ಕಚಗುಳಿ ಇಡುವ ಆರತಿ ಘಟಿಕಾರ್ ಹನಿಗವನಗಳು
ದುಬೈನಲ್ಲಿ ನೆಲೆಸಿರುವ ಕನ್ನಡತಿ ಆರತಿ ಘಟಿಕಾರ್ ಅವರು ರಚಿಸಿರುವ ಕಚಗುಳಿ ಇಡುವಂಥ, ನವಿರು ಹಾಸ್ಯದಿಂದ ತುಂಬಿರುವಂಥ ಹನಿಗವನಗಳ ಗುಚ್ಛ ಇಲ್ಲಿದೆ. ಮುಂದಿನ ವಾರ ಇನ್ನಷ್ಟು ಹನಿಗವನಗಳು ಪ್ರಕಟವಾಗಲಿವೆ. ಹನಿಗವನಗಳು ಇಷ್ಟವಾದರೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಹಾಕಿರಿ.
ಆರತಿ ಘಟಿಕಾರ್, ದುಬೈ
ಸಮಾನ ಪ್ರೀತಿ
ಕೃಷ್ಣನಿಗೆ ಇದ್ದರೂ
ಹದಿನಾರು ಸಾವಿರ
ಪತ್ನಿಯರು..
ಸಂಭಾಳಿಸಿದನು
ಅವರಲ್ಲಿ ಕಿಂಚಿತ್ತು
ಬಾರದಂತೆ
ಮತ್ಸರ..
ಮಾಡಿಸಿ ಕೊಟ್ಟಿರಬಹುದು
ಅವ ಒಬ್ಬೊಬ್ಬರಿಗೂ
ಒಂದೇ ತರದ
ಅವಲಕ್ಕಿ ಸರ!

ತರಲೆ ಮಗ
ಹುಟ್ಟು ಹಬ್ಬಕೆ
ಅಪ್ಪ ಆಶೀರ್ವದಿಸಿದರು
ಮಗನನು
ದೇವರು ಸದಾ ಕೊಡಲಿ
ನಿನಗೆ ಒಳ್ಳೆ ಸಂಸ್ಕಾರ(ರ್)
ಅದೆಲ್ಲಾ ಆಮೇಲಿರಲಿ
ಮಗ ಹೇಳಿದ..
ಮೊದಲು ಕೊಡಿಸು
ಈ sonಗೆ ಒಳ್ಳೆ ಕಾರ್!
ಬದಲಾವಣೆ
ತನ್ನ ಕುಡಿತದ ಚಟವನ್ನೆಲ್ಲಾ
ಬಿಟ್ಟು ಆಕೆಯನ್ನು
ವರಿಸಿದ
ಮದುವೆಯಾದ ಬಳಿಕ
ಕುಡಿಯದಿದ್ದರೂ ಅಕೆಯೆದಿರು
ತಡವರಿಸಿದ!
ಅವಳು
ಇರುತ್ತಿದ್ದರು
ಗಂಡುಗಳನ್ನು ಮೋಹಕವಾಗಿ
ಬಲೆಗೆ ಬೀಳಿಸಿ
ಬಲಿ ತೆಗೆದುಕೊಳ್ಳುವ
ವಿಷ ಕನ್ಯೆಯರು ...
ಆದರೀಕೆ ಗಂಡನನ್ನು
ಮೋಹಕವಾಗಿ
ಸದಾ ಕಾ(ಪೀ)ಡಿಸಿ
ಬೇಡಿಕೆಯಿಡುವ
Wish-ಕನ್ಯೆ !
ಅಭ್ಯಾಸ
ಲಾಫ್ಟರ್ ಕ್ಲಬ್ಬಿನ್ನಲ್ಲಿ
ಹೇಳಿಕೊಟ್ಟಂತೆ
ಇಂದು ಮುಂಜಾನೆ
ಬಾಯ್ತೆರೆದು ಜೋರಾಗಿ ನಕ್ಕೆ
ಅಷ್ಟಕ್ಕೇ ಹಿಡಿಯಿತು ನನ್ನ ಪಕ್ಕೆ!
ಹೃದಯದ ಮಾತು
ಎಷ್ಟೊಂದು ಗೋಡೆಗಳಿವೆ
ನಮ್ಮ ಮಧ್ಯೆ
ವರ್ಷಗಳಿಂದ ಸುಮ್ಮನೆ ನಿಂತಿವೆ
ತಮಗಿರುವ ಚಟವನ್ನೆ ಮರೆತು
ಒಮ್ಮೆಯಾದರೂ ಇವು
ಕದ್ದಾಲಿಸಬಾರದೆ...
ಹೇಳಬೇಕೆಂದ್ದಿದ್ದರೂ
ಗಂಟಲ್ಲಲ್ಲೆ ಉಳಿದ
ನಮ್ಮ.ಹೃದಯದ ಮಾತು..
ನಿಜಕ್ಕೂ
ಅನ್ನ ಬಡಸಿದಾಗಲ್ಲೆಲ್ಲಾ
ತಿನ್ನಲು ತಕರಾರು
ಮಾಡುವ ಹುಡುಗರು
ನಿಜಕ್ಕೂ
warಆನ್ನದ ಹುಡುಗರು!












Click it and Unblock the Notifications