ಅಂತೂ ಮಾವನ ಮಗಳ ಸವಾರಿ ಬಂತು ನೋಡಿ

ಅವಳ ಕ್ಷೇಮದ ಬಗ್ಗೆ ವಿಚಾರಣೆ ಮಾಡಿದ ಹಾಗೂ ಆಯ್ತು, ಕ್ಯಾಲ್ಕುಲಸ್ ಲೆಕ್ಕ ಹೇಳಿಕೊಟ್ಟ ಹಾಗೂ ಆಯ್ತು ಅಂತ ಮನದಲ್ಲೇ ಕ್ಯಾಲ್ಕುಲೇಟ್ ಮಾಡಿ... ಮಾಮ ತಿಂಗಳಿಗೊಮ್ಮೆ ಅಂತ ಹೇಳಿದ್ದರೂ, 15 ದಿನಕೊಮ್ಮೆ ಅವಳನ್ನು ನೋಡಲಿಕ್ಕೆ ಹೋಗಿಬರುತ್ತಿದ್ದೆ. ಹೀಗೆ ದಿನಗಳು ಉರುಳಿ ಎರಡನೇ ವರ್ಷದ ಇಂಜಿನಿಯರಿಂಗ್ ಕಾಲಿರಿಸಿದ್ದೆ. ಆಗಿನ್ನೂ ಸೆಲ್ ಫೋನ್, ಇಂಟರ್ನೆಟ್, ಇಮೇಲ್ ಹಾವಳಿ ಇಲ್ಲದ ದಿನಗಳು. ಯಾರನ್ನರಾ ಮಾತಾಡಿಸಬೇಕು ಅಂದರೆ STD, ಲೋಕಲ್ ಕಾಲ್ ಮಾಡಬೇಕಾಗಿತ್ತು. ಇಲ್ಲವೇ ಪತ್ರ ಬರೆಯಬೇಕಾಗಿತ್ತು.
ಪರದೇಶದಿಂದ ಬಂದಂತಹ "ಪ್ರೇಮಿಗಳ ದಿನಾಚರಣೆ" ಆಗ ತಾನೇ ನಮ್ಮ ಬೆಂಗಳುರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಅಂಬೆಗಾಲಿಟ್ಟಿದ್ದ ದಿನಗಳು. ನನ್ನ ಕ್ಲಾಸ್ ಮೇಟ್ ಒಬ್ಬ ಒಂದು ದೊಡ್ಡ ಗ್ರೀಟಿಂಗ್ ಕಾರ್ಡ್ ತಂದು ಅದರಲ್ಲಿ ಅವನ ಹೆಸರು ಬರೆದು ಯಾವುದೊ ಹುಡುಗಿಗೆ ಕೊಡಲಿಕ್ಕೆ ಹೊರಟಿದ್ದುದನ್ನು ನೋಡಿ ನಂಗೂ ಒಂತರ ಆಸೆ ಚಿಗುರಿತ್ತು ಮನದಲ್ಲಿ! ಆಗ ತಾನೇ ಬಂದಿದ್ದ ರವಿಚಂದ್ರನ್ ಅಭಿನಯಿಸಿದ್ದ "ಅಂಜದ ಗಂಡು "ಸಿನೆಮಾ ನೋಡಿದ್ದ ನಾನು ಸ್ವಲ್ಪ ಧೈರ್ಯ ಮಾಡಿ ಹೇಗೂ ಸ್ವಲ್ಪ ಸಲಿಗೆಯಲ್ಲಿದ್ದ ಮಾವನ ಮಗಳು ನಿರುಪಮಗೆ ಪತ್ರ ಬರೆಯ ಬೇಕೆಂದು ಕೂತಿದ್ದೆ. ಯಾರೋ ರೆಡಿ ಮಾಡಿದ್ದ ಗ್ರೀಟಿಂಗ್ ಕಾರ್ಡ್ ತಂದು ಅದಕ್ಕೆ ಸಹಿ ಕೊಡುವುದಕ್ಕಿಂತ ನಾನೇ ಒಂದು ಕಾರ್ಡ್ ರೆಡಿ ಮಾಡಿ ಕೊಟ್ಟರೆ ಹೇಗೆ? ಎಂದು ಯೋಚನೆ ಮಾಡಿ, ಬರೆಯಲು ಕೂತರೆ.. ಹೇಗೆ ಪ್ರಾರಂಭ ಮಾಡಬೇಕೆಂದೇ ತೋಚದಾಗಿತ್ತು.
ಇಷ್ಟು ದಿನಾ ಅಪ್ಪ-ಅಮ್ಮಗೆ ಪತ್ರ ಬರೆದು ರೂಡಿಯಿದ್ದ ನನಗೆ ..ಮೊದಲ ಬಾರಿಗೆ ಪ್ರೇಮ ಪತ್ರ ಬರೆಯುವುದು ನಿಜಕ್ಕೂ ಕಬ್ಬಿಣದ ಕಡಲೆಯಂತಾಗಿತ್ತು. ಒಂದು, ಎರಡು... ಮೂರು.. ಹತ್ತು ಬಾರಿ ಗೀಚಿ, ಪೇಪರ್ ಅನ್ನು ಕಿತ್ತಾಕಿ ರೂಮೆಲ್ಲ ಗಲೀಜಾಗಿತ್ತು. ಅಂತೂ ಇಂತೂ ತಲೆ ಕೆರೆದುಕೊಂಡು ಅರ್ಧ ದಿನ ಕುಂತು ಬರೆದ ಮೇಲೆ ಒಂದು ಕಾರ್ಡು ರೆಡಿಯಾಗಿತ್ತು!
ಓ ನನ್ನ ಮಾವನ ಮಗಳೇ... ನಿರುಪಮ
ನಾ ಆಗಬೇಕೆಂದಿರುವೆ ನಿನ್ನ ಪ್ರಿಯತಮ...
ನಿನ್ನದೇ ನೆನಪಲ್ಲಿ, ಮಿಡಿಯುತ್ತಿದೆ
ಮನ ಹಗಲಿರುಳು ಸರಿಗಮ...!
ನನ್ನ ಕಾಲೇಜ್ನಲ್ಲಿ ಇರುವ ಹುಡುಗಿಯರಲ್ಲಿ
ಯಾರೂ ಇಲ್ಲ ನಿನಗೆ ಸರಿಸಮ...
ನೀ ನನ್ನ ಸಂಗಾತಿಯಾದರೆ
ಆಗುವುದು ನಮ್ಮ ಜೋಡಿ ಅನುಪಮ!
-ಇಂತಿ ನಿನ್ನ ಪ್ರೀತಿಯ....












Click it and Unblock the Notifications