದರೆ, ಎಲ್ಲೀಂತಾ ಹೋಗೋಣ.
  • ಊಟ ಬಿಡ್ರೀ. ಒಂದೇ ಸತಿಗೆ ಒಂದು ಇಪ್ಪತ್ತು ಸಾವಿರ ಚಪಾತಿ ಮಾಡಿಟ್ಟಿದ್ದನೋ ಆ ಮಿನರ್ವಾದವನು.
  • ಓಪನ್‌ ಬಾರ್‌ ಇಲ್ವಾ.
  • ಪಾಪ, ಐದುಸಾವಿರ ಜನಕ್ಕೆ ಹೊಂದಿಸೋದು ಅಂದ್ರೆ ಏನು ಸುಲಭಾನೇನ್ರೀ. ವಾಲಂಟಿಯರ್ಸ್‌ ಎಷ್ಟು ಕಷ್ಟ ಪಡ್ತಾ ಇದಾರೆ ನೋಡ್ರೀ.
  • ವಿಂದ್ಯಾಮ್‌ ಹೋಟೆಲಿನ ಕರಿಯ ಪರಿಚಾರಕಿ ಹೇಳಿದ್ದು -‘ನೋ ಟಿಂಡೀ.. ಟಿಂಡೀ ಓವರ್‌’
  • ಬರೀ ಕನ್ನಡಿಗರು ಇರೋ ಕಾನ್ಫರೆನ್ಸಿನಲ್ಲಿ ನಾನ್‌ ವೆಜ್ಜಿನ ಅವಶ್ಯಕತೆ ಏನಿತ್ತಪ್ಪ?
  • ಈ ಶಟಲ್‌ನಲ್ಲಿ ನಿಂತ್ಕೊಂಡು ಹೋಗ್ತಾ ಇದ್ದರೆ ಬಿಟಿಎಸ್‌ ಬಸ್‌ ನೆನಪಾಗುತ್ತೆ ಅಲ್ವಾ? ಬಿಟಿಎಸ್‌ ಅಲ್ವಂತೆರೀ ಅದು ಈಗ.. ಅದಕ್ಕೆ ಈಗ ಇನ್ನೇನೋ ಅಂತರಂತ್ರೀ.
  • ಏನೇ ಆದರೂ ಬಹಳ ಕಷ್ಟಪಟ್ಟಿದ್ದಾರೆ ಬಿಡ್ರೀ.
  • ಮೇಜರ್‌ ಮಿಸ್ಟೇಕ್‌ ಇವರದಲ್ಲ. ಈ ಟೈಮಿನದು. ಹರಿಕೇನ್‌, ವೆದರ್‌ ಪ್ರಾಬ್ಲಮ್‌ಗಳು ಈವಾಗಲೇ ಜಾಸ್ತಿ. ಸುಮ್ಮನೆ ಇದನ್ನು ಮೆಮೋರಿಯಲ್‌ ಡೇ ವೀಕೆಂಡಿಗೆ ಶಿಫ್ಟ್‌ ಮಾಡ್ಬೇಕ್ರೀ.
  • ವಡೆ ಓವರ್‌ ಫರ್ಮೆಂಟೆಡ್ಡು. ತಿನ್ನಬೇಡ್ರೀ, ಡೇಂಜರಸ್ಸು.
  • ಡೈರೆಕ್ಟ್‌ ಫ್ಲೈಟಿಗೇ ಬಂದದ್ದು, ಬಂದವಳೇ ಸೀದಾ ದೀಪಂ ಸಿಲ್ಕ್ಸ್‌ಗೇ ಹೋಗಿದ್ದು ಹೌದಾ, ನೀವೇ ಪುಣ್ಯವಂತರ್ರೀ.
  • ನನ್ನ ಹೆಸರು ಚನ್ನವೀರ ಕಣವೀ ಅಂತ.
  • ನನ್ನ ಹೆಸರು ಚಂದ್ರಶೇಖರ ಪಾಟೀಲ ಅಂತಾ.
  • ನಮಸ್ಕಾರ-- ಈ ಶಬ್ದ ತಮಾಷೆಯಂತೆ ಬಳಕೆಯಾಗುತ್ತಿತ್ತು!
  • ನಿನ್ನೆ ಎಲ್ಲಾ ಫುಲ್‌ ಅಪ್ಸೆಟ್ಟಂತೆ. ಇವತ್ತು ಪರವಾಗಿಲ್ಲ.
  • ಅಕ್ಕದ ಪರ್ಮನೆಂಟ್‌ ಪ್ರೆಸಿಡೆಂಟಾ ಅಮರನಾಥ ಗೌಡ್ರು. -ಇಲ್ಲರೀ, ಅವರು ಪ್ರೆಸಿಡೆಂಟಲ್ಲ.. ಅವರು ಇನ್ನೇನೋ ಬೋರ್ಡಲ್ಲಿದ್ದಾರೆ.. ಅವರೇನು ಮುಂದಿನ ಸಲ ಎಲೆಕ್ಷನ್ನಿಗೇನಾದರೂ ನಿಂತೊಳ್ತಾರೇನ್ರೀ..
  • ಆದರೂ ಕಷ್ಟಾರೀ ಇಷ್ಟು ಜನಾನ ಮ್ಯಾನೇಜ್‌ ಮಾಡೋದು, ನಮ್ಮ ಜನಾ ಸ್ವಲ್ಪ ಅಡ್ಜಸ್ಟ್‌ ಮಾಡ್ಕೋಬೇಕ್ರೀ.
  • ಇವ್ರುದ್ದೇನು ಬಿಡ್ರಿ. ಆಂಧ್ರಾದವರದ್ದು ‘ತಾನಾ’ ಅಂತ ಒಂದಿದೆಯಂತೆ, ನಮ್ಮ ‘ಅಕ್ಕ’ ಇಲ್ವಾ ಹಂಗೆ. ಅವರು ವರ್ಷಕ್ಕೆ ಒಂದು ಸರ್ತಿ ಹತ್ತುಸಾವಿರ ಜನಕ್ಕೆ ಇಂತಾ ಕಾನ್ಫರೆನ್ಸ್‌ ಮಾಡ್ತಾರಂತೆ, ಎಷ್ಟು ಪ್ರೊಫೆಶನಲ್‌ ಆಗಿ ಮಾಡ್ತಾರಂತೆ ಗೊತ್ತಾ.
  • ಏನೇ ಆಗಲೀ, ಕಷ್ಟಾರೀ.
ನುಡಿ ಹಬ್ಬದ ಚಿತ್ರಪಟಗಳು :
ಕೂತಲ್ಲಿಯೇ ಸಮ್ಮೇಳನ ಕಾಣಿರಿ!
ಸಡಗರ ಮತ್ತು ಸಂಭ್ರಮ-3ನೇ ದಿನ
ಮೆರವಣಿಗೆಯ ನೋಟ - 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X