ಸ್ವಾಗತಕೆ ಕೈಜೋಡಿಸಿವೆ ‘ಸುಗಂಧ-ವಿಕಾಸ’

  • ದಟ್ಸ್‌ಕನ್ನಡ ಟೀಂ, ಒರ್ಲಾಂಡೊ
ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ ‘ವಿಕಾಸ’ ಶಿರೋನಾಮೆಯ, ಸುಮಋ 450 ಪುಟಗಳ ಅತ್ಯಾಕರ್ಷಕ ಸ್ಮರಣಸಂಚಿಕೆಯಾಂದು ಬಿಡುಗಡೆಯಾಗಲಿದೆ.

ಶನಿವಾರ ಸೆ. 4ರಂದು ಉದ್ಘಾಟನಾ ಸಮಾರಂಭದ ನಂತರ ಬಿಡುಗಡೆಯಾಗುವ ಈ ಸಂಚಿಕೆಯಲ್ಲಿ ಬಹುತೇಕವಾಗಿ ಅಮೆರಿಕನ್ನಡಿಗರ ಮತ್ತು ವಿಶ್ವದ ಇತರೆಡೆಗಳ ಕನ್ನಡಿಗರು ಬರೆದಿರುವ ಲೇಖನ, ಪ್ರಬಂಧ, ಕವನ, ಕಥೆ ಮತ್ತಿತರ ಸಾಹಿತ್ಯಪ್ರಕಾರಗಳ ಸಂಗಮವಿದೆ. ಲೇಖನಗಳ ಆಯ್ಕೆಯಲ್ಲಿ ಪ್ರತಿಭೆಗೆ ಪ್ರೋತ್ಸಾಹದ ಜತೆಜತೆಯಲ್ಲೇ ಅತ್ಯುತ್ಕೃಷ್ಟ ಗುಣಮಟ್ಟದೆಡೆಗೂ ತೀವ್ರ ಗಮನವಿರಿಸಲಾಗಿದೆ ಎಂದು ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಮುಖ್ಯಸ್ಥ ಡಾ। ಯು.ಬಿ. ವಾಸುದೇವ ರಾವ್‌.

ಸಮ್ಮೇಳನದ ಕಾರ್ಯಕ್ರಮ ವಿವರ ಮತ್ತಿತರ ವಿಷಯಗಳ ಮಾರ್ಗದರ್ಶಿ ಕೈಪಿಡಿ ‘ಸುಗಂಧ’ ಕೂಡ ಅಣಿಯಾಗಿದ್ದು ಪ್ರತಿಯಾಬ್ಬ ಸಮ್ಮೇಳನಾರ್ಥಿ ಕುಟುಂಬಕ್ಕೆ ತಲಾ ಒಂದರಂತೆ ‘ವಿಕಾಸ’ ಮತ್ತು ‘ಸುಗಂಧ’ಗಳ ಬಟವಾಡೆ ಆಗುತ್ತದೆ, ಸ್ವಾಗತಕಕ್ಷೆಯಲ್ಲೇ.

ಸಮ್ಮೇಳನ ಮುಗಿದ ನಂತರವೂ ಒರ್ಲಾಂಡೊ ನೆನಪುಗಳು ‘ವಿಕಾಸ’ದ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಿದವರ ಬೆನ್ನಟ್ಟಲಿವೆ, ಮನೆಮನೆಗೆ ತೆರಳಲಿವೆ.

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+