• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಂದರಿ ಯುವತಿ ಮತ್ತು ಆಕೆಯ ಜಾಣ ನಾಯಿ!

By ನಾಗರಾಜ್ ಎಂ, ಕನೆಕ್ಟಿಕಟ್
|

ಬೆಳಿಗ್ಗೆ ಎದ್ದಾಗ ನೆನಪಾಗಿತ್ತು... ಓಹ್ ಇಂದು ಶುಕ್ರವಾರ... ವೀಕೆಂಡ್ ಬಂತು.. ಇವತ್ತು ಸ್ವಲ್ಪ ಹೊತ್ತು ಹಾಗೋ - ಹೀಗೋ ಕೆಲಸ ಮಾಡಿ ಮುಗಿಸಿಬಿಟ್ರೆ.. ಸಂಜೆ ಹ್ಯಾಪಿ Friday ಪಾರ್ಟಿಗೆ ಹೋಗಬಹುದು ಅಂತ ಖುಷಿಯಿಂದ ಎದ್ದು ಕಿಟಕಿಯ ಕರ್ಟನ್ ಸರಿಸಿದ್ದೆ. ರಶ್ಮಿಯ ದರ್ಶನ ಮಾಡಲು (ಅಂದ್ರೆ ಸೂರ್ಯ ದೇವನ ರಶ್ಮಿ.. ತಪ್ಪು ತಿಳ್ಕೋಬೇಡಿ, ಎದುರು ಮನೆ ರಶ್ಮಿ ಅಂತ!

ನೋಡಿದರೆ ಸೂರ್ಯದೇವ ನಾಪತ್ತೆ. ಫುಲ್ ಮಳೆ ಮೋಡಗಳು... ಜಿಟಿ ಪಿಟಿ ಅಂತ ಆಗ್ಲೇ ಬೀಳ್ತಿರೋ ಮಳೆ ಹನಿಗಳು... ಓಹ್ ಓಹ್... ಈ ಮಳೆಯಲ್ಲಿ ಆಫೀಸಿಗೆ ಹೋಗೋದು ಹೇಗೆ? ಟ್ರಾಫಿಕ್ ಜಾಸ್ತಿ ಇರುತ್ತೆ ಅಂತ... ಮನೆಯಿಂದಾನೆ ಲಾಗಿನ್ ಆಗಿದ್ದೆ. (ಇಲ್ಲಿ ಬರ್ತಿರೋ ಮಳೆ ಮೋಡಗಳು ನಮ್ಮೂರ ಕಡೆನಾದ್ರೂ ಹೋಗಿ ಮಳೆ ಸುರಿಸಿದರೆ... ಬಿಸಿಲ ಬೇಗೆಗೆ, ಬರಗಾಲಕ್ಕೆ ತತ್ತರಿಸಿರೋ ಜನಕ್ಕೆ, ಎಲ್ಲಾ ಪ್ರಾಣಿ-ಪಕ್ಷಿಗಳಿಗೆ ಒಳ್ಳೆದಾದ್ರೂ ಆಗ್ತಿತ್ತಲ್ಲ ಅಂತ ಮನದಲ್ಲೇ ಆಲೋಚನೆ ಮೂಡಿತ್ತು ಕೂಡ).

ಫ್ರೈಡೆ ಆದರೂ ಇವತ್ತು ಯಾಕೋ ಸ್ವಲ್ಪ ಜಾಸ್ತಿನೆ ಕೆಲಸ ಇದ್ದಿದ್ದರಿಂದ... ಟೈಮ್ ಹೋಗಿದ್ದೆ ಗೊತ್ತಾಗ್ಲಿಲ್ಲ.. ತಲೆಯೆತ್ತಿ ನೋಡಿದರೆ ಆಗ್ಲೇ ಮಧ್ಯಾನ್ಹ 3 ಗಂಟೆ ಆಗಿತ್ತು. ಮಳೆ ಬೇರೆ ನಿಂತಿತ್ತು... ಕುಂತು ಕುಂತು ಸಾಕಾದಂಗೆ ಆಗಿದ್ದರಿಂದ.. ಸ್ವಲ್ಪ ಫ್ರೆಶ್ ಗಾಳಿ ಕುಡುಕೊಂಡು ಬರೋಣ ಅಂತ ಜಾಗ್ ಮಾಡಲಿಕ್ಕೆ ಹೊರಟಿದ್ದೆ. [ಪ್ರೊಫೆಸರ್ ಸಾಕಿದ ಲಾಸಿಯ ನಾಯಿ ಪಾಡು!]

ಮನೆ ಹತ್ರಾನೆ ಹಾಗೇ ಸೈಡಲ್ಲಿ ನಿಧಾನವಾಗಿ ಜಾಗ್ ಮಾಡ್ತಾ ಇದ್ದೆ. ಒಬ್ಬರೋ ಇಬ್ಬರೋ ಎದುರಿಗೆ ಕಂಡೋರು.. ಹಾಯ್ ಅಂತ ಹೇಳಿ ಸ್ಮೈಲ್ ಕೊಟ್ಟು ಹೋಗಿದ್ದರು. ಫ್ರೈಡೆ ಮಧ್ಯಾನ್ಹ 3 ಗಂಟೆಯಲ್ಲಿ ಯಾರು ಜಾಗ್ ಬರ್ತಾರೆ? ಎಲ್ಲರೂ ಆಲ್ರೆಡಿ ಆಫೀಸಿಂದ "ಮನೆ ಕಡೆಗೆ" ಇಲ್ಲ ಅಂದ್ರೆ "ಬಾರು ಕಡೆಗೆ" ಹೋಗೋದು ಬಿಟ್ಟು ಅಲ್ವಾ? [ರಾಜ್ ಠಾಕ್ರೆ ಪತ್ನಿ ಶರ್ಮಿಳಾಗೆ ಸಾಕುನಾಯಿ ಕಚ್ಚಿದ್ದೇಕೆ?]

ಸ್ವಲ್ಪ ದೂರ ಓಡಿದ ಮೇಲೆ ಎದುರಲ್ಲಿ ಯಾರೋ ಒಬ್ಬರು ಒಂದು ಕೈಯಲ್ಲಿ ನಾಯಿನ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಸೆಲ್ ಫೋನ್ ನಲ್ಲಿ ಏನೋ ನೋಡ್ಕೋತಾ ಹೋಗ್ತಾ ಇರೋದು ಕಾಣಿಸ್ತು. ದೂರದಿಂದಲೇ ಯಾವ್ದೋ ಹುಡುಗಿ ಇರಬಹುದಾ ಅಂತ ಮನ, ಲೆಕ್ಕ ಹಾಕ್ತಾ ಇತ್ತು. ಸೈಡ್ ವಾಕ್ ನಲ್ಲಿ ಜಾಗ ಇಲ್ಲ, ನಾಯಿ ಬೇರೆ ಇದೆ. ಸ್ವಲ್ಪ ಹುಷಾರಾಗಿ ಪಕ್ಕದಿಂದ ಹೋಗು ಅಂತ ಮೆದುಳು ಎಚ್ಚರಿಸಿದ್ದರಿಂದ... ಆಕಡೆ - ಈಕಡೆ ಯಾವು ವೆಹಿಕಲ್ಸ್ ಇಲ್ಲ ಅಂತ ಖಾತರಿ ಮಾಡ್ಕೊಂಡು, ರಸ್ತೆ ಬದಿಗೆ ಇಳಿದು ಅವರನ್ನು ಪಾಸ್ ಮಾಡಿ ಮುಂದೆ ಹೋಗಿದ್ದೆ. ಪಕ್ಕದಲ್ಲೇ ಆ ನಾಯಿ ಇದ್ದಿದ್ದರಿಂದ ಅವಳ ಕಡೆಗೆ ಸರಿಯಾಗಿ ನೋಡಲು ಆಗದೆ ಸುಮ್ನೆ ಮುಂದೆ ಹೋಗಿದ್ದೆ.

ಹಾಗೇ ಒಂದು ಹತ್ತು ನಿಮಿಷ ದೂರ ಓಡಿ.. ತಾಜಾ ಗಾಳಿ ಕುಡಿದು ಫ್ರೆಶ್ ಅಂತ ಅನ್ನಿಸಿದಾಗ.. ಮತ್ತೆ ತಿರುಗಿ ವಾಪಸು ಬಂದ ದಾರಿಯಲ್ಲೇ ಓಡಿದ್ದೆ ಮನೆ ಕಡೆಗೆ. ಮತ್ತೆ ಎದುರು ಸ್ವಲ್ಪ ದೂರದಲ್ಲೇ ಕಂಡಿದ್ದರು ಆ ನಾಯಿ ಮತ್ತು ಅದನ್ನು ಹಿಡಿದ ಹುಡುಗಿ... mostly ಆ ನಾಯಿ ತನ್ನ ನಿತ್ಯ ಕರ್ಮಗಳನ್ನು ಮಾಡ್ತಾ ಇತ್ತು ಅನ್ನಿಸುತ್ತೆ. ಆ ಕೆಲಸ ಮುಗಿದ ತಕ್ಷಣ.. common ಲೆಟ್ಸ್ ಗೋ... ಐ ಯಾಮ್ ಗೆಟಿಂಗ್ ಲೇಟ್ ಫಾರ್ ಪಾರ್ಟಿ ಅಂತ ಆ ಹುಡುಗಿ ಹೇಳಿ, ಆಕಡೆ ತಿರುಗಿ ಹೋಗಲು ನಿಂತಿದ್ದು ಕಾಣಿಸಿತ್ತು. [ಡಿಕೆ ರವಿ ಮುದ್ದಿನ ನಾಯಿ ರೋನಿ ರೋದನಕ್ಕಿಲ್ಲ ಉತ್ತರ]

ಆದ್ರೆ, ಯಾಕೋ ಆ ನಾಯಿ ಜೋರಾಗಿ ಬೌ ಬೌ ಅಂತ ಬೊಗಳುತ್ತಾ ಕಟ್ಟಿದ ಹಗ್ಗ (ಚೈನ್) ಬಿಡಿಸಿಕೊಳ್ಳೋ ಹಾಗೇ ಕಂಡಿದ್ದರಿಂದ ಮತ್ತೆ ನನ್ನೆಡೆಯೇ ಬರಲು ಹವಣಿಸಿದ್ದರಿಂದ... ಒಮ್ಮೆಲೇ ನನ್ನೆದೆ ಬಡಿತ ಜೋರಾಗಿ, ಸ್ವಲ್ಪ ದೂರದಲ್ಲೇ ನಿಂತಿದ್ದೆ (ಬೆಂಗಳೂರಲ್ಲಿ ನಾಯಿ ಕಡಿತದ ಹಾವಳಿ - ವರದಿಯ ಚಿತ್ರಣ ಸುಳಿದಿತ್ತು ಮನದಲ್ಲಿ ಹಾಗೇ).

ಹೇ ಹೇ ವಾಟ್ happening ಟು ಯು? ಅಂತ ಸ್ವೀಟ್ ವಾಯ್ಸ್ ನಲ್ಲೆ ಅದರ ಚೈನ್ ಬಿಗಿಯಾಗಿ ಹಿಡಿದು ಎಳೆಯುತ್ತಾ... ಕೈಯಿಂದ ಸೆಲ್ ಫೋನ್ ಎಲ್ಲಿ ಜಾರಿ ಬೀಳುತ್ತೋ ಅಂತ ಅದನ್ನೂ ಬಿಗಿಯಾಗಿ ಹಿಡಿದ ಆ ಹುಡುಗಿ ಏದುಸಿರು ಬಿಡುತ್ತಾ "ಡೋಂಟ್ ವರಿ.. ಇಟ್ ವೊಂಟ್ ಬೈಟ್ ಎನಿ ಒನ್" ಅಂತ ನನ್ನೆಡೆ ನೋಡುತ್ತಾ ಅದರಿಂದೆ ಓಡುತ್ತಾ ಬಂದಾಗ... ಹಾಗೇ ಮತ್ತೆ ರೋಡಿಗಿಳಿದಿದ್ದೆ. ಕೊನೆಗೂ ಕಟ್ಟಿದ ಹಗ್ಗವ ಬಿಡಿಸಿಕೊಂಡು ಜೋರಾಗಿ ಓಡಿ ಬಂದ ನಾಯಿ... ನನ್ನ ಮುಂದೆ ಕ್ರಾಸ್ ಮಾಡಿ ನನ್ನೆಡೆ ನೋಡದೆ ಓಡಿದ್ದ ಕಂಡು ಸ್ವಲ್ಪ ಉಸಿರು ಬಂದಂತಾಗಿ ನಿಟ್ಟುಸಿರು ಬಿಟ್ಟಿದ್ದೆ. ಅದರಿಂದೇನೆ ಟೈಟ್ ಜೀನ್ಸ್ ಹಾಕೊಂಡ ಆ ಸುಂದರಿ ನನ್ನ ಹಾದು ಹೋಗುವಾಗ ಹಾಯ್ ಅಂದು... "ಡೋಂಟ್ know, ವೈ she ಇಸ್ ರನ್ನಿಂಗ್" ಅಂತ ಏದುಸಿರಲ್ಲೇ ಅಂದು ಅದರಿಂದೇನ್ದೇನೆ ಓಡಿದ್ದಳು.

ನನಗೂ ಸ್ವಲ್ಪ ಕುತೂಹಲ ಮೂಡಿತ್ತು... ಯಾಕೆ ಮತ್ತೆ ಎಲ್ಲಿಗೆ ಅದು ಓಡ್ತಿದೆ ಅಂತ? ಹಾಗೇ ನಿಂತು ನೋಡುವಾಗ, ಸ್ವಲ್ಪ ದೂರ ಓಡಿದ ಆ ನಾಯಿ ಮತ್ತೆ ನಿಂತು ಏನೋ ತೋರಿಸುವ ಹಾಗೇ ಒಮ್ಮೆ ಅತ್ತ ನೋಡುತ್ತಾ, ಮಗದೊಮ್ಮೆ ಅವಳೆಡೆ ನೋಡುತ್ತಾ ಬೊಗಳುತ್ತಿತ್ತು. ಉಸ್ಸಪ್ಪಾ ಅಂತ ಓಡಿದ್ದ ಆ ಹುಡುಗಿ ಅದನ್ನ ಮತ್ತೆ ಹಿಡಿದು ಅದು ಬೊಗಳುವ ಕಡೆ ಒಮ್ಮೆ ನೋಡಿ...

"ಓಹ್ ದಿಸ್ ಒನ್ ಹಾ... you are saying me to take this cover and clean your poo... you are ವೆರಿ clever girl... ಸಾರೀ totally I forgot in an hurry ಟು ಪಾರ್ಟಿ" ಅಂತ ಅದಕ್ಕೆ ಸಾರೀ ಹೇಳುತ್ತಾ, ಅವಳು ಅಲ್ಲೇ ಇದ್ದ ಆ ಗ್ರೀನ್ ಕಾಲರ್ ಬಾಕ್ಸ್ ನಿಂದ ಒಂದು ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಬಂದು ಅದು ಮಾಡಿದ್ದ ಗಲೀಜನ್ನು ಅದರಲ್ಲಿ ಎತ್ತಾಕಿ ಮತ್ತೆ ಅದೇ ಡಬ್ಬದ ಕೆಳಗಡೆ ಇದ್ದ ಕಸದ ಬುಟ್ಟಿಗೆ ಹಾಕಿದ್ದಳು.

ಅದೆಲ್ಲ ಹಾಗೇ ನೋಡ್ತಾ ನಿಂತಿದ್ದ ನಂಗೆ.. ಆಶ್ಚರ್ಯದ ಜೊತೆ... ಆ ನಾಯಿ ತೋರಿದ ಕ್ಲೀನ್ ನೆಸ್ ಬುದ್ದಿ ಕಂಡು ಸಂತೋಷದ ಜೊತೆ ಸ್ವಲ್ಪ ದುಃಖ ಕೂಡ ಆಗಿತ್ತು.. ಯಾಕೆ ಅಂತಿರಾ? ಆ ನಾಯಿಗಿರೋ ಕ್ಲೀನ್ ನೆಸ್ ಬುದ್ದಿ ನಮ್ಮ ಮನುಜರಲ್ಲಿ (ಬಹುತೇಕ ಮಂದಿಯಲ್ಲಿ... ಎಲ್ಲರೂ ಅಲ್ಲ) ಸ್ವಲ್ಪನಾದ್ರೂ ಇದ್ದಿದ್ದರೆ.. ಈ ಭೂಮಿ ಇವತ್ತು ಎಷ್ಟೊಂದು ಸ್ವಚ್ಛವಾಗಿ, ಸುಂದರವಾಗಿ ಇರ್ತಿತ್ತಲ್ಲಾ ಅಂತ...

ಎಲ್ಲಾ ಆದ ಬಳಿಕ ಅವರಿಬ್ಬರೂ ಮತ್ತೆ ನಿಧಾನವಾಗಿ ನನ್ನ ಮುಂದೆ ಹಾದು ಹೋಗುವಾಗ ಕೇಳಿದ್ದೆ... Can I pat her? ಓಹ್ Sure.. ವೈ ನಾಟ್? ಅಂತ ಅವಳು ಹೇಳಿದ ಮೇಲೆ... ಶಾಂತವಾಗಿ ನನ್ನೆಡೆ ನೋಡುತ್ತಾ ಇದ್ದ ಆ ನಾಯಿಯ ಮೈ ಸವರಿದ್ದೆ. ಅವರಿಬ್ಬರಿಗೂ ಬಾಯ್ ಅಂತ ಹೇಳಿ ಬರುವಾಗ ಆ ಹುಡುಗಿಗೆ ಹೇಳಿದ್ದೆ.. "She is very clever" ಅಂತ ಅದರೆಡೆ ನೋಡಿ... and "very cute" ಅಂತ ಅವಳೆಡೆ ನೋಡಿದ್ದೆ! [ಮಂಡ್ಯದಲ್ಲಿ ರಾಮಣ್ಣನ ತಿಥಿ ಮಾಡಿದ ಗ್ರಾಮಸ್ಥರು!]

English summary
A Kannada short story by Nagaraja Maheswarappa, Connecticut, USA. Story about a beautiful girl and her clever dog. This has a beautiful message about cleanliness and keeping our environment healthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more